ಮುಂಬೈ: ಮಹಾರಾಷ್ಟ್ರದ ನಾಂದೇಡ್‌ನಲ್ಲಿ ಮಂಗಳವಾರ ಬೆಳ್ಳಂ ಬೆಳಗ್ಗೆ 3.8 ತೀವ್ರತೆಯ ಭೂಕಂಪ(Earthquake) ಸಂಭವಿಸಿದೆ. ಈ ಬಗ್ಗೆ ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (NCS) ಮಾಹಿತಿ ನೀಡಿದ್ದು, ಬೆಳಗ್ಗೆ 6:52ಕ್ಕೆ ಭೂಮಿ ಕಂಪಿಸಿದೆ.ಭೂಕಂಪದ ಕೇಂದ್ರಬಿಂದುವು 19.38° ಉತ್ತರ ಅಕ್ಷಾಂಶ ಮತ್ತು 77.46° ಪೂರ್ವ ರೇಖಾಂಶದಲ್ಲಿ 5 ಕಿಮೀ ಆಳದಲ್ಲಿದೆ ಎಂದು ಹೇಳಿದ್ದಾರೆ.
EQ of M: 3.8, On: 22/10/2024 06:52:40 IST, Lat: 19.38 N, Long: 77.46 E, Depth: 5 Km, Location: Nanded, Maharashtra.
— National Center for Seismology (@NCS_Earthquake) October 22, 2024
For more information Download the BhooKamp App https://t.co/5gCOtjdtw0 @DrJitendraSingh @OfficeOfDrJS @Ravi_MoES @Dr_Mishra1966 @ndmaindia pic.twitter.com/HxYmNEiZfs
EQ ಆಫ್ M: 3.8, ರಂದು: 22/10/2024 06:52:40 IST, ಲ್ಯಾಟ್: 19.38 N, ಉದ್ದ: 77.46 E, ಆಳ: 5 ಕಿಮೀ, ಸ್ಥಳ: ನಾಂದೇಡ್, ಮಹಾರಾಷ್ಟ್ರ, ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರವು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದೆ. ಇನ್ನು ಭೂಕಂಪದಿಂದಾಗಿ ಯಾವುದೇ ಹಾನಿ ಸಂಭವಿಸಿಲ್ಲ ಎನ್ನಲಾಗಿದೆ.
ಇನ್ನು ಕಳೆದ ತಿಂಗಳಷ್ಟೇ ಉತ್ತರ ಭಾರತ, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ಹಲವೆಡೆ ಭೂಕಂಪ ಸಂಭವಿಸಿತ್ತು. ಭಾರತದ ದೆಹಲಿ, ಉತ್ತರ ಪ್ರದೇಶ, ಹರಿಯಾಣ, ಪಂಜಾಬ್, ಜಮ್ಮು ಮತ್ತು ಕಾಶ್ಮೀರ, ಪಾಕಿಸ್ತಾನದ ಪೇಶಾವರ, ಇಸ್ಲಾಮಾಬಾದ್ ಮತ್ತು ಲಾಹೋರ್ ಹಾಗೂ ಅಫ್ಘಾನಿಸ್ತಾನದಲ್ಲಿ ಭೂಕಂಪವಾಗಿತ್ತು. ಪಾಕಿಸ್ತಾನದಲ್ಲಿ ರಿಕ್ಟರ್ ಮಾಪಕದಲ್ಲಿ 5.8 ತೀವ್ರತೆ ಸೂಚಿಸುವ ಭೂಕಂಪ ಸಂಭವಿಸಿದೆ ಎಂದು ಜರ್ಮನ್ ರಿಸರ್ಚ್ ಸೆಂಟರ್ ಫಾರ್ ಜಿಯೋಸೈನ್ಸ್ (GFZ) ತಿಳಿಸಿದೆ. ಭೂಕಂಪವು 10 ಕಿಲೋಮೀಟರ್ (6.21 ಮೈಲಿ) ಆಳದಲ್ಲಿತ್ತು ಎಂದು ಜಿಎಫ್‌ಝೆಡ್ ಹೇಳಿತ್ತು.
ಈ ವರ್ಷ ಹಲವು ಬಾರಿ ಕಂಪಿಸಿದ ಭೂಮಿ
ಆಗಸ್ಟ್ 20ರಂದು ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿ 4.9 ತೀವ್ರತೆಯ ಮಧ್ಯಮ ಭೂಕಂಪ ಸಂಭವಿಸಿತ್ತು. ಅದಕ್ಕೂ ಮೊದಲು ಈ ವರ್ಷದ ಜುಲೈನಲ್ಲಿ ಬಾರಾಮುಲ್ಲಾದಲ್ಲಿ 4.2 ತೀವ್ರತೆಯ ಭೂಕಂಪ ಸಂಭವಿಸಿತ್ತು. ಮಧ್ಯಾಹ್ನ 12.26ಕ್ಕೆ 5 ಕಿ.ಮೀ ಆಳದಲ್ಲಿ ಭೂಕಂಪ ಸಂಭವಿಸಿತ್ತು. ಅಲ್ಲದೆ ಆಗಸ್ಟ್ ಆರಂಭದಲ್ಲಿ ಫರಿದಾಬಾದ್ ಜಿಲ್ಲೆಯನ್ನು ನಡುಗಿಸಿದ ಎರಡು ಭೂಕಂಪಗಳಿಂದ ಹರಿಯಾಣದ ನಿವಾಸಿಗಳು ಬೆಚ್ಚಿಬಿದ್ದಿದ್ದರು. ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ಪ್ರಕಾರ, ಬೆಳಿಗ್ಗೆ 10:54ರ ಸುಮಾರಿಗೆ ಮೊದಲ ಭೂಕಂಪನದ ಅನುಭವವಾಗಿತ್ತು. ನಂತರ ಬೆಳಿಗ್ಗೆ 11:43ಕ್ಕೆ ಎರಡನೇ ಭೂಕಂಪ ಸಂಭವಿಸಿತ್ತು. ದೆಹಲಿ-ಎನ್‌ಸಿಅರ್ ಪ್ರದೇಶದಾದ್ಯಂತ ಹಲವು ಪ್ರದೇಶಗಳಲ್ಲಿ ಭೂಕಂಪವಾದ ವರದಿಯಾಗಿತ್ತು. ಆದರೆ ಯಾವುದೇ ಸಾವು ನೋವುಗಳು ವರದಿಯಾಗಿಲ್ಲ.
ಈ ಸುದ್ದಿಯನ್ನೂ ಓದಿ:ಬಾರಾಮುಲ್ಲಾದಲ್ಲಿ 4.9 ತೀವ್ರತೆಯ ಮಧ್ಯಮ ಭೂಕಂಪ