ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada 11) ಎಂಟನೇ ವಾರಾಂತ್ಯಕ್ಕೆ ತಲುಪಿದೆ. ಇಂದು ಸುದೀಪ್ ನೇತೃತ್ವದಲ್ಲಿ ವಾರದ ಕತೆ ಕಿಚ್ಚನ ಜೊತೆ ಎಪಿಸೋಡ್ ನಡೆಯಲಿದೆ. ಈ ವಾರ ಮನೆಯಲ್ಲಿ ಸಾಕಷ್ಟು ವಿಚಾರಗಳು ನಡೆದಿವೆ. ಮುಖ್ಯವಾಗಿ ಗೋಲ್ಡ್ ಸುರೇಶ್ ಅವರಿಗೆ ವೈಲ್ಡ್ ಕಾರ್ಡ್ ಸ್ಪರ್ಧಿ ರಜತ್ ಕಿಶನ್ ಬಳಸಿದ ಪದ ಸಾಕಷ್ಟು ಸದ್ದು ಮಾಡಿತು. ಈ ವಿಚಾರದ ಬಗ್ಗೆ ಸುದೀಪ್ ಮಾತನಾಡಲಿದ್ದಾರೆ ಎಂಬ ನಿರೀಕ್ಷೆ ಇತ್ತು ಅದರಂತೆ ಇದೀಗ ಕಿಚ್ಚ ರಜತ್ಗೆ ಖಡಕ್ ಕ್ಲಾಸ್ ತೆಗೆದುಕೊಂಡಿದ್ದಾರೆ.
ಒಬ್ಬ ಮಷ್ಯನ ಬಾಯಿಂದ ಬರುವ ಪದಗಳು ಬರೀ ಮಾತಲ್ಲ. ಅವನ ವ್ಯಕ್ತಿತ್ವದ ವರ್ಚಸ್ಸು. ಒಂದು ಮಾತು ಗೆಲುವಿನ ಪಟ್ಟ ಏರಿಸುತ್ತೆ, ಒಂದು ಮಾತು ಸೋಲಿನ ದಾರಿನೂ ತೋರಿಸುತ್ತೆ ಎಂದು ಹೇಳುವ ಮೂಲಕ ಸುದೀಪ್ ಶೋ ಪ್ರಾರಂಭಿಸಿದ್ದಾರೆ. ಇದಾದ ಬಳಿಕ ರಜತ್ ಅವರಿಗೆ ಬಳಸಿದ ಪದಗಳ ಬಗ್ಗೆ ಕೇಳಿದ್ದಾರೆ. ಇದಕ್ಕೆ ಉತ್ತರಿಸಲಾಗದೆ ರಜತ್ ಅವರು ತಲೆತಗ್ಗಿಸಿಕೊಂಡರು.
ಕನ್ನಡದಲ್ಲಿ ತುಂಬಾ ಇದೆ ಸರ್ ಮಾತಾಡೋಕೆ, ನಿಮ್ಗೆ ಎಲ್ಲರಿಗೂ ಕೆಲವು ತೂಕಗಳಿವೆ ಎಂದು ಸುದೀಪ್ ಹೇಳಿದ್ದಾರೆ. ಇದಕ್ಕೆ ರಜತ್ ಅವರು, ಯಾವಾಗ ಎದೆಗೆ ಎದೆ ಕೊಟ್ಟರೋ.. ನನಗೆ ತಡೆದುಕೊಳ್ಳಲು ಆಗಲಿಲ್ಲ. ಮಾತಿನ ಭರದಲ್ಲಿ ಬಂತು ಎಂದು ಹೇಳಿದರು. ಆಗ ಸುದೀಪ್ ಅವರು ಅದನ್ನೇ ವಾಪಸ್ ರಿಪೀಟ್ ಮಾಡಿ ನನ್ನ ಮುಂದೆ? ಏನು ಹೇಳಿದ್ರಿ? ಎಂದು ಪ್ರಶ್ನೆ ಮಾಡಿದರು. ಅದಕ್ಕೆ, ಇನ್ನೊಂದ್ಸಲಿ ಆ ತಪ್ಪನ್ನ ರಿಪೀಟ್ ಮಾಡಲ್ಲ ಎಂದು ರಜತ್ ಹೇಳಿದ್ದಾರೆ. ಇದಕ್ಕೆ ಕೌಂಟರ್ ಕೊಟ್ಟ ಸುದೀಪ್ ನೆಕ್ಸ್ಟ್ ಟೈಮ್ ಬಾಗಿಲು ಇದೆ ಹೊರಗೆ ಹೋಗೋಕೆ ಅಂತ ಎಚ್ಚರಿಕೆ ಕೊಟ್ಟಿದ್ದಾರೆ.
ರಜತ್ ಕಿವಿ ಮುಟ್ಟಿದ್ಯಾ ಎಚ್ಚರಿಕೆ ಗಂಟೆಯ ಸದ್ದು?
— Colors Kannada (@ColorsKannada) November 23, 2024
ವಾರದ ಕತೆ ಕಿಚ್ಚನ ಜೊತೆ | ಇಂದು ರಾತ್ರಿ 9#BiggBossKannada11 #BBK11 #HosaAdhyaya #ColorsKannada #BannaHosadaagideBandhaBigiyaagide #ಕಲರ್ಫುಲ್ಕತೆ #colorfulstory #Kicchasudeepa pic.twitter.com/VkbKW87GZe
ಈ ವಾರದ ಆರಂಭದಲ್ಲಿ ರಜತ್ ಅವರು ಟಾಸ್ಕ್ ಮಧ್ಯೆ ಗೋಲ್ಡ್ ಸುರೇಶ್ಗೆ ಗುಗ್ಗು ನನ್ ಮಗನ್ ಥರಾ ಮಾತಾಡ್ತಿದ್ದೀಯಾ, ಅಮಿಕ್ಕೊಂಡಿರು, ಸಡೆ ಮಾತುಗಳೆಲ್ಲಾ ಬೇಡ.. ತಿಳ್ಕೋ.. ಅಂತ ಕೂಗಾಡಿದ್ದಾರೆ. ರಜತ್ ಮಾತುಗಳನ್ನ ಕೇಳಿ ಬೇಸೆತ್ತ ಗೋಲ್ಡ್ ಸುರೇಶ್, ತಮ್ಮ ಮೇಲೆ ಬಳಕೆ ಆಗಿರುವ ಪದಗಳು ಆಕ್ಷೇಪಾರ್ಹವಾಗಿವೆ. ನನಗೆ ಬೇಸರ ಆಗಿದೆ. ಬಿಗ್ಬಾಸ್ ನಾನು ಆಡಲ್ಲ. ಬಾಗಿಲು ಓಪನ್ ಮಾಡಿ ಎಂದು ಡೋರ್ ತಟ್ಟಿದ್ದರು.
BBK 11: ವಾರದ ಕತೆಯಲ್ಲಿ ಗರಂ ಆದ ಕಿಚ್ಚ: ರಜತ್ ಬಳಸಿದ ಪದಕ್ಕೆ ಭರ್ಜರಿ ಕ್ಲಾಸ್