ಸುಶಿ ಜಪಾನಿನ ಫೇಮಸ್ ಫುಡ್. ಇದರ ವಿಡಿಯೊವೊಂದು ಈಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಟೇಬಲ್ ಮೇಲೆ ಪ್ಲೇಟ್ನಲ್ಲಿದ್ದ ಸುಶಿ ನಿಧಾನಕ್ಕೆ ತೆವಳುತ್ತಿರುವ ವಿಡಿಯೊ(Viral Video) ನೋಡಿ ಜನ ಕೂಡ ಬೆಚ್ಚಿಬಿದ್ದಿದ್ದಾರೆ. ಇದು ನಿಜನಾ ಅಥವಾ ಎಡಿಟ್ ಮಾಡಿದ ವಿಡಿಯೊನಾ ಎಂಬ ಅನುಮಾನ ಕೂಡ ಬಂದಿದೆ. ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡ ಈ ವಿಡಿಯೊವನ್ನು ಅನೇಕ ವೀಕ್ಷಕರು ನೋಡಿದ್ದಾರೆ. ಈ ವಿಡಿಯೊದಲ್ಲಿ ಮೇಜಿನ ಮೇಲೆ ಬಡಿಸಿದ್ದ ಜಪಾನಿ ಫುಡ್ ಸುಶಿಯು ಇದ್ದಕ್ಕಿದ್ದಂತೆ ತೆವಳಲು ಶುರು ಮಾಡಿದೆ. ಇದನ್ನು ನೋಡಿದವರು ಸುಶಿಯು ಜೀವಂತವಾಗಲು ಹೇಗೆ ಸಾಧ್ಯ ಎಂದು ಅನೇಕರು ಆಶ್ಚರ್ಯಗೊಂಡಿದ್ದಾರೆ.
ಕೆಲವರು ಈಗಾಗಲೇ ಇದು ಎಡಿಟ್ ಮಾಡಿದ ವಿಡಿಯೊ ಎಂದು ಊಹಿಸಿದ್ದರೂ, ಈ ವಿಷಯವನ್ನು ಪೋಸ್ಟ್ ಮಾಡಿದ ಇನ್ಸ್ಟಾಗ್ರಾಮ್ ಪುಟವು ಸ್ಪಷ್ಟಪಡಿಸಿದೆ. ಹೌದು, ಸುಶಿ ತುಂಡುಗಳು ಒಟ್ಟಿಗೆ ತೆವಳುತ್ತಾ ಇರುವುದು ನಿಜವಾದುದ್ದಲ್ಲ ಇದು ಎಡಿಟ್ ಮಾಡಿದ ವಿಡಿಯೊ ಆಗಿದೆ. ಟಿಎಕ್ಸ್ರೆಕ್ ಎಂಬ ಇನ್ಸ್ಟಾಗ್ರಾಮ್ ಬಳಕೆದಾರರು ಸುಶಿ ರೀಲ್ ಅನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದಾರೆ. ಈ ಪೋಸ್ಟ್ಗೆ “#sushi ನನಗೆ ಸ್ವಲ್ಪ ಹಸಿಯಾಗಿದೆ” ಎಂದು ಶೀರ್ಷಿಕೆ ನೀಡಲಾಗಿದೆ.
ಕೆಲವು ದಿನಗಳ ಹಿಂದೆ ಪೋಸ್ಟ್ ಮಾಡಿದ ಈ ವಿಡಿಯೊ ಕ್ಷಣಾರ್ಧದಲ್ಲಿ ವೈರಲ್ ಆಗಿದ್ದು, ನೆಟ್ಟಿಗರನ್ನು ಗೊಂದಲಕ್ಕೀಡು ಮಾಡಿದೆ. ಈ ವಿಡಿಯೋವನ್ನು ಇದುವರೆಗೆ 107 ಮಿಲಿಯನ್ ಮಂದಿ ವೀಕ್ಷಿಸಿದ್ದಾರೆ. 1.7 ಮಿಲಿಯನ್ ಬಳಕೆದಾರರು ಲೈಕ್ಸ್ ಮಾಡಿದ್ದಾರೆ ಮತ್ತು ಸಾವಿರಾರು ಜನರು ಇದಕ್ಕೆ ಕಾಮೆಂಟ್ ಮಾಡಿದ್ದಾರೆ. ಸುಶಿ ತೆವಳುವುದನ್ನು ಕಂಡು ಆಶ್ಚರ್ಯಪಟ್ಟ ಒಬ್ಬ ಬಳಕೆದಾರರು “ಇದು ನಿಜವೇ?” ಎಂದು ಕೇಳಿದ್ದಾರೆ. “ಎಐ ತುಂಬಾ ಭಯಾನಕವಾಗುತ್ತಿದೆ” ಎಂದು ಇನ್ನೊಬ್ಬರು ಹೇಳಿದ್ದಾರೆ.
ಇದನ್ನೂ ಓದಿ:ಸೀಟಿಗಾಗಿ ಹೋರಾಡಬೇಕಿಲ್ಲ…ಜಗಳ ಮಾಡೋ ಅಗತ್ಯ ಇಲ್ಲವೇ ಇಲ್ಲ…ಈತನ ಜಾಣ್ಮೆಗೆ ನೆಟ್ಟಿಗರು ಫುಲ್ ಫಿದಾ!
ಈ ಹಿಂದೆ ಯುವತಿಯೊಬ್ಬಳು ಜೀವಂತವಾಗಿರುವ ಹಾವನ್ನೇ ತಟ್ಟೆಯಲ್ಲಿ ಹಾಕಿಕೊಂಡು ಜಗಿದು ತಿಂದ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಈ ವಿಡಿಯೊದಲ್ಲಿ ಯುವತಿಯ ಮುಂದಿರುವ ತಟ್ಟೆಯಲ್ಲಿ ಹಲವಾರು ಹಾವುಗಳಿದ್ದು, ಅವುಗಳ ಜೊತೆಗೆ ಹಸಿರು ತರಕಾರಿಗಳು ಇವೆ. ಯುವತಿ ಒಂದು ಹಾವನ್ನು ತನ್ನ ಕೈಗೆ ತೆಗೆದುಕೊಂಡು ಅದನ್ನು ಹಸಿ ಹಸಿಯಾಗಿಯೇ ತಿಂದಿದ್ದಳು.