ಪಾಟ್ನಾ: ಬದುಕಲು ಹಲವಾರು ದಾರಿಗಳಿರುತ್ತವೆ. ಯಾವ ಕೆಲಸವನ್ನಾದರೂ ಶ್ರದ್ಧೆಯಿಂದ ಮಾಡಬೇಕು ಎಂಬುದಕ್ಕೆ ಇಲ್ಲೊಬ್ಬ ವ್ಯಕ್ತಿ ಮಾದರಿಯಾಗಿದ್ದಾನೆ. ವೃತ್ತಿಯಲ್ಲಿ ಶಿಕ್ಷಕನಾದರೂ ಫುಡ್ ಡೆಲಿವರಿ (Food delivery) ಬಾಯ್ ಆಗಿ ಕೆಲಸ ಮಾಡುತ್ತಿರುವುದು ಎಲ್ಲರ ಗಮನ ಸೆಳೆದಿದೆ. ಹೌದು ಬಿಹಾರದ (Bihar) ಭಗಲ್ಪುರ ಜಿಲ್ಲೆಯ ಸರ್ಕಾರಿ ಶಾಲೆಯೊಂದರಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿರುವ ಅಮಿತ್ ಸಿನ್ಹಾ ಕುಟುಂಬ ನಿರ್ವಹಣೆಗಾಗಿ ಫುಡ್ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದಾರೆ (Viral News).
बिहार के सरकारी स्कूल में कार्यरत PT टीचर का वेतन इतना ही है की मुश्किल से अपना पेट पाल सके इस महंगाई के दौर में परिवार की पेट तो दूर की बात ..तो बन गये डिलीवरी बॉय .!
— Mukesh singh (@Mukesh_Journo) November 26, 2024
कहानी भागलपुर के अमित की है जो दिन शिक्षक की भूमिका निभाते है और आधी रात तक डिलीवरी बॉय ..!#Bihar… pic.twitter.com/kwWXNbfc5s
ಅಮಿತ್ ಸಿನ್ಹಾ ಭಗಲ್ಪುರ ಜಿಲ್ಲೆಯ ಹೈಸ್ಕೂಲ್ವೊಂದರಲ್ಲಿ ದೈಹಿಕ ಶಿಕ್ಷಕರಾಗಿದ್ದಾರೆ. ಅವರ ಮಾಸಿಕ ಸಂಬಳ 8,000 ರೂ. ಆಗಿದ್ದು, ಕುಟುಂಬ ನಿರ್ವಹಣೆ ಬೇರೆ ದಾರಿ ಹುಡುಕಿಕೊಳ್ಳುವುದು ಅನಿವಾರ್ಯವಾಗಿ ಈ ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿದ್ದಾರೆ. ಪ್ರತಿನಿತ್ಯ ಸಂಜೆ 5 ರ ವರೆಗೆ ಶಾಲೆಗೆ ಹೋಗುವ ಅವರು ನಂತರ ಹಿಂದುರುಗಿ ಮಧ್ಯರಾತ್ರಿ 1ಗಂಟೆವರೆಗೆ ಫುಡ್ ಡೆಲಿವರಿ ಮಾಡುತ್ತಾರೆ.
ಖಾಸಗಿ ಚಾನೆಲ್ ಒಂದರಲ್ಲಿ ಮಾತನಾಡಿದ ಅವರು ನಾನು 2019 ರಲ್ಲಿ ಪರೀಕ್ಷೆ ಬರೆದಿದ್ದೆ ಮತ್ತು ಫೆಬ್ರವರಿ 2020 ರಲ್ಲಿ ಫಲಿತಾಂಶಗಳು ಹೊರಬಂದವು. ಅದರಲ್ಲಿ 100 ಕ್ಕೆ 74 ಅಂಕಗಳನ್ನು ಪಡೆದಿದ್ದೇನೆ. ಹಿಂದೆ, ನಾನು ಖಾಸಗಿ ಶಾಲೆಯಲ್ಲಿ ಕೆಲಸ ಮಾಡಿದ್ದೆ, ಆದರೆ ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ , ಕೆಲಸ ಕಳೆದುಕೊಂಡೆ. ಆದರೆ ಕೊನೆಗೂ ನನ್ನ ಪ್ರಯತ್ನದ ಫಲವಾಗಿ 2022ರಲ್ಲಿ ಸರ್ಕಾರಿ ಶಾಲೆಯಲ್ಲಿ ಕೆಲಸ ಸಿಕ್ಕಿತು, ಆದರೆ ನನ್ನ ಸಂಬಳವು ಕೇವಲ 8,000 ರೂ. ಏಕೆಂದರೆ ನಾನು ಅರೆಕಾಲಿಕ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದೇನೆ. ಜೀವನ ನಡೆಸುವುದು ತುಂಬಾ ಕಷ್ಟವಾಗಿದೆ. ಫೆಬ್ರವರಿಯಿಂದ ಮೇ ತಿಂಗಳವರೆಗೆ ವೇತನವೂ ಇರಲಿಲ್ಲ. ಸ್ನೇಹಿತ ಬಳಿ ಸಾಲ ಮಾಡುತ್ತಿದ್ದೆ. ಹಿಂದಿರುಗಿಸಲೂ ಹಣವಿರುತ್ತಿರಲಿಲ್ಲ ಎಂದು ಕಷ್ಟದ ದಿನಗಳನ್ನು ನೆನಪಿಸಿಕೊಂಡಿದ್ದಾರೆ.
ಹೆಂಡತಿಯ ಬಗ್ಗೆ ಮಾತನಾಡುತ್ತಾ, ನನ್ನ ಪತ್ನಿಯಿಂದಲೇ ನಾನು ಇವತ್ತು ನೆಮ್ಮದಿಯಿಂದಿದ್ದೇನೆ. ಅವಳೇ ನನಗೆ ಈ ಕೆಲಸ ಮಾಡಲು ಸಲಹೆ ನೀಡಿದ್ದಳು. ಇಲ್ಲಿ ಯಾವುದೇ ಸಮಯ ಮಿತಿ ಇರುವುದಿಲ್ಲ . ಸಂಜೆಯಿಂದ ಮಧ್ಯರಾತ್ರಿ ವರೆಗೂ ಕೆಲಸ ಮಾಡುತ್ತೇನೆ. ಮನೆಯಲ್ಲಿ ವಯಸ್ಸಾದ ತಾಯಿ ಇದ್ದಾರೆ. ನನ್ನನ್ನೇ ನಂಬಿರುವ ಹೆಂಡತಿಯಿದ್ದಾಳೆ ಅವರೆಲ್ಲರನ್ನೂ ಚೆನ್ನಾಗಿ ನೋಡಿಕೊಳ್ಳಬೇಕು ಅದಕ್ಕಾಗಿ ನಾನು ಕಷ್ಟಪಟ್ಟು ದುಡಿಯಲೇ ಬೇಕು ಎಂದು ಹೇಳಿದ್ದಾರೆ.
ವಾಮ ಮಾರ್ಗದಲ್ಲಿ ಹಣ ಗಳಿಸುವವರ ಮಧ್ಯೆ ಅಮಿತ್ ಸಿನ್ಹಾ ಅಂತಹ ವ್ಯಕ್ತಿಗಳು ಸಮಾಜಕ್ಕೆ ಮಾದರಿಯಾಗಿ ನಿಂತಿದ್ದಾರೆ. ಮನಸ್ಸಿದ್ದರೆ ಮಾರ್ಗ ಇದ್ದೇ ಇದೆ ಎನ್ನುವುದನ್ನು ಸಾಬೀತು ಪಡಿಸಿದ್ದಾರೆ.
ಈ ಸುದ್ದಿಯನ್ನೂ ಓದಿ : Viral News: ಕಚೇರಿಯಲ್ಲಿ ನಿದ್ದೆ ಮಾಡಿ 40 ಲಕ್ಷ ರೂ. ಗಳಿಸಿದ ಭೂಪ! ಚೀನಾ ಉದ್ಯೋಗಿಯ ಈ ಸುದ್ದಿ ಭಾರೀ ವೈರಲ್