Saturday, 23rd November 2024

Protest: ಎಸ್‌ಬಿಐ ಬ್ಯಾಂಕ್ ಮುಂದೆ ಪ್ರತಿಭಟನೆ ನಡೆಸಿದ ನಿವೃತ್ತ ನೌಕರರು

7ನೇ ವೇತನ ಆಯೋಗದ ವರದಿಯಂತೆ ಬಾಕಿ ಇರುವ ಎರಡು ತಿಂಗಳ ವೇತನವನ್ನು ಬಿಡುಗಡೆ ಮಾಡಲು ಒತ್ತಾಯ  

ಚಿಂತಾಮಣಿ : ಬೇರೆ ಬ್ಯಾಂಕುಗಳಲ್ಲಿ ನಿವೃತ್ತ ನೌಕರರಿಗೆ ೭ನೇ ವೇತನ ಆಯೋಗದ ವರದಿಯಂತೆ ಬಾಕಿ ಇರುವ ಎರಡು ತಿಂಗಳ ವೇತನವನ್ನು ಬಿಡುಗಡೆ ಮಾಡಲಾಗಿದ್ದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ವೇತನ ಬಿಡುಗಡೆ ಮಾಡಲು ಮೀನಾಮೇಷ ಎಣಿಸುತ್ತಿರುವ ಬ್ಯಾಂಕ್ ಅಧಿಕಾರಿಗಳ ಧೋರಣೆ ಖಂಡಿಸಿ ನಿವೃತ್ತ ನೌಕರರು ನಗರದ ಬೆಸ್ಕಾಂ ಕಚೇರಿ ಹಿಂಭಾಗ ಇರುವ ಎಸ್ ಬಿ ಐ ಬ್ಯಾಂಕಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘದ ಅಧ್ಯಕ್ಷರಾದ ನಾರಾಯಣಸ್ವಾಮಿ ರವರು ಮಾತನಾಡಿ ಏಳನೇ ವೇತನ ಆಯೋಗದ ಶಿಫಾರಸಂತೆ ಬಾಕಿ ಇರುವ ಎರಡು ತಿಂಗಳ ಸಂಬಳದ ಬಾಬತ್ತು ಹಣವನ್ನು ಈಗಾಗಲೇ ಬೇರೆ ಬ್ಯಾಂಕುಗಳಿAದ ನೀಡಲಾಗಿದ್ದು.ಸದರಿ ಎಸ್ ಬಿ ಐ ಬ್ಯಾಂಕಿನಲ್ಲಿ ಮಾತ್ರ ವೇತನದ ಹಣ ನೀಡಲು ಬ್ಯಾಂಕ್ ಸಿಬ್ಬಂದಿ ಹಿಂದೇಟು ಹಾಕುತ್ತಿದ್ದಾರೆ.

ಈ ಕೂಡಲೇ ೭ನೇ ವೇತನ ಆಯೋಗದ ವರದಿಯಂತೆ ಬಾಕಿ ಇರುವ ಎರಡು ತಿಂಗಳ ವೇತನವನ್ನು ಬಿಡುಗಡೆ ಮಾಡದಿದ್ದರೆ. ಮುಂದಿನ ದಿನಗಳಲ್ಲಿ ಉಗ್ರ ಹೋರಾಟಗಳನ್ನು ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ಕೊಟ್ಟರು.

ಪ್ರತಿಭಟನೆಯ ನಂತರ ಸಹಾಯಕ ವ್ಯವಸ್ಥಾಪಕರಿಗೆ ಮನವಿ ಪತ್ರವನ್ನು ಸಲ್ಲಿಸಿದರು ಮನವಿ ಸ್ವೀಕರಿಸಿದ ಅವರು ಮನವಿ ಕುರಿತು ಮೇಲಾಧಿಕಾರಿಗಳ ಗಮನಕ್ಕೆ ತಂದು ಅನುಕೂಲ ಮಾಡಿಕೊಡುವ ಭರವಸೆ ಕೊಟ್ಟರು.

ಪ್ರತಿಭಟನೆಯಲ್ಲಿ ಎಸ್ ಎನ್ ಕೃಷ್ಣಪ್ಪ, ಯಲ್ಲಪ್ಪ, ಜೈಪ್ರಕಾಶ್, ನರಸಿಂಹಮೂರ್ತಿ, ಸಂಜುಪ್ಪ, ವಿ ವೆಂಕಟ್ ರೆಡ್ಡಿ, ಎಂ ನಾರಾಯಣಸ್ವಾಮಿ, ಜಿ ಆರ್ ಕೃಷ್ಣಾರೆಡ್ಡಿ,ರಾಮಕೃಷ್ಣ ರೆಡ್ಡಿ,ನಾಗಪ್ಪ ಎಸ್, ಎನ್ ನಾರಾಯಣಸ್ವಾಮಿ, ಎ ಎಸ್ ರಾಮಚಂದ್ರಮೂರ್ತಿ, ಎಸ್ ಆಂಜಪ್ಪ, ಜಿ ಗೋಪಾಲಪ್ಪ, ಸತ್ಯನಾರಾಯಣ, ಉಮರ್, ಸಿ ಎನ್ ವೆಂಕಟಾಚಲಪತಿ, ಕೃಷ್ಣಾರೆಡ್ಡಿ, ಶಂಕರಪ್ಪ, ರಾಜೇಂದ್ರ ಪ್ರಸಾದ್, ಸಿದ್ದಪ್ಪ ಸೇರಿದಂತೆ ಮತ್ತಿತರರು ಇದ್ದರು.