Saturday, 23rd November 2024

Vishweshwar Bhat Column: ಬುಲೆಟ್‌ ಟ್ರೇನ್‌ ಕುರಿತು ಮತ್ತಷ್ಟು

ಸಂಪಾದಕರ ಸದ್ಯಶೋಧನೆ

ವಿಶ್ವೇಶ್ವರ ಭಟ್

ಜಪಾನ್‌ನ ಬುಲೆಟ್ ಟ್ರೇನುಗಳ (ಶಿಂಕನ್ಸೆನ್) ಬಗ್ಗೆ ಮತ್ತಷ್ಟು ಸಂಗತಿಗಳನ್ನು ಹೇಳಬಹುದು. ಈ ಟ್ರೇನಿನಲ್ಲಿ ಪ್ರಯಾಣ ಮಾಡುವುದು
ನಿಜಕ್ಕೂ ಒಂದು ರೋಮಾಂಚಕ ಅನುಭವವೇ ಸರಿ. ಗಂಟೆಗೆ ಸುಮಾರು 320 ಕಿ.ಮೀ. ವೇಗದಲ್ಲಿ ಸಂಚರಿಸುವ ಈ ರೈಲು, ಭೂಮಿ ಮೇಲೆ ಚಲಿಸುವ ಎಲ್ಲ ವಾಹನಗಳ ಪೈಕಿ ಅತ್ಯಂತ ವೇಗದ್ದು. ವಿಶ್ವದ ಅತ್ಯಂತ ಸುರಕ್ಷಿತ ಸಾರಿಗೆ ವ್ಯವಸ್ಥೆಗಳಲ್ಲಿ ಒಂದು ಎಂದು ಪರಿಗಣಿಸಲಾಗಿರುವ ಈ ಬುಲೆಟ್ ಟ್ರೇನ್ ಆರಂಭವಾಗಿ ಈ ವರ್ಷಕ್ಕೆ 60 ವರ್ಷಗಳು ತುಂಬಿದ್ದರೂ, ಇಲ್ಲಿ ತನಕ ಯಾವ ಯಾಣಿಕರೂ ಅಪಘಾತದಿಂದ ಮೃತಪಟ್ಟಿಲ್ಲ ಎಂಬುದು ಅದರ ಅತ್ಯುನ್ನತ ಕಾರ್ಯಕ್ಷಮತೆಗೆ ಹಿಡಿದ ಕನ್ನಡಿಯಾಗಿದೆ.

ಸಣ್ಣ-ಪುಟ್ಟ ಘಟನೆಗಳು ಮತ್ತು ಅನಾಹುತಗಳು ಸಂಭವಿಸಿರುವುದು ನಿಜ. ಪ್ರಾಕೃತಿಕ ವಿಕೋಪಗಳಾದ ಭೂಕಂಪ ಮತ್ತು ಚಂಡಮಾರುತಗಳಿಂದ ಕೆಲವು ಸಲ ತಾಂತ್ರಿಕ ಸಮಸ್ಯೆಗಳನ್ನು ಎದುರಿಸಿದ್ದುಂಟು. ಉದಾಹರಣೆಗೆ, 2004ರಲ್ಲಿ ಸಂಭವಿಸಿದ ಭೂಕಂಪದ ವೇಳೆ, ಶಿಂಕನ್ಸೆನ್ ಸಂಚರಿಸು ವಾಗ ಹಳಿ ತಪ್ಪಿತ್ತು. ಇದು ಶಿಂಕನ್ಸೆನ್‌ನ ಮೊದಲ ಹಳಿ ತಪ್ಪಿದ ಘಟನೆ. ಅಂದರೆ ಬುಲೆಟ್ ಟ್ರೇನ್ ಆರಂಭವಾಗಿ 40 ವರ್ಷಗಳಲ್ಲಿ ಮೊದಲ ಬಾರಿಗೆ ಹಳಿ ತಪ್ಪಿತ್ತು, ಅದೂ ತನ್ನದಲ್ಲದ (ನೈಸರ್ಗಿಕ ದುರಂತದ) ಕಾರಣಕ್ಕೆ. ಅದೃಷ್ಟವಶಾತ್, ಪ್ರಯಾಣಿಕರ ಪೈಕಿ ಯಾರಿಗೂ ಗಾಯಗಳಾಗಿರಲಿಲ್ಲ. ಶಿಂಕನ್ಸೆನ್‌ಗಳಲ್ಲಿ ಈಗ ತಂತ್ರಜ್ಞಾನವನ್ನು ಅಪ್‌ಗ್ರೇಡ್ ಮಾಡಲಾಗಿದೆ.

ಭೂಕಂಪ ಸಂಭವಿಸುವ ಕನಿಷ್ಠ 40 ಸೆಕೆಂಡುಗಳ ಮೊದಲು, Earthquake early warning system ಮೂಲಕ ಮುನ್ಸೂಚನೆ ಸಿಗುತ್ತದೆ. ಇದರಿಂದ ಡ್ರೈವರ್‌ಗೆ ಬುಲೆಟ್ ಟ್ರೇನನ್ನು ತಕ್ಷಣ ನಿಲ್ಲಿಸಲು ಸಾಧ್ಯವಾಗುತ್ತದೆ. ಕೆಲವು ಸಂದರ್ಭಗಳಲ್ಲಿ, ರೈಲುಗಳ ಹಳಿ ಮೇಲೆ ಆತ್ಮಹತ್ಯೆ ಮಾಡಿಕೊಂಡ ಪ್ರಸಂಗಗಳು ಜರುಗಿದ್ದುಂಟು. ಆದರೆ ಈ ಘಟನೆಗಳು ಶಿಂಕನ್ಸೆನ್‌ನ ಅಚ್ಚುಕಟ್ಟಾದ ಸಮಯಪಾಲನೆ ಮೇಲಾಗಲಿ, ರೈಲು ಸಂಚಾರದ ಮೇಲಾಗಲಿ ಯಾವ ಪರಿಣಾಮವನ್ನೂ ಬೀರಿಲ್ಲ ಎಂಬುದು ಗಮನಾರ್ಹ.

2015ರಲ್ಲಿ, ಒಬ್ಬ ಪ್ರಯಾಣಿಕ ಸ್ವತಃ ಬೆಂಕಿ ಹಚ್ಚಿಕೊಂಡ ಘಟನೆ ನಡೆದಿತ್ತು. ಇದು ಒಬ್ಬ ಪ್ರಯಾಣಿಕನ ಸಾವಿಗೆ ಕಾರಣವಾಯಿತು, ಆದರೆ ಇದರಿಂದ ಇನ್ನಿತರ ಪ್ರಯಾಣಿಕರಿಗೆ ಯಾವ ತೊಂದರೆಯೂ ಆಗಲಿಲ್ಲ. ಶಿಂಕನ್ಸೆನ್‌ಗಳಲ್ಲಿ ತಾಂತ್ರಿಕ ಸಮಸ್ಯೆಗಳು ಸಹ ತೀರಾ ಅಪರೂಪ. ಒಮ್ಮೆ ರೈಲುಗಳ ಬ್ರೇಕ್ ವ್ಯವಸ್ಥೆಯಲ್ಲಿ ಸಣ್ಣ ತೊಂದರೆ ಉಂಟಾಗಿತ್ತು. ತಕ್ಷಣವೇ ತಾಂತ್ರಿಕ ತಂಡವು ಕಾರ್ಯಪ್ರವೃತ್ತವಾಗಿ ಸಮಸ್ಯೆಯನ್ನು ಬಗೆಹರಿಸಿತು. 2021ರಲ್ಲಿ ಒಂದು ಸಲ ರೈಲು ನಿಲ್ಲುವ ಸಮಯದಲ್ಲಿ ಬ್ರೇಕ್ ಪ್ಯಾಡ್‌ನ ಸಮಸ್ಯೆಯಿಂದಾಗಿ ಹೊಗೆ ಕಾಣಿಸಿಕೊಂಡಿತ್ತು. ಆದರೆ ಇದರಿಂದ ಯಾವುದೇ ಅನಾಹುತವಾಗಲಿಲ್ಲ. ಕೆಲವೊಮ್ಮೆ ಪ್ರಯಾಣಿಕರ ತಪ್ಪಿನಿಂದಾಗಿ ಬೇರೆ ಬೋಗಿಗಳನ್ನು ಪ್ರವೇಶಿಸಿ, ತಮ್ಮದಲ್ಲದ ಆಸನಗಳಲ್ಲಿ ಹೋಗಿ ಕುಳಿತುಕೊಂಡು ಉಳಿದವರಿಗೆ ಕಿರಿಕಿರಿಯಾಗಿರಬಹುದು. ಆದರೂ ಅಕ್ಷರ ಬಾರದವರು, ಭಾಷೆ ಗೊತ್ತಿಲ್ಲದವರು ಸೂಚನೆ, ಸಂಕೇತ, ಸಂeಗಳ ಮೂಲಕ ತಮ್ಮ ಆಸನಗಳನ್ನು ಸುಲಭವಾಗಿ ಕಂಡುಕೊಳ್ಳಬಹುದಾಗಿದೆ.

ಇದನ್ನು ಸಹ ಪರಿಹರಿಸಲು ಕಾಲಕಾಲಕ್ಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಶಿಂಕನ್ಸೆನ್‌ನ 60 ವರ್ಷಗಳ ಇತಿಹಾಸದಲ್ಲಿ 10 ಶತಕೋಟಿ ಜನ ಪ್ರಯಾಣಿಸಿzರೆ. ಆದರೆ ದುರಂತದ ಪ್ರಮಾಣ ಮಾತ್ರ ಶೂನ್ಯ ಎಂದೇ ಹೇಳಬಹುದು. ಇದಕ್ಕೆ ಕಾರಣ ದೋಷ ರಹಿತ ವ್ಯವಸ್ಥೆ, ಸಮರ್ಥ ತಂತ್ರeನ, ನಿರ್ವಹಣಾ ಶಿಸ್ತು ಮತ್ತು ನಿರಂತರ ಪರೀಕ್ಷಾ ಕ್ರಮಗಳು. ಒಂದು ಸಣ್ಣ ದೋಷ ಕಂಡುಬಂದರೂ ತಕ್ಷಣ ಅದನ್ನು ಪರಿಹರಿಸ ಲಾಗುತ್ತದೆ. ಇವು ಶಿಂಕನ್ಸೆನ್ ಅನ್ನು ವಿಶ್ವದ ಅತ್ಯಂತ ಸುರಕ್ಷಿತ ಸಾರಿಗೆ ವ್ಯವಸ್ಥೆಯನ್ನಾಗಿ ಮಾಡಿವೆ. ಜಪಾನ್ ಬುಲೆಟ್ ಟ್ರೇನು ವೇಗಕ್ಕೊಂದೇ ಅಲ್ಲ, ಸುರಕ್ಷತೆ, ದಕ್ಷತೆ, ಅತ್ಯುನ್ನತ ಪರಿಣತಿ, ದೋಷರಹಿತ ವ್ಯವಸ್ಥೆ, ನಿರಂತರ ಮೇಲ್ದರ್ಜೆಗೆ ಎತ್ತರಿಸಿಕೊಳ್ಳುವ ತುಡಿತ ಹಾಗೂ ಅತ್ಯುತ್ತಮ ಕಾರ್ಯಕ್ಷಮತೆಗೂ ಜಗತ್ತಿನಲ್ಲಿಯೇ ಹೆಸರುವಾಸಿಯಾಗಿದೆ.

ಇದನ್ನೂ ಓದಿ: @vishweshwarbhat