ಚೀನಾ: ಸಾಮಾಜಿಕ ಜಾಲತಾಣದಲ್ಲಿ ಇತ್ತೀಚೆಗೆ ವ್ಯೂವ್ಸ್, ಲೈಕ್ಸ್‌ಗಾಗಿ ಜನ ಎಂತಹ ವಿಡಿಯೋಗಳನ್ನದರೂ ಪೋಸ್ಟ್ ಮಾಡ್ತಿರುತ್ತಾರೆ. ಆ ವಿಡಿಯೋಗಳನ್ನು ನೋಡಿದ ನೆಟ್ಟಿಗರು ಆಕ್ರೋಶಗೊಂಡು ಹಿಗ್ಗಾಮುಗ್ಗಾ ಜಾಡಿಸುವುದನ್ನೂ ನಾವು ಕಾಣುತ್ತಿರುತ್ತೇವೆ. ಇದೀಗ ಅಂತಹದ್ದೇ ಒಂದು ವಿಡಿಯೋ ನೆಟ್ಟಿಗರನ್ನು ಕೆರಳಿಸಿದೆ. ಸೋಶಿಯಲ್ ಮೀಡಿಯಾದಲ್ಲಿ ತಾಯಿಯೊಬ್ಬಳು ತನ್ನ ಪುಟ್ಟ ಮಗ ಟೇಬಲ್ ಮೇಲೆ ಇಟ್ಟಿದ್ದ ಆಹಾರದ ಮೇಲೆ ಮೂತ್ರ ವಿಸರ್ಜನೆ ಮಾಡಿದ ವಿಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ಇದು ವೈರಲ್(Viral News) ಆಗಿದ್ದು, ಇದು ಸೋಶಿಯಲ್ ಮೀಡಿಯಾದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಈ ವಿಡಿಯೊದಲ್ಲಿ ಟೇಬಲ್ ಮೇಲೆ ಬನ್, ಮೊಟ್ಟೆಗಳು ಮತ್ತು ತರಕಾರಿಗಳಿಂದ ತಯಾರಿಸಿದ ಒಂದಷ್ಟು ಆಹಾರದ ಮೇಲೆ ಮೇಲೆ ಮಗು ಮೂತ್ರ ವಿಸರ್ಜನೆ ಮಾಡಿದೆ. ಈ ವಿಡಿಯೊ ತ್ವರಿತವಾಗಿ ವೈರಲ್ ಆಗಿದ್ದು, ನೆಟ್ಟಿಗರು ಕಿಡಿಕಾರಿದ್ದಾರೆ. ಒಬ್ಬ ಬಳಕೆದಾರರು “ನೀವು ನಿಜವಾಗಿಯೂ ಆ ಆಹಾರವನ್ನು ಸೇವಿಸಿದ್ದೀರಾ?” ಎಂದು ಕೇಳಿದ್ದಕ್ಕೆ ಆ ತಾಯಿ “ಹೌದು, ನಾವು ಅದನ್ನು ತಿಂದಿದ್ದೇವೆ” ಎಂದು ಹೇಳಿದ್ದಾರೆ.
ಲೈಕ್‍ಗಳು ಮತ್ತು ವೀಕ್ಷಣೆಗಳಿಗಾಗಿ ಇಂತಹ ವಿಡಿಯೊಗಳನ್ನು ಹಂಚಿಕೊಳ್ಳುತ್ತಿರುವುದು ಇದು ಸೋಶಿಯಲ್ ಮೀಡಿಯಾದ ಬಗ್ಗೆ ಜನರಿಗಿರುವ ಹುಚ್ಚು ವ್ಯಾಮೋಹವನ್ನು ಸೂಚಿಸುತ್ತದೆ. ನೆಟ್ಟಿಗರು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
ಆಕ್ರೋಶದ ಹೊರತಾಗಿಯೂ, ಈ ಘಟನೆಯು ಸಾಂಪ್ರದಾಯಿಕ ಚೀನೀ ಸಂಸ್ಕೃತಿಯ ಮೇಲೆ ಬೆಳಕು ಚೆಲ್ಲುತ್ತದೆ. ಕೆಲವು ಪ್ರದೇಶಗಳಲ್ಲಿ, ಚಿಕ್ಕ ಹುಡುಗರ ಮೂತ್ರವು ಶಕ್ತಿಯನ್ನು ಹೆಚ್ಚಿಸುವುದು, ಜ್ವರಗಳನ್ನು ಕಡಿಮೆ ಮಾಡುವುದು ಮತ್ತು ದುಷ್ಟ ಶಕ್ತಿಗಳನ್ನು ದೂರವಿಡುವುದು ಸೇರಿದಂತೆ ವಿಶಿಷ್ಟ ಗುಣಲಕ್ಷಣಗಳನ್ನು ಹೊಂದಿದೆ ಎಂದು ನಂಬಲಾಗಿದೆ. ಅದಕ್ಕೆ ಉದಾಹರಣೆಯೆಂದರೆ ದಕ್ಷಿಣ ಚೀನಾದಲ್ಲಿ ಚಿಕ್ಕ ಹುಡುಗರ ಮೂತ್ರದಲ್ಲಿ ಮೊಟ್ಟೆಗಳನ್ನು ಬೇಯಿಸಲಾಗುತ್ತದೆ, ಇದು ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ ಎಂದು ನಂಬಲಾಗಿದೆ.
ಇದನ್ನೂ ಓದಿ:ಬಾಲಿವುಡ್ ಬಾದ್ ಷಾ ಶಾರುಖ್ ಖಾನ್‍ಗೂ ಜೀವ ಬೆದರಿಕೆ- ಕರೆ ಮಾಡಿದಾತ ಹೇಳಿದ್ದೇನು ಗೊತ್ತಾ?
ಇಂತಹ ವಿಚಿತ್ರವಾದ ನಂಬಿಕೆಗಳು ಜಗತ್ತಿನಲ್ಲಿ ಹಲವು ಕಡೆಗಳಲ್ಲಿ ಆಚರಿಸಲಾಗುತ್ತದೆ. ಆಫ್ರಿಕಾದ ಕೆಲವು ಭಾಗಗಳಲ್ಲಿ, ಬುಡಕಟ್ಟು ಜನಾಂಗದವರು 15 ನೇ ವಯಸ್ಸಿನಲ್ಲಿ ಯುವತಿಯರ ಕೆಳ ತುಟಿಯನ್ನು ಕತ್ತರಿಸುತ್ತಾರೆ ಮತ್ತು ಗಾಯವನ್ನು ಗುಣಪಡಿಸಲು ಮರದ ಅಥವಾ ಮಣ್ಣಿನ ತಟ್ಟೆಗಳನ್ನು ಬಳಸುತ್ತಾರೆ. ಈ ಸಂಪ್ರದಾಯವು ಅವರ ಪ್ರೌಢಾವಸ್ಥೆಯನ್ನು ಸೂಚಿಸುತ್ತದೆ.