ಇಂಡಿ: ಪಟ್ಟಣದ ಸಿಂದಗಿ ರಸ್ತೆಯ ಶ್ರೀಧಾನಮ್ಮಾದೇವಿ ದೇವಸ್ಥಾನದಲ್ಲಿ ೩ನೇವರ್ಷದ ಜಾತ್ರಾಮಹೋತ್ಸವ ಡಿ.1೧ ರಂದು ಅದ್ದೂರಿಯಾಗಿ ಜರುಗಲಿದೆ ಎಂದು ಕಮೀಟಿ ಅಧ್ಯಕ್ಷ ಅನೀಲಪ್ರಸಾದ ಏಳಗಿ ಹೇಳಿದರು.
ಧಾನಮ್ಮಾದೇವಿ ದೇವಸ್ಥಾನದ ಆವರಣದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಗುಡ್ಡಾಪೂರ ಧಾನಮ್ಮಾದೇವಿ ಬೇಡದ ಭಕ್ತರಿಗೆ ಇಷ್ಠಾರ್ಥಿ ಪೂರೈಸುವ ದೇವತೆ , ಇಂದು ಇಂಡಿ ತಾಲೂಕಿನಲ್ಲಿ ಅನೇಕ ಭಕ್ತಾದಿಗಳು ಹೊಂದಿದ್ದಾರೆ. ಭಕ್ತರ ಸದಾಶೇಯದ ಮೇರೆಗೆ ಇಂಡಿ ನಗರದಲ್ಲಿ ದೇವಸ್ಥಾನ ನಿರ್ಮಿಸಿ ಭಕ್ತರಿಗೆ ದಿವ್ಯದರ್ಶನ ಪಡೆಯಲು
ಅನುಕೂಲ ಮಾಡಲಾಗಿದೆ ಡಿ೧ ರಂದು ಜಾತ್ರಾನಿಮಿತ್ಯ ಬೆಳಿಗ್ಗೆ ೬ ಗಂಟೆಗೆ ರುದ್ರಾಭಿಷೇಕ ತದನಂತರ ೧೦-೦೦ ಗಂಟಗೆ ಪಲ್ಲಕ್ಕಿ ಉತ್ಸವ ಸಕಲ ವಾದ್ಯ ವೈಭೋಗದೊಂದಿಗೆ ಜರುಗಲಿದೆ. ಅದೇ ದಿನ ಸಾಯಂಕಾಲ ೬-೦೦ ಗಂಟಗೆಕಾರ್ತಿಕ ದೀಪೋತ್ಸವ ಕಾರ್ಯಕ್ರಮ ನಿರಂತರ ಅನ್ನಪ್ರಸಾದ ಹಾಗೂ ೫-೦೦ ಗಂಟೆಗೆ ಧರ್ಮಸಭೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಧರ್ಮ ಸಭೆ ಪಾವನ ಸಾನಿಧ್ಯ ಶಿರಶ್ಯಾಡ ಶ್ರೀಮಠದ ಅಭಿನವಮುರುಘೇಂದ್ರ ಶಿವಾಚಾರ್ಯರರು, ಇಂಡಿ ಸಿದ್ಧಾರೂಢ ಮಠದ ಡಾ. ಸ್ವರೂಪಾ ನಂದ ಶ್ರೀಗಳು, ಅರ್ಜುಣಿಯ ರೇಣುಕಾ ಶಿವಾಚಾರ್ಯರು ವಹಿಸಲ್ಲಿದ್ದು. ಅಧ್ಯಕ್ಷತೆ ಸಂಸದ ರಮೇಶ ಜಿಗಜಿಣಗಿ, ಉದ್ಘಾಟನೆ ಶಾಸಕ ಯಶವಂತರಾಯಗೌಡ ಪಾಟೀಲ, ಧಾನ್ಮದೇವಿ ಕಮೀಟಿಯ ಅಧ್ಯಕ್ಷ ಅನೀಲಪ್ರಸಾದ ಏಳಗಿ ಬಿಜೆಪಿ ಮುಖಂಡಕಾಸುಗೌಡ ಬಿರಾದಾರ, ಬಿ.ಡಿ ಪಾಟೀಲ ಹಾಗೂ ವಿವಿಧ ಪಕ್ಷಗಳ ರಾಜಕೀಯ ಮುಖಂಡರು ಗಣ್ಯರು ಆಗಮಿಸಲ್ಲಿದ್ದಾರೆ. ಜಾತ್ರಾಮಹೋತ್ಸವಕ್ಕೆ ಸಾರ್ವಜನಿಕರು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ದರ್ಶನ ಪಡೆಯಲು ತಿಳಿಸಿದ್ದಾರೆ.
ಮುತ್ತು ದೇಸಾಯಿ, ಜಗದೀಶ ಕ್ಷತ್ರಿ, ಕಾಸುಗೌಡ ಬಿರಾದಾರ,ಅರವಿಂದ ಹಂಜಗಿ, ರಮೇಶ ರಾಠೋಡ, ಜ್ಞಾನೇಶಪವಾರ ಸೇರಿದಂತೆ ಜಾತ್ರಾಕಮೀಟಿ ಸದಸ್ಯರು ಉಪಸ್ಥಿತರಿದ್ದರು.
ಇದನ್ನೂ ಓದಿ: # Vijayapura-Siddheshwar