ಗಾಜಿಯಾಬಾದ್: ಉತ್ತರ ಪ್ರದೇಶದ ಗಾಜಿಯಾಬಾದ್ನ ವೇವ್ ಸಿಟಿಯಲ್ಲಿ ಬೀದಿಯಲ್ಲಿ ಆಟವಾಡುತ್ತಿದ್ದ 3 ವರ್ಷದ ಮಗು ಆರವ್ಗೆ ಟ್ರಕ್ ಡಿಕ್ಕಿ ಹೊಡೆದು ಸಾವನ್ನಪ್ಪಿದ ದಾರುಣವಾದ ಘಟನೆಯೊಂದು ನಡೆದಿದೆ. ಟ್ರಕ್ ಡ್ರೈವರ್(Hit and Run Case) ಪರಾರಿಯಾಗಿದ್ದಾನೆ.ಈ ಘಟನೆಯ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಮನೆಯ ಹೊರಗೆ ಆಟವಾಡುತ್ತಿದ್ದ ಮಗು ಗೇಟ್ ಬಾಗಿಲು ತೆರೆದಿದ್ದ ಕಾರಣ ರಸ್ತೆಗೆ ಬಂದಿದೆ. ಆ ಸಂದರ್ಭದಲ್ಲಿ ವೇಗವಾಗಿ ಬಂದ ಟ್ರಕ್ವೊಂದು ಮಗುವಿಗೆ ಗುದ್ದಿದೆ. ನೆರೆಹೊರೆಯವರು ಮಗುವಿನತ್ತ ಓಡಿ ಬರುವುದರೊಳಗೆ ಟ್ರಕ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ತಕ್ಷಣವೇ ಮಗುವನ್ನು ಆಸ್ಪತ್ರೆಗೆ ಸೇರಿಸಿದ್ದಾರೆ ಆದರೆ ಯಾವುದೇ ಪ್ರಯೋಜನವಾಗಿಲ್ಲ. ಪೊಲೀಸರು ವಾಹನವನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಮಗುವಿನ ಶವವನ್ನು ಮರಣೋತ್ತರ ವರದಿಗಾಗಿ ಕಳುಹಿಸಲಾಗಿದೆ.
#गाजियाबाद में दुखद घटना समाने आई है गली में खेल रहे 3 साल के आरव को एक वहां ने रौंद दिया, अस्पताल में भर्ती कराए गया, बच्चे की मौत हो गई, गाड़ी पुलिस के कब्जे में है ड्राइवर फरार है। शव को पोस्टमार्टम को भेजा गया है। घटना वेवसिटी थाना इलाके की है। @Uppolice pic.twitter.com/SycOYtOGHG
— Lokesh Rai (@lokeshRlive) November 28, 2024
ಇದನ್ನೂ ಓದಿ:ದುಡ್ಡು ಕೊಡದೇ ಪೆಟ್ರೋಲ್ ಪಂಪ್ನಿಂದ ಕಿಲಾಡಿ ಡ್ರೈವರ್ ಎಸ್ಕೇಪ್! ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದು ಹೇಗೆ ಗೊತ್ತಾ?
ಇತ್ತೀಚೆಗೆ ಹರಿಯಾಣದ ಜಜ್ಜರ್ ಜಿಲ್ಲೆಯ ಬಹದ್ದೂರ್ಗಢ್ನಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಪುಟ್ಟ ಮಗು ಸೇರಿ ಒಂದೇ ಕುಟುಂಬದ 8 ಮಂದಿ ಮೃತಪಟ್ಟಿರುವ ಘಟನೆ ನಡೆದಿದೆ.ಕೆಎಂಪಿ ಎಕ್ಸ್ಪ್ರೆಸ್ವೇ ಹೆದ್ದಾರಿಯಲ್ಲಿ ವೇಗವಾಗಿ ಬರುತ್ತಿದ್ದ ಕಾರೊಂದು ಮತ್ತೊಂದು ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ದುರಂತ ಸಂಭವಿಸಿದೆ ಎಂದು ತಿಳಿದುಬಂದಿದೆ.