ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಸ್ವಾರಪಲ್ಲಿ ಗೇಟ್ ಸಮೀಪ ಘಟನೆ
ಚಿಂತಾಮಣಿ : ಹಣದ ವಿಚಾರಕ್ಕೆ ಗಲಾಟೆ ಹಾಕಿ ಒಬ್ಬನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಸ್ವಾರಪಲ್ಲಿ ಗೇಟ್ ಬಳಿ ಬುಧವಾರ ಸಂಜೆ ಸುಮಾರು ಏಳು ಗಂಟೆ ಸಮಯದಲ್ಲಿ ನಡೆದಿದೆ.
ಹಲ್ಲೆಗೊಳಗಾದ ವ್ಯಕ್ತಿ ಬೆಂಗಳೂರು ಬೆಳಂದೂರು ಮೂಲದ ಆನಂದ್ (36 ವರ್ಷ) ಎಂದು ಗುರುತಿಸಲಾಗಿದೆ.
ಆನಂದ್ ಚಿಂತಾಮಣಿ ಮೂಲದವನಿಗೆ ಕಾರು ಮಾರಾಟ ಮಾಡಿದ್ದು ಹಣ ಪಡೆಯಲು ಚಿಂತಾಮಣಿಗೆ ಬಂದಿದ್ದ ವೇಳೆ ಚಂದ್ರು ಸುರೇಶ್ ಹಾಗೂ ಆನಂದ್ ನಡುವೆ ಗಲಾಟೆಯಾಗಿ ಮಾತಿಗೆ ಮಾತು ಬೆಳೆದು ಚಂದ್ರು,ಸುರೇಶ್, ಎಂಬಾತ ಚಾಕುವಿನಿಂದ ಆತನ ಹೊಟ್ಟೆಗೆ ತಿವಿದು ಮರಣಾಂತಿಕ ಹಲ್ಲೆ ನಡೆಸಿದ್ದಾನೆ.
ಹಲ್ಲೆಗೆ ಒಳಗಾದ ವ್ಯಕ್ತಿಯನ್ನು ಕೂಡಲೇ ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗಾಗಿ ಬೇರೆ ಕಡೆ ರವಾನಿಸಲಾಗಿದೆ ಎನ್ನಲಾಗಿದೆ.
ಇನ್ನು ಘಟನೆಯ ವಿಷಯ ತಿಳಿದ ತಕ್ಷಣ ಗ್ರಾಮಾಂತರ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ಇದನ್ನೂ ಓದಿ: #BagalkotCrime