ಸಾರ್ವಜನಿಕರಿಗೆ ಸಂಬಂಧಪಟ್ಟ ವಸ್ತುಗಳನ್ನು ಹಾನಿಗೊಳಿಸುವ ಅಧಿಕಾರ ಯಾರಿಗೂ ಇಲ್ಲ. ಅಂತಹದರಲ್ಲಿ ಇಲ್ಲೊಬ್ಬ ವಿಮಾನ ಪ್ರಯಾಣಿಕ ವಿಮಾನದಲ್ಲಿ ತನ್ನ ಸೀಟನ್ನು ಧ್ವಂಸ ಮಾಡಿದ ಘಟನೆ ನಡೆದಿದೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ. ಈ ಆಘಾತಕಾರಿ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಅನೇಕರ ಗಮನ ಸೆಳೆದಿದ್ದು, ಬಿಸಿ ಚರ್ಚೆಗಳನ್ನು ಹುಟ್ಟುಹಾಕಿದೆ.
ರೆಡ್ಡಿಟ್ನಲ್ಲಿ ಹಂಚಿಕೊಳ್ಳಲಾದ ಈ ವಿಡಿಯೊದಲ್ಲಿ, ಪ್ರಯಾಣಿಕನು ತನ್ನ ಸೀಟಿನ ಮೇಲೆ ನಿಂತು ಪದೇ ಪದೇ ಕಾಲಿನಿಂದ ತುಳಿದಿದ್ದಾನೆ. ಇದು ಸಹ ಪ್ರಯಾಣಿಕರನ್ನು ದಿಗ್ಭ್ರಮೆಗೊಳಿಸಿದೆಯಂತೆ.ಅದು ಅಲ್ಲದೇ ಸೀಟಿನ ಮೇಲೆ ಹಾರುವ ಮೂಲಕ ಅದನ್ನು ಕಿತ್ತುಹಾಕಲು ಪ್ರಯತ್ನಿಸಿದ್ದಾನೆ. ಆಸ್ಟಿನ್ನಿಂದ ಲಾಸ್ ಏಂಜಲೀಸ್ಗೆ ತೆರಳುತ್ತಿದ್ದ ಯುನೈಟೆಡ್ ಏರ್ಲೈನ್ಸ್ ವಿಮಾನದಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ಈ ವಿಡಿಯೊವನ್ನು ಸಹ ಪ್ರಯಾಣಿಕ ಜಿನೊ ಗಲೋಫಾರೊ ಎನ್ನುವವರು ರೆಕಾರ್ಡ್ ಮಾಡಿದ್ದಾರೆ.
Testing out the new lie-flat seats in United Economy
byu/smokes_weed inShittyaskflying
ಗಲೋಫಾರೊ ತಿಳಿಸಿದ ಪ್ರಕಾರ, ಫ್ಲೈಟ್ ಅಟೆಂಡೆಂಟ್ ಒಂದೆರಡು ಬಾರಿ ಅಲ್ಲೇ ನಡೆದುಕೊಂಡು ಹೋದರು, ಮತ್ತು ಯಾರೂ ಏನೂ ಮಾಡಲಿಲ್ಲ” ಎಂದು ಹೇಳಿದ್ದಾರೆ. ನಂತರ ಪರಿಸ್ಥಿತಿ ಉಲ್ಬಣಗೊಳ್ಳುತ್ತಿದ್ದಂತೆ, ಗಲೋಫಾರೊ ಹಾಗೂ ಇತರ ಪ್ರಯಾಣಿಕರು ಆತನನ್ನು ತಡೆಯಲು ವ್ಯಕ್ತಿಯ ಕೈ ಮತ್ತು ಕಾಲುಗಳನ್ನು ಜಿಪ್ ಟೈಗಳನ್ನು ಬಳಸಿ ಕಟ್ಟಿಹಾಕಿದ್ದಾರಂತೆ. ನಂತರ ಅವನನ್ನು ಕುರ್ಚಿಯಲ್ಲಿ ಕೂರಿಸಿ ಸೀಟ್ ಬೆಲ್ಟ್ ಹಾಕಿದ್ದಾರೆ. ವಿಮಾನವು ಲಾಸ್ ಏಂಜಲೀಸ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಆ ವ್ಯಕ್ತಿಯನ್ನು ಸ್ಥಳೀಯ ಕಾನೂನು ಅಧಿಕಾರಿಗಳಿಗೆ ಹಸ್ತಾಂತರಿಸಲಾಯಿತು ಎಂದು ತಿಳಿಸಿದ್ದಾರೆ.
ಯುನೈಟೆಡ್ ಏರ್ಲೈನ್ಸ್ ವಕ್ತಾರರು ಈ ಘಟನೆಯನ್ನು ದೃಢಪಡಿಸಿದ್ದು, ಇಂತಹ ಪ್ರಯಾಣಿಕರು ಭವಿಷ್ಯದಲ್ಲಿ ವಿಮಾನಗಳಲ್ಲಿ ಪ್ರಯಾಣಿಸದಂತೆ ನಿಷೇಧಿಸಲಾಗಿದೆ ಎಂದು ಹೇಳಿದ್ದಾರೆ. ಹಾಗೂ “ಪರಿಸ್ಥಿತಿಯನ್ನು ಪರಿಹರಿಸಲು ಸಹಾಯ ಮಾಡಿದ್ದಕ್ಕಾಗಿ ಮತ್ತು ವಿಮಾನದಲ್ಲಿದ್ದ ಪ್ರತಿಯೊಬ್ಬರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಕೆಲಸ ಮಾಡಿದ್ದಕ್ಕಾಗಿ ನಾವು ನಮ್ಮ ಸಿಬ್ಬಂದಿಗೆ ಧನ್ಯವಾದಗಳನ್ನು ಅರ್ಪಿಸುತ್ತೇವೆ” ಎಂದು ಯುನೈಟೆಡ್ ಏರ್ಲೈನ್ಸ್ ವಕ್ತಾರರು ತಿಳಿಸಿದ್ದಾರೆ.
ಇದನ್ನೂ ಓದಿ:ಮನೆಯ ಹೊರಗೆ ಆಟವಾಡುತ್ತಿದ್ದ 3 ವರ್ಷದ ಕಂದನ ಜೀವ ತೆಗೆದ ಟ್ರಕ್; ವಿಡಿಯೊ ಇದೆ
ಕಾಮೆಂಟ್ ವಿಭಾಗದಲ್ಲಿ, ರೆಡ್ಡಿಟ್ ಬಳಕೆದಾರರು ತಮ್ಮ ಪ್ರತಿಕ್ರಿಯೆಗಳನ್ನು ಹಂಚಿಕೊಂಡಿದ್ದಾರೆ. ಒಬ್ಬ ಬಳಕೆದಾರರು ಅಪನಂಬಿಕೆಯನ್ನು ವ್ಯಕ್ತಪಡಿಸಿ, “ಸಿಬ್ಬಂದಿ ಅದನ್ನು ಗಮನಿಸಲಿಲ್ಲವೇಕೆ? ಇದು ಹುಚ್ಚುತನ.” ಎಂದಿದ್ದಾರೆ. ಮತ್ತೊಂದು ಕಾಮೆಂಟ್ನಲ್ಲಿ “ನಾನು ವಿಮಾನದಲ್ಲಿ ಇಷ್ಟು ಗೊಂದಲಮಯವಾದದ್ದನ್ನು ನೋಡಿಲ್ಲ” ಎಂದಿದ್ದಾರೆ. ಇದರ ನಡುವೆ ಕೆಲವರು ಗಲೋಫಾರೊ ಮತ್ತು ಅವರ ಸಹ ಪ್ರಯಾಣಿಕರ ಪ್ರಯತ್ನಗಳನ್ನು ಹೊಗಳಿದ್ದಾರೆ.