ಡೆಹರಾಡೂನ್ : ನವೆಂಬರ್ 20 ರಂದು ಉತ್ತರಾಖಂಡದ (Uttarakhand) ಪಿಥೋರಗಢದಲ್ಲಿ ನಡೆದ ಪ್ರಾದೇಶಿಕ ಸೇನಾ (Territorial Army recruitment) ನೇಮಕಾತಿ ಶಿಬಿರದಲ್ಲಿ ಸಾಗರೋಪಾದಿಯಲ್ಲಿ ಜನ ಸೇರಿದ್ದು, ಕಾಲ್ತುಳಿತದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು(Viral Video). ಪ್ರಾದೇಶಿಕ ಸೇನೆಗೆ ಸೇರಲು ಬಯಸುವ ಆಕಾಂಕ್ಷಿಗಳ ಸಂಖ್ಯೆಯಲ್ಲಿನ ಉಲ್ಬಣವು ಸ್ಥಳದಲ್ಲಿ ಭಾರೀ ಜನಸಂದಣಿಯನ್ನು ಸೃಷ್ಟಿಸಿತ್ತು. 20,000ಕ್ಕೂ ಹೆಚ್ಚು ಯುವಕರು ಜಮಾಯಿಸಿದ್ದರಿಂದ ಕಾಲ್ತುಳಿತವನ್ನು ನಿಯಂತ್ರಿಸಲು ಅಧಿಕಾರಿಗಳು ಲಾಠಿ ಚಾರ್ಜ್ ಮಾಡಿದ್ದರು ಎಂದು ಜಿಲ್ಲಾಡಳಿತ ಹೇಳಿದೆ. ಪಿಥೋರಗಢ್ನಲ್ಲಿರುವ ಸೇನಾ ನೇಮಕಾತಿ ಶಿಬಿರದ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ.
उत्तराखंड के पिथौरागढ़ में सेना भर्ती चल रही है। कल यहां एक ही दिन में 20 हजार से ज्यादा बेरोजगार नौजवान पहुंचे। धक्का-मुक्की हुई, गेट टूट गया। फौजियों को लाठी फटकारनी पड़ी। भगदड़ में कई लड़के घायल भी हो गए। pic.twitter.com/9FCw5IzWMk
— Sachin Gupta (@SachinGuptaUP) November 21, 2024
ವಿಡಿಯೋದಲ್ಲಿ ಕಾಣುವಂತೆ, ರಸ್ತೆಗಳು ಜನರಿಂದ ತುಂಬಿದ್ದವು. ಕಿಲೋಮೀಟರ್ ದೂರದಿಂದ ಸರತಿ ಸಾಲಿನಲ್ಲಿ ಯುವಕರು ನಿಂತಿದ್ದರು. ಕೆಲವರು ಎತ್ತರದ ಗುಡ್ಡಗಾಡು ಪ್ರದೇಶದಲ್ಲಿ ನಿಂತರೆ, ಇನ್ನು ಕೆಲವರು ರಸ್ತೆಯಲ್ಲಿ ನುಗ್ಗುವ ದೃಶ್ಯ ಕಂಡು ಬಂದಿದೆ.
ಅವ್ಯವಸ್ಥೆಗಳ ಆಗರ
ನೇಮಕಾತಿ ಶಿಬಿರಕ್ಕೆ ಬಂದ ಯುವಕರು ಸರಕು ಸರಂಜಾಮುಗಳ ಜತೆ ಬೇರೆ ಬೇರೆ ಪ್ರದೇಶದಿಂದ ಬಂದಿದ್ದರು. ಅವರಿಗೆ ಸರಿಯಾದ ವಸತಿ, ಶೌಚಾಲಯ, ಆಹಾರ, ಕುಡಿಯುವ ನೀರು ಮುಂತಾದ ಮೂಲಭೂತ ಸೌಕರ್ಯ ಇಲ್ಲದೆ ಪರದಾಡಿದ್ದಾರೆ. ಸ್ಥಳೀಯ ಮಾಧ್ಯಮಗಳು ಇದರ ಬಗ್ಗೆ ವರದಿ ಮಾಡಿದ್ದವು. ಆದರೆ ಜಿಲ್ಲಾಡಳಿತ ಆರೋಪವನ್ನು ನಿರಾಕರಿಸಿದೆ.
उत्तराखंड के पिथौरागढ़ में चल रही प्रादेशिक सेना की भर्ती में शामिल होने के लिए विभिन्न राज्यों से युवा पहुंच रहे हैं। अत्यधिक भीड़ होने के चलते बसों में सीट न मिलने पर इस तरह जान जोखिम में डालकर युवा भर्ती होने जा रहे है। pic.twitter.com/K47LNX1JPI
— चम्पावत खबर (@naveen_deopa) November 19, 2024
ಪಿಥೋರಗಢಕ್ಕೆ ಪ್ರಯಾಣಿಸಲು ಸರಿಯಾದ ವ್ಯವಸ್ಥೆ ಇಲ್ಲದೇ ಸಿಕ್ಕ ಸಿಕ್ಕ ವಾಹನದ ಮೇಲೆ ಸುರಕ್ಷತೆ ಇಲ್ಲದೆ ಪ್ರಯಾಣ ಮಾಡಿರುವುದು ತಿಳಿದು ಬಂದಿದೆ. ಖಾಸಗಿ ವಾಹನಗಳು ಪಿಥೋರಗಢಕ್ಕೆ ಪ್ರಯಾಣಿಸಲು 10,000 ರೂ. ಬೇಡಿಕೆ ಇಡುತ್ತಿದ್ದಾರೆ ಎಂದು ಆಕಾಂಕ್ಷಿಗಳು ಆಕ್ರೋಶ ಹೊರಹಾಕಿದ್ದಾರೆ.
ಇದನ್ನೂ ಓದಿ : Terror attack: ಜಮ್ಮು-ಕಾಶ್ಮೀರದಲ್ಲಿ ಭಾರತೀಯ ಸೇನೆಯ ಭರ್ಜರಿ ಬೇಟೆ; ಮೂವರು ಜೈಷ್ ಉಗ್ರರ ಎನ್ಕೌಂಟರ್