ಬಿಗ್ ಬಾಸ್ (Bigg Boss Kannada 11) ಮನೆಗೆ ಕಾಲಿಟ್ಟ ನಂತರ ಒಮ್ಮೆಯಾದರು ಕ್ಯಾಪ್ಟನ್ ಪಟ್ಟ ಅಲಂಕರಿಸಬೇಕು ಎಂಬುದು ಪ್ರತಿಯೊಬ್ಬ ಸ್ಪರ್ಧಿಯ ಕನಸು. ಹಾಗೆ ಒಂದು ವಾರದ ನಾಯಕನಾದರೆ ಆತನಿಗೆ ಕ್ಯಾಪ್ಟನ್ ರೂಮ್, ವಿಶೇಷ ಸೌಲಭ್ಯ ದೊರೆಯುತ್ತದೆ, ಇಮ್ಯುನಿಟಿ ಮತ್ತು ವಿಶೇಷ ಅಧಿಕಾರಗಳು ಸಿಗುತ್ತವೆ. ಈ ವಾರ ಕೂಡ ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ ಕ್ಯಾಪ್ಟನ್ ಆಗಲು ಹಣಾಹಣಿ ಜೋರಾಗಿದೆ ನಡೆದಿದೆ. ಅಂತಿಮವಾಗಿ ಇದರಲ್ಲಿ ಉಗ್ರಂ ಮಂಜು ಗೆದ್ದು ಒಂಬತ್ತನೇ ವಾರದ ಕ್ಯಾಪ್ಟನ್ ಆಗಿ ಆಯ್ಕೆ ಆಗಿದ್ದಾರೆ.
ಬಿಬಿಕೆ 11 ಶುರುವಾಗಿ 50 ದಿನಗಳು ಕಳೆದಿವೆ. ಆದರೂ ಬಲಿಷ್ಠ ಸ್ಪರ್ಧಿ ಎಂದು ಗುರುತಿಕೊಂಡಿರುವ ಮಂಜು ಈವರೆಗೆ ಕ್ಯಾಪ್ಟನ್ ಆಗಿರಲಿಲ್ಲ. ಇದರ ಬಗ್ಗೆ ಸ್ವತಃ ಅವರೇ ಬೇಸರ ವ್ಯಕ್ತಪಡಿಸಿದ್ದರು. ನಾನು ಒಮ್ಮೆ ಈ ಮನೆಯ ನಾಯಕನಾಗಬೇಕು ಎಂದು ಹೇಳಿಕೊಂಡಿದ್ದರು. ಅದರಂತೆ ಇದೀಗ ಅವರ ಆಸೆ ಈಡೇರಿದೆ. ಬಿಗ್ಬಾಸ್ ಈ ವಾರದಲ್ಲಿ ನೀಡಿದ ಕ್ಯಾಪ್ಟನ್ಸಿ ಟಾಸ್ಕ್ ಬಹಳ ವಿಶೇಷವಾಗಿತ್ತು. ಇದರಲ್ಲಿ ಹನುಮಂತ, ಶೋಭಾ ಶೆಟ್ಟಿ, ಉಗ್ರಂ ಮಂಜು, ಚೈತ್ರಾ ಕುಂದಾಪುರ ಹಾಗೂ ರಜತ್ ರೇಸ್ನಲ್ಲಿದ್ದಾರೆ.
ಟಾಸ್ಕ್ ಏನೆಂದರೆ ಒಂದರ ನಂತರ ಒಂದರಂತೆ ಸದಸ್ಯನ ಭಾವಚಿತ್ರ ಇರುವ ಬಿಲ್ಲೆ ಕೆಸರಿನ ಬುಟ್ಟಿಗೆ ಬಿಳಬೇಕು. ಅದೇ ರೀತಿ ಯಾರು ಬೇಗನೇ ಸದಸ್ಯನ ಭಾವಚಿತ್ರ ಇರುವ ಬಿಲ್ಲೆ ಕೆಸರಿನ ಬುಟ್ಟಿಗೆ ಹಾಕುತ್ತಾರೆ ಅವರು ಈ ವಾರದ ಕ್ಯಾಪ್ಟನ್ ಆಗುತ್ತಾರೆ. ಈ ಟಾಸ್ಕ್ ಅನ್ನು ಪೂರ್ಣಗೊಳಿ ಉಗ್ರಂ ಮಂಜು ಕ್ಯಾಪ್ಟನ್ ಆಗಿದ್ದಾರೆ.
ರಜತ್ ಕಿಶನ್ ಕಳಪೆ:
ಬಂದ ಮೊದಲ ವಾರವೇ ರಜತ್ ಕಿಶನ್ ಜೈಲಿಗೆ ಹೋಗಿದ್ದಾರೆ. ಇದಕ್ಕೆ ಕಾರಣ ಟಾಸ್ಕ್ ಮಧ್ಯೆ ರಜತ್ ಅವರು ಗೋಲ್ಡ್ ಸುರೇಶ್ ಅವರಿಗೆ ಅವಾಚ್ಯ ಪದಗಳನ್ನು ಬಳಸಿದ್ದು. ಬಹುತೇಕ ಸ್ಪರ್ಧಿಗಳು ಕಳಪೆಗೆ ರಜತ್ ಕಿಶನ್ ಹೆಸರು ತೆಗೆದುಕೊಂಡಿದ್ದಾರೆ. ಹನುಮಂತ, ಗೋಲ್ಡ್ ಸುರೇಶ್, ಮೋಕ್ಷಿತಾ ಹಾಗೇ ಶೋಭಾ, ಶಿಶಿರ್, ಐಶ್ವರ್ಯಾ ಸೇರಿದಂತೆ ಅನೇಕರು ಕಳಪೆ ಪಟ್ಟವನ್ನು ರಜತ್ ಅವರಿಗೆ ನೀಡಿದರು. ಒಂದಷ್ಟು ಪದಗಳನ್ನು ಬಳಸಬಾರದಿತ್ತು. ಅದು ಅಲ್ಲದೇ ನಮಗೆ ನಿಮ್ಮ ಪದಗಳನ್ನು ಜೀರ್ಣ ಮಾಡಿಕೊಳ್ಳಲು ಆಗ್ತಾ ಇರಲಿಲ್ಲ. ಈ ಮನೆಗೆ ಇಂತಹ ಪದಗಳು ಸೂಕ್ತ ಅಲ್ಲ ಎಂದಿ ಸ್ಪರ್ಧಿಗಳು ಹೇಳಿದ್ದಾರೆ.
BBK 11: ಕೊಟ್ಟ ಮಾತನ್ನು ತಪ್ಪದ ಸುದೀಪ್: ಹನುಮಂತನಿಗೆ ಬಟ್ಟೆ ಕಳುಹಿಸಿದ ಬಾದ್ ಷಾ