Friday, 29th November 2024

Pre-Wedding: ಅಕ್ಕಿನೇನಿ ಮನೆಯಲ್ಲಿ ಅರಿಶಿನ ಶಾಸ್ತ್ರದ ಸಂಭ್ರಮ; ನಾಗ ಚೈತನ್ಯ-ಶೋಭಿತಾ‌ ಜೋಡಿಯ ಪ್ರೀ-ವೆಡ್ಡಿಂಗ್‌ ಫೋಟೊ ಶೂಟ್ ವೈರಲ್

ಚೆನ್ನೈ: ತೆಲುಗು ಚಿತ್ರರಂಗದ ಖ್ಯಾತ ನಟ ನಾಗ ಚೈತನ್ಯ (Naga Chaithanya) ಮತ್ತು ಶೋಭಿತಾ ಧೂಳಿಪಾಲ (Sobitha Dhulipala) ಅವರ ಮದುವೆ ದಿನಾಂಕವು ಈಗಾಗಲೇ ನಿಶ್ಚಯವಾಗಿದ್ದು, ಡಿಸೆಂಬರ್‌ 4ರಂದು ಈ ಜೋಡಿ ಹಸೆಮಣೆ ಏರಲಿದೆ. ಮದುವೆಗೆ ಎಲ್ಲಾ ರೀತಿಯ ತಯಾರಿ ನಡೆಯುತ್ತಿದ್ದು,ಈಗ ನವ ಜೋಡಿಯು (Pre-Wedding) ಅರಿಶಿನ ಶಾಸ್ತ್ರದ ಸಂಭ್ರಮದಲ್ಲಿದೆ.

ನಾಗ ಚೈತನ್ಯ ಮತ್ತು ಶೋಭಿತಾ ಧೂಳಿಪಾಲ ಅವರ ಅರಿಶಿನ ಶಾಸ್ತ್ರದ (Yellow Ceremony) ಸಮಾರಂಭವು ಇಂದು (ನ. 29) ನಡೆಯಿತು. ಎರಡೂ ಕುಟುಂಬಗಳ ಸದಸ್ಯರು ಮತ್ತು ಆಪ್ತರು ಅಲ್ಲಿ ಕಾಣಿಸಿಕೊಂಡಿದ್ದಾರೆ. ಇದೀಗ ಇಬ್ಬರು ಡಿಫರೆಂಟ್‌ ಲುಕ್‌ ನಲ್ಲಿ ಕಾಣಿಸಿಕೊಂಡಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ವಧು ಶೋಭಿತಾ ಧೂಳಿಪಾಲ ಅವರು ಅರಿಶಿನ ಶಾಸ್ತ್ರದ ವೇಳೆ ಎರಡು ಉಡುಪಿನೊಂದಿಗೆ ಕಾಣಿಸಿಕೊಂಡಿದ್ದಾರೆ. ಮೊದಲು ಅವರು ಫುಲ್‌ ಸ್ಲೀವ್‌ ಬ್ಲೌಸ್‌ ಇರುವ ಬ್ರೈಟ್‌ ರೆಡ್‌ ಸೀರೆ ಉಟ್ಟು, ಕಿವಿಗೆ ಚಮ್ಕಿ ಚೋಕರ್ (Chamki Choker) ಮತ್ತು ಹಣೆಗೆ ಮಾಂಗ್‌ ಟಿಕ್ಕ (Maang Tikka) ಬೈತಲೆ ಧರಿಸಿ ಫುಲ್‌ ಮಿಂಚಿದ್ದಾರೆ. ಶೋಭಿತಾ ಥೇಟ್ ಪೊನ್ನಿಯನ್‌ ಸೆಲ್ವನ್‌ ಚಿತ್ರದ ವನತಿ ಕ್ಯಾರೆಕ್ಟರ್‌ ನಂತೆಯೇ ಕಾಣುತ್ತಿದ್ದಾರೆ ಎಂದು ಅವರ ಅಭಿಮಾನಿಗಳು ಹೇಳಿದ್ದಾರೆ. ಶಾಸ್ತ್ರ ನಡೆಯುವಾಗ ಶೋಭಿತಾ ಹಳದಿ ಸೀರೆಯನ್ನು ತೊಟ್ಟಿದ್ದರು. ನಾಗ ಚೈತನ್ಯ ಕುರ್ತಾ ಪೈಜಾಮ ಸೆಟ್ ಧರಿಸಿ ಕಾಣಿಸಿಕೊಂಡಿದ್ದರಿಂದ ಕುಟುಂಬಸ್ಥರು ತಮಾಷೆಗೆ ಕಾಲೆಳೆದು ನಕ್ಕಿದ್ದಾರೆ. ಶಾಸ್ತ್ರದ ಕೆಲವು ಫೋಟೋ ಮತ್ತು ವಿಡಿಯೋಗಳು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ (Viral) ಆಗುತ್ತಿದೆ.

ಇತ್ತೀಚೆಗಿನ ಸಂದರ್ಶನವೊಂದರಲ್ಲಿ ಮಾತನಾಡಿದ್ದ ನಟ ನಾಗ ಚೈತನ್ಯ “ನಮ್ಮಿಬ್ಬರ ಭೇಟಿಯಾದ ನಂತರ ನಾನು ಅವರ ಕುಟುಂಬದ ಬಗ್ಗೆ ತಿಳಿದುಕೊಂಡೆ. ಅವರ ಮನೆಯ ಸದಸ್ಯರೆಲ್ಲರೂ ನಿಜಕ್ಕೂ ಫ್ರೆಂಡ್ಲಿಯಾಗಿದ್ದಾರೆ. ಅವರನ್ನು ಭೇಟಿಯಾಗುವುದು ಮತ್ತು ಅವರೊಂದಿಗೆ ಮಾತನಾಡುವುದು ನನಗೆ ಖುಷಿ ಕೊಡುತ್ತದ. ಮದುವೆಯ ದಿನಕ್ಕಾಗಿ ನಾನು ಕಾತರನಾಗಿದ್ದೇನೆ. ಅವರ ಮನೆಯಲ್ಲಿನ ಎಲ್ಲಾ ಹಬ್ಬ ಹರಿದಿನಗಳಿಗೂ ನಾನು ಹೋಗಿ ಬರುತ್ತಿದ್ದೇನೆ. ಎರಡು ಕುಟುಂಬಗಳು ಒಂದೆರಡು ಬಾರಿ ಒಟ್ಟಿಗೆ ಸೇರಿದ್ದೇವೆ. ಶೋಭಿತಾ ಕುಟುಂಬ ನನ್ನನ್ನು ಅವರ ಮನೆಯ ಮಗನೆಂದೇ ಭಾವಿಸಿದ್ದಾರೆ ” ಎಂದು ಹೇಳಿದ್ದರು.

ಈ ಹಿಂದೆ ನಟಿ ಸಮಂತಾರನ್ನು (Samantha) ಆರು ವರ್ಷಗಳ ಕಾಲ ಪ್ರೀತಿಸಿ ಮದುವೆಯಾಗಿದ್ದ ನಾಗ ಚೈತನ್ಯ ಅವರು ಮದುವೆಯಾಗಿ ನಾಲ್ಕು ವರ್ಷಗಳ ಬಳಿಕ ಡಿವೋರ್ಸ್ (Divorce) ಪಡೆದರು. ಆ ನಂತರ ನಾಗ ಚೈತನ್ಯ ಮತ್ತು ಶೋಭಿತಾ ಡೇಟ್ ಮಾಡುತ್ತಿರುವ ಫೋಟೋ ವೈರಲ್ ಆಗಿತ್ತು. ಈ ಬಗ್ಗೆ ಇಬ್ಬರು ಎಂದೂ ಮಾತನಾಡಿರಲಿಲ್ಲ. ಈಗ ಜೋಡಿ ಮದುವೆಗೆ ಸಿದ್ಧವಾಗಿದೆ. ಡಿಸೆಂಬರ್‌ 4ರಂದು ಹೈದರಾಬಾದ್ (Hyderabad) ನ ಅನ್ನಪೂರ್ಣ ಸ್ಟುಡಿಯೋದಲ್ಲಿ (Annapurna Studio) ಇಬ್ಬರ ವಿವಾಹವಾಗಲಿದೆ.

ಈ ಸುದ್ದಿಯನ್ನೂ ಓದಿ : Viral News: ನಾಗ ಚೈತನ್ಯನ ಬಗ್ಗೆ ಮೌನ ಮುರಿದ ಸಮಂತಾ – ಮಾಜಿ ಪತಿ ಕೊಟ್ಟಿದ್ದ ಗಿಫ್ಟ್‌ಗಳ ಬಗ್ಗೆ ನಟಿ ಹೇಳಿದ್ದೇನು?