Saturday, 23rd November 2024

Vastu Tips: ಕೆಟ್ಟ ದೃಷ್ಟಿ ದೂರವಿಡಲು ವಿಂಡ್ ಚೈಮ್ ಎಲ್ಲಿಡಬೇಕು?

Vastu Tips

ಮನೆಗೆ ದೃಷ್ಟಿಯಾಗುತ್ತೆ ಎಂದುಕೊಂಡು ಕೆಲವರು ಬೊಂಬೆ, ಪೊರಕೆಯನ್ನು ಕಟ್ಟುವುದನ್ನು ನೋಡಿರುತ್ತೇವೆ. ವಾಸ್ತು ಶಾಸ್ತ್ರದ (Vastu Tips) ಪ್ರಕಾರವೂ ಕೆಲವೊಂದು ವಸ್ತುಗಳು ಮನೆಗೆ ದುಷ್ಟ ಕಣ್ಣು, ಅಸೂಯೆ, ಕೆಟ್ಟ ಉದ್ದೇಶಗಳು ಮತ್ತು ನಕಾರಾತ್ಮಕ ಶಕ್ತಿಗಳು ಪ್ರವೇಶ ಮಾಡುವುದನ್ನು ತಡೆಯುತ್ತದೆ ಎನ್ನುತ್ತದೆ. ಇದರಲ್ಲಿ ವಿಂಡ್ ಚೈಮ್ ಕೂಡ ಒಂದು.

ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ವಿಂಡ್ ಚೈಮ್ ಅಳವಡಿಸುವುದರಿಂದ ಮನೆಯ ಅಲಂಕಾರಕ್ಕೆ ಕೆಟ್ಟ ದೃಷ್ಟಿ ತಾಕದಂತೆ ಕಾಪಾಡುತ್ತದೆ. ವಿಂಡ್ ಚೈಮ್‌ಗಳು ಮನೆಗೆ ಸೊಬಗಿನ ಸ್ಪರ್ಶವನ್ನು ನೀಡುವುದು ಮಾತ್ರವಲ್ಲ ನಕಾರಾತ್ಮಕ ಶಕ್ತಿಗಳ ವಿರುದ್ಧ ರಕ್ಷಣೆಯನ್ನು ಒದಗಿಸುತ್ತದೆ.

ವಿಂಡ್ ಚೈಮ್‌ಗಳು ಜನಪ್ರಿಯ ಅಲಂಕಾರಿಕ ವಸ್ತುಗಳಾಗಿದ್ದು ಇದು ವಾಸ ಸ್ಥಳದಲ್ಲಿ ಸಕಾರಾತ್ಮಕತೆಯನ್ನು ತರುತ್ತವೆ. ಇಂತಹ ರಕ್ಷಣಾತ್ಮಕ ಅಂಶಗಳನ್ನು ಮನೆಯಲ್ಲಿ ಸೇರಿಸುವುದರಿಂದ ಮನೆಯವರಲ್ಲಿ ಸಾಮರಸ್ಯ ಹೆಚ್ಚುತ್ತದೆ.

ಕೆಟ್ಟ ದೃಷ್ಟಿಯನ್ನು ತಡೆಯುವ ವಿಂಡ್ ಚೈಮ್‌ಗಳು ನೀಲಿ ಮತ್ತು ಬಿಳಿ ಬಣ್ಣಗಳಲ್ಲಿ ಇರುತ್ತವೆ. ವೃತ್ತಾಕಾರದ ವಿನ್ಯಾಸವು ಕಣ್ಣನ್ನು ಹೋಲುತ್ತದೆ. ಈ ಚೈಮ್‌ಗಳು ಕಲಾತ್ಮಕವಾಗಿ ಇಲ್ಲದೇ ಇದ್ದರೂ ನಕಾರಾತ್ಮಕ ಕಂಪನಗಳನ್ನು ಹೀರಿಕೊಳ್ಳುತ್ತವೆ ಎಂದು ನಂಬಲಾಗಿದೆ. ಮನೆಯ ಅಲಂಕಾರಿಕ ವಸ್ತುಗಳಲ್ಲಿ ಒಂದಾದ ವಿಂಡ್ ಚೈಮ್ ಮನೆಯಲ್ಲಿ ಅಳವಡಿಸುವುದಕ್ಕೂ ನಿರ್ದಿಷ್ಟ ನಿಯಮಗಳಿವೆ.

Vastu Tips

ಪ್ರವೇಶ ದ್ವಾರ

ಮನೆಯ ಪ್ರವೇಶದ್ವಾರದಲ್ಲಿ ವಿಂಡ್ ಚೈಮ್ ಇಡುವುದು ಮನೆಗೆ ಪ್ರವೇಶಿಸುವ ನಕಾರಾತ್ಮಕ ಶಕ್ತಿಗಳನ್ನು ತಡೆಯುತ್ತದೆ. ಇದು ಮನೆಗೆ ರಕ್ಷಣಾತ್ಮಕವಾಗಿ ಕಾರ್ಯನಿರ್ವಹಿಸುತ್ತದೆ. ಇದು ಮನೆಗೆ ಬರುವ ಯಾರೇ ಆಗಿರಲಿ ಅವರಿಗೆ ಗೋಚರಿಸುತ್ತದೆ. ಮನೆಯ ಪ್ರವೇಶ ದ್ವಾರದ ಬಳಿ ಇದನ್ನು ಎಲ್ಲರೂ ಸುಲಭವಾಗಿ ನೋಡಬಹುದಾದ ಎತ್ತರದಲ್ಲಿ ಇರಿಸಿ.

ಕಿಟಕಿ

ಮನೆಯ ಕಿಟಕಿ ಬಳಿಯೂ ಇದನ್ನು ಇರಿಸಬಹುದು. ಇದರಿಂದ ಹೊರಗಿನ ಋಣಾತ್ಮಕ ಶಕ್ತಿಗಳು ಪ್ರವೇಶ ಮಾಡುವುದನ್ನು ತಡೆಯಬಹುದು. ಇದು ಎಲ್ಲರ ಗಮನ ಸೆಳೆಯುವುದರಿಂದ ಅನಗತ್ಯ ವಿಚಾರಗಳನ್ನು ಇದು ಮನೆಯ ಹೊರಗೆ ಇರಿಸುವಂತೆ ಮಾಡುತ್ತದೆ.

ಲಿವಿಂಗ್ ರೂಮ್

ಲಿವಿಂಗ್ ರೂಮ್ ಗೋಡೆಯನ್ನು ವಿಂಡ್ ಚೈಮ್‌ಗಳಿಂದ ಕಲಾತ್ಮಕವಾಗಿ ಅಲಂಕರಿಸಿ. ಇದು ಕೇಂದ್ರ ಸ್ಥಾನದಲ್ಲಿ ಇರಲಿ. ಲಿವಿಂಗ್ ರೂಮಿನ ನೈಋತ್ಯ ಮೂಲೆ ಇದಕ್ಕೆ ಸೂಕ್ತವಾಗಿದೆ.

ಟೇಬಲ್ ಮೇಲೆ

ಲಿವಿಂಗ್ ರೂಮ್ ನ ಮಧ್ಯೆ ಇರಿಸುವ ಕಾಫಿ ಟೇಬಲ್‌ಗಳ ಮೇಲೆಯೂ ಇದನ್ನು ಇರಿಸಬಹುದು. ಇದು ನಕಾರಾತ್ಮಕ ಶಕ್ತಿಯನ್ನು ಹೀರಿಕೊಂಡು ಸಕಾರಾತ್ಮಕತೆಯನ್ನು ಹರಡುತ್ತದೆ. ಸಾಮಾನ್ಯವಾಗಿ ಮನೆ ಮಂದಿ, ಕುಟುಂಬ ಸದಸ್ಯರು, ಬಂಧುಗಳು, ಸ್ನೇಹಿತರೆಲ್ಲ ಒಟ್ಟಾದಾಗ ಸಕಾರಾತ್ಮಕ ವಾತಾವರಣವನ್ನು ಉತ್ತೇಜಿಸುತ್ತದೆ.

ಮಲಗುವ ಕೋಣೆ

ಶಾಂತಿಯುತ ನಿದ್ರೆ ಮತ್ತು ನಕಾರಾತ್ಮಕ ಶಕ್ತಿಗಳಿಂದ ರಕ್ಷಣೆಯನ್ನು ನೀಡಲು ಹಾಸಿಗೆಯ ಮೇಲ್ಭಾಗದಲ್ಲಿ ದುಷ್ಟ ಕಣ್ಣಿನ ಗಾಳಿಯ ಚೈಮ್ ಅನ್ನು ಅಳವಡಿಸಿ. ಚೈಮ್ ನಿರ್ಧಿಷ್ಟ ಎತ್ತರದಲ್ಲಿ ಇರಲಿ. ವೀಕ್ಷಣೆಗೆ ಅಡ್ಡಿಯಾಗದಂತೆ ಇರಲಿ.

ಸಣ್ಣ ವಿಂಡ್ ಚೈಮ್‌ಗಳನ್ನು ನೈಟ್‌ಸ್ಟ್ಯಾಂಡ್‌ಗಳಲ್ಲಿ ಅಥವಾ ಹಾಸಿಗೆಯ ಬಳಿ ಇರುವ ಕಪಾಟಿನಲ್ಲಿ ಇರಿಸಿ. ಇದು ಶಾಂತ ವಾತಾವರಣವನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. ಹಾನಿಕಾರಕ ಪ್ರಭಾವಗಳಿಂದ ರಕ್ಷಣೆಯನ್ನು ಒದಗಿಸುತ್ತದೆ.

Vastu Tips

ಅಡುಗೆ ಮನೆ

ಅಡುಗೆ ಮನೆಯ ಸೀಲಿಂಗ್ ನಲ್ಲಿ ವಿಂಡ್ ಚೈಮ್‌ಗಳನ್ನು ನೇತುಹಾಕಿ. ಇದು ಅಡುಗೆಯ ಜಾಗವನ್ನು ನಕಾರಾತ್ಮಕತೆಯಿಂದ ರಕ್ಷಿಸುತ್ತದೆ. ಧನಾತ್ಮಕ ಮತ್ತು ಪೋಷಣೆಯ ವಾತಾವರಣವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

Vastu Tips: ಮನೆಯಲ್ಲಿ ಧನಾತ್ಮಕ ಶಕ್ತಿ ತುಂಬುವ ಹಳದಿ ಬಣ್ಣ ಯಾವ ದಿಕ್ಕಿನಲ್ಲಿದ್ದರೆ ಒಳ್ಳೆಯದು?

ಗೃಹ ಕಚೇರಿ ಅಥವಾ ಅಧ್ಯಯನ ಕೊಠಡಿ

ವಿಂಡ್ ಚೈಮ್‌ಗಳನ್ನು ಅಧ್ಯಯನ ಮಾಡುವ ಅಥವಾ ಗೃಹ ಕಚೇರಿಯ ಟೇಬಲ್ ಸಮೀಪದಲ್ಲಿ ಇರಿಸಿ. ಇದು ನಾವು ಮಾಡುವ ಕಾರ್ಯದ ಮೇಲೆ ಗಮನವನ್ನು ಕೇಂದ್ರಿಕರಿಸಲು ಸಹಾಯ ಮಾಡುತ್ತದೆ. ಕೆಲಸಕ್ಕೆ ಅಡ್ಡಿ ಉಂಟು ಮಾಡುವ ನಕಾರಾತ್ಮಕ ಶಕ್ತಿಗಳನ್ನು ನಿವಾರಿಸುತ್ತದೆ.

ಮೇಜು ಅಥವಾ ಕುರ್ಚಿಯ ಹಿಂದೆ ಗೋಡೆಯ ಮೇಲೂ ವಿಂಡ್ ಚೈಮ್ ಅನ್ನು ಇಡಬಹುದು. ಇದರಿಂದ ಕೆಲಸ ಮಾಡುವಾಗ ಉಂಟಾಗುವ ಯಾವುದೇ ಅಡ್ಡಿ ನಿಮ್ಮ ಹತ್ತಿರ ಬಾರದಂತೆ ವಿಂಡ್ ಚೈಮ್ ರಕ್ಷಿಸುತ್ತದೆ.