ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ಬಾರಮ್ಮ (Lakshmi Baramma Serial) ಧಾರಾವಾಹಿಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಪ್ರತಿದಿನ ರಾತ್ರಿ 7:30ಕ್ಕೆ ಈ ಧಾರಾವಾಹಿ ವೀಕ್ಷಣೆಗೆ ಜನರು ಕಾದು ಕುಳಿತಿದ್ದಾರೆ. ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿರುವ ಈ ಧಾರಾವಾಹಿ ಇದೀಗ ಮುಕ್ತಾಯದ ಹಂತದಲ್ಲಿರುವಂತೆ ಗೋಚರಿಸುತ್ತಿದೆ. ಇದಕ್ಕೆ ಕಾರಣ ಧಾರಾವಾಹಿ ಪಡೆದುಕೊಳ್ಳುತ್ತಿರುವ ವೇಗ ಹಾಗೂ ಕಥೆಯಲ್ಲಿ ದೊಡ್ಡ ತಿರುವು ಪಡೆದುಕೊಂಡಿರುವುದು.
ಸದ್ಯ ಲಕ್ಷ್ಮೀಯನ್ನು ಕೊಲೆ ಮಾಡಲು ಯತ್ನಿಸಿ ಕಾವೇರಿ ಈಗ ಜೈಲಿಗೆ ಹೋಗಿದ್ದಾಳೆ. ಕೋರ್ಟ್‌ನಲ್ಲಿ ಅವಳು ಅಪರಾಧಿಯೋ ಅಥವಾ ನಿರಪರಾಧಿಯೋ ಎಂದು ಇನ್ನೂ ವಾದ ವಿವಾದಗಳು ಆಗುತ್ತಿದೆ. ಆದರೆ ಕಾವೇರಿ ಜೈಲಿನಲ್ಲಿ ಕುಳಿತುಕೊಳ್ಳಲು ಎಲ್ಲಿಲ್ಲದ ಕಷ್ಟ ಪಡುತ್ತಿದ್ದಾಳೆ. ಸರಿಯಾಗಿ ನಿದ್ರೆ, ಊಟ ಮಾಡಲಾಗದೆ ಸಮಸ್ಯೆ ಎದುರಿಸುತ್ತಿದ್ದಾಳೆ.
ಇದಕ್ಕಾಗಿ ಲಾಯರ್ ಜೊತೆ ಡೀಲ್ ಮಾಡಲು ಹೊರಟಿದ್ದಾಳೆ ಕಾವೇರಿ. ನನಗೆ ಅನಾರೋಗ್ಯ ಇದೆ ಎಂದು ಹೇಳಿ ಯಾವುದಾದರೂ ಆಸ್ಪತ್ರೆಗಾದರೂ ಸೇರಿಸಿ. ಅಲ್ಲಿ ನಾನು ಅಲ್ಲಿ ಬ್ರೆಡ್ ತಿಂದುಕೊಂಡಾದರೂ ಬದುಕುತ್ತೇನೆ. ಆದರೆ ಇಲ್ಲೇ ಇರುವಂತೆ ಆಗುವುದೊಂದು ಬೇಡ ಎಂದು ಕೇಳಿಕೊಂಡಿದ್ದಾಳೆ. ಆದರೆ, ಇದಕ್ಕೆ ಎಲ್ಲ ಹಣದಿಂದ ಆಗೋದಿಲ್ಲ. ನಮ್ಮ ವ್ಯವಸ್ಥೆ ಇನ್ನೂ ಅಷ್ಟೊಂದು ಹದಗೆಟ್ಟಿಲ್ಲ. ಸ್ವಲ್ಪ ಸಮಾಧಾನದಿಂದಿರಿ ಎಂದು ಲಾಯರ್ ಹೇಳುತ್ತಿದ್ದಾರೆ.
ಇವೆಲ್ಲದರ ಮಧ್ಯೆ ಕಲರ್ಸ್ ಕನ್ನಡ ಮತ್ತೊಂದು ಪ್ರೊಮೋ ಬಿಟ್ಟಿದೆ. ಕೋರ್ಟ್‌ನಲ್ಲಿ ಕಾವೇರಿ ವಿರುದ್ಧ ವೈಷ್ಣವ್ ತಿರುಗಿಬಿದ್ದಿದ್ದಾನೆ. ಅಮ್ಮನ ವಿರುದ್ಧ ಕೆಂಡಾಮಂಡಲನಾಗಿ ಕೂಗಾಡುತ್ತಿದ್ದಾನೆ. ರಾಕೆಟ್ ಸ್ಪೀಡ್ನಲ್ಲಿ ಕಥೆ ಸಾಗುತ್ತಿರುವ ಕಾರಣ ಮತ್ತು ಇಷ್ಟು ಬೇಗ ಸತ್ಯಗಳು ಹೊರ ಬರ್ತಿರೋದನ್ನು ನೋಡಿ ಸೀರಿಯಲ್ ಮುಕ್ತಾಯದ ಹಂತ ತಲುಪಿದೆ ಎಂಬ ಚರ್ಚೆಗಳು ಉದ್ಭವವಾಗಿದೆ. ಇದಕ್ಕೆ ಪುಷ್ಟಿ ಎಂಬಂತೆ ನೂರು ಜನ್ಮಕ್ಕೂ.. ಸದ್ಯದಲ್ಲೇ ಶುರುವಾಗಲಿದೆ. ಲಕ್ಷ್ಮೀ ಬಾರಮ್ಮ ಮುಗಿದ ಬಳಿಕ ಇದು ಶುರುವಾಗಲಿದೆ ಎಂಬ ಟಾಕ್ ಕೂಡ ಇದೆ.
BBK 11: ಕ್ಯಾಪ್ಟನ್ಸಿ ಟಾಸ್ಕ್ನಿಂದ ಔಟ್: ಒಡೆದು ಚೂರಾಯಿತು ಮಂಜು-ಗೌತಮಿ ಫ್ರೆಂಡ್ಶಿಪ್