Saturday, 23rd November 2024

Pralhad Joshi: ವಕ್ಫ್‌ ಆಸ್ತಿ ರಕ್ಷಣೆ ಬಗ್ಗೆ ಮುಂದಿನ ಬಿಜೆಪಿ ಚುನಾವಣಾ ಪ್ರಣಾಳಿಕೆಯಲ್ಲೂ ಇರುತ್ತೆ: ಪ್ರಲ್ಹಾದ್‌ ಜೋಶಿ

Pralhad Joshi

ಹುಬ್ಬಳ್ಳಿ: ಬಿಜೆಪಿ ಪ್ರಣಾಳಿಕೆಯಲ್ಲಿ ವಕ್ಫ್‌ಗೆ ಇರೋ ಮೂಲ ಆಸ್ತಿ ಸಂರಕ್ಷಿಸುತ್ತೇವೆ ಎಂದಿದ್ದೇವೆ. ಆದರೆ, ಅತಿಕ್ರಮಣವನ್ನಲ್ಲ. ವಕ್ಫ್ ಅಸ್ತಿ ಯಾರೊಬ್ಬರ ಸ್ವತ್ತೂ ಆಗಬಾರದು. ವಕ್ಫ್ ಆಸ್ತಿ ರಕ್ಷಣೆ ಬಗ್ಗೆ ಮುಂದಿನ ಚುನಾವಣಾ ಪ್ರಣಾಳಿಕೆಯಲ್ಲೂ ಬಿಜೆಪಿ ಸೇರಿಸುತ್ತದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ (Pralhad Joshi) ಸ್ಪಷ್ಟಪಡಿಸಿದರು.

ಶಿಗ್ಗಾಂವಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ಸಿಗರು ಮೊದಲು ನಮ್ಮ ಪ್ರಣಾಳಿಕೆಯನ್ನು ಸರಿಯಾಗಿ ಓದಲಿ. ಬಿಜೆಪಿ ಪ್ರಣಾಳಿಕೆಯಲ್ಲಿ ವಕ್ಫ್‌ಗೆ ಇರೋ ಮೂಲ ಆಸ್ತಿ ಸಂರಕ್ಷಿಸುತ್ತೇವೆ ಎಂದಿದ್ದೇವೆ. ಆದರೆ, ಅತಿಕ್ರಮಣವನ್ನಲ್ಲ ಎಂದು ತಿಳಿಸಿದ್ದಾರೆ.

2 ಲಕ್ಷ 30 ಸಾವಿರ ಕೋಟಿ ಆಸ್ತಿ ವಕ್ಫ್ ಬಳಿಯಿದೆ. ಇದನ್ನು ಕಾಂಗ್ರೆಸ್ಸಿನಲ್ಲಿ ಇರೋ ಮುಸ್ಲಿಂ ಮುಖಂಡರು ದೋಚುತ್ತಿದ್ದಾರೆ ಎಂದು ಆರೋಪಿಸಿದರು.

ವಕ್ಫ್ ಉದ್ದೇಶ, ವಕ್ಫ್ ನಿಯಮ ಏನಿದೆ? ಅದನ್ನು ಪಾಲಿಸಲು ನಮ್ಮ ತಕರಾರಿಲ್ಲ ಎಂದು ಸ್ಪಷ್ಟಪಡಿಸಿದ ಸಚಿವರು, ವಕ್ಫ್ ಗೆ ಮುಸಲ್ಮಾನರು ಮತ್ತು ಕೆಲ ಹಿಂದುಗಳೂ ದಾನ ಕೊಟ್ಟ ಆಸ್ತಿಯನ್ನು ಅನ್ಯರ ಪಾಲಾಗದಂತೆ ರಕ್ಷಿಸಬೇಕು. ಹೆಚ್ಚುವರಿ ವಕ್ಫ್ ಆಸ್ತಿಯನ್ನು ತೆಗೆಸುತ್ತೇವೆ. ನಿಜವಾಗಿ ಇದ್ದ ಮೂಲ ವಕ್ಫ್ ಆಸ್ತಿಯನ್ನು ಆಯಾ ಉದ್ದೇಶಕ್ಕೆ ಬಳಕೆ ಮಾಡಬೇಕು ಎಂಬುದು ಬಿಜೆಪಿ ನಿಲುವಾಗಿದೆ ಎಂದರು.

ಬಿಜೆಪಿಯವರು ಯಾವತ್ತೂ ಊರೂರು ಓಡಾಡಿ ಅದಾಲತ್ ನಡೆಸಿ ತಹಸೀಲ್ದಾರ್‌ಗಳಿಗೆ ಧಮ್ಕಿ ಕೊಟ್ಟು ಪಹಣಿಯಲ್ಲಿ ವಕ್ಫ್ ಆಸ್ತಿಯನ್ನಾಗಿ ಸೇರಿಸಿ ಸಂರಕ್ಷಣೆ ಮಾಡುತ್ತೇವೆ ಎಂದು ನಮ್ಮ ಪ್ರಣಾಳಿಕೆಯಲ್ಲಿ ಹೇಳಿಲ್ಲ. ಸುಳ್ಳನ್ನೇ ನೂರು ಬಾರಿ ಹೇಳಿ ಸತ್ಯ ಮಾಡೋ ದಾಷ್ಠ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿದೆ ಎಂದು ಟೀಕಿಸಿದರು.

ಈ ಸುದ್ದಿಯನ್ನೂ ಓದಿ | Bandi Sanjay Kumar: ಲಾರಿಯಡಿಯಲ್ಲಿ ಸಿಲುಕಿ ಜೀವನ್ಮರಣ ಹೋರಾಟ ನಡೆಸುತ್ತಿದ್ದ ಮಹಿಳೆಯ ರಕ್ಷಣೆ; ಕೇಂದ್ರ ಸಚಿವರ ಕಾರ್ಯಕ್ಕೆ ಮೆಚ್ಚುಗೆ ಮಹಾಪೂರ!

ಹುಬ್ಬಳ್ಳಿ- ಧಾರವಾಡದಲ್ಲಿ ಭಾರತ್ ಬ್ರ್ಯಾಂಡ್ ಆಹಾರ ಧಾನ್ಯ ಪೂರೈಕೆಗೆ ಚಾಲನೆ

ಹುಬ್ಬಳ್ಳಿ: ಬೆಲೆ ಏರಿಕೆ ನಿಯಂತ್ರಣ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಕೈಗೊಂಡ “ಗ್ರಾಹಕರಿಗೆ ನೇರ ಆಹಾರ ಧಾನ್ಯ ವಿತರಣೆ”ಗೆ ಕೇಂದ್ರ ಆಹಾರ ಸಚಿವ ಪ್ರಲ್ಹಾದ್‌ ಜೋಶಿ ಅವರ ತವರು ಕ್ಷೇತ್ರದಲ್ಲಿ ಇಂದು ಚಾಲನೆ ನೀಡಲಾಯಿತು.

ಹುಬ್ಬಳ್ಳಿ ಮೂರುಸಾವಿರ ಮಠದ ಮೈದಾನದಲ್ಲಿ ಸೋಮವಾರ ಬೆಳಗ್ಗೆ ಕೇಂದ್ರ ಆಹಾರ ಪೂರೈಕೆ ಮತ್ತು ಗ್ರಾಹಕ ವ್ಯವಹಾರ ಸಚಿವ ಪ್ರಲ್ಹಾದ್ ಜೋಶಿ‌ ಅವರು, ಆಹಾರ ಧಾನ್ಯ ದಾಸ್ತಾನು ಹೊತ್ತ ಸಂಚಾರಿ ವಾಹನಗಳಿಗೆ ಹಸಿರು ನಿಶಾನೆ ತೋರಿದರು.

ಇದೇ ವೇಳೆ ಜನ ಸಾಮಾನ್ಯರಿಗೆ ಆಹಾರ ಧಾನ್ಯ ಕಿಟ್ ವಿತರಿಸಿ ಮಾತನಾಡಿ, ಕೇಂದ್ರ ಸರ್ಕಾರ ಯಾವತ್ತೂ ರೈತರ ಮತ್ತು ಕಡು ಬಡವರ ಹಿತ ಕಾಯಲು ಬದ್ಧವಾಗಿದೆ. ಸ್ವಾತಂತ್ರ್ಯ ನಂತರ ದೇಶದಲ್ಲಿ ಬೆಲೆ ಏರಿಕೆ ಸಂದರ್ಭದಲ್ಲಿ ಅಗತ್ಯ ವಸ್ತುಗಳ ಬೆಲೆ ನಿಯಂತ್ರಣಕ್ಕೆ ತರಲು ಕೇಂದ್ರ ಸರ್ಕಾರ ಇದೇ ಪ್ರಥಮ ಬಾರಿಗೆ ಇಂಥ ಐತಿಹಾಸಿಕ ಕ್ರಮ ಕೈಗೊಂಡಿದೆ ಎಂದು ಪ್ರತಿಪಾದಿಸಿದರು.

ಬೆಲೆ ಏರಿಕೆಯಿಂದ ಜನಸಾಮಾನ್ಯರು ಹೈರಾಣುಗುವುದನ್ನು ತಪ್ಪಿಸಲು ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ NDA ಸರ್ಕಾರ ದೇಶಾದ್ಯಂತ ಗ್ರಾಹಕರಿಗೆ ನೇರ ಆಹಾರ ಧಾನ್ಯ ವಿತರಣೆಗೆ ಮುಂದಾಗಿದೆ. ಈಗಾಗಲೇ ದೆಹಲಿ, ಬೆಂಗಳೂರಿನಂತಹ ದೊಡ್ಡ ದೊಡ್ಡ ನಗರಗಳಲ್ಲಿ ಭಾರತ್ ಬ್ರ್ಯಾಂಡ್ ಅಡಿ ಆಹಾರ ಧಾನ್ಯ ವಿತರಣೆ ಕೈಗೊಂಡಿದ್ದು, ಈಗ ವಾಣಿಜ್ಯ ನಗರಿ ಹುಬ್ಬಳ್ಳಿ – ಧಾರವಾಡ ಅವಳಿ ನಗರಗಳಲ್ಲಿ ವಿತರಣೆ ನಡೆದಿದೆ ಎಂದರು.

50ಕ್ಕೂ ಹೆಚ್ಚು ಸಂಚಾರಿ ವಾಹನಗಳಲ್ಲಿ ಪೂರೈಕೆ:
ಹುಬ್ಬಳ್ಳಿ-ಧಾರವಾಡ ಅವಳಿ ನಗರ ಮತ್ತು ಧಾರವಾಡ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 50ಕ್ಕೂ ಹೆಚ್ಚು ವಾಹನಗಳಲ್ಲಿ ಕಡಿಮೆ ಬೆಲೆಯಲ್ಲಿ ಭಾರತ್ ಬ್ರ್ಯಾಂಡ್ ಆಹಾರ ಧಾನ್ಯ ವಿತರಣೆ ಮಾಡಲಾಗುತ್ತಿದೆ ಎಂದು ಹೇಳಿದರು.

ಯಾವುದಕ್ಕೆ ಎಷ್ಟು ಬೆಲೆ:
ಭಾರತ್ ಅಕ್ಕಿ 34 ರೂ., ಭಾರತ್ ಗೋಧಿ ಹಿಟ್ಟು 30 ರೂ , ಭಾರತ್ ಕಡಲೆ ಬೇಳೆ 70 ರೂ. ಮತ್ತು ಭಾರತ್ ಹೆಸರು ಬೇಳೆಯನ್ನು 107 ರೂ. ರಿಯಾಯಿತಿ ದರದಲ್ಲಿ ಜನಸಾಮಾನ್ಯರಿಗೆ ಮೊಬೈಲ್ ವಾಹನಗಳ ಮೂಲಕ ನೇರವಾಗಿ ವಿತರಿಸಲಾಗುತ್ತಿದೆ ಎಂದು ತಿಳಿಸಿದರು.

ಈ ಸುದ್ದಿಯನ್ನೂ ಓದಿ | CJI Sanjiv Khanna: ಕಣ್ಮರೆಯಾಗಿರುವ ಪೂರ್ವಜರ ಮನೆಯ ಹುಡುಕಾಟದಲ್ಲಿದ್ದಾರೆ ಭಾರತದ ನೂತನ CJI ಸಂಜೀವ್ ಖನ್ನಾ!

ರೈತರ ಜತೆ ಸಾಮಾನ್ಯ ಜನರ ಹಿತ ರಕ್ಷಣೆ
ಪ್ರಧಾನಿ ಮೋದಿ ಅವರು ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ನೀಡಿ ರೈತರ ಹಿತ ರಕ್ಷಣೆ ಜತೆಗೆ ದೇಶಾದ್ಯಂತ ಕಡಿಮೆ ಬೆಲೆಗೆ ಆಹಾರ ಧಾನ್ಯ ಪೂರೈಸಿ ಜನಸಾಮಾನ್ಯರ ಹಿತವನ್ನೂ ಕಾಯುತ್ತಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಶಾಸಕ ಮಹೇಶ್ ಟೆಂಗಿನಕಾಯಿ, ಮಹಾನಗರ ಪಾಲಿಕೆ ಸದಸ್ಯರು ಮತ್ತು ಪ್ರಮುಖರು ಉಪಸ್ಥಿತರಿದ್ದರು.