Saturday, 23rd November 2024

Chikkaballapur News: ಭ್ರಷ್ಟಾಚಾರದ ವಿರುದ್ದದ ಅರಿವು ಸಪ್ತಾಹಕ್ಕೆ ಜಿಲ್ಲಾಧಿಕಾರಿ ಪಿ.ಎನ್ ರವೀಂದ್ರ ಚಾಲನೆ ನೀಡಿ ಹೇಳಿಕೆ

ಚಿಕ್ಕಬಳ್ಳಾಪುರ : ದೇಶದ ಆರ್ಥಿಕ, ರಾಜಕೀಯ ಮತ್ತು ಸಾಮಾಜಿಕ ಅಭಿವೃದ್ದಿಗೆ ಭ್ರಷ್ಟಾಚಾರ ರಹಿತ ಆಡಳಿತ ವೊಂದೇ ದಾರಿದೀಪವಾಗಿದೆ ಎಂದು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ತಿಳಿಸಿದರು.

ನಗರಹೊರವಲಯ ಜಿಲ್ಲಾಡಳಿತ ಭವನ ಜಿಲ್ಲಾ ಪಂಚಾಯತ್‌ನ ಸರ್.ಎಂ.ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ಸೋಮವಾರ  ಜಿಲ್ಲಾಡಳಿತ ಮತ್ತು ಜಿಲ್ಲಾ ಲೋಕಾಯುಕ್ತ ಕಚೇರಿಯಿಂದ ಹಮ್ಮಿಕೊಂಡಿದ್ದ “ಭ್ರಷ್ಟಾಚಾರದ ವಿರುದ್ಧ ಜಾಗೃತಿ ಅರಿವು ಸಪ್ತಾಹ” ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಸರ್ಕಾರದ ನೀತಿ, ನಿಯಮಗಳು, ಕಾಯ್ದೆ, ಸುತ್ತೋಲೆಗಳನ್ನು ಪಾಲನೆ ಮಾಡಿಕೊಂಡು ಸಕಾಲದಲ್ಲಿ ಸಾರ್ವಜನಿಕ ರಿಗೆ ತೊಂದರೆಯಾಗದಂತೆ ಸೇವೆಗಳನ್ನು ಒದಗಿಸಲು ಮುಂದಾಗುವುದು ಆಡಳಿತ ವರ್ಗಕ್ಕೆ ಶೋಭೆತರುವ ವಿಚಾರವಾಗಿದೆ ಎಂದರು

ನಮ್ಮ ದೇಶದ ಆರ್ಥಿಕ, ರಾಜಕೀಯ ಮತ್ತು ಸಾಮಾಜಿಕ ಅಭಿವೃದ್ದಿಗೆ ಭ್ರಷ್ಟಾಚಾರ  ಆಡಚಣೆಯ ಮಾಡುತ್ತದೆ. ಭ್ರಷ್ಟಾಚಾರ ತಡೆಯಲು ಸಾರ್ಜನಿಕರೆಲ್ಲರೂ ಜಾಗೃತರಾಗಿ  ಭ್ರಷ್ಟಾಚಾರದಲ್ಲಿ ತೊಡಗುವರ ವಿರುದ್ಧ ಸಂಬಂಧ ಪಟ್ಟ ಸಕ್ಷಮ ಪ್ರಾಧಿಕಾರ ಅಥವಾ ಮೇಲಾಧಿಕಾರಿಗಳಿಗೆ  ದೂರು ಕೊಡಬೇಕು ಎಂದು ತಿಳಿಸಿದರು

ಭ್ರಷ್ಟಾಚಾರವನ್ನು ಬೇರು ಮಟ್ಟದಲ್ಲಿಯೇ ನಿರ್ಮೂಲನೆ ಮಾಡಬೇಕಾದರೆ  ಶಾಲಾ ಕಾಲೇಜು ಹಾಗೂ ಹಾಸ್ಟೆಲ್‌ಗ ಳಲ್ಲಿ ಪ್ರಬಂಧ ಸ್ಪರ್ಧೆ, ಚರ್ಚಾ ಸ್ಪರ್ಧೆ ಇತ್ಯಾಧಿ ಕಾರ್ಯಕ್ರಮಗಳ ಮೂಲಕ ಕಲಿಕೆಯ ಹಂತದಲ್ಲಿಯೇ ವಿದ್ಯಾರ್ಥಿ ಗಳಿಗೆ ಜಾಗೃತಿ ಮೂಡಿಸುವುದು ಒಳಿತು. ಸಾರ್ವಜನಿಕರಿಗೆ ಕೂಡ ಇವತ್ತಿನಿಂದ ನವೆಂಬರ್ 3 ರ ವರೆಗೆ ಭ್ರಷ್ಟಾಚಾರ ನಿರ್ಮೂಲನೆಯ ಬಗ್ಗೆ ಅರಿವು  ಮತ್ತು ಜಾಗೃತಿಯನ್ನು ಮೂಡಿಸಲು ಅಧಿಕಾರಿಗಳು ಕ್ರಮ ವಹಿಸಲು ಹೇಳಿದರು.

ಸರ್ಕಾರಿ ಕಚೇರಿಗಳಲ್ಲಿ ಕೆಲಸ ನಿರ್ವಹಿಸುವ ಯಾವುದೇ ನೌಕರ ಅಧಿಕಾರಿ ಸಾರ್ವಜನಿಕರ ಕೆಲಸಗಳನ್ನು ಮಾಡಿ ಕೊಡುವ ಸಂದರ್ಭದಲ್ಲಿ ಲಂಚಕ್ಕೆ ಬೇಡಿಕೆಯಿಡುವುದು, ಅಕ್ರಮ ಆಸ್ತಿ ಸಂಪಾದನೆ, ಅರ್ಜಿಗಳ ವಿಲೇವಾರಿ ಮಾಡು ವಲ್ಲಿ ಅನಗತ್ಯ ವಿಳಂಭ, ಸರ್ಕಾರಿ ಹಣದ ದುರುಪಯೋಗ, ಕಳಪೆ ಕಾಮಗಾರಿ ಈ ರೀತಿಯ ಯಾವುದೇ ಭ್ರಷ್ಟಾಚಾ ರದ ದೂರುಗಳಿದ್ದಲ್ಲಿ ಕರ್ನಾಟಕ ಲೋಕಾಯುಕ್ತ, ಚಿಕ್ಕಬಳ್ಳಾಪುರ ಜಿಲ್ಲೆ ಇವರಿಗೆ ದೂರು ನೀಡುವಂತೆ ಜಿಲ್ಲಾಧಿ ಕಾರಿಗಳು ಸಾರ್ವಜನಿಕರಲ್ಲಿ  ಮನವಿ ಮಾಡಿದರು .  

ಅರಿವು ಸಪ್ತಾಹದ ಅಂಗವಾಗಿ ಎಲ್ಲಾ ಸರ್ಕಾರಿ ಕಚೇರಿಗಳ ಅಧಿಕಾರಿಗಳು,ಸಿಬ್ಬಂದಿಗೆ ಭ್ರಷ್ಟಾಚಾರ ನಿರ್ಮೂಲನೆಯ  ಪ್ರತಿಜ್ಞಾ ವಿಧಿಯನ್ನು ಬೋಧಿಸಬೇಕು  ಎಂದು ಸೂಚನೆ ನೀಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಮಟ್ಟದ ಸರ್ಕಾರಿ ಕಚೇರಿ ಅಧಿಕಾರಿಗಳಿಗೆ ಭ್ರಷ್ಟಾಚಾರ ನಿರ್ಮೂಲನೆಯ ಪ್ರತಿಜ್ಞಾ ವಿಧಿಯನ್ನು ಬೋಧಿಸಿ, ಕರಪತ್ರಗಳು, ಭಿತ್ತಿ ಪತ್ರಗಳು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಕಾಧಿಕಾರಿ ಪ್ರಕಾಶ್ ಜಿ.ಟಿ ನಿಟ್ಟಾಲಿ, ಜಿಲ್ಲಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಲ್ ಚೌಕ್ಸೆ, ಚಿಕ್ಕಬಳ್ಳಾಪುರದ  ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಆಂಟೋನಿ ಜಾನ್, ಉಪವಿಭಾಗಾಧಿಕಾರಿ ಡಿ.ಎಚ್.ಅಶ್ವಿನ್, ಹಾಗೂ  ಜಿಲ್ಲಾ ಮಟ್ಟದ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.