ಗ್ರಾಮಾಂತರ ಪ್ರದೇಶಗಳಲ್ಲಿ ಹಿರಿಯ ನಾಗರೀಕರ ಜೀವನ ದುಸ್ತರ; ವಕೀಲ ಲಕ್ಷ್ಮೀನಾರಾಯಣ್ ಕಳವಳ
ಗೌರಿಬಿದನೂರು; ಹಿರಿಯ ನಾಗರೀಕರು ಕುಟುಂಬ ಮತ್ತು ಸಮಾಜಕ್ಕೆ ದಾರಿ ದೀಪ. ಅವರನ್ನು ಗೌರವಿಸುವುದು ನಮ್ಮಲ್ಲರ ಅದ್ಯ ಕರ್ತವ್ಯವಾಗಿದೆ ಎಂದು ಪ್ರಧಾನ ಸಿವಿಲ್ ನ್ಯಾಯದೀಶ ಪಿ.ಎಂ.ಸಚಿನ್ ತಿಳಿಸಿದರು.
ನಗರದ ಹೊರವಲದಲ್ಲಿರುವ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ,ವಕೀಲರ ಸಂಘ,ಶಾಲಾ ಶಿಕ್ಷಣ ಇಲಾಖೆ ಮತ್ತು ಅರೋಗ್ಯ ಇಲಾಖೆಗಳ ಸಹಯೋಗದಲ್ಲಿ “ಸಂಘಟಿತ ಕಾರ್ಮಿಕರು, ಹೊರ ಗುತ್ತಿಗೆ ಕಾರ್ಮಿಕರಿಗಾಗಿ ಏರ್ಪಡಿಸಿದ್ದ ಒಂದು ದಿನದ ಕಾರ್ಯಗಾರ ಮತ್ತು ಹಿರಿಯ ನಾಗರೀಕರ ದಿನಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ದೇಶದ ಎಲ್ಲ ನಾಗರೀಕರಿಗೆ ಕಾನೂನು ಅರಿವು ಮೂಡಿಸುವ ಸಲುವಾಗಿ ಕಾನೂನು ಸೇವಾ ಪ್ರಾಧಿಕಾರ ತಿಂಗಳಲ್ಲಿ ಹಲವು ಸಾರಿ ಕಾನೂನು ಅರಿವಿನ ಕಾರ್ಯಕ್ರಮ ಅಯೋಜನೆ ಮಾಡಲಾಗುವುದು,ಬಡ ಜನರಿಗೆ ಅಂಗವಿಕಲರಿಗೆ ಮಹಿಳೆಯರಿಗೆ ಉಚಿತ ಕಾನೂನು ಸೇವೆ ಸಹ ನೀಡಲಾಗುವುದು ಇದರ ಪ್ರಯೋಜನೆ ಪಡೆಯಿರಿ ಪ್ರತಿ ನಾಗರೀಕರಿಗೆ ಸಾಮಾನ್ಯ ಕಾನೂನು ಅರಿವು ಅಗತ್ಯ ಈ ನಿಟ್ಟಿನಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಎಂದರು.
ಹಿರಿಯ ನಾಗರೀಕರು ಕುಟುಂಬದ ಕಣ್ಣು ಸಮಾಜದ ದಾರಿದೀಪ ಅವರನ್ನು ಗೌರವಿಸಿ ಅವರನ್ನು ನಿರ್ಲಕ್ಷ್ಯ ಅಕ್ಷಮ್ಯ ವಾಗಿದೆ, ಅವರಿಗೆ ಊಟ ವಸತಿ ಅರೋಗ್ಯದ ಕಡೆ ಮಕ್ಕಳು ಹೆಚ್ಚು ಕಾಳಜಿ ವಹಿಸಿ ಮತ್ತು ಅವರಿಗೆ ಸರ್ಕಾರಿದಿಂದ ಅನೇಕ ಯೋಜನೆಗಳು ಅನುಷ್ಟಾನಗೊಳಿಸಿದೆ ಎಂದು ಹೇಳಿದರು.
ಹಿರಿಯ ವಕೀಲ ಕೆ.ಲಕ್ಷ್ಮೀನಾರಾಯಣ್ ಮಾತನಾಡಿ ಹಿರಿಯ ನಾಗರೀಕರು ಗ್ರಾಮಾಂತರ ಪ್ರದೇಶ ಅವರ ಪರಿಸ್ಥಿತಿ ದುಸ್ತರವಾಗಿದೆ. ಮಕ್ಕಳು ಅವರನ್ನು ತೀವ್ರ ನಿರ್ಲಕ್ಷ್ಯ ವಹಿಸಿರುವುದನ್ನು ನಾವು ಕಾಣಬಹುದು. ಇತ್ತೀಚಿನ ದಿನಗಳಲ್ಲಿ ಅನಾಥಾಶ್ರಮಕ್ಕೆ ಕಳುಸುವುದು ಹೆಚ್ಚಾಗಿದೆ. ಇದರಿಂದ ತಂದೆ ತಾಯಿ ವಾತ್ಸಲ ಕಣ್ಮರೆಯಾಗಿದೆ. ಹಳ್ಳಿಗಳಲ್ಲಿ ಕೂಡ ಹಿರಿಯರನ್ನು ಮನೆಯಿಂದ ಅಚೆ ಹಾಕಿ ಜೋಪಡಿಗಳಲ್ಲಿ ದೂಕಿ ಅವರನ್ನು ಸಾಕು ಪ್ರಾಣಿಗಳಿಗಿಂತ ಹೀನಾ ಸ್ಥಿತಿ ನಾವು ಕಾಣಬಹುದು ಇದು ನಿಜಕ್ಕೂ ನಾಗರೀಕ ಪ್ರಪಂಚ ನಾಚಿಕೆ ಪಡುವಂತೆ ಅಗಿದೆ ಸರ್ಕಾರಗಳು ಕೇವಲ ಯೋಜನೆ ರೂಪಿಸುವುಕಿಂತ ಅವರನ್ನು ಕಾನೂನು ರೀತಿಯಲ್ಲಿ ರಕ್ಷಣೆ ಮಾಡಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಮಹೇಶ್ ಪತ್ರಿ, ಶಿಕ್ಷಣ ಇಲಾಖೆ ಶ್ರೀನಿವಾಸಮೂರ್ತಿ ಸರ್ಕಾರಿ ಅಭಿಯೋಜಕ ಪಯಾಜ್ ಪಟೀಲ್, ವಕೀಲ ಜಗದೀಶ್ ಕಾರ್ಯದರ್ಶಿ ದಯನಂದ್, ಕಾರ್ಖಾನೆಗಳ ಉಪನಿರ್ದೇಶಕ ಸೋಮ ಶೇಖರ್, ಕಾರ್ಮಿಕ ರಾಜ್ಯ ವಿಮಾ ಯೋಜನೆ ಅಧಿಕಾರಿ, ಪ್ರಭುಕುಮಾರ್ ಬಸವ ಪ್ರಭು, ಜಿಲ್ಲಾ ಕಾರ್ಮಿಕ ಇಲಾಖೆ ನಿರೀಕ್ಷಕಿ ಷಭಾನ ಅಜ್ಮಿ, ಕಾರ್ಮಿಕ ನಿರೀಕ್ಷಕ ಸತೀಶ್ ಮುಂತಾದವರು ಹಾಜರಿದ್ದರು.
ಇದನ್ನೂ ಓದಿ: Chikkaballapur News: ಕ್ರೀಡಾಕೂಟಗಳು ದೈಹಿಕ ಮತ್ತು ಮಾನಸಿಕ ಸಮತೋಲನದ ಸಾಧನಗಳು: ಗಜೇಂದ್ರ