ಗೌರಿಬಿದನೂರು : ಮಾಜಿ ಕೇಂದ್ರ ಸಚಿವ ದಿವಂಗತ ಆರ್.ಎಲ್.ಜಾಲಪ್ಪನವರ ೯೯ ನೇ ಜನ್ಮದಿನದ ಪ್ರಯುಕ್ತ ಅವರ ಅಭಿಮಾನಿಗಳಿಂದ ನಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿನ ಒಳ ರೋಗಿಗಳಿಗೆ ಹಣ್ಣು ಹಂಪಲು ಹಾಗೂ ಬ್ರೆಡ್ ವಿತರಿಸಲಾಯಿತು.
ಈ ಸಂಧರ್ಭದಲ್ಲಿ ಅಹಿಂದ ವರ್ಗಗಳ ಮುಖಂಡರಾದ ಆರ್.ಅಶೋಕ ಕುಮಾರ್ ಮಾತನಾಡಿ, ಈ ರಾಷ್ಟç ಕಂಡ ಧೀಮಂತ ನಾಯಕ, ಕೇಂದ್ರದ ಮಾಜಿ ಸಚಿವರಾದ ಜಾಲಪ್ಪನವರು ತಮ್ಮ ಸುಧೀರ್ಘ ರಾಜಕಾರಣದುದ್ದಕ್ಕೂ ಸದಾಕಾಲವೂ ಜನರ ಒಳಿತಿಗಾಗಿ ಶ್ರಮಿಸಿದ್ದರು. ಅದರಲ್ಲೂ ವಿಶೇಷವಾಗಿ ರೈತ ಸಮುದಾಯದ ಬಗ್ಗೆ ಕಾಳಜಿ ಹೊಂದಿದ್ದ ಅವರು ನೀರಾವರಿ ಯೋಜನೆಗಳಿಗೆ ಒತ್ತು ನೀಡಿದರು.ಅವರ ಪ್ರಯತ್ನದಿಂದಾಗಿ ಉತ್ತರ ಪಿನಾಕಿನಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಕಿಂಡಿ ಅಣೆಕಟ್ಟೆಯಿಂದಾಗಿ ಸುಮಾರು ಏಳು ಕೆರೆಗಳಿಗೆ ನದಿಯ ನೀರನ್ನು ತುಂಬಿಸುವ ಕೆಲಸವಾಗುತ್ತಿದೆ ಅವರ ಕೆಲಸ ಕಾರ್ಯಗಳು ಮುಂದಿನ ತಲೆಮಾರುಗಳಿಗೂ ತಲುಪುತ್ತದೆ ಎಂದರು.
ಕಾರ್ಯಕ್ರಮದಲ್ಲಿ ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಬಿಜಿ.ವೇಣುಗೋಪಾಲ ರೆಡ್ಡಿ, ಅಲ್ಲಂಪಲ್ಲಿ ವೇಣು, ತಾಪಂ ಮಾಜಿ ಅಧ್ಯಕ್ಷ ಗಂಗಾಧರಪ್ಪ. ಎಲ್ ಐ ಸಿ ರವೀಂದ್ರ. ನರಸಿ0ಹಮೂರ್ತಿ, ನಾಗಾರ್ಜುನ, ದಲಿತ ಮುಖಂಡರಾದ ಕೆ.ನಂಜುAಡಪ್ಪ, ಮಂಜುನಾಥ್, ಪ್ರಭಾಕರ್.ಮದನ್, ಲೋಕೇಶ್.ಗಂಗಯ್ಯ, ಅಬೂಬಕರ್ ಹಾಗೂ ರಮೇಶ್ ಇನ್ನಿತರರು ಉಪಸ್ಥಿತರಿದ್ದರು.