Wednesday, 11th December 2024

Accident: ಕಾರು ಡಿಕ್ಕಿ ವ್ಯಕ್ತಿ ಹಾಗೂ ಹಸು ಸಾವು

ಚಿಂತಾಮಣಿ: ಕಾರು ಚಾಲಕನ ಅತಿ ವೇಗ ಹಾಗೂ  ಅಜಾಗೂರುಕತೆಯಿಂದ ಬಂದು ಹಸು ಮೇಯಿಸಿಕೊಂಡು ಮನೆ ಕಡೆ ತೆರಳುತ್ತಿದ್ದ ವ್ಯಕ್ತಿಗೆ ಡಿಕ್ಕಿ ಹೊಡೆದಾ ಪರಿಣಾಮ ಹಸು ಹಾಗೂ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಕೆಂಚಾರ್ಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಕೋರ್ಲಪರ್ತಿ ಗ್ರಾಮದ ಸಮೀಪದ ಮನಿಯಾರ ಮೂಡಲಹಳ್ಳಿ   ಊರಿನಲ್ಲಿ ಇಂದು ಸಂಜೆ ನಡೆದಿದೆ.

ಸದರಿ ಗ್ರಾಮದ ೬೫ ವರ್ಷದ ಪಾಪಣ್ಣ ಹಸುಗಳನ್ನು ಮೇಯಿಸಿಕೊಂಡು ಮನೆ ಕಡೆ ಹೋಗುತ್ತಿದ್ದ ವೇಳೆ ಏನಿಗ ದಾಲೆ ಕಡೆಯಿಂದ ಅತಿ ವೇಗ ಹಾಗೂ ಅಜಾಗೂರುಕತೆಯಿಂದ ಬಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಪಾಪಣ್ಣ ಹಾಗೂ ಹಸು ಸ್ಥಳದಲ್ಲೇ ಮೃತಪಟ್ಟಿದೆ.

ಘಟನೆಯ ವಿಷಯ ತಿಳಿದ ತಕ್ಷಣ ಕೆಂಚರ್ಲಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಇದನ್ನೂ ಓದಿ: #AttibeleAccident