Saturday, 23rd November 2024

Gurmeet Ram Rahim Singh: ರಾಮ್‌ ರಹೀಂ ಬಾಬಾಗೆ ಬಿಗ್‌ ಶಾಕ್‌! 2015ರ ಕೇಸ್‌ ಮೇಲಿನ ತಡೆಯಾಜ್ಞೆ ಹಿಂಪಡೆದ ಸುಪ್ರೀಂ

Gurmeet Ram Rahim Singh

ನವದೆಹಲಿ: ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಸಿಂಗ್(Gurmeet Ram Rahim Singh) ವಿರುದ್ಧದ ಪ್ರಕರಣವೊಂದರ ತನಿಖೆಗೆ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ವಿಧಿಸಿದ್ದ ತಡೆಯಾಜ್ಞೆಯನ್ನು ಸುಪ್ರೀಂ ಕೋರ್ಟ್(Supreme Court) ಶುಕ್ರವಾರ ಹಿಂತೆಗೆದುಕೊಂಡಿದೆ. ಆ ಮೂಲಕ ಸ್ವಯಂಘೋಷಿತ ದೇವ ಮಾನವನಿಗೆ ಭಾರೀ ಹಿನ್ನಡೆಯಾಗಿದೆ.

ಪಂಜಾಬ್‌ನ ಬರ್ಗರಿಯಲ್ಲಿ ಸಿ‍ಖ್ಖರ ಪವಿತ್ರ ಗ್ರಂಥ ಗುರುಗಂಥ ಸಾಹಿಬ್‌ನ ಪ್ರತಿ ಕಳವು ಮತ್ತು ಅದರ ಹಾನಿ ಘಟನೆಗೆ ಸಂಬಂಧಿಸಿದಂತೆ ಗುರ್ಮೀತ್‌ ರಾಮ್‌ ರಹೀಮ್‌ ಸಿಂಗ್‌ ವಿರುದ್ಧ ಕೇಸ್‌ ದಾಖಲಾಗಿತ್ತು. ಈ ಘಟನೆ ನಂತದ ಪರೀದ್‌ಕೋಟ್‌ನಲ್ಲಿ ಭಾರೀ ಪ್ರತಿಭಟನೆ ನಡೆದಿತ್ತು. ಈ ವೇಳೆ ಪೊಲೀಸರು ನಡೆಸಿದ ಗೋಲಿಬಾರ್‌ನಲ್ಲಿ ಇಬ್ಬರು ಸಾವನ್ನಪ್ಪಿದ್ದರು.ಕೊಟ್ಕಾಪುರದಲ್ಲಿ ಕೆಲವರು ಗಾಯಗೊಂಡಿದ್ದರು. ಈ ಪ್ರಕರಣಗಳ ವಿರುದ್ಧ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ತಡೆಯಾಜ್ಞೆ ಜಾರಿಗೊಳಿಸಿತ್ತು. ಇದೀಗ ತಡೆಯಾಜ್ಞೆಯನ್ನು ಸುಪ್ರೀಂಕೋರ್ಟ್‌ ಹಿಂಪಡೆದಿದೆ.

ನ್ಯಾಯಮೂರ್ತಿಗಳಾದ ಬಿ.ಆರ್‌ ಗವಾಯಿ ಮತ್ತು ಕೆ.ವಿ. ವಿಶ್ವನಾಥನ್‌ ಇದ್ದ ನ್ಯಾಯಪೀಠ, ಸಿಖ್ಖರ ಪವಿತ್ರ ಗ್ರಂಥಕ್ಕೆ ಅಪಮಾನ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಮ್‌ ರಹೀಮ್‌ ಸಿಂಗ್‌ ವಿರುದ್ಧ ದಾಖಲಾಗಿರುವ ಮೂರು ಕೇಸ್‌ಗಳ ಮೇಲಿನ ತಡೆಯಾಜ್ಞೆಯನ್ನು ತೆರವುಗೊಳಿಸಿ ಆದೇಶ ಹೊರಡಿಸಿದೆ. ಅಲ್ಲದೇ ನಾಲ್ಕು ವಾರಗಳಲ್ಲಿ ಪ್ರತಿಕ್ರಿಯಿಸುವಂತೆ ಆದೇಶ ಹೊರಡಿಸಿದೆ. ರಾಮ್ ರಹೀಮ್ ಈಗಾಗಲೇ ಅತ್ಯಾಚಾರಕ್ಕಾಗಿ 20 ವರ್ಷಗಳ ಶಿಕ್ಷೆಯನ್ನು ಅನುಭವಿಸುತ್ತಿದ್ದಾನೆ ಮತ್ತು ಕೊಲೆಯ ಅಪರಾಧಿಯೂ ಹೌದು.

ಈ ಸುದ್ದಿಯನ್ನೂ ಓದಿ: Sadguru Jaggi Vasudev:‌ ಈಶಾ ಫೌಂಡೇಶನ್‌ ವಿರುದ್ಧದ ಪ್ರಕರಣ ವಜಾ! ಸುಪ್ರೀಂ ಮಹತ್ವದ ತೀರ್ಪು- ಸದ್ಗುರುಗೆ ಬಿಗ್‌ ರಿಲೀಫ್‌