ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ (Bigg Boss Kannada 11) 11ನೇ ವಾರದ ಕ್ಯಾಪ್ಟನ್ ಆಗಿರುವ ಗೌತಮಿ ಜಾಧವ್ ಕೆಲವು ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ. ಈ ಹಿಂದೆ ಟಾಸ್ಕ್ ಮಧ್ಯೆ ಕೂಡ ಗೆಳೆತಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದ ಗೌತಮಿ ಈಗ ಸಂಪೂರ್ಣ ಬದಲಾಗಿದ್ದಾರೆ. ಎಷ್ಟರ ಮಟ್ಟಿಗೆ ಎಂದರೆ ತನ್ನ ಆತ್ಮೀಯ ಗೆಳೆಯ ಉಗ್ರಂ ಮಂಜು ಅವರನ್ನು ಕ್ಯಾಪ್ಟನ್ಸಿ ಟಾಸ್ಕ್ನಿಂದಲೇ ಹೊರಗಿಟ್ಟಿದ್ದಾರೆ. ಇದು ಮಂಜುಗೆ ಅಘಾತವಾಗಿದೆ. ಅಲ್ಲದೆ ಗೌತಮಿ ತೆಗೆದುಕೊಂಡ ನಿರ್ಧಾರ ಇಡೀ ಮನೆಗೆ ಶಾಕ್ ನೀಡಿದೆ.
ಟಾಸ್ಕ್ ಮಧ್ಯೆ ಕೂಡ ಗೌತಮಿ ಅವರು ಮಂಜು ಜೊತೆಗೆ ರೇಗಾಡಿದ್ದಾರೆ. ನಾನು ಕ್ಯಾಪ್ಟನ್ ಆದಾಗ, ನೀವು ಲೀಡ್ ಮಾಡಬೇಡಿ. ನಿಮ್ಮ ಧ್ವನಿಯಿಂದಾಗಿ, ನನ್ನ ಧ್ವನಿ ಕೆಳೆಗೆ ಹೋಗುತ್ತಿದೆ. ಮೋಕ್ಷಿತಾ ಅವರು ಏನು ಅಂದ್ರು. ಅವರು ಇಬ್ಬರೇ ಮಾತಾಡ್ತಾರೆ ಅಂತ. ನಾನು ಮಾತಾಡುವಾಗ, ನೀವೆ ಮಾತಾಡ್ತೀರಾ ಅನಿಸುತ್ತೆ. ಮೋಕ್ಷಿತಾ ಅವತ್ತು ಹೇಳಿದು ಕರೆಕ್ಟ್ ಅಂತ ಅನಿಸಿತು. ಮುಂಚಿನ ರೀತಿ ನೀವು ಇಲ್ಲ ಎಂದಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ನಿಲ್ಲದ ಸೇಡಿನ ಕಿಚ್ಚು:
ಬಿಗ್ ಬಾಸ್ ಮನೆಯಲ್ಲಿ ಸೇಡಿನ ಕಿಚ್ಚು ಇನ್ನೂ ನಿಂತಿಲ್ಲ. ನಾಮಿನೇಷನ್ ಫೈಟ್‌ನಲ್ಲಿ ಮೋಕ್ಷಿತಾ ಮೇಲೆ ಮಸಿ ಸುರಿದಿರುವ ಗೌತಮಿ ಅವರು ತಮ್ಮ ಸೇಡಿನ ಹೋರಾಟ ಮುಂದುವರಿಸಿದ್ದಾರೆ. ಕ್ಯಾಪ್ಟನ್ ಆದವರು ನೇರವಾಗಿ ಒಬ್ಬರನ್ನು ನಾಮಿನೇಟ್ ಮಾಡಬೇಕಿತ್ತು. ಗೌತಮಿ ಅವರು ಮೋಕ್ಷಿತಾರನ್ನು ನಾಮಿನೇಟ್ ಮಾಡಿದರು. ಕ್ಯಾಪ್ಟೆನ್ಸಿ ಆಟವನ್ನು ಮೋಕ್ಷಿತಾ ಬಿಟ್ಟುಕೊಟ್ಟಿದ್ದನ್ನೇ ಕಾರಣವಾಗಿ ಇಟ್ಟುಕೊಂಡು ಗೌತಮಿ ಅವರು ಮೋಕ್ಷಿತಾರನ್ನು ನಾಮಿನೇಟ್ ಮಾಡಿದರು. ಬಳಿಕ ಕಪ್ಪು ಮಸಿಯನ್ನು ಮೋಕ್ಷಿತಾ ಮೇಲೆ ಗೌತಮಿ ಎರಚಿದ್ದಾರೆ.
8 ಮಂದಿ ನಾಮಿನೇಟ್:
ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ ಈ ವಾರ 8 ಮಂದಿ ನಾಮಿನೇಟ್ ಆಗಿದ್ದಾರೆ. ಕಳೆದ ಸೀಸನ್ನ ಸ್ಪರ್ಧಿಗಳು ಬಂದು ನಾಮಿನೇಷನ್ ಪ್ರಕ್ರಿಯೆ ನಡೆಸಿಕೊಟ್ಟಿದ್ದಾರೆ. ಕಾರ್ತಿಕ್ ಮಹೇಶ್, ನಮ್ರತಾ ಗೌಡ, ವರ್ತೂರ್ ಸಂತೋಷ್, ತುಕಾಲಿ ಸಂತೋಷ್ ಮೊದಲಾದವರು ದೊಡ್ಮನೆ ಒಳಗೆ ಬಂದಿದ್ದರು. ಅಂತಿಮವಾಗಿ ತ್ರಿವಿಕ್ರಮ್, ಭವ್ಯಾ ಗೌಡ, ಧನರಾಜ್ ಆಚಾರ್, ಶಿಶಿರ್, ರಜತ್ ಕಿಶನ್, ಹನುಮಂತ, ಚೈತ್ರಾ ಹಾಗೂ ಮೋಕ್ಷಿತಾ ನಾಮಿನೇಟ್ ಲಿಸ್ಟ್ನಲ್ಲಿ ಇದ್ದಾರೆ.
BBK 11: ಬಿಗ್ ಬಾಸ್ ವೀಕ್ಷಕರಿಗೆ ಗುಡ್ ನ್ಯೂಸ್: ಸೀಸನ್ 11 ನಲ್ಲಿ ಇದೆ ಮತ್ತೊಂದು ಟ್ವಿಸ್ಟ್