Saturday, 23rd November 2024

Viral Video: ಕೋತಿ ಚೇಷ್ಠೆಗೆ ಕಾರಿನ ಸನ್‌​ರೂಫ್ ಗ್ಲಾಸ್‌ ಪುಡಿ ಪುಡಿ! ವಿಡಿಯೊ ನೋಡಿ

ಸೋಷಿಯಲ್‌ ಮೀಡಿಯಾದಲ್ಲಿ ಪ್ರತಿದಿನ ಲಕ್ಷಾಂತರ ವಿಡಿಯೋಗಳು ಹರಿದಾಡುತ್ತಿರುತ್ತವೆ. ಆದರೆ ಪ್ರಾಣಿಗಳ ವಿಡಿಯೋಗಳು ನೋಡುಗರ ಗಮನ ಸೆಳೆಯುತ್ತವೆ. ಈ ಪೈಕಿ ಕೋತಿಗಳ ವಿಡಿಯೋಗಳು ಜನರ ಮೊಗದಲ್ಲಿ ಮಂದಹಾಸ ಮೂಡುವಂತೆ ಮಾಡುತ್ತವೆ. ಕೋತಿಗಳು ಬುದ್ಧಿವಂತ ಪ್ರಾಣಿಗಳು. ಆದರೆ ಇವುಗಳ ಕುಚೇಷ್ಠೆಯಿಂದ ಅನೇಕರಿಗೆ ಸಂಕಷ್ಟ ಎದುರಾಗುತ್ತದೆ. ಇದೀಗ ಸೋಷಿಯಲ್ ಮೀಡಿಯಾದಲ್ಲಿ ಕೋತಿ ಕುಚೇಷ್ಠೆಯ ಮತ್ತೊಂದು ವಿಡಿಯೋ ಇದೀಗ ಸಖತ್‌ ವೈರಲ್‌ (Viral Video) ಆಗುತ್ತಿದ್ದು, ಮಂಗವೊಂದು ಬಿಲ್ಡಿಂಗ್​ನಿಂದ ಐಷಾರಾಮಿ ಕಾರಿನ ಸನ್​ರೂಫ್ ಮೇಲೆ ಜಿಗಿದು ಅದನ್ನು ಪುಡಿ ಪುಡಿ ಮಾಡಿದೆ.

ಇದ್ದಕ್ಕಿದ್ದಂತೆಯೇ ದಾಳಿ ಮಾಡುವ ಕೋತಿಗಳು ಜನರ ಬಳಿಯಿರುವ ಬ್ಯಾಗ್‌, ಪರ್ಸ್‌, ಮೊಬೈಲ್‌, ಕ್ಯಾಮೆರಾಗಳನ್ನೇ ಎತ್ತಿಕೊಂಡು ಹೋಗುವ ಹಲವಾರು ವಿಡಿಯೋಗಳು ಇಂಟರ್ನೆಟ್‌ನಲ್ಲಿವೆ. ಕೋತಿಗಳು ಕುಚೇಷ್ಠೆಯಿಂದ ಹೊಟ್ಟೆ ಹುಣ್ಣಾಗುವಷ್ಟು ನಗಬೇಕಾಗುತ್ತದೆ. ಈ ರೀತಿಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಜನರನ್ನು ಆಕರ್ಷಿಸುತ್ತವೆ.

GaurangBhardwa1 ಎಂಬ ಎಕ್ಸ್‌ ಖಾತೆಯಲ್ಲಿ ಕೋತಿಯ ಈ ವಿಡಿಯೋವೊಂದನ್ನು ಹಂಚಿಕೊಳ್ಳಲಾಗಿದ್ದು, ಕೋತಿಯೊಂದು ಕಟ್ಟಡದ ಮೇಲಿಂದ ಕೆಳಗೆ ಹಾರುವ ರಭಸದಲ್ಲಿ ರಸ್ತೆ ಬದಿ ಸಿಲ್ಲಿಸಿದ ಐಷಾರಾಮಿ ಕಾರ್​ನ ಸನ್​ರೂಫ್ ಮೇಲೆ ಬಿದ್ದಿದೆ. ಇನ್ನು ಮಂಗ ಬಿದ್ದ ಭರಕ್ಕೆ ಸನ್​ರೂಫ್ ಗ್ಲಾಸ್ ಪುಡಿ ಪುಡಿಯಾಗಿದ್ದು, ಈ ಒಂದು ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹಲ್​ಚಲ್ ಎಬ್ಬಿಸಿದೆ.

ಈ ವಿಚಿತ್ರ ಘಟನೆ ಉತ್ತರ ಪ್ರದೇಶದ ವಾರಾಣಸಿಯಲ್ಲಿ ನಡೆದಿದ್ದು, ಕಪಿ ಚೇಷ್ಟೆಗೆ ಇಲ್ಲಿನ ವಿಶ್ವೇಶ್ವರ ಗಂಜ್ ಏರಿಯಾದಲ್ಲಿ ರಸ್ತೆ ಬದಿ ನಿಲ್ಲಿಸಿದ ಕಾರು ಜಖಂಗೊಂಡಿದೆ. ಬಿಲ್ಡಿಂಗ್​ನಿಂದ ಐಷಾರಾಮಿ ಕಾರ್​ನ ಸನ್​ರೂಫ್ ಮೇಲೆ ಜಿಗಿದು ಅದನ್ನು ಪುಡಿ ಪುಡಿ ಮಾಡಿದ ಮಂಗನ ವಿಡಿಯೋ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಜಿಗಿದ ರಭಸ ನೋಡಿದರೆ ಮಂಗನಿಗೆ ಏನೋ ದೊಡ್ಡ ಗಾಯವೇ ಆಗಿದೆ ಎಂದು ಭಾವಿಸಲಾಗಿತ್ತು. ಆದರೆ ಸನ್​ರೂಫ್​​ ಮುರಿದ ಹೊಡೆತಕ್ಕೆ ಕಾರಿನೊಳಕ್ಕೆ ಹೋಗಿ ಬಿದ್ದ ಮಂಗ ಆಮೇಲೆ ಆರಾಮವಾಗಿ ಆಚೆ ಬಂದು ಓಡಿ ಹೋಗಿದೆ.

ಇದನ್ನೂ ಓದಿ: B T Lalitha Nayak: ಶಿವ-ಪಾರ್ವತಿ ಸೇರಿ ಹಿಂದೂ ದೇವರ ಬಗ್ಗೆ ಅಪಹಾಸ್ಯ; ಮತ್ತೆ ವಿವಾದದ ಕಿಡಿ ಹಚ್ಚಿದ ಲಲಿತಾ ನಾಯಕ್‌

ಸದ್ಯ ಈ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ಸೌಂಡ್‌ ಮಾಡುತ್ತಿದ್ದು, ನೆಟ್ಟಿಗರ ಗಮನ ಸೆಳೆದಿದೆ. ಲಕ್ಷಾಂತರ ಜನರು ವಿಡಿಯೋವನ್ನು ವೀಕ್ಷಿಸಿದ್ದು, ವಿವಿಧ ರೀತಿಯಲ್ಲಿ ಕಾಮೆಂಟ್‌ ಮಾಡಿದ್ದಾರೆ. ಕೆಲವರು ಕೋತಿಗಳ ಬುದ್ಧಿವಂತಿಗೆ ವಾವ್‌ ಅಂತಾ ಹೇಳಿದ್ದರೆ, ಇನ್ನೂ ಹಲವರು ಕಾರ್ ನ ಮಾಲೀಕನಿಗೆ ಆದ ನಷ್ಟದ ಕುರಿತು ಬೇಸರ ವ್ಯಕ್ತಪಡಿಸಿದ್ದಾರೆ.

ಇನ್ನೂ ಕೆಲವರು ಈ ಅಪಘಾತಕ್ಕೆ ಇನ್ಶೂರೆನ್ಸ್ ಕ್ಲೈಮ್ ಆಗುತ್ತದೆಯೇ ಪ್ರಶ್ನಿಸಿದ್ದರೆ. ಮತ್ತೊಬ್ಬರು ಈ ಘಟನೆಯನ್ನು ಕಾರ್ ಮಾಲೀಕ ಇನ್ಶೂರೆನ್ಸ್ ಕಂಪನಿಗೆ ಹೇಗೆ ವಿವರಿಸುತ್ತಾರೆ ಎಂದು ಪ್ರಶ್ನಿಸಿದ್ದರೆ. ಮತ್ತೊಬ್ಬರು ಇದೇ ಕಾರಣಕ್ಕೆ ನಮ್ಮ ತಂದೆಗೆ ನಾನು ಕಾರ್​ ತೆಗೆದುಕೊಳ್ಳುವುದು ಬೇಡ ಎಂದು ಹೇಳಿದ್ದೇನೆ. ನೋ ಕಾರ್, ನೋ ಡ್ಯಾಮೇಜ್ ಎಂದು ಪ್ರತಿಕ್ರಿಯಿಸಿದ್ದಾರೆ.