Saturday, 30th November 2024

New Rule: ನಕಲಿ ಒಟಿಪಿಗೆ ಬೀಳಲಿದೆ ತಡೆ, ಕ್ರೆಡಿಟ್‌ ಕಾರ್ಡ್‌ ಪಾಯಿಂಟ್‌ಗೆ ಕತ್ತರಿ; ಡಿಸೆಂಬರ್‌ನಲ್ಲಿ ಏನೆಲ್ಲ ಬದಲಾವಣೆ?

New Rule

ನೋಡನೋಡುತ್ತಿದ್ದಂತೆಯೇ 2024ರ ವರ್ಷದ ಕೊನೆಯ ತಿಂಗಳು ಬಂದೇ ಬಿಟ್ಟಿತು. ಈ ವರ್ಷ ದೇಶ, ವಿದೇಶಗಳಲ್ಲಿ ಆದ ಹಲವು ಬದಲಾವಣೆಗಳು (New Rule), ಜಾರಿಗೆ ತಂದಿರುವ ನಿಯಮಗಳು ಸಾಮಾನ್ಯರ ಜನ ಜೀವನದ ಮೇಲೂ ಪರಿಣಾಮ ಬೀರಿದೆ. ಡಿಸೆಂಬರ್ 1ರಿಂದ ಹಲವು ಪ್ರಮುಖ ಬದಲಾವಣೆಗಳು ಅಗಲಿದ್ದು, ಇದು ದೇಶಾದ್ಯಂತ ವಿವಿಧ ಕ್ಷೇತ್ರಗಳ ಮೇಲೆ ಪರಿಣಾಮ ಬೀರಲಿದೆ.

ನಕಲಿ ಒಟಿಪಿ (Fake otp) ತಡೆಯಲು ಮಾರ್ಪಾಡುಗಳು, ಮಾಲ್ಡೀವ್ಸ್ ಪ್ರವಾಸೋದ್ಯಮ (Maldives Tourist Fee) ನಿಯಮಗಳಲ್ಲಿನ ಬದಲಾವಣೆ ಮತ್ತು ಕೆಲವು ಬ್ಯಾಂಕ್‌ಗಳು ತಮ್ಮ ಕ್ರೆಡಿಟ್ ಕಾರ್ಡ್ (Credit card rule) ನಿಯಮಗಳನ್ನು ನವೀಕರಿಸುವುದರಿಂದ ಇದು ಜನಸಾಮಾನ್ಯರ ಜೀವನದ ಮೇಲೆ ಪರಿಣಾಮ ಬಿರುವುದು ಬಹುತೇಕ ಖಚಿತ.

ಆಡಳಿತ ಮತ್ತು ಬಳಕೆದಾರರ ಸುರಕ್ಷತೆಯನ್ನು ಸುಧಾರಿಸುವ ಗುರಿಯನ್ನು ಹೊಂದಿರುವ ಈ ಹೊಸ ನವೀಕರಣಗಳಿಗೆ ವ್ಯಕ್ತಿಗಳು ಮತ್ತು ವ್ಯವಹಾರಗಳನ್ನು ಹೊಂದಿಸುವುದು ಅಗತ್ಯವಾಗಿದೆ.
ಡಿಸೆಂಬರ್ 1ರಿಂದ ಆಗಲಿರುವ ಹಲವು ಪ್ರಮುಖ ಬದಲಾವಣೆಗಳು ಇಂತಿವೆ.

New Rule

ಟಿಆರ್‌ಎಐನ ಹೊಸ ನಿಯಮ

ಮೊಬೈಲ್ ಬಳಕೆಯನ್ನು ಸುರಕ್ಷಿತಗೊಳಿಸಲು ಸಂಶಯಾಸ್ಪದ ಒಟಿಪಿಗಳನ್ನು ತಡೆಯಲು ಭಾರತದ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ (TRAI) ಸಂದೇಶ ಪತ್ತೆಹಚ್ಚುವಿಕೆಯನ್ನು ಒದಗಿಸುವಂತೆ ಟೆಲಿಕಾಂ ಕಂಪನಿಗಳನ್ನು ಕೇಳಿದೆ. ಈ ಆದೇಶವನ್ನು ಅನುಸರಿಸಲು ನವೆಂಬರ್ 30ರ ಗಡುವು ನೀಡಲಾಗಿದೆ. ಇದು ಈಗ ಡಿಸೆಂಬರ್ 1ರಿಂದ ಜಾರಿಗೆ ಬರಲಿದೆ.

ಮಾಲ್ಡೀವ್ಸ್ ನಿರ್ಗಮನ ಶುಲ್ಕ ಹೆಚ್ಚಳ

ಅತ್ಯಂತ ಜನಪ್ರಿಯ ಪ್ರವಾಸಿ ತಾಣಗಳಲ್ಲಿ ಒಂದಾದ ಮಾಲ್ಡೀವ್ಸ್ ದ್ವೀಪಸಮೂಹಕ್ಕೆ ಭೇಟಿ ನೀಡುವ ಪ್ರವಾಸಿಗರಿಗೆ ವಿಧಿಸುವ ಶುಲ್ಕವನ್ನು ಹೆಚ್ಚಿಸುತ್ತಿದೆ. ಎಕಾನಮಿ- ಕ್ಲಾಸ್ ಪ್ರಯಾಣಿಕರಿಗೆ 2,532ರೂ. ನಿಂದ 4,220 ರೂ. ಬಿಸ್ನೆಸ್ ವರ್ಗದ ಪ್ರಯಾಣಿಕರಿಗೆ 5,064 ರೂ. ನಿಂದ 10,129 ರೂ. ಗೆ ನಿರ್ಗಮನ ಶುಲ್ಕ ಹೆಚ್ಚಳವಾಗಲಿದೆ. ಪ್ರಥಮ ದರ್ಜೆಯ ಪ್ರಯಾಣಿಕರು ಪ್ರಸ್ತುತ 20,257 ರೂ. ಪಾವತಿಸುತ್ತಿದ್ದು, ಇದರಲ್ಲಿ 7,597 ರೂ. ಹೆಚ್ಚಳವಾಗಲಿದ್ದು, ಖಾಸಗಿ ಜೆಟ್ ಪ್ರಯಾಣಿಕರಿಗೆ 10,129 ರೂ. ನಿಂದ 40,515 ರೂ. ವರೆಗೆ ಹೆಚ್ಚಳವಾಗಲಿದೆ.

ಗ್ಯಾಸ್ ಸಿಲಿಂಡರ್ ಬೆಲೆ

ಪ್ರತಿ ತಿಂಗಳ ಆರಂಭದಲ್ಲಿ ಗ್ಯಾಸ್ ಸಿಲಿಂಡರ್ ದರ ಹೆಚ್ಚಳವಾಗಲಿದ್ದು, ತೈಲ ಮಾರುಕಟ್ಟೆ ಕಂಪೆನಿಗಳು ಅಕ್ಟೋಬರ್‌ನಲ್ಲಿ 19 ಕೆ.ಜಿ. ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆಯನ್ನು 48 ರೂ. ಹೆಚ್ಚಿಸಿವೆ. ಆದರೆ ಗೃಹಬಳಕೆಯ ಗ್ಯಾಸ್ ಸಿಲಿಂಡರ್‌ಗಳ ಬೆಲೆಗಳು ಬದಲಾಗದೆ ಉಳಿದಿವೆ. ಈ ಬಾರಿ ಬೆಲೆ ಬದಲಾಗುವ ನಿರೀಕ್ಷೆ ಇದೆ.

New Rule

ಕ್ರೆಡಿಟ್ ಕಾರ್ಡ್

ಡಿಸೆಂಬರ್ 1ರಿಂದ ಫ್ಲೈಟ್‌, ಹೊಟೇಲ್‌ಗಳಿಗೆ ರಿಡೀಮ್ ಮಾಡಬಹುದಾದ ರಿವಾರ್ಡ್ ಪಾಯಿಂಟ್‌ಗಳ ಸಂಖ್ಯೆಯನ್ನು ಯಸ್ ಬ್ಯಾಂಕ್ ಮಿತಿಗೊಳಿಸುತ್ತದೆ. ಎಚ್‌ಡಿಎಫ್‌ಸಿ ಬ್ಯಾಂಕ್ ತನ್ನ ರೆಗಾಲಿಯಾ ಕ್ರೆಡಿಟ್ ಕಾರ್ಡ್‌ನ ಬಳಕೆದಾರರಿಗೆ ಲೌಂಜ್ ಪ್ರವೇಶ ನಿಯಮಗಳನ್ನು ಸಹ ಬದಲಾಯಿಸುತ್ತಿದೆ.

Chinmoy Krishna Das: ಚಿನ್ಮಯ್‌ ದಾಸ್‌ ಸೇರಿ ಹಲವು ಹಿಂದೂ ಮುಖಂಡರ ಬ್ಯಾಂಕ್‌ ಖಾತೆ ಸ್ಥಗಿತ; BFIUನಿಂದ ಮಹತ್ವದ ಆದೇಶ

ಹೊಸ ನಿಯಮಗಳ ಪ್ರಕಾರ ಬಳಕೆದಾರರು ಡಿಸೆಂಬರ್ 1 ರಿಂದ ಲಾಂಜ್ ಪ್ರವೇಶಕ್ಕೆ ಅರ್ಹರಾಗಲು ಪ್ರತಿ ತ್ರೈಮಾಸಿಕದಲ್ಲಿ 1 ಲಕ್ಷ ರೂ. ಅನ್ನು ಖರ್ಚು ಮಾಡಬೇಕಾಗುತ್ತದೆ. ಅದೇ ರೀತಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಆಕ್ಸಿಸ್ ಬ್ಯಾಂಕ್ ತನ್ನ ವಿವಿಧ ಬಳಕೆದಾರರಿಗೆ ರಿವಾರ್ಡ್ ಪಾಯಿಂಟ್ ನಿಯಮಗಳು ಮತ್ತು ಕ್ರೆಡಿಟ್ ಕಾರ್ಡ್ ಶುಲ್ಕವನ್ನು ಸಹ ಪರಿಷ್ಕರಿಸಿವೆ.