Saturday, 23rd November 2024

Viral Video: ಪತಿಯ ಅಫೇರ್‌ ಬಗ್ಗೆ ತಿಳಿದ ಪತ್ನಿ ಮಾಡಿದ್ದೇನು ಗೊತ್ತಾ? ಕುತ್ತಿಗೆಗೆ ಬೋರ್ಡ್‌ ನೇತು ಹಾಕಿಕೊಂಡು ಬೀದಿ ಬೀದಿ ಅಲೆಯುತ್ತಿರುವ ಈತನ ವಿಡಿಯೊ ಫುಲ್‌ ವೈರಲ್‌

Viral Video

ನ್ಯೂಯಾರ್ಕ್‌: ಗಂಡನಿಂದ ವಂಚನೆಗೊಳಗಾದ ಪತ್ನಿಯು ಆತನ ಕುತ್ತಿಗೆಗೆ “ನಾನು ಎರಡು ವರ್ಷಗಳಿಂದ ಅನೈತಿಕ ಸಂಬಂಧವನ್ನು ಹೊಂದಿದ್ದೆ” ( I Had an Affair for 2 Years) ಎಂದು ಘೋಷಿಸುವ ಬಹುದೊಡ್ಡ ಬೋರ್ಡನ್ನು ನೇತು ಹಾಕಿ ಬೀದಿ ಬೀದಿ ಅಲೆದಾಡುವಂತೆ ಮಾಡಿರುವ ವಿಡಿಯೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗುತ್ತಿದೆ(Viral Video). ಆ ಮೂಲಕ ತನ್ನ ಮೋಸಗಾರ ಪತಿಯ ವಿರುದ್ಧ ಸೇಡು ತೀರಿಸಿಕೊಂಡಿದ್ದಾಳೆ.

ನ್ಯೂಯಾರ್ಕ್‌ನ ವಾಲ್ಟ್‌ ವಿಟ್‌ಮಿನ್‌ ಮಾಲ್‌ನಲ್ಲಿ ಈ ಬೋರ್ಡನ್ನು ಕುತ್ತಿಗೆಗೆ ತಗುಲಿ ಹಾಕಿಕೊಂಡು ಪತಿಯು ಸಾರ್ವಜನಿಕವಾಗಿ ಎಲ್ಲಾ ಕಡೆ ನಡೆದಾಡಿದ್ದಾನೆ. ತಾನು ಮಾಡಿದ ಮೂರ್ಖತನದ ಕೆಲಸಕ್ಕೆ ಏನೂ ಮಾತನಾಡದೆ ಅಸಡ್ಡೆತನದಿಂದ ಪತ್ನಿಯ ಜೊತೆಗೆ ಹೆಜ್ಜೆ ಹಾಕಿದ್ದಾನೆ. ಈ ವೇಳೆ ಗಂಡನನ್ನು ಮುಂದಕ್ಕೆ ಬಿಟ್ಟು ಆಕೆ ಮಗುವಿರುವ ಪ್ರೀ ಅಂಬುಲೇಟರ್‌ ಅನ್ನು ತಳ್ಳುತ್ತಿದ್ದಾಳೆ. ಮೋಸ ಮಾಡುವ ಗಂಡಂದಿರು ಮತ್ತು ಮೋಸಕ್ಕೆ ಒಳಗಾಗುವ ಪತ್ನಿಯರು ನೋಡಲಿ ಎಂಬ ಕಾರಣಕ್ಕೆ ತನ್ನ ಪತಿಯ ಕುತ್ತಿಗೆಗೆ ನಾಮಫಲಕ ಹಾಕಿ ಮಾಲ್‌ ಪೂರಾ ಸುತ್ತಾಡಿಸಿದ್ದಾಳಂತೆ.

ತನ್ನ ಮೋಸಗಾರ ಪತಿಯನ್ನು ಜನರೆದುರು ಹೀಯಾಳಿಸುತ್ತಾ, ಮಾಲ್‌ನಲ್ಲಿ ತಿರುಗಾಡುವವರನ್ನು ಹತ್ತಿರಕ್ಕೆ ಕರೆದು “ನೀವು ಆರಾಮವಾಗಿರಿ. ಇವನು ಮೋಸಗಾರ. ಅದಕ್ಕೆ ಹೀಗೆ ಮಾಡಿದ್ದೇನೆ” ಎಂದು ಜೋರಾಗಿ ಮಾತನಾಡಿದ್ದಾಳೆ. ಅಲ್ಲಿ ಸುಳಿದಾಡುವ ಹಲವರು ಪತಿ ಮತ್ತು ಪತ್ನಿಯನ್ನು ಕುತೂಹಲದಿಂದ ನೋಡಿದ್ದಾರೆ. ಗಂಡನಿಗೆ “ನಿನಗೆ ಎರಡು ವರ್ಷಗಳ ಸಂಬಂಧವಿತ್ತು ಎಂದು ಹೇಳು” ಎಂದಿದ್ದಾಳೆ. ಇನ್ನು ಈ ಬೋರ್ಡನಲ್ಲಿ ” # thespurnedbxtch” ಎಂಬ ಹ್ಯಾಶ್‌ ಟ್ಯಾಗನ್ನೂ ಹಾಕಲಾಗಿದೆ.

ಮಹಿಳೆಯು ತನ್ನ ಎರಡನೇ ಮಗುವಿಗೆ ಗರ್ಭಿಣಿಯಾಗಿದ್ದ ಸಂದರ್ಭದಲ್ಲಿ ಆಕೆಯ ಪತಿಯು ಬೇರೆ ಮಹಿಳೆಯೊಂದಿಗೆ ಎರಡು ವರ್ಷಗಳ ಅನೈತಿಕ ಸಂಬಂಧವನ್ನು ಇಟ್ಟುಕೊಂಡಿದ್ದಾನೆ. ಆ ಕುರಿತು ಸ್ವತಃ ಮಹಿಳೆ ಮಾಲ್‌ ನಲ್ಲಿ ವೀಡಿಯೊವನ್ನು ಚಿತ್ರೀಕರಿಸಿದ ವ್ಯಕ್ತಿ ಮತ್ತು ಇನ್ನು ಕೆಲವು ಜನರಿಗೆ ತಿಳಿಸಿದ್ದಾಳೆ. ಮೋಸ ಮಾಡಿದ ಪತಿಯ ವಿರುದ್ಧ ಪ್ರತಿಕಾರ ತೀರಿಸಿಕೊಂಡ ಮಹಿಳೆಯ ಕುರಿತು ಎಲ್ಲೆಡೆ ಪಾಸಿಟಿವ್‌ ಪ್ರತಿಕ್ರಿಯೆಗಳು ಬರುತ್ತಿವೆ. ಹೆಂಡತಿಯನ್ನು ವಂಚಿಸಿದವನಿಗೆ ತಕ್ಕ ಶಾಸ್ತಿಯಾಗಿದೆ. ಎಲ್ಲಾ ಗಂಡಸರು ಇದರಿಂದ ಪಾಠ ಕಲಿಯಬೇಕು ಎಂದು ಹಲವರು ಪ್ರತಿಕ್ರಿಯಿಸಿದ್ದಾರೆ.

ಈ ಸುದ್ದಿಯನ್ನೂ ಓದಿ:‌ Viral News: ಹಸೆಮನೆ ಏರಬೇಕಾದವ ಸೇರಿದ್ದು ಮಸನಕ್ಕೆ; ಸಾವಿಗೂ ಮುನ್ನ ಮದುವೆ ಸಂಭ್ರಮದಲ್ಲಿದ್ದ ವರನ ವಿಡಿಯೊ ಫುಲ್‌ ವೈರಲ್‌!