ಬಿಗ್ ಬಾಸ್ ಕನ್ನಡ ಸೀಸನ್ 11 ರ (Bigg Boss Kannada 11) ಎಂಟನೇ ವಾರದ ಪಂಚಾಯಿತಿ ಇಂದು ನಡೆಯಲಿದೆ. ವಾರದ ಕತೆ ಕಿಚ್ಚನ ಜೊತೆ ಎಪಿಸೋಡ್ ಮೇಲೆ ಎಲ್ಲರ ಕಣ್ಣಿದೆ. ಯಾಕೆಂದರೆ ಈ ವಾರ ಮನೆಯಲ್ಲಿ ಅವಚ್ಯಾ ಶಬ್ದಗಳು ತಾಂಡವವಾಡಿದವು. ವೈಲ್ಡ್ ಕಾರ್ಡ್ ಮೂಲಕ ಮನೆಯೊಳಗೆ ಎಂಟ್ರಿ ಕೊಟ್ಟ ಸ್ಪರ್ಧಿ ರಜತ್ ಕಿಶನ್ ಅವರು ಫಿಲ್ಟರ್ ಇಲ್ಲದೆ ಮಾತನಾಡಿದ್ದು ಎಲ್ಲರ ಕಣ್ಣು ಕುಕ್ಕುವಂತೆ ಮಾಡಿದೆ. ಇದೇ ವಿಚಾರವಾಗಿ ಕಿಚ್ಚ ಸುದೀಪ್ ಇಂದು ಇವರಿಗೆ ಭರ್ಜರಿ ಕ್ಲಾಸ್ ತೆಗೆದುಕೊಳ್ಳುವುದು ಖಚಿತವಾಗಿದೆ.
ಸದ್ಯ ಕಲರ್ಸ್ ಕನ್ನಡ ಇಂದಿನ ವಾರದ ಕತೆ ಕಿಚ್ಚನ ಜೊತೆ ಎಪಿಸೋಡ್ನ ಸಣ್ಣ ಪ್ರೊಮೋ ಬಿಟ್ಟಿದ್ದು, ಇದರಲ್ಲಿ ಸುದೀಪ್ ಅವರು ರಜತ್ಗೆ ಪಾಠ ಕಲಿಸುವ ಸೂಚನೆ ನೀಡಿದ್ದಾರೆ. ‘‘ಒಬ್ಬ ಮಷ್ಯನ ಬಾಯಿಂದ ಬರುವ ಪದಗಳು ಬರೀ ಮಾತಲ್ಲ. ಅವನ ವ್ಯಕ್ತಿತ್ವದ ವರ್ಚಸ್ಸು. ಒಂದು ಮಾತು ಗೆಲುವಿನ ಪಟ್ಟ ಏರಿಸುತ್ತೆ, ಒಂದು ಮಾತು ಸೋಲಿನ ದಾರಿನೂ ತೋರಿಸುತ್ತೆ’’ ಎಂದು ಹೇಳುವ ಮೂಲಕ ಶೋ ಪ್ರಾರಂಭಿಸಿದ್ದಾರೆ. ಇದು ಎಲ್ಲರ ಕುತೂಹಲ ಹೆಚ್ಚಿಸಿದೆ.
ವರ್ಚಸ್ಸಿಗೂ ವ್ಯಕ್ತಿತ್ವಕ್ಕೂ ಕನ್ನಡಿ ಹಿಡಿಯೋಕೆ ಬಂದ್ರು ಕಿಚ್ಚ ಸುದೀಪ!
— Colors Kannada (@ColorsKannada) November 23, 2024
ವಾರದ ಕತೆ ಕಿಚ್ಚನ ಜೊತೆ | ಇಂದು ರಾತ್ರಿ 9#BiggBossKannada11 #BBK11 #HosaAdhyaya #ColorsKannada #BannaHosadaagideBandhaBigiyaagide #ಕಲರ್ಫುಲ್ಕತೆ #colorfulstory #Kicchasudeepa pic.twitter.com/zlzicPzwv4
ರಜತ್ ಆಡಿರುವ ಮಾತುಗಳು ಏನು?:
ಬಿಗ್ ಬಾಸ್ ಒಳಗೆ ಬರುತ್ತಿದ್ದಂತೆಯೇ ಕೆಲವು ಸ್ಪರ್ಧಿಗಳನ್ನು ನೇರವಾಗಿ ಟಾರ್ಗೆಟ್ ಮಾಡಿ ರಜತ್ ಅವರು ಕೆಂಗಣ್ಣಿಗೆ ಗುರಿಯಾಗಿದ್ದರು. ಅಲ್ಲದೇ ಅವರು ಬಳಸುತ್ತಿರುವ ಪದಗಳ ಬಗ್ಗೆ ಭಾರೀ ಚರ್ಚೆ ಆದವು. ಮುಖ್ಯವಾಗಿ ಟಾಸ್ಕ್ ಮಧ್ಯೆ ರಜತ್ ಅವರು ಗೋಲ್ಡ್ ಸುರೇಶ್ಗೆ ಗುಗ್ಗು ನನ್ ಮಗನ್ ಥರಾ ಮಾತಾಡ್ತಿದ್ದೀಯಾ, ಅಮಿಕ್ಕೊಂಡಿರು, ಸಡೆ ಮಾತುಗಳೆಲ್ಲಾ ಬೇಡ.. ತಿಳ್ಕೋ.. ಅಂತ ಕೂಗಾಡಿದ್ದಾರೆ. ರಜತ್ ಮಾತುಗಳನ್ನ ಕೇಳಿ ಬೇಸೆತ್ತ ಗೋಲ್ಡ್ ಸುರೇಶ್, ತಮ್ಮ ಮೇಲೆ ಬಳಕೆ ಆಗಿರುವ ಪದಗಳು ಆಕ್ಷೇಪಾರ್ಹವಾಗಿವೆ. ನನಗೆ ಬೇಸರ ಆಗಿದೆ. ಬಿಗ್ಬಾಸ್ ನಾನು ಆಡಲ್ಲ. ಬಾಗಿಲು ಓಪನ್ ಮಾಡಿ ಎಂದು ಡೋರ್ ತಟ್ಟಿದ್ದರು.
ಕಳಪೆ ನೀಡುವ ಸಂದರ್ಭವೂ ಅದೇ ಮಾತು:
ಬಹುತೇಕ ಸ್ಪರ್ಧಿಗಳು ಕಳಪೆಗೆ ರಜತ್ ಕಿಶನ್ ಹೆಸರು ತೆಗೆದುಕೊಂಡಿದ್ದಾರೆ. ಹನುಮಂತ, ಗೋಲ್ಡ್ ಸುರೇಶ್, ಮೋಕ್ಷಿತಾ ಹಾಗೇ ಶೋಭಾ, ಶಿಶಿರ್, ಐಶ್ವರ್ಯಾ ಸೇರಿದಂತೆ ಅನೇಕರು ಕಳಪೆ ಪಟ್ಟವನ್ನು ರಜತ್ ಅವರಿಗೆ ನೀಡಿದರು. ಒಂದಷ್ಟು ಪದಗಳನ್ನು ಬಳಸಬಾರದಿತ್ತು. ಅದು ಅಲ್ಲದೇ ನಮಗೆ ನಿಮ್ಮ ಪದಗಳನ್ನು ಜೀರ್ಣ ಮಾಡಿಕೊಳ್ಳಲು ಆಗ್ತಾ ಇರಲಿಲ್ಲ. ಈ ಮನೆಗೆ ಇಂತಹ ಪದಗಳು ಸೂಕ್ತ ಅಲ್ಲ ಎಂದಿ ಸ್ಪರ್ಧಿಗಳು ಹೇಳಿದ್ದಾರೆ.
ಇದರಿಂದ ಕೆರಳಿದ ರಜತ್ ಅವರು ಗೋಲ್ಡ್ ಸುರೇಶ್ ಅವರತ್ತ ಬೆರಳು ತೋರಿಸಿ ಇಂತವರನ್ನೆಲ್ಲ ಮನೆಗೆ ಕಳುಹಿಸಿಯೇ ನಾನು ಇಲ್ಲಿಂದ ಹೋಗೋದು. ಹುಡುಗಿಯರ ಕೈ ಹಿಡಿದುಕೊಂಡು ಓಡಾಡಿದಷ್ಟು ಸುಲಭವಲ್ಲ ಬಿಗ್ ಬಾಸ್ ಆಟ ಗೆಲ್ಲೋದು. ನಾನು ಹುಟ್ಟಿದಾಗಿಂದ ಹೀಗೇ ಇದ್ದೀನಿ, ಇವಾಗಲೂ ಹೀಗೆ ಇದ್ದೀನಿ. ಇನ್ಮುಂದೆ ಇದಕ್ಕಿಂತ ತ್ರಿಬಲ್ ಮಾತಾಡ್ತೀನಿ, ತೋರಿಸ್ತೀನಿ. ಇನ್ಮುಂದೆ ನಿಜವಾದ ಆಟ ಶುರು ಎಂದು ಹೇಳಿದ್ದರು.