Saturday, 23rd November 2024

Chikkaballapur News: ಜಿಲ್ಲೆಯ ಕರಡು ಮತದಾರರ ಪಟ್ಟಿ ಬಿಡುಗಡೆ ಮಾಡಿ ಅಪರ ಜಿಲ್ಲಾಧಿಕಾರಿ ಡಾ.ಎನ್.ಭಾಸ್ಕರ್ ಹೇಳಿಕೆ

ಜಿಲ್ಲೆಯಲ್ಲಿ 1059981 ಮಂದಿ ಮತದಾರರಿದ್ದು  ೫,೨೨,೨೯೮ ಪುರುಷ ಮತದಾರರು, ೫,೩೭,೫೯೩ ಮಹಿಳಾ ಮತದಾರರು ಮತ್ತು ಇತರೆ ೯೦ ಮಂದಿ

ಚಿಕ್ಕಬಳ್ಳಾಪುರ: ಜಿಲ್ಲೆಯ ೫ ವಿಧಾನಸಭಾ ಕ್ಷೇತ್ರಗಳ ಆರು ತಾಲ್ಲೂಕುಗಳಲ್ಲಿನ ಮತದಾರರ ಪಟ್ಟಿ ವಿಶೇಷ ಪರಿಷ್ಕ ರಣೆಯ ನಂತರ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದ್ದು, ಜಿಲ್ಲಾದ್ಯಂತ ೧೦,೫೯,೯೮೧ ಮಂದಿ ಮತದಾರರು ಇದ್ದು, ಇದರಲ್ಲಿ ೫,೨೨,೨೯೮ ಪುರುಷ ಮತದಾರರು, ೫,೩೭,೫೯೩ ಮಹಿಳಾ ಮತದಾರರು ಮತ್ತು ೯೦ ಮಂದಿ ಇತರರು ಇದ್ದಾರೆ ಎಂದು ಅಪರ ಜಿಲ್ಲಾಧಿಕಾರಿ ಡಾ.ಎನ್.ಭಾಸ್ಕರ್ ಅವರು ಮಾಹಿತಿ ನೀಡಿದರು.

ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ನ್ಯಾಯಾಲಯ ಸಭಾಂಗಣದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿ ಯಲ್ಲಿ ಕರಡು ಮತದಾರರ ಪಟ್ಟಿಯನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.

ಜಿಲ್ಲೆಯ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆಯ ವೇಳೆ ೨೦,೦೧೬ ಮಂದಿ ಮತದಾರರನ್ನು ಮತದಾರರ ಪಟ್ಟಿಗೆ ಸೇರಿಸಲಾಗಿದ್ದು, ೯೯೩೧ ಮತದಾರರು ಬೇರಡೆ ತಮ್ಮ ಹೆಸರು ವರ್ಗಾಯಿಸಿಕೊಂಡಿದ್ದು,ಕಳೆದ ಜನವರಿಯಿಂದ ಇದುವರೆಗೂ ಒಟ್ಟು ೧೦,೦೮೫ ಮತದಾರರು ಹೆಚ್ಚಾಗಿದ್ದಾರೆ ಎಂದರು.

ಜಿಲ್ಲೆಯ ಮತದಾರರ ಲಿಂಗಾನುಪಾತದಲ್ಲಿ ಪುರುಷರಿಗಿಂತ ಮಹಿಳೆಯರು ಹೆಚ್ಚು ಇದ್ದಾರೆ. ಅದರಲ್ಲಿ ಗೌರಿಬಿದ ನೂರ ಕ್ಷೇತ್ರದಲ್ಲಿ ೩,೫೨೭, ಬಾಗೇಪಲ್ಲಿ ಕ್ಷೇತ್ರದಲ್ಲಿ ೨,೫೨೦, ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ೩,೮೮೯. ಶಿಡ್ಲಘಟ್ಟ ವಿಧಾನ ಸಭಾ ಕ್ಷೇತ್ರದಲ್ಲಿ ೧,೩೪೩, ಚಿಂತಾಮಣಿ ವಿಧಾನಸಭಾ ಕ್ಷೇತ್ರದಲ್ಲಿ ೪,೦೧೬ ಮಹಿಳೆಯರು ಸೇರಿ ಜಿಲ್ಲೆಯಲ್ಲಿ ಒಟ್ಟು ೧೫,೨೯೫ ಮಹಿಳೆಯರ ಸಂಖ್ಯೆ ಏರಿಕೆಯಾಗಿದೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ವಿಧಾನಸಭಾ ಕ್ಷೇತ್ರದಲ್ಲಿ ೧,೦೩,೪೧೬ ಪುರುಷ ಮತದಾರರು,೧,೦೬,೯೪೩ ಮಹಿಳಾ ಮತದಾರರು ಮತ್ತು ೩ ಮಂದಿ ಇತರರು ಸೇರಿ ಒಟ್ಟು ೨,೧೦,೩೬೨ ಮತದಾರರು ಇದ್ದಾರೆ.

ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದಲ್ಲಿ ೧,೦೦,೩೬೯ ಪುರುಷ ಮತದಾರರು,೧,೦೨,೮೮೯ ಮಹಿಳಾ ಮತದಾರರು ಮತ್ತು ೨೭ ಮಂದಿ ಇತರರು ಸೇರಿ ಒಟ್ಟು ೨,೦೩,೨೮೫ ಮತದಾರರು ಇದ್ದಾರೆ.  

ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ೧,೦೩,೧೧೪ ಪುರುಷ ಮತದಾರರು, ೧,೦೭,೦೦೩ ಮಹಿಳಾ ಮತದಾರರು ಮತ್ತು ೧೨ ಮಂದಿ ಇತರರು ಸೇರಿ ಒಟ್ಟು  ೨,೧೦,೧೨೯ ಮತದಾರರು ಇದ್ದಾರೆ.

ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಲ್ಲಿ ೧,೦೨,೭೬೦ ಪುರುಷ ಮತದಾರರು,೧,೦೪,೧೦೩ ಮಹಿಳಾ ಮತದಾರರು ಮತ್ತು ೯ ಮಂದಿ ಇತರರು ಸೇರಿ ಒಟ್ಟು  ೨,೦೬,೮೭೨ ಮತದಾರರು ಇದ್ದಾರೆ.

ಚಿಂತಾಮಣಿ ವಿಧಾನಸಭಾ ಕ್ಷೇತ್ರದಲ್ಲಿ ೧,೧೨,೬೩೯ ಪುರುಷ ಮತದಾರರು,೧,೧೬,೬೬೫ ಮಹಿಳಾ ಮತದಾರರು ಮತ್ತು ೩೯ ಮಂದಿ ಇತರರು ಸೇರಿ ಒಟ್ಟು ೨,೨೯,೩೩೩ ಮತದಾರರು ಇದ್ದಾರೆ ಎಂದು ತಿಳಿಸಿದರು.

ಭಾರತ ಚುನಾವಣಾ ಆಯೋಗದ ಇತ್ತೀಚಿನ ತಿದ್ದುಪಡಿ ನಿಯಮಗಳಂತೆ ಪ್ರಸ್ತುತ ಮತದಾರರ ಪಟ್ಟಿಗೆ ಸೇರ್ಪಡೆ ಗೊಳಿಸಲು ೪ ಅರ್ಹತಾ ದಿನಾಂಕಗಳನ್ನು ನಿಗಧಿಪಡಿಸಲಾಗಿದೆ. ಪ್ರಸಕ್ತ ೨೦೨೫ರ ವಾರ್ಷಿಕ ಮತದಾರರ ಪಟ್ಟಿಯ ಪರಿಷ್ಕರಣೆ ಸಂದರ್ಭದಲ್ಲಿ ೧ನೇ, ಜನವರಿ, ೧ನೇ ಏಪ್ರಿಲ್, ೧ನೇ ಜುಲೈ ಮತ್ತು ೧ನೇ ಅಕ್ಟೋಬರ್-೨೦೨೫ಕ್ಕೆ ೧೮ ವರ್ಷ ತುಂಬುವ ಯುವ ಮತದಾರರು ಮತದಾರರ ಪಟ್ಟಿಗೆ ಹೆಸರು ಹೊಸದಾಗಿ ಸೇರಿಸಲು ಮುಂಗಡ ಅರ್ಜಿ  ಸಲ್ಲಿಸಲು ಅವಕಾಶವಿದೆ. ಇದರಿಂದ ೧೮ ವರ್ಷಗಳನ್ನು ಪೂರೈಸಿದ ಯುವಕರು ನೋಂದಣಿಗಾಗಿ ಮುಂದಿನ ವರ್ಷದ ವಿಶೇಷ ಪರಿಷ್ಕರಣೆವರೆಗೆ ಕಾಯುವುದನ್ನು ತಪ್ಪಿಸಲಾಗಿದೆ ಮತ್ತು ಮಧ್ಯಂತರ ಅವಧಿಯಲ್ಲಿ ನಡೆಯುವ ಚುನಾವಣೆಗಳಲ್ಲಿ ಮತಚಲಾವಣೆಗೆ ಅವಕಾಶ ದೊರೆಯಲಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಒಟ್ಟು ೧೨೯೩ ಮತಗಟ್ಟೆಗಳಿದ್ದು, ಇದರಲ್ಲಿ ನಗರ ಪ್ರದೇಶದಲ್ಲಿ ೨೩೫ ಮತಗಟ್ಟೆಗಳು ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ೯೫೮ ಮತಗಟ್ಟೆಗಳಿವೆ ಎಂದು ಹೇಳಿದರು.        

ಕರಡು ಮತದಾರರ ಪಟ್ಟಿಯ ಬಗ್ಗೆ ಯಾವುದಾದರು ಹಕ್ಕು ಮತ್ತು ಆಕ್ಷೇಪಣೆಗಳಿದ್ದಲ್ಲಿ ನವೆಂಬರ್ ೨೮ ರ ಒಳಗಾಗಿ ಸಂಬ0ಧಪಟ್ಟ ಮತಗಟ್ಟೆ ಅಧಿಕಾರಿ, ತಹಶೀಲ್ದಾರ್ , ಪೌರಾಯುಕ್ತರು , ಸಹಾಯಕ ಮತದಾರರ ನೋಂದಾಣಾಧಿ ಕಾರಿಗಳಿಗೆ ಮತ್ತು ಉಪವಿಭಾಗಾಧಿಕಾರಿ ಮುಖಾಂತರ ಸಲ್ಲಿಸಬಹುದಾಗಿರುತ್ತದೆ ಎಂದರು.

ಹೆಚ್ಚಿನ ಮಾಹಿತಿಗಾಗಿ ಮತದಾರರ ಸಹಾಯವಾಣಿ ೧೯೫೦ ಅಥವಾ ಮುಖ್ಯ ಚುನಾವಣಾಧಿಕಾರಿಗಳನ್ನು ಸಂಪರ್ಕಿಸ ಬಹುದು ಅಲ್ಲದೆ ಅಂತರ್ಜಾಲದಲ್ಲಿ ಮತದಾರರ ಪಟ್ಟಿಗೆ ಸಂಬ0ಧಿಸಿದ0ತೆ ಸಾರ್ವಜನಿಕರು ಮತದಾರರ ಪಟ್ಟಿಯಲ್ಲಿ ಹೆಸರುಗಳ ಸೇರ್ಪಡೆ,ತಿದ್ದುಪಡಿ,ತೆಗೆದು ಹಾಕಲು,ವರ್ಗಾವಣೆಗಾಗಿ ಅರ್ಜಿ ಸಲ್ಲಿಸಲು ಮತ್ತು ಇ-ಎಪಿಕ್ (ಭಾವಚಿತ್ರವುಳ್ಳ ಮತದಾರರ ಗುರುತಿನ ಚೀಟಿ) ಅನ್ನು ಡೌನ್‌ಲೋಡ್ ಮಾಡಿಕೊಳ್ಳಲು ಅವಕಾಶ ಕಲ್ಪಿಸ ಲಾಗಿರುತ್ತದೆ.

ಸದರಿ ವೋಟರ್ ಸಹಾಯವಾಣಿ ಮೊಬೈಲ್ Appನಲ್ಲಿ ಚುನಾವಣೆಗೆ ಹಾಗೂ ಮತದಾರರ ಪಟ್ಟಿಗೆ ಸಂಬAಧಿಸಿದAತೆ ಇತರೆ ಮಾಹಿತಿಗಳನ್ನು ಸಹ ಆಳವಡಿಸಲಾಗಿರುತ್ತದೆ. ಮೊಬೈಲ್ ಆಪ್ ನ ಮುಖಾಂತರ ಡೌನ್‌ಲೋಡ್ ಮಾಡಿಕೊಂಡು ಈ ಸುವರ್ಣಾವಕಾಶವನ್ನು ಉಪಯೋಗಿಸಿಕೊಳ್ಳಲು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಉಪ ವಿಭಾಗಾಧಿಕಾರಿ ಡಿ.ಎಚ್.ಅಶ್ವಿನ್, ಚುನಾವಣಾ ತಹಸೀಲ್ದಾರ್ ಕೆ.ಶ್ವೇತಾ, ವಾರ್ತಾ ಮತ್ತು ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಎಂ. ಜುಂಜಣ್ಣ ಮತ್ತಿತರರು ಉಪಸ್ಥಿತರಿದ್ದರು.

ಇದನ್ನೂ ಓದಿ: Chikkaballapur News: ತೀರ್ಥ ಶಾಲೆಯಲ್ಲಿ ನಗುವಿನ ಅರಸ ಪುನೀತ್ ಪುಣ್ಯಸ್ಮರಣೆ