ಮುಂಬೈ: ಬಿಗ್ ಬಾಸ್ ಇತ್ಯಾದಿ ಹಲವಾರು ಕಿರುತೆರೆ ರಿಯಾಲಿಟಿ ಶೋಗಳು ಹಾಗೂ ಕಾರ್ಯಕ್ರಮಗಳು ಸೇರಿದಂತೆ ಇಪ್ಪತ್ತಕ್ಕೂ ಹೆಚ್ಚು ಬಾಲಿವುಡ್(Bollywood) ಹಾಗೂ ಟಾಲಿವುಡ್ ಸಿನಿಮಾಗಳಲ್ಲಿ ನಟಿಸಿರುವ ಖ್ಯಾತಿ ನಟ ಅಜಾಜ್ ಖಾನ್ಗೆ (Ajaz Khan) ಸಲ್ಲುತ್ತದೆ. ಆದರೆ ಕಳೆದ 15 ವರ್ಷಗಳಿಂದ ಇಷ್ಟೆಲ್ಲಾ ಅವಕಾಶಗಳು ಸಿಕ್ಕಿದ್ದರೂ ಅಜಾಜ್ ಸಿನಿಮಾ ಅಥವಾ ಸೀರಿಯಲ್ ಅಥವಾ ಶೋಗಳಿಗಿಂತ ಹೆಚ್ಚಾಗಿ ಸುದ್ದಿ ಮಾಡಿದ್ದು ವಿವಾದಗಳಿಂದ. ಇಂತಹ ಅಜಾಜ್ ಖಾನ್ ಈ ಹಿಂದೆ ಡ್ರಗ್ಸ್ ಪ್ರಕರಣದಲ್ಲಿ(Drugs Case) ಬಂಧನಕ್ಕೊಳಗಾಗಿದ್ದರು.
ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಅಧಿಕಾರಿಗಳು ರಾಜಸ್ತಾನದಿಂದ ಮುಂಬೈಗೆ ಬಂದಿಳಿದ ಅಜಾಜ್ ಖಾನ್ ಅವರನ್ನು ವಿಮಾನ ನಿಲ್ದಾಣದಲ್ಲೇ ಬಂಧಿಸಿ ಕರೆದೊಯ್ದಿದ್ದರು. ಸಿನಿಮಾರಂಗದಲ್ಲಿ ಡ್ರಗ್ಸ್ ಪೆಡ್ಲಿಂಗ್ ಮಾಡುತ್ತಿದ್ದ ಪ್ರಮುಖ ಕಿಂಗ್ಪಿನ್ ಜೊತೆಗೆ ಅಜಾಜ್ ಖಾನ್ ನಿಕಟ ಸಂಪರ್ಕ ಹೊಂದಿದ್ದ ಇತನನ್ನು ಎನ್ಸಿಬಿ ಅಧಿಕಾರಿಗಳು ವಿಚಾರಣೆಯನ್ನು ನಡೆಸಿದ್ದರು. ಇದೀಗ ಅಜಾಜ್ ಖಾನ್ ಅವರ ಪತ್ನಿ ಫಾಲೋನ್ ಗುಲಿವಾಲಾ(Fallon Guliwala) ಕೂಡ ಪೊಲೀಸ್ ಅತಿಥಿಯಾಗಿದ್ದು, ಮಾದಕ ವಸ್ತುವನ್ನು ಆರ್ಡರ್ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಫಾಲೋನ್ ಗುಲಿವಾಲಾ ಅವರನ್ನು ಕಸ್ಟಮ್(Customs) ಅಧಿಕಾರಿಗಳು ಬಂಧಿಸಿದ್ದಾರೆ.
ಅಧಿಕಾರಿಗಳು ಗುಲಿವಾಲಾ ಅವರನ್ನು ವಶಪಡಿಸಿಕೊಂಡ ನಂತರ ಆಕೆಯ ಜೋಗೇಶ್ವರಿ ಮನೆಯಲ್ಲೂ ಶೋಧ ನಡೆಸಿದ್ದು, ವಿವಿಧ ಮಾದಕವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ಇನ್ನು ಈ ಹಿಂದೆ ಮುಂಬೈನ ಅಂಧೇರಿಯಲ್ಲಿರುವ ನಟ ಎಜಾಜ್ ಖಾನ್ ಅವರ ಕಚೇರಿಯಲ್ಲಿ ಕಸ್ಟಮ್ಸ್ ಇಲಾಖೆಯಿಂದ ಶೋಧ ನಡೆಸಿ, ಎಜಾಜ್ ಖಾನ್ ಅವರ ಸಿಬ್ಬಂದಿಯನ್ನು ಎನ್ಡಿಪಿಎಸ್ ಕಾಯ್ದೆಯಡಿ ಬಂಧಿಸಲಾಗಿತ್ತು. ನಂತರ ಕಸ್ಟಮ್ ಇಲಾಖೆಗೆ ಈ ಪ್ರಕರಣವನ್ನು ವರ್ಗಾವಣೆ ಮಾಡಲಾಗಿತ್ತು. ಅಂದು ಕಸ್ಮಮ್ಸ್ ಇಲಾಖೆ ಹಂಚಿಕೊಂಡ ಮಾಹಿತಿಯ ಪ್ರಕಾರ, ಸುಮಾರು 100 ಗ್ರಾಂ ಎಂಡಿಗೆ ಆರ್ಡರ್ ಮಾಡಿದ ಎಜಾಜ್ ಖಾನ್ ಸಿಬ್ಬಂದಿ ಅವರ ಕಚೇರಿ ವಿಳಾಸ ನೀಡಿದರು. ಈ ಆರ್ಡರ್ ಅನ್ನು ಯುರೋಪ್ನಿಂದ ಆಮದು ಮಾಡಿಕೊಳ್ಳಲಾಗಿತ್ತು. ಅದರ ಬೆಲೆ ಸುಮಾರು 30 ರಿಂದ 35 ಲಕ್ಷ ಎಂದು ಹೇಳಲಾಗಿತ್ತು.
ನಿಷೇಧಿತ ಔಷಧಿಗಳ ಪ್ಯಾಕೇಜ್ ವಿತರಣೆಗೆ ಸಂಬಂಧಿಸಿದಂತೆ ಕಸ್ಮಮ್ಸ್ ಅಧಿಕಾರಿಗಳು ಅದನ್ನು ಟ್ರ್ಯಾಕ್ ಮಾಡಲು ಪ್ರಾರಂಭಿಸಿದ್ದರು. ಈ ಸರಕುಗಳನ್ನು ಬುಕ್ ಮಾಡಿದ ವ್ಯಕ್ತಿಯ ಮೇಲೆ ಅಧಿಕಾರಿಗಳು ನಿರಂತರವಾಗಿ ಕಣ್ಣಿಟ್ಟಿದ್ದರು ಮತ್ತು ಅದು ನಟನ ಕಚೇರಿಯಲ್ಲಿ ಕೆಲಸ ಮಾಡುವ ಸೂರಜ್ ಗೌರ್ ಎಂದು ತಿಳಿದುಬಂದಿತ್ತು. ಆ ಬಳಿಕ ಪೊಲೀಸರು ಸೂರಜ್ ಗೌರ್ನನ್ನು ಬಂಧಿಸಿದ್ದರು.
ಇನ್ನು ಇಂಥದ್ದೆ ಪ್ರಕರಣದಲ್ಲಿ ಎಜಾಜ್ ಹೆಸರು ಕೇಳಿ ಬರುತ್ತಿರುವುದು ಇದೇ ಮೊದಲಲ್ಲ. ಅಜಾಜ್ನನ್ನು 2021ರಲ್ಲಿ ಮುಂಬೈ ವಿಮಾನ ನಿಲ್ದಾಣದಲ್ಲಿ ಮಾದಕವಸ್ತು ಪ್ರಕರಣದಲ್ಲಿ ಬಂಧಿಸಲಾಗಿತ್ತು ಮತ್ತು 2023ರಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾಗಿದೆ. ಇದು ಮಾತ್ರವಲ್ಲದೆ 2018ರಲ್ಲಿ ನವಿ ಮುಂಬೈ ಆಂಟಿ ನಾರ್ಕೋಟಿಕ್ಸ್ ಸೆಲ್ ಅವರನ್ನು ಹೋಟೆಲ್ನಲ್ಲಿ ಎಕ್ಸ್ಟಿಸಿ ಟ್ಯಾಬ್ಲೆಟ್ಗಳೊಂದಿಗೆ ಬಂಧಿಸಿತ್ತು.
ಸದ್ಯ ಈ ಬೆಳವಣಿಗೆ ಕುರಿತು ಪೋಸ್ಟ್ ಮಾಡಿರುವ ಎಜಾಜ್ ಖಾನ್ ಇಲ್ಲಿಯವರೆಗೂ ನನ್ನನ್ನು ಟಾರ್ಗೆಟ್ ಮಾಡಲಾಗುತ್ತಿತ್ತು, ಇದೀಗ ನನ್ನ ಕುಟುಂಬದ ಮೇಲೆ ಇಲ್ಲಸಲ್ಲದ ಅಪವಾದಗಳನ್ನು ಮಾಡಲಾಗುತ್ತಿದೆ. ಸತ್ಯ ಹೇಳುವುದು ಅಪರಾಧವೇ ಎಂಬ ಪ್ರಶ್ನೆ ನನ್ನನ್ನು ಕಾಡುತ್ತಿದೆ.. ಸೂಕ್ತ ಸಾಕ್ಷ್ಯಾಧಾರಗಳಿಲ್ಲದ್ದಿದರು ನನ್ನ ಮೇಲೆ ಆರೋಪವನ್ನು ಹೊರಿಸುತ್ತಿದ್ದಾರೆ. ಯಾರದೋ ಒತ್ತಡಕ್ಕೆ ಮಣಿದು ಸರ್ಕಾರ ಈ ರೀತಿ ನಡೆದುಕೊಳ್ಳುತ್ತಿರುವುದು ಒಳ್ಳೆಯದಲ್ಲ ಎಂದು ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.
ಈ ಸುದ್ದಿಯನ್ನೂ ಓದಿ: Viral Video: ನೆಟ್ಟಿಗರಿಗೆ ಶಾಕ್ ಕೊಟ್ಟ ಪಾನ್ ದೋಸಾ! ರೆಸಿಪಿ ಕಂಡು ದೋಸೆಪ್ರಿಯರು ಫುಲ್ ಗರಂ!