Saturday, 23rd November 2024

Viral News: ಆನ್‍ಲೈನ್‍ನಲ್ಲಿ ಪೆಂಡೆಂಟ್ ಆರ್ಡರ್ ಮಾಡಿದ ಯುವತಿಗೆ ಸಿಕ್ಕಿದ್ದು ನಾಯಿಹಲ್ಲು!

Viral News

ಬೀಜಿಂಗ್‌: ಆನ್‍ಲೈನ್‍ ಪ್ಲಾಟ್‍ಫಾರ್ಮ್‍ಗಳಲ್ಲಿ ಗ್ರಾಹಕರು ಮೋಸ ಹೋಗುತ್ತಿರುವ ಘಟನೆಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಕೇಳಿಬರುತ್ತಿದೆ. ವಿದ್ಯಾವಂತರೇ ಇಂತಹ ಮೋಸಕ್ಕೆ ಹೆಚ್ಚಾಗಿ ಬಲಿಯಾಗುತ್ತಿರುವುದು ವಿಪರ್ಯಾಸ. ಈ ನಡುವೆ ಇತ್ತೀಚೆಗೆ ಇಂಗ್ಲೆಂಡ್‌ ನಿವಾಸಿ ಯುವತಿಯೊಬ್ಬರು ಚೀನಾದ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ ಟೆಮುದಿಂದ ಮೋಸಕ್ಕೊಳಗಾದ ವಿಚಾರವನ್ನು ಟಿಕ್‍ಟಾಕ್‍ನಲ್ಲಿ ಹಂಚಿಕೊಂಡಿದ್ದಾರೆ. ಯುವತಿ ಚೀನಾದ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ ಟೆಮುದಿಂದ ರೆಸಿನ್ ಪೆಂಡೆಂಟ್ ಆರ್ಡರ್ ಮಾಡಿದರೆ ಬಂದಿದ್ದು ಮಾತ್ರ ನಾಯಿಯ ಹಲ್ಲಿನ ಪೆಂಡೆಂಟ್ ಇರುವ ಸರ. ಈ ಸುದ್ದಿ ಎಲ್ಲೆಡೆ ಸಿಕ್ಕಾಪಟ್ಟೆ ವೈರಲ್‌(Viral News) ಆಗಿದೆ.

ಚೀನಾದ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ ಟೆಮುದಿಂದ ನಾಯಿಯ ಹಲ್ಲು ಇರುವ ಸರಕ್ಕೆ  ಕೇವಲ 57 ಪೆನ್ಸ್ (ಸುಮಾರು 60 ರೂ.) ಗೆ ಖರೀದಿಸಿದ ನಂತರ ಯುಕೆ ನಿವಾಸಿ ಬೆಲ್ಲಾ ಮೊಸ್ಕಾರ್ಡಿನಿ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಪಾರ್ಸೆಲ್‌ ಅನ್ನು ಓಪನ್ ಮಾಡಿದಾಗ ಅದರಿಂದ ಕೆಟ್ಟವಾಸನೆ ಬರುತ್ತಿಂತೆ. ನಂತರ ಅದನ್ನು ಪರಿಶೀಲಿಸಿದಾಗ ಅದು ಪ್ಲಾಸ್ಟಿಕ್ ಆಗಿರದೆ ನಿಜವಾದ ನಾಯಿಯ ಹಲ್ಲು ಎಂಬುದಾಗಿ ತಿಳಿದುಬಂದಿದೆ. ಹಾಗಾಗಿ ಅದನ್ನು ಹೊರಗೆ ಎಸೆದಿದ್ದಾರೆ.

“ನಾನು ಈ ಸರವನ್ನು  ಕಾಲೇಜಿನ ಕಾಸ್ಟುಂ ಡೇಯಂದು ಹಾಕುವುದಕ್ಕೆ ಎಮುವಿನಿಂದ ಖರೀದಿಸಿದೆ. ನಾನು ಟೆಮು ವೆಬ್ಸೈಟ್‍ನಲ್ಲಿ ಅದರ ಬಗ್ಗೆ ಪರಿಶೀಲಿಸಿದಾಗ ಅದು ರೆಸಿನ್ ಪೆಂಡೆಂಟ್ ಎಂದು ಇತ್ತು. ನಾನು ಆಭರಣ ವ್ಯಾಪಾರಿಯ ಬಳಿ ಕೇಳಿದಾಗ  ಅದು ರೆಸಿನ್ ಪೆಂಡೆಂಟ್ ಅಲ್ಲ” ಎಂದಿದ್ದಾರೆ ಎಂದು  ಬೆಲ್ಲಾ ಟಿಕ್‍ಟಾಕ್‍ನ ವಿಡಿಯೊದಲ್ಲಿ ಈ ಬಗ್ಗೆ ವಿವರಿಸಿದ್ದಾರೆ. ಹಾಗೇ  ನೀವು ಎಂದಾದರೂ ಟೆಮುದಿಂದ ಏನನ್ನಾದರೂ ಆರ್ಡರ್ ಮಾಡಿದ್ದರೆ, ಸರಿಯಾಗಿ ನೋಡಿ ಖರೀದಿಸಿ ಎಂದು ಸಲಹೆ ನೀಡಿದ್ದಾರೆ.

ಇದನ್ನೂ ಓದಿ:ಕೊನೆಗೂ ಈಡೇರಿತು ತಾಜ್ ಹೋಟೆಲ್‍ನಲ್ಲಿ ಒಂದು ಕಪ್ ಚಹಾ ಸವಿಯೋ ಈತನ ಕನಸು; ಅಂದಹಾಗೇ, ಈ ಟೀ ಬೆಲೆಯೆಷ್ಟು ಗೊತ್ತಾ?

ಆನ್‍ಲೈನ್ ಶಾಪಿಂಗ್ ಹಗರಣಗಳು ಹೊಸತೇನಲ್ಲ. ಜನರು ಆನ್‍ಲೈನ್ ಶಾಪಿಂಗ್ ಸೈಟ್‌ಗಳಿಂದ ಏನನ್ನಾದರೂ ಆರ್ಡರ್ ಮಾಡಿದ ನಂತರ ಅವರು ಆರ್ಡರ್ ಮಾಡಿದ ವಸ್ತುವಿನ ಬದಲು ಖಾಲಿ ಪೆಟ್ಟಿಗೆ ಅಥವಾ ವಿಲಕ್ಷಣ ವಸ್ತುಗಳನ್ನು ಸ್ವೀಕರಿಸಿದ ಹಲವಾರು ಘಟನೆಗಳು ವರದಿಯಾಗಿವೆ. ಈ ಹಿಂದೆ ಆನ್‍ಲೈನ್‍ನಲ್ಲಿ  ಆಭರಣಗಳನ್ನು ಆರ್ಡರ್ ಮಾಡಿದ ಮಹಿಳೆಗೆ ತನ್ನ ಡೆಲಿವರಿ ಬಾಕ್ಸ್‌ನಲ್ಲಿ ಖಾಲಿ ಕ್ರೀಮ್ ಬಾಕ್ಸ್ ಸಿಕ್ಕಿದೆ. ಐಶ್ವರ್ಯಾ ಖಜುರಿಯಾ ಎಂಬ ಮಹಿಳೆ ತನ್ನ ಶಾಪಿಂಗ್ ಹಗರಣದ ಘಟನೆಯನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು.