Saturday, 23rd November 2024

Gold Price Today: ಚಿನ್ನದ ದರದಲ್ಲಿ ಮತ್ತೆ ಏರಿಕೆ; ಇಂದಿನ ರೇಟ್‌ ಚೆಕ್‌ ಮಾಡಿ

gold rate today

ಬೆಂಗಳೂರು:  ಚಿನ್ನದ ದರ ಇಂದು ಕೂಡ ಏರಿಕೆ ಕಂಡಿದೆ (Gold Price Today). ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಗುರುವಾರ (ನ.21) 22 ಕ್ಯಾರಟ್‌ ಮತ್ತು 24 ಕ್ಯಾರಟ್‌ ಚಿನ್ನದ ದರ ತಲಾ 30 ರೂ. ಮತ್ತು 33 ರೂ. ಏರಿಕೆ ಆಗಿದೆ. ಆ ಮೂಲಕ 22 ಕ್ಯಾರಟ್‌ 1 ಗ್ರಾಂ ಚಿನ್ನದ ದರ 7,145 ರೂ. ಮತ್ತು 24 ಕ್ಯಾರಟ್‌ 1 ಗ್ರಾಂ ಚಿನ್ನದ ದರ 7,795 ರೂ.ಗೆ ತಲುಪಿದೆ.

22 ಕ್ಯಾರಟ್‌ ಚಿನ್ನದ ದರಗಳ ವಿವರ

22 ಕ್ಯಾರಟ್‌ನ 8 ಗ್ರಾಂ ಚಿನ್ನ 57,160 ರೂ. ಬೆಲೆ ಬಾಳಿದರೆ, 10 ಗ್ರಾಂಗೆ ನೀವು 71,450 ರೂ. ಮತ್ತು 100 ಗ್ರಾಂಗೆ 7,14,500 ರೂ. ಪಾವತಿಸಬೇಕಾಗುತ್ತದೆ.

24 ಕ್ಯಾರಟ್‌ ಚಿನ್ನದ ದರಗಳ ವಿವರ

24 ಕ್ಯಾರಟ್‌ನ 8 ಗ್ರಾಂ ಚಿನ್ನ 62,360 ರೂ. ಬೆಲೆ ಬಾಳಿದರೆ, 10 ಗ್ರಾಂಗೆ ನೀವು 77,950 ರೂ. ಮತ್ತು 100 ಗ್ರಾಂಗೆ 7,79,500 ರೂ. ಪಾವತಿಸಬೇಕಾಗುತ್ತದೆ.

ವಿವಿಧ ನಗರಗಳಲ್ಲಿನ ಚಿನ್ನದ ಬೆಲೆ

ನಗರ 22 ಕ್ಯಾರಟ್‌ (1 ಗ್ರಾಂ) 24 ಕ್ಯಾರಟ್‌ (1 ಗ್ರಾಂ)
 ಬೆಂಗಳೂರು7,145 ರೂ.7,795 ರೂ.
 ದಿಲ್ಲಿ7,160 ರೂ.7,810 ರೂ.
 ಮುಂಬೈ7,145 ರೂ.7,795 ರೂ.
 ಚೆನ್ನೈ7,145 ರೂ.7,795 ರೂ.
 ಹೈದರಾಬಾದ್7,145 ರೂ.7,795 ರೂ.

ಬೆಳ್ಳಿ ಬೆಲೆ

ಇತ್ತ ಬೆಳ್ಳಿ ಬೆಲೆ ಯಥಾಸ್ಥಿತಿ ಕಾಯ್ದುಕೊಂಡಿದ್ದು,, ಬೆಳ್ಳಿ 1 ಗ್ರಾಂನ ಬೆಲೆ 92 ರೂ., 8 ಗ್ರಾಂಗೆ 736 ರೂ., 10 ಗ್ರಾಂಗೆ 920 ರೂ. ಮತ್ತು 1 ಕೆಜಿಗೆ 92,000 ರೂ. ಪಾವತಿಸಬೇಕಾಗುತ್ತದೆ.

ಆಭರಣ ಕೊಂಡುಕೊಳ್ಳುವ ಮುನ್ನ ಗಮನಿಸಬೇಕಾದ ಅಂಶಗಳಿವು

ದೇಶದಲ್ಲಿ ಚಿನ್ನ ಎನ್ನುವುದು ಬಹು ಬೇಡಿಕೆಯ ಮತ್ತು ಅತ್ಯಮೂಲ್ಯ ಲೋಹ ಎನಿಸಿಕೊಂಡಿದೆ. ಆಭರಣದ ಜತೆಗೆ ಹೂಡಿಕೆಗೂ ಚಿನ್ನವನ್ನು ಪರಿಗಣಿಸಲಾಗುತ್ತದೆ. ಅದರಲ್ಲಿಯೂ ಮದುವೆ ಸೀಸನ್‌, ಹಬ್ಬಗಳ ಋತುಗಳಲ್ಲಿ ಚಿನ್ನದ ಆಭರಣಕ್ಕೆ ಉತ್ತಮ ಬೇಡಿಕೆ ಕಂಡು ಬರುತ್ತದೆ. ಮೊದಲ ಬಾರಿಗೆ ಆಭರಣ ಖರೀದಿಸುವಾಗ ಯಾವೆಲ್ಲ ಅಂಶಗಳನ್ನು ಗಮನಿಸಬೇಕು ಎನ್ನುವ ವಿವರ ಇಲ್ಲಿದೆ.

ಶುದ್ಧತೆ

ಚಿನ್ನದ ಶುದ್ಧತೆಯನ್ನು ಕ್ಯಾರಟ್‌ಗಳಲ್ಲಿ ಅಳೆಯಲಾಗುತ್ತದೆ. 24 ಕ್ಯಾರಟ್ ಚಿನ್ನವನ್ನು 99.9% ಶುದ್ಧವೆಂದು ಪರಿಗಣಿಸಲಾಗುತ್ತದೆ. ನೀವು 22 ಕ್ಯಾರಟ್‌, 18 ಕ್ಯಾರಟ್‌, 14 ಕ್ಯಾರಟ್‌ ಇತ್ಯಾದಿಗಳನ್ನು ಆರಿಸುವಾಗ ಶುದ್ಧತೆಯ ಪ್ರಮಾಣ ಕಡಿಮೆಯಾಗುತ್ತದೆ. ಹೀಗಾಗಿ ನೀವು ಯಾವ ರೀತಿಯ ಚಿನ್ನದ ಖರೀದಿಸಲು ಬಯಸುತ್ತಿದ್ದೇರಿ ಎನ್ನುವುದನ್ನು ಮೊದಲೇ ನಿರ್ಧರಿಸಿ. ಹಾಲ್‌ಮಾರ್ಕ್‌ ಶುದ್ಧತೆಯನ್ನು ಸೂಚಿಸುವ ಮತ್ತೊಂದು ವಿಧಾನ. ಹೀಗಾಗಿ ಹಾಲ್‌ಮಾರ್ಕ್‌ ಇರುವ ಆಭರಣಗಳನ್ನೇ ಖರೀದಿಸಿ.

ದರ

ಆಭರಣದ ಬೆಲೆಯು ಅದರ ಶುದ್ಧತೆ ಮತ್ತು ಅದನ್ನು ಯಾವ ಮಿಶ್ರಲೋಹದೊಂದಿಗೆ ಬೆರೆಸಿ ತಯಾರಾಗಿಸಲಾಗಿದೆ ಮತ್ತು ಹೇಗೆ ತಯಾರಾಗಿಸಲಾಗಿದೆ ಎನ್ನುವುದರ ಮೇಲೆ ಅವಲಂಬಿತವಾಗುತ್ತದೆ. ಅಂದರೆ ಸೂಕ್ಷ್ಮ ಕೆತ್ತನೆಗಳಿಂದ ಕೂಡಿದ ಆಭರಣಗಳು ದುಬಾರಿಯಾಗಿರುತ್ತವೆ. ಹೀಗಾಗಿ ದರದ ಬಗ್ಗೆ ಯೋಚಿಸುವಾಗ ಡಿಸೈನ್‌ ಕೂಡ ನಿಮ್ಮ ಗಮನದಲ್ಲಿರಲಿ. ಜತೆಗೆ ಬೇರೆ ಬೇರೆ ಜ್ಯುವೆಲ್ಲರಿಗಳಲ್ಲಿನ ಕೊಡುಗೆಯನ್ನು ಗಮನಿಸಿ ದರಗಳನ್ನು ಹೋಲಿಸಿ ನೋಡಿ.

ಭಾರ

ಹಣ ಪಾವತಿಸುವ ಮೊದಲು ನೀವು ಖರೀದಿಸಿದ ಚಿನ್ನದ ತೂಕವನ್ನು ಪರಿಶೀಲಿಸುವುದನ್ನು ಮರೆಯಬೇಡಿ. ಅಲ್ಲದೆ ಖರೀದಿಯ ಬಿಲ್‌ ಅನ್ನು ತಪ್ಪದೆ ಪಡೆದುಕೊಳ್ಳಿ.

ಈ ಸುದ್ದಿಯನ್ನೂ ಓದಿ: Gold Watch: 700 ಟೈಟಾನಿಕ್ ಪ್ರಯಾಣಿಕರನ್ನು ರಕ್ಷಿಸಿದ ಕ್ಯಾಪ್ಟನ್‍ಗೆ ನೀಡಿದ್ದ ಚಿನ್ನದ ವಾಚ್‌ ದಾಖಲೆ ಮೊತ್ತಕ್ಕೆ ಹರಾಜು!