ಭುವನೇಶ್ವರ: ಇತ್ತೀಚೆಗೆ ಭುವನೇಶ್ವರದ ಡಿಸಿಪಿ ಕಚೇರಿಯ ಹೊರಗೆ ಒಡಿಯಾ ನಟ ಮನೋಜ್ ಮಿಶ್ರಾ(Actor Manoj Mishra) ಮತ್ತು ನಿರ್ದೇಶಕ ಬಾಬಿ ನಡುವೆ ಘರ್ಷಣೆ ನಡೆದಿತ್ತು. ಸಾರ್ವಜನಿಕ ಸ್ಥಳದಲ್ಲಿ ಇಬ್ಬರು ಸೆಲೆಬ್ರಿಟಿಗಳ ನಡುವೆ ಘರ್ಷಣೆ ಭುಗಿಲೆದ್ದ ಹಿನ್ನೆಲೆಯಲ್ಲಿ ಪರಿಸ್ಥಿತಿ ಮತ್ತಷ್ಟು ಉಲ್ಬಣಗೊಳ್ಳದಂತೆ ತಡೆಯಲು ಪೊಲೀಸ್ ಮಧ್ಯಪ್ರವೇಶಿಸಬೇಕಾಯಿತು. ನಟ ನಿರ್ದೇಶಕರ ಹೈಡ್ರಾಮಾ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಮಾಧ್ಯಮ ವರದಿಗಳ ಪ್ರಕಾರ, ಬಾಬಿ ಮತ್ತು ಮನೋಜ್ ಚಿತ್ರದ ಶೀರ್ಷಿಕೆಗಾಗಿ ಜಗಳವಾಡಿದ್ದಾರೆ ಎನ್ನಲಾಗಿದೆ. ಡಿಸಿಪಿ ಕಚೇರಿಯ ಹೊರಗೆ ಇಬ್ಬರೂ ಹೊಡೆದಾಡಿಕೊಂಡಿರುವ ವಿಡಿಯೊಗಳು ಸೋಶಿಯಲ್ ಮೀಡಿಯಾಗಳಲ್ಲಿ ಕಾಣಿಸಿಕೊಂಡಿವೆ. ಒಟಿವಿ ನ್ಯೂಸ್ ಎಕ್ಸ್ನಲ್ಲಿ ಹಂಚಿಕೊಂಡ ವಿಡಿಯೊದಲ್ಲಿ ಇಬ್ಬರ ನಡುವೆ ಜಗಳ ತಾರಕಕ್ಕೇರುತ್ತಿದ್ದಂತೆ ಪೊಲೀಸರು ಮಧ್ಯಪ್ರವೇಶಿಸಿ ಇಬ್ಬರನ್ನು ತಡೆದಿದ್ದಾರಂತೆ. ಆದರೂ ಅವರು ಪರಸ್ಪರ ನಿಂದಿಸಿದ್ದಾರೆ. ಸಿನಿ ತಾರೆಯರು ಈ ರೀತಿ ನಡು ಬೀದಿಯಲ್ಲಿ ನಿಂತು ಬಡಿದಾಡಿಕೊಂಡಿರುವುದು ಅವರ ಅಭಿಮಾನಿಗಳಿಗೆ ಆಘಾತವನ್ನುಂಟು ಮಾಡಿದೆ.
#OllywoodWarIntensifies | Tension ran high in front of #Bhubaneswar DCP office after director Bobby Islam and actor Manoj Mishra entered into a verbal dual today when they were called for an amicable solution to the ongoing dispute between them.
— OTV (@otvnews) November 22, 2024
It is alleged that actor Manoj… pic.twitter.com/5QoK4dT31O
ವರದಿ ಪ್ರಕಾರ, ನಿರ್ದೇಶಕ ಬಾಬಿ ಇಸ್ಲಾಂ ಮತ್ತು ನಟ ಮನೋಜ್ ಮಿಶ್ರಾ ನಡುವೆ ನಡೆಯುತ್ತಿರುವ ವಿವಾದಕ್ಕೆ ಪರಿಹಾರ ಕಂಡುಕೊಳ್ಳಲು ಅವರಿಬ್ಬರನ್ನು ಡಿಸಿಪಿ ಕಚೇರಿಗೆ ಕರೆಯಲಾಯಿತು. ಆದರೆ ಮಾತುಕತೆಯ ವೇಳೆ ಅವರ ನಡುವೆ ಮಾತಿನ ಚಕಮಕಿ ನಡೆದು ನಂತರ ಪರಿಸ್ಥಿತಿ ವಿಕೋಪಕ್ಕೆ ತಿರುಗಿತ್ತು. ಇಬ್ಬರು ಪರಸ್ಪರ ಅವಾಚಯ ಶಬ್ದಗಳಿಂದ ನಿಂದಿಸುತ್ತಾ ಕೈ ಕಯ ಮಿಲಾಯಿಸಿದ್ದಾರೆ.
ಮುಂಬರುವ ಚಿತ್ರದ ಶೀರ್ಷಿಕೆಯಲ್ಲಿ ಬಳಸಲಾದ ನಿರ್ದಿಷ್ಟ ಪದಕ್ಕೆ ಮನೋಜ್ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದರಿಂದ ಈ ವಾಗ್ವಾದ ನಡೆದಿದೆ. ಈ ನಡುವೆ ಮನೋಜ್ ಒಡಿಯಾ ಚಲನಚಿತ್ರೋದ್ಯಮದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಬಾಬಿ ಆರೋಪಿಸಿದ್ದಾರೆ. ಇದೀಗ ಇಬ್ಬರ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ.
ಇದನ್ನೂ ಓದಿ:ಡೇಟಿಂಗ್ ಮಾಡಿ ಸಕ್ಸಸ್ ಆದ ಉದ್ಯೋಗಿಗಳಿಗೆ ಭರ್ಜರಿ ಗಿಫ್ಟ್! ಈ ಕಂಪನಿ ಆಫರ್ ಕೇಳಿದ್ರೆ ಅಚ್ಚರಿ ಆಗೋದು ಗ್ಯಾರಂಟಿ