Saturday, 23rd November 2024

Chikkaballapur News: ತೀರ್ಥ ಶಾಲೆಯಲ್ಲಿ ನಗುವಿನ ಅರಸ ಪುನೀತ್ ಪುಣ್ಯಸ್ಮರಣೆ

ಗೌರಿಬಿದನೂರು : ಪಟ್ಟಣದ ಮುನೇಶ್ವರ ಬಡಾವಣೆಯ ತೀರ್ಥ ಶಾಲೆಯಲ್ಲಿ ನಗುವಿನ ಅರಸ ಕರ್ನಾಟಕ ರತ್ನ ಡಾ. ಪುನೀತ್ ರಾಜಕುಮಾರ್ ಅವರ ಮೂರನೆಯ ಪುಣ್ಯ ಸ್ಮರಣೆಯ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಡಾ. ಕೆ.ವಿ.ಪ್ರಕಾಶ್ ಪುನೀತ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಮಾತನಾಡಿ ದರು. ಪುನೀತ್ ರಾಜಕುಮಾರ್ ನಿಷ್ಕಲ್ಮಶ ಮನಸ್ಸಿನ ಪರಿಶುದ್ಧ ವಿಶ್ವಮಾನವ ವ್ಯಕ್ತಿತ್ವ ಹೊಂದಿದ್ದರು ಎಂದರು.

ಕನ್ನಡದ ರಾಯಭಾರಿಯಾಗಿ ಅವರ ಸಹೃದತೆಯಿಂದ ದಾನ ದತ್ತಿ ಧರ್ಮಗಳು, ನಡೆಸಿದ ಗೋಶಾಲೆ, ಅನಾಥಾಶ್ರಮ ಗಳು, ವಿದ್ಯಾ ಸಂಸ್ಥೆಗಳಿಗೆ ನೀಡಿದ ದೇಣಿಗೆ, ಸಮಾಜಮುಖಿ ಕೆಲಸಗಳು, ಸಂಭಾವನೆ ಪಡೆಯದೆ  ಪ್ರಚಾರ ನಡೆಸಿದ ಸರ್ಕಾರಿ ಜಾಹೀರಾತುಗಳು, ಅಪ್ರತಿಮ  ಕಲಾ ಸೇವೆ , ನಾಡು ನುಡಿಯ ಬಗ್ಗೆ ಅವರಿಗಿದ್ದ ಪ್ರೀತಿ ಕನ್ನಡ ಚಿತ್ರರಂಗಕ್ಕೆ ನೀಡಿದ ಕೊಡುಗೆ ಅಪರಿಮಿತವಾದದ್ದು ಹಾಗೂ ಕರುನಾಡಿನ ಕೀರ್ತಿ ಪತಾಕೆಯನ್ನು  ಜಗತ್ತಿನಾದ್ಯಂತ ಪಸರಿಸಿದ ಶ್ರೇಷ್ಠ ಶಕ್ತಿಯಾಗಿದ್ದರು.ಅದೇ ರೀತಿಯಾಗಿ ಸಾಧನೆಗಳ ಸ್ಫೂರ್ತಿಯ ಕಿರಣವಾಗಿ, ಅಭಿಮಾನಿಗಳ ಆರಾಧ್ಯ ದೈವವಾಗಿ ಇಂದಿಗೂ,ಎAದಿಗೂ, ಎಂದೆAದಿಗೂ ಪುನೀತರಾದ  ಪುನೀತ್ ರವರು ಪ್ರಪಂಚದಲ್ಲಿ ನಮ್ಮೊಂದಿಗೆ ಜೀವಂತ ಎಂದು ಅಭಿಪ್ರಾಯಪಟ್ಟರು.

ಪುನಿತ್ ಭವಚಿತ್ರಕ್ಕೆ ಪುಟಾಣಿಗಳು ಪುಷ್ಪ ನಮನ ಮಾಡಿದರು. ಮುಖ್ಯ ಶಿಕ್ಷಕಿ ಎಂ.ಶೋಭಾ ಮಾತನಾಡಿ, ಪುನೀತ್ ರಾಜಕುಮಾರ್ ಅವರು ಭಾರತದ ಶ್ರೇಷ್ಠ ಬಾಲ ನಟರಾಗಿ,ಕರುನಾಡಿನ ನಾಯಕ ನಟರಾಗಿ,ಹಿನ್ನೆಲೆ ಗಾಯಕರಾಗಿ, ಬೆಳ್ಳಿ ಪರದೆಯ ಮೇಲೆ ಪುನೀತ್ ರವರ  ಸೇವೆ ಅನುಪಮ ಹಾಗೂ ಅನನ್ಯ. ಅಪ್ಪು ನೇತ್ರ ದಾನಿಯಾಗಿ, ನಾಲ್ವರಿಗೆ  ಬೆಳಕು ನೀಡಿದ ಪ್ರಭೆ, ಸಾಮಾಜಿಕ ಜಾಗೃತಿಯ ಪ್ರಚಾರಕರಾಗಿ ಸೇವೆ ಸಲ್ಲಿಸಿದ ಲೋಹಿತ್ ನಗು ಮೊಗದ ಒಡೆಯನಾಗಿ,ಮಾನವೀಯ ಮೌಲ್ಯಗಳು ಸಂಕೇತವಾಗಿ, ದಂತಕತೆಯಾಗಿ, ಪುನೀತ್ ಪ್ರಪಂಚಾದ್ಯ0ತ ಪ್ರಜ್ವಲಿ ಸುತ್ತಿದ್ದಾರೆ ಎಂದು ತಿಳಿಸಿದರು.

ಶಿಕ್ಷಕಿಯರಾದ ಭಾರ್ಗವಿ, ಸಂಧ್ಯಾ,ಸಾಯಿ ಪ್ರಿಯ ಮತ್ತು ಚಂದ್ರಮ್ಮ ಉಪಸ್ಥಿತರಿದ್ದರು.