Friday, 29th November 2024

Tumkur News: ಗುರುಹಿರಿಯರನ್ನು ಗೌರವಿಸಿದರೆ ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಲು ಸಾಧ್ಯ: ನಿ.ಶಿಕ್ಷಕ ಮರುಡಪ್ಪ

ಪಟ್ಟನಾಯಕನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಗುರುವಂದನಾ ಕಾರ್ಯಕ್ರಮ

ಶಿರಾ: ವಿದ್ಯಾರ್ಥಿಗಳು ವಿದ್ಯೆ ಕಲಿಸಿದ ಶಿಕ್ಷಕರಿಗೆ ಗೌರವಿಸುವುದರ ಜೊತೆಗೆ ತಂದೆ ತಾಯಿ ಹಾಗೂ ಗುರುಹಿರಿಯರನ್ನು ಗೌರವಿಸುವಂತಹ ಸಂಸ್ಕಾರ ರೂಡಿಸಿಕೊಂಡರೆ ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ರೂಪಿಕೊಳ್ಳಲು ಸಾಧ್ಯ ಎಂದು ನಿವೃತ್ತ ಶಿಕ್ಷಕ ಮರುಡಪ್ಪ ಹೇಳಿದರು.

ಅವರು ತಾಲೂಕಿನ ಪಟ್ಟನಾಯಕನಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ ೧೯೯೮-೯೯ ನೇ ಸಾಲಿನ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಬೆಳ್ಳಿ ಮಹೋತ್ಸವ ಹಾಗೂ ಗುರುವಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಗುರು ಕಲಿಸಿದ ವಿದ್ಯೆ ಹಾಗೂ ಸಂಸ್ಕಾರ ವಿದ್ಯಾರ್ಥಿಗಳ ಜೀವನವನ್ನು ಉತ್ತಮ ರೀತಿ ರೂಪಿಸು ತ್ತದೆ. ಗುರುವಿನಿಂದ ವಿದ್ಯೆ ಕಲಿತ ಶಿಷ್ಯರು ನಮ್ಮನ್ನು ಗೌರವಿಸುವಾಗ ನಾವು ಹೇಳಿದ ಪಾಠ ಮತ್ತು ಜೀವನದ ಮೌಲ್ಯ ಸಾರ್ಥಕತೆ ಎನಿಸುತ್ತದೆ ಎಂದರು.

ನಿವೃತ್ತ ಶಿಕ್ಷಕ ಕೆ.ಟಿ. ವಿಜಯಕುಮಾರ್ ಮಾತನಾಡಿ ವಿದ್ಯಾರ್ಥಿ ಜೀವನ ಅತ್ಯಂತ ಮೌಲ್ಯಯುತವಾದದ್ದು, ಇದನ್ನು ಸದುಪಯೋಗ ಪಡಿಸಿಕೊಂಡು ತರಗತಿಗಳಲ್ಲಿ ಉತ್ತಮ ರೀತಿ ವ್ಯಾಸಂಗ ಮಾಡಿದ ಕಾರಣ ಈ ದಿನ ಡಾಕ್ಟರ್, ಶಿಕ್ಷಕ, ಪೋಲಿಸ್, ವಾರ್ಡನ್, ರೈಲ್ವೆ, ಬೆಸ್ಕಾಂ ಸೇರಿದಂತೆ ಉತ್ತಮ ಖಾಸಗಿ ಕಂಪನಿ ಹಾಗೂ ಸ್ವಯಂ ಉದ್ಯೋಗ ಮಾಡುವ ಮೂಲಕ ನೀವು ಸ್ವಾವಲಂಬಿಗಳಾಗಿದ್ದೀರಿ, ಯಾರು ಗುರುವನ್ನು ಗೌರವಿಸುತ್ತಾನೋ ಅಂತಹ ಶಿಷ್ಯ ತನ್ನ ಮಕ್ಕಳಿಗೂ ಉತ್ತಮ ಸಂಸ್ಕಾರ ಕಲಿಸುತ್ತಾನೆ ಎಂದರು.

ಹಳೆ ವಿದ್ಯಾರ್ಥಿಯಾದ ಪೋಲಿಸ್ ಇನ್ಸ್ಪೆಕ್ಟರ್ ವಿಜಯ್ ಕುಮಾರ್ ಮಾತನಾಡಿ ನಮ್ಮ ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರು ಉತ್ತಮ ರೀತಿ ಪಾಠ ಪ್ರವಚನ ಮಾಡುತ್ತಿದ್ದರು, ಅಲ್ಲದೆ ಸಮಾಜದಲ್ಲಿ ಹೇಗೆ ಬದುಕಬೇಕು ಎಂಬುದನ್ನು ಕಳಿಸಿದ್ದರು. ಕೆಲವು ಸಂದರ್ಭದಲ್ಲಿ ಕಲಿಯಲಿಲ್ಲ ಎಂಬ ಕಾರಣಕ್ಕೆ ಹೊಡೆದಿದ್ದರೂ ಸಹ ಅದು ನಮಗೆ ಜೀವನದ ಪಾಠವನ್ನು ಕಲಿಸಿದೆ, ವಿದ್ಯೆ ಕಲಿಸಿದ ಗುರುಗಳು ದೈವ ಸ್ವರೂಪಿಗಳು ಎಂದರು.

ಈ ಸಂದರ್ಭದಲ್ಲಿ ವಾರ್ಡನ್ ರಾಜಗೋಪಾಲ್, ಉಪ ಪ್ರಾಂಶುಪಾಲ ಗಂಗಾಧರ್, ಇಂದಿರಾ, ಅಶ್ವಥ್ ನಾರಾಯಣ, ಹೆಚ್. ಎಂ. ನರಸಿಂಹಮೂರ್ತಿ ನರಸಿಂಹಮೂರ್ತಿ, ಶಿಕ್ಷಕರಾದ ಶ್ರೀನಿವಾಸ ಮೂರ್ತಿ, ಎಲ್. ಜಿ. ದಿಬ್ಬಯ್ಯ, ಲಕ್ಕಮ್ಮ, ಶಿವಕುಮಾರ್, ವರದರಾಜು ಗುರುವಂದನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

೧೯೯೮-೯೯ ನೇ ಸಾಲಿನ ವಿದ್ಯಾರ್ಥಿಗಳಾದ ಇನ್ಸ್ಪೆಕ್ಟರ್ ವಿಜಯ್ ಕುಮಾರ್, ವಾರ್ಡನ್ ರಾಜಗೋಪಾಲ್, ಬೆಸ್ಕಾಂ ಎಸ್‌ಓ ವೈ.ಎಚ್. ಹನುಮಂತರಾಯ, ಡಾ. ಬಿ.ರಾಘವೇಂದ್ರ, ಶಿಕ್ಷಕಿ ಅನಿತಾ, ತಿಮ್ಮರಾಜು, ಶಿಕ್ಷಕ ಹನುಮಂತರಾಯ, ರೈಲ್ವೆ ಇಲಾಖೆಯ ತುಳಸಿರಾಮ್, ನಾಗರಾಜು, ಸೀಗಲಹಳ್ಳಿ ಸೂರಿ, ರೂಪ, ಸುಜಾತ, ಶಿಲ್ಪ, ಶಿವಾನಂದ, ಕೋದಂಡ ರಾಮ ನಾರಾಯಣಪ್ಪ ಸೇರಿದಂತೆ ಹಲವಾರು ಹಳೆ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಅ. ೧೭ರಂದು ಶ್ರೀ ಮಹರ್ಷಿ ವಾಲ್ಮೀಕಿ ಜಯಂತ್ಯೋತ್ಸವ; ವಿ.ಕೆ.ಬಡಿಗೇರ
ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ ಹಾಗೂ ನಗರಸಭೆ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಅ. ೧೭ ರ ಗುರುವಾರ ಬೆಳಿಗ್ಗೆ ೧೧ಗಂಟೆಗೆ ನಗರದ ಶ್ರೀ ರಾಜಾ ಕಸ್ತೂರಿ ರಂಗಪ್ಪನಾಯಕನ ಕೋಟೆ ಆವರಣದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತ್ಯೋತ್ಸವ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಎಂದು ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ವಿ.ಕೆ.ಬಡಿಗೇರ ತಿಳಿಸಿದ್ದಾರೆ.

ಕಾರ್ಯಕ್ರಮಕ್ಕು ಮೊದಲು ಬೆಳಿಗ್ಗೆ ೧೦ ಗಂಟೆಗೆ ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತ ಹಾಗೂ ಅಂಬೇಡ್ಕರ್ ಉದ್ಯಾನವನದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಂತರ ಶ್ರೀ ರಾಜಾ ಕಸ್ತೂರಿ ರಂಗಪ್ಪನಾಯಕನ ಕೋಟೆವರೆಗೂ ಮೆರವಣಿಗೆ ನಡೆಯಲಿದೆ. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶಿಡ್ಲೆಕೋಣ ಮಠದ ಪೀಠಾಧ್ಯಕ್ಷರಾದ ಶ್ರೀ ಸಂಜಯ ಕುಮಾರ ಸ್ವಾಮಿಗಳು ವಹಿಸುವರು. ಅಧ್ಯಕ್ಷತೆಯನ್ನು ಶಾಸಕ ಡಾ.ಟಿ.ಬಿ. ಜಯಚಂದ್ರ ವಹಿಸುವರು.

ಮುಖ್ಯ ಅತಿಥಿಗಳಾಗಿ ಸಂಸದ ಗೋವಿಂದ ಕಾರಜೋಳ, ವಿಧಾನಪರಿಷತ್ ಸದಸ್ಯರಾದ ಚಿದಾನಂದ್ ಎಂ.ಗೌಡ, ಡಿ.ಟಿ.ಶ್ರೀನಿವಾಸ್, ಕೆ.ಎ.ತಿಪ್ಪೇಸ್ವಾಮಿ, ನಗರಸಭೆ ಅಧ್ಯಕ್ಷ ಜೀಷಾಶನ್ ಮೊಹಮದ್, ಉಪಾಧ್ಯಕ್ಷ ಲಕ್ಷ್ಮೀಕಾಂತ್, ಸ್ಥಾಯಿ ಸಮಿತಿ ಅಧ್ಯಕ್ಷ ಶಿವಶಂಕರ್, ಶಿರಾ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪಿ.ಆರ್.ಮಂಜುನಾಥ್ ಸೇರಿದಂತೆ ಹಲವರು ಭಾಗವಹಿಸುವರು. ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು, ಸಂಘಸಂಗಳು ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದ್ದಾರೆ.

*

ಚಂಗಾವರ ದೇವರಹಟ್ಟಿಯಲ್ಲಿ ಅದ್ಧೂರಿಯಾಗಿ ಜರುಗಿದ ಶ್ರೀ ಮಾರಮ್ಮ ದೇವಿ ವಿಜಯದಶಮಿ ಬನ್ನಿ ಉತ್ಸವ
ಶಿರಾ ತಾಲೂಕಿನ ಗೌಡಗೆರೆ ಹೋಬಳಿಯ ಚಂಗಾವರ ದೇವರಹಟ್ಟಿ ಗ್ರಾಮದದಲ್ಲಿ ಶ್ರೀ ಮಾರಮ್ಮ ದೇವಿ ವಿಜಯ ದಶಮಿ ಬನ್ನಿ ಉತ್ಸವವು ಸಹಸ್ರಾರು ಭಕ್ತರು ಸಮ್ಮುಖದಲ್ಲಿ ಅದ್ಧೂರಿಯಾಗಿ ನೆರವೇರಿತು. ರಾಜ್ಯದ ನಾನಾ ಜಿಲ್ಲೆಗಳಿಂದ ಸಹಸರ ಸಂಖ್ಯೆಯಲ್ಲಿ ಬಂದಭಕ್ತ ಸಮೂಹ. ಶ್ರೀ ಮಾರಮ್ಮ ದೇವಿ ಜಂಬು ಸವಾರಿ ಉತ್ಸವದಲ್ಲಿ ಪಾಲ್ಗೊಂಡು ದೇವಿ ದರ್ಶನ ಪಡೆದು ಇಷ್ಟಾರ್ಥ ಸಿದ್ದಿಗಾಗಿ ಪ್ರಾರ್ಥಿಸಿದರು.

ಉತ್ಸವಕ್ಕೆ ಆಗಮಿಸಿದ ಸಾವಿರಾರು ಭಕ್ತರು ಸಮಕ್ಷಮದಲ್ಲಿ ಮಾತನಾಡಿದ ಶ್ರೀ ಮಾರಮ್ಮ ದೇವಿ ದೇವಸ್ಥಾನ ಸಮಿತಿ ಅಧ್ಯಕ್ಷ ಜಯರಾಮಯ್ಯ ಮಾರಮ್ಮ ದೇವಿ ನೂತನ ದೇವಸ್ಥಾನ ೬ ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ವಾಗುತ್ತಿದೆ. ದೇವಸ್ಥಾನ ಕಾಮಗಾರಿ ಪ್ರಗತಿಯಲ್ಲಿರುವ ಕಾರಣ ಭಕ್ತರು, ಅಣ್ಣ-ತಮ್ಮಂದಿರು ಆರ್ಥಿಕ ನೆರವು ನೀಡುವ ಮೂಲಕ ದೇವಸ್ಥಾನದ ಸರ್ವತೋಮುಖ ಅಭಿವೃದ್ಧಿಗೆ ಸಹಕರಿಸಬೇಕು. ಈ ಮಾರಮ್ಮ ದೇವಸ್ಥಾನ ದ್ರಾವಿಡ ಶಿಲ್ಪಕಲೆ ಶೈಲಿಯಲ್ಲಿ ನಿರ್ಮಾಣವಾಗುತ್ತಿದ್ದು ಶಿರಾ ತಾಲೂಕಿನಲ್ಲಿ ವಿಶಿಷ್ಟ ದೇವಸ್ಥಾನ ಎಂಬ ಹೆಗ್ಗಳಿಕೆ ಹೊಂದಿದೆ ಎಂದರು.

ದೇವಸ್ಥಾನ ಕಾರ್ಯದರ್ಶಿ ಮಾಜಿ ಚೇರ್ಮನ್ ಡಿಎಂಪಿ ಕರಿಯಣ್ಣ, ಪೂಜಾರ್ ಚಿಕ್ಕಣ್ಣ, ಚಂಗಾವರ ರಾಮಕೃಷ್ಣ, ಮುದ್ದೇನಹಳ್ಳಿ ಶಿವಲಿಂಗಪ್ಪ, ಮಹಾಲಿಂಗಪ್ಪ, ಕೆ. ಕುಮಾರ, ಮಂಜುನಾಥ , ಬಡಮಂಗನ ಹಟ್ಟಿ ನಾಗರಾಜ, ಪೂಜಾರ್ ಮಡ್ನಪ್ಪ , ಗಿರೀಶ್, ಕಲ್ಮನೆ ಮಾರಣ್ಣ, ಪೂಜಾರ್ ಓದೋ ಮಾರಪ್ಪ, ಕೆ. ನಾಗರಾಜು, ಪರಮೇಶ್, ಎಂ.ಈರಣ್ಣ ಸೇರಿದಂತೆ ಹಲವರು ಭಾಗವಹಿಸಿದ್ದರು.

ಇದನ್ನೂ ಓದಿ: Sripada Sirasingi Column: ಬಂಟ್ವಾಳದ ಬಾಳಿಗರ ಭರ್ಜರಿ ಸಾಧನೆ !