ಗುಬ್ಬಿ: ಕನ್ನಡಿಗರಿಗೆ ಹೆಚ್ಚು ಉದ್ಯೋಗ ಒದಗಿಸಿ ಕೊಡುವ ದೃಷ್ಟಿಯಿಂದ ರೈಲ್ವೆ ಮತ್ತು ಬ್ಯಾಂಕಿಂಗ್ ನೌಕರಿಗಳಿಗೆ ಕನ್ನಡದಲ್ಲಿ ಪರೀಕ್ಷೆ ಬರೆಯುವಂತೆ ಮಾಡುವುದರ ಜೊತೆಗೆ ಸ್ಟಾಪ್ ಸೆಲೆಕ್ಷನ್ ಕಮಿಷನ್ ( ಎಸ್ ಎಸ್ ಸಿ ) ಗೂ ಕೂಡ ಕನ್ನಡದಲ್ಲಿ ಅವಕಾಶ ಕಲ್ಪಿಸಬೇಕು ಎಂದು ಹಾಲಪ್ಪ ಪ್ರತಿಷ್ಠಾನ ಅಧ್ಯಕ್ಷ ಮುರುಳಿಧರ ಹಾಲಪ್ಪ ತಿಳಿಸಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹನಿ ನಿಧಿ ಸಾಹಿತ್ಯ ಸಾಂಸ್ಕೃತಿಕ ಕಲಾ ವೇದಿಕೆ ವತಿಯಿಂದ ನಡೆದ ರಾಜ್ಯಮಟ್ಟದ ಗುಬ್ಬಿ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ಕನ್ನಡ ಭಾಷೆ ತನ್ನದೇ ಆದ ಲಿಪಿ ಯನ್ನು ಒಳಗೊಂಡ ಸುಮಾರು ಎರಡು ಸಾವಿರ ವರ್ಷಗಳ ಇತಿಹಾಸವಿದ್ದು.ದೇಶದಲ್ಲೇ ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿ ಪಡೆದಿರುವ ರಾಜ್ಯ ಕರ್ನಾಟಕ ಎಂಬುದು ಹೆಮ್ಮೆಯ ವಿಚಾರ. ಕನ್ನಡಿಗರಿಗೆ ಉನ್ನತ ವಿದ್ಯಾಭ್ಯಾಸ ಮತ್ತು ನೌಕರಿ ಪಡೆಯಲು ಮೀಸಲಾತಿಗಳು ಸಿಗಬೇಕು ಎಂದು ತಿಳಿಸಿದರು.
ಸಮ್ಮೇಳನಾಧ್ಯಕ್ಷ ಡಾ. ಜಯಪ್ಪ ಹೊನ್ನಾಳಿ ಮಾತನಾಡಿ, ಹನಿ ನಿಧಿ ಸಾಹಿತ್ಯ ಸಂಸ್ಕೃತಿಕ ಕಲಾ ವೇದಿಕೆ ತಂಡ ಕನ್ನಡ ಸಾಹಿತ್ಯ ಸವಿಯುವ ಕಾರ್ಯಕ್ರಮವನ್ನು ಆಯೋಜನೆ ಮಾಡಿದೆ. ಯುವ ಪೀಳಿಗೆ ಕನ್ನಡ ನೆಲ, ಜಲ,ಭಾಷೆ ಇತಿಹಾಸ ತಿಳಿಯಬೇಕು. ಕಲೆ, ಸಾಹಿತ್ಯ, ಸಂಸ್ಕೃತಿ, ಸಂಗೀತಗಳನ್ನೊಳಗೊಂಡ ಶ್ರೀಮಂತ ಭಾಷೆ ಕನ್ನಡ ಎಂದು ತಿಳಿಸಿದರು.
ಸಮ್ಮೇಳನದಲ್ಲಿ ಪ ಪಂ ಅಧ್ಯಕ್ಷೆ ಮಂಗಳಮ್ಮ, ಪ್ರಾಂಶುಪಾಲ ಡಾ. ಪ್ರಸನ್ನ, ಕ ಸಾ ಪ ತಾಲೂಕ ಅಧ್ಯಕ್ಷ ಯತೀಶ್ ಎಚ್ ಸಿ, ಕಿರುತೆರೆ ನಟ ಕಾರ್ತಿಕ್ ರಾಜ್, ಹನಿ ನಿದಿ ಸಾಹಿತ್ಯ ಸಂಸ್ಕೃತಿ ಕಲಾವೇದಿಕೆ ಸಂಸ್ಥಾಪಕ ಅಧ್ಯಕ್ಷ ಅಂಜನ್ ಕುಮಾರ್, ವರುಣ್ ರಾಜ್, ಕಾರ್ತಿಕ್, ಅರುಣ್ ಕುಮಾರ್ ಮುಂತಾದವರಿದ್ದರು.
ಇದನ್ನೂ ಓದಿ: Tumkur University: ತುಮಕೂರು ವಿವಿ ವಿಜ್ಞಾನ ವಿಭಾಗ ಬಿದರಕಟ್ಟೆಗೆ ಸ್ಥಳಾಂತರ: ಕುಲಪತಿ ವೆಂಕಟೇಶ್ವರಲು