Friday, 29th November 2024

Vishwakarma: ವಿಶ್ವಕರ್ಮ ಸಮುದಾಯಕ್ಕೆ ಶೇ.2ರಷ್ಟು ಮೀಸಲಾತಿ ನೀಡಿ: ರುದ್ರಾಚಾರ್

ವಿಶ್ವಕರ್ಮ ಸಮುದಾಯದ ಅರ್ಚಕರನ್ನು ಧಾರ್ಮಿಕ ದತ್ತಿ ಸಂಸ್ಥೆಗಳಿಗೆ ನೇಮಕ ಮಾಡಿ

ಶಿರಾ: ವಿಶ್ವಕರ್ಮ ಜನಾಂಗದವರು ಬುಡಕಟ್ಟು ಜನಾಂಗದವರಾಗಿದ್ದು, ಹಳ್ಳಿಗಾಡಿನಲ್ಲಿ ಬೆಳೆದು ಬಂದಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿ ಸಂಪೂರ್ಣ ಹಿಂದೆ ಉಳಿದಿದ್ದಾರೆ. ಸರಕಾರದ ಪ್ರತಿಯೊಂದು ಮೂಲಭೂತ ಸೌಲಭ್ಯ ಪಡೆಯು ವಲ್ಲಿ ಹಿಂದುಳಿದಿದ್ದಾರೆ. ಆದ್ದರಿಂದ ಕೇಂದ್ರದಲ್ಲಿ ಈಗಿರುವ ಶೇ.15 ಮೀಸಲಾತಿಯಲ್ಲಿ ಶೇ.2 ವಿಶ್ವಕರ್ಮರಿಗೆ ಮೀಸಲಾತಿ ಕೊಡಬೇಕು ಎಂದು ವಿಶ್ವಕರ್ಮ ಸಮುದಾಯದ ಮುಖಂಡ ಎಸ್.ಜಿ.ರುದ್ರಾಚಾರ್ ಅವರು ಮನವಿ ಮಾಡಿದ್ದಾರೆ.

ಈ ಬಗ್ಗೆ ಅವರು ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದ್ದು, ಭಗವಾನ್ ವಿಶ್ವಕರ್ಮ ವಾಸ್ತುಪುರುಷ ಹಾಗೂ ರಾಜ್ಯ ಮತ್ತು ದೇಶದ ಶಿಲ್ಪ ಸಂಸ್ಕೃತಿಯನ್ನು ಉಳಿಸಿದಂತಹ ಅಮರ ಶಿಲ್ಪಿ ಜಕಣಾಚಾರಿಯವರ ಹೆಸರನ್ನು ರಾಜ್ಯದ ಯಾವುದಾದರೂ ವಿವಿಗೆ ನಾಮಕರಣ ಮಾಡಬೇಕು. ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಜಕಣಾಚಾರಿಯವರ ಪ್ರತಿಮೆಯನ್ನು ಸ್ಥಾಪಿಸಬೇಕು. ರಾಜ್ಯದಲ್ಲಿ ಕಳೆದ ಒಂದು ವರ್ಷಗಳಿಂದ ಕುಲಶಾಸ್ತ್ರ ಅಧ್ಯಯನ ಸಂಶೋಧನೆ, ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ವಿಚಾರ ಸಂಕೀರಣ ನಡೆಯುತ್ತಿದ್ದು, ಇನ್ನಷ್ಟು ಜರೂರಾಗಿ ಕುಲಶಾಸ್ತ್ರ ಅಧ್ಯಯನ ವನ್ನು ಪೂರ್ಣಗೊಳಿಸಬೇಕು.

1978ರಲ್ಲಿ ವರ್ಗೀಕರಣ ಮಾಡಿದಂತಹ ಸಂದರ್ಭದಲ್ಲಿ ವಿಶ್ವಕರ್ಮ ಸಮಾಜದ ಕುಲಶಾಸ್ತ್ರ ಅಧ್ಯಯನ ಮಾಡದೆ ನಿರ್ಲಕ್ಷ ಮಾಡಿದ್ದಾರೆ. ಆದ್ದರಿಂದ ಕೂಡಲೇ ಕುಲಶಾಸ್ತ್ರೀಯ ಅಧ್ಯಯನ ಮಾಡಿ ವಿಶ್ವಕರ್ಮ ಜನಾಂಗಕ್ಕೆ ಸೂಕ್ತ ಮೀಸಲಾತಿ ನೀಡಬೇಕೆಂದು ಒತ್ತಾಯಿಸಿದ್ದಾರೆ.

*

ಶುದ್ಧ ಕುಡಿಯುವ ನೀರು ಪ್ರತಿಯೊಬ್ಬರ ಆರೋಗ್ಯ ಕಾಪಾಡುತ್ತದೆ; ದಿಲೀಪ್ ಕುಮಾರ್
ಶುದ್ಧ ಕುಡಿಯುವ ನೀರು ಪ್ರತಿಯೊಬ್ಬರ ಆರೋಗ್ಯವನ್ನು ಕಾಪಾಡುತ್ತದೆ. ಈ ಜೀವ ಜಲದ ಪರಿಶುದ್ಧತೆಯನ್ನು ಕಾಪಾಡಿಕೊಂಡು ಜೀನಿ ಆಹಾರ ಉತ್ಪಾದನಾ ಸಂಸ್ಥೆ ಕುಡಿಯುವ ನೀರಿನ ತಯಾರಿಕೆಯಲ್ಲಿ ತೊಡಗಿದೆ ಎಂದು ಸಂಸ್ಥೆಯ ಅಧ್ಯಕ್ಷ ದಿಲೀಪ್ ಕುಮಾರ್ ಹೇಳಿದರು.

ಅವರು ತಾಲೂಕಿನ ಯರಗುಂಟೆ ಗ್ರಾಮದಲ್ಲಿರುವ ಜೀನಿ ಆಹಾರ ಉತ್ಪಾದನಾ ಸಂಸ್ಥೆಯಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಜೀನಿ ಪರಿಧನ್ ಶುದ್ಧ ನೀರಿನ ಘಟಕವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.

ಮೀಣ ಪ್ರದೇಶದ ಯುವಕರಿಗೆ ಉದ್ಯೋಗ ಕಲ್ಪಿಸುವ ಉದ್ದೇಶ ಜೊತೆಗೆ ನೈಸರ್ಗಿಕ ಹಾಗೂ ಗುಣಮಟ್ಟದ ಆಹಾರ ಪದಾರ್ಥಗಳನ್ನು ಬಳಸಿ ತಯಾರಿಕೆ ಮಾಡುವ ಹಲವಾರು ರೀತಿಯ ಉತ್ಪನ್ನಗಳ ಜೊತೆ ಶುದ್ಧ ಕುಡಿಯುವ ನೀರು ಕೊಡಬೇಕೆಂಬ ಉದ್ದೇಶದಿಂದ ಈ ಉತ್ಪನ್ನ ಮಾರುಕಟ್ಟೆಗೆ ನೀಡಿದ್ದೇವೆ. ಬೆಲ್ಲ ಮತ್ತು ಗುಣಮಟ್ಟದ ಕಡಲೆ ಬೀಜ ದಿಂದ ತಯಾರಿಸಿರುವ ಚಿಕ್ಕಿ ಪ್ರತಿಯೊಂದು ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಬಳಸುವಂತಾಗಬೇಕು. ಕಡಲೆ ಬೀಜದ ಚಿಕ್ಕಿಯನ್ನು ಗುಣಮಟ್ಟದ ಬೆಲ್ಲ ಮತ್ತು ಕಡಲೆಬೀಜ ಬಳಸಿ ತಯಾರು ಮಾಡುತ್ತೇವೆ, ಈ ಜೀನಿ ಚಿಕ್ಕಿ ಉತ್ಪನ್ನ ಸರ್ಕಾರಿ ಶಾಲೆಗಳಲ್ಲಿ ನಿತ್ಯ ಕೊಡುವಂತಾಗಬೇಕು ಇದರಿಂದ ಪೌಷ್ಟಿಕ ಆಹಾರ ದೊರೆಯುವುದಲ್ಲದೆ, ರಕ್ತ ಶುದ್ಧೀಕರಣಕ್ಕೆ ಸಹಕಾರಿಯಾಗಲಿದೆ.

ಆದ್ದರಿಂದ ಶಾಲೆಯಲ್ಲಿ ಜೀನಿ ಕಡಲೆ ಬೀಜದ ಜಿನಿ ಚಿಕ್ಕಿಯನ್ನು ನೀಡುವಂತ ಹವ್ಯಾಸ ರೂಡಿಸಿಕೊಳ್ಳಬೇಕು. ಹಳ್ಳಿ ಮಟ್ಟದಿಂದ ಅಂತರಾಷ್ಟ್ರೀಯ ಮಟ್ಟ ದವರಿಗೆ ಜೀನಿ ಉತ್ಪನ್ನಗಳು ಮಾರಾಟವಾಗುತ್ತಿವೆ ಇದಕ್ಕೆ ಗ್ರಾಹಕರ ಪ್ರೋತ್ಸಾಹ ಹಾಗೂ ನಮ್ಮ ಸಂಸ್ಥೆಯಲ್ಲಿ ಕೆಲಸ ಮಾಡುವ ಪ್ರಾಮಾಣಿಕ ಉದ್ಯೋಗಿಗಳೇ ಕಾರಣ. ಜನರ ಸಹಕಾರ ನಮ್ಮ ಜೀನಿ ಆಹಾರ ಉತ್ಪಾದನಾ ಸಂಸ್ಥೆ ಮೇಲೆ ಸದಾ ಇರಲಿ ಎಂದರು.

ಈ ಸಂದರ್ಭದಲ್ಲಿ ಧನಲಕ್ಷ್ಮೀ ದಿಲೀಪ್ ಕುಮಾರ್, ಜೀವಿತ, ಪಾಂಡಪ್ಪ, ಅಮ್ಮಾಜಮ್ಮ, ರಾಜು, ಅಪ್ಪಿ ಗೌಡ, ಸುಮಾ, ಅನಿಲ್ ಕುಮಾರ್, ಶೋಭಾ ಸೇರಿದಂತೆ ಹಲವರು ಹಾಜರಿದ್ದರು.