Friday, 13th December 2024

Virat- Anushka: ಆಸ್ಟ್ರೇಲಿಯಾದಲ್ಲಿ ವಿರುಷ್ಕಾ ಜೋಡಿಯ ಸುತ್ತಾಟ; ಇನ್‌ಸ್ಟಾದಲ್ಲಿ ಪೋಸ್ಟ್‌ ಹಂಚಿಕೊಂಡ ಅನುಷ್ಕಾ ಶರ್ಮಾ!

Virat- Anushka

ಕ್ಯಾನ್‌ಬೆರಾ: ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ ಬಾರ್ಡರ್‌ ಗವಾಸ್ಕರ್‌ ಟ್ರೋಫಿ ಟೆಸ್ಟ್‌ ಸರಣಿ ನಡೆಯುತ್ತಿದೆ. ಇದಕ್ಕಾಗಿ ಭಾರತೀಯ ಕ್ರಿಕೆಟ್‌ ತಂಡ ಆಸ್ಟ್ರೇಲಿಯಾದಲ್ಲಿ (Australia) ಬೀಡು ಬಿಟ್ಟಿದೆ. ಇದರ ಮಧ್ಯೆ ವಿರಾಟ್‌ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ (Virat- Anushka) ಆಸ್ಟ್ರೇಲಿಯಾದಲ್ಲಿ ಸುತ್ತಾಟ ನಡೆಸಿದ್ದಾರೆ. ವಿರುಷ್ಕಾ ತಮ್ಮ ಮಕ್ಕಳಾದ ವಮಿಕಾ ಹಾಗೂ ಅಕಾಯ್‌ ಜೊತೆ ಬ್ರಿಸ್ಬೇನ್‌ನಲ್ಲಿರುವ ಬ್ಲೂಯಿಸ್ ವರ್ಲ್ಡ್‌ಗೆ ಭೇಟಿ ನೀಡಿದ್ದಾರೆ. ಈ ಬಗ್ಗೆ ಅನುಷ್ಕಾ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. (Anushka Insta Story)

ಈ ಬಗ್ಗೆ ಫೋಟೋ ಹಂಚಿಕೊಂಡಿರುವ ಅನುಷ್ಕಾ ಶರ್ಮಾ ಅತ್ಯುತ್ತಮ ದಿನ ಎಂಬ ಬರಹವನ್ನು ನೀಡಿದ್ದಾರೆ. ಫೋಟೋದಲ್ಲಿ ಸ್ಯಾಂಡ್‌ವಿಚ್ ಮತ್ತು ಫ್ರೆಂಚ್ ಫ್ರೈಸ್ ಒಳಗೊಂಡಿದ್ದು ನೀಲಿ ಹಾರ್ಟ್‌ ಇಮೋಜಿ ಬಳಸಿದ್ದಾರೆ.

ವಿರಾಟ್‌ ಜೊತೆಗಿನ ಮತ್ತೊಂದು ಫೋಟೋ ಹಂಚಿಕೊಂಡಿರುವ ಅವರು  ಬಿಳಿ ಟಾಪ್‌ ಹಾಗೂ ಜೀನ್ಸ್‌ನಲ್ಲಿ ಕಂಗೊಳಿಸಿದ್ದರೆ, ನೀಲಿ ಟಿ-ಶರ್ಟ್, ಡೆನಿಮ್ ಪ್ಯಾಂಟ್ ಮತ್ತು ಕೆಂಪು ಟೋಪಿಯಲ್ಲಿ ವಿರಾಟ್‌ ಕಾಣಿಸಿಕೊಂಡಿದ್ದಾರೆ. ಸದ್ಯ ಬಿಡುವಿನ ಅವಧಿಯಲ್ಲಿ ತಮ್ಮ ಮಕ್ಕಳ ಜೊತೆ ಸಮಯ ಕಳೆಯುತ್ತಿರುವ ಈ ಜೋಡಿ ತಮ್ಮ ಖಾಸಗಿತನವನ್ನು ಕಾಪಾಡಿಕೊಂಡಿದೆ. ಇದುವರೆಗೂ ಎಲ್ಲಿಯೂ ತಮ್ಮ ಮಕ್ಕಳ ಫೋಟೋವನ್ನು ಹಂಚಿಕೊಂಡಿಲ್ಲ.

ವಿರುಷ್ಕಾ ಜೋಡಿ ಮದುವೆಗೆ ಏಳು ವರ್ಷ

2017 ರ ಡಿಸೆಂಬರ್‌ 12 ರಂದು ಇಟಲಿಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ವಿರಾಟ್‌ ಹಾಗೂ ಅನುಷ್ಕಾ ಗುರುವಾರ ತಮ್ಮ ಏಳನೇ ವರ್ಷಕ್ಕೆ ಪದಾರ್ಪಣೆ ಮಾಡಿದ್ದಾರೆ. ಆಸ್ಟ್ರೇಲಿಯಾದ ಬ್ರಿಸ್ಬೇನ್‌ನಲ್ಲಿ ತಮ್ಮ ಹೋಟೆಲ್‌ನ ಹೊರಗೆ ಓಡಾಡುತ್ತಿರುವ ದೃಶ್ಯವನ್ನು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್‌ ಸರಣಿಯಲ್ಲಿ ಅದ್ಭುತ ಪ್ರದರ್ಶನ ತೋರುತ್ತಿರುವ ವಿರಾಟ್‌ ಕೊಹ್ಲಿ, ತಮ್ಮ ಕಳಪೆ ಫಾರ್ಮ್‌ನಿಂದ ಹೊರ ಬಂದಿದ್ದಾರೆ. ಪರ್ತ್‌ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಅಮೋಘ ಶತಕ ಸಿಡಿಸಿದ್ದರು. ಮುಂದಿನ ಬ್ರಿಸ್ಬೇನ್‌ ಪಂದ್ಯಕ್ಕಾಗಿ ಭಾರತ ಸಜ್ಜಾಗುತ್ತಿದೆ. ಇನ್ನು ಅನುಷ್ಕಾ ಶರ್ಮಾ ಕೌಟುಂಬಿಕ ಜೀವನದಲ್ಲಿ ಬ್ಯುಸಿ ಇದ್ದು, ಚಕ್ಡಾ ಎಕ್ಸ್‌ಪ್ರೆಸ್  ಸಿನಿಮಾ ಶೂಂಟಿಗ್‌ ಮುಗಿಸಿ ಚಿತ್ರ ಬಿಡುಗಡೆಗಾಗಿ ಕಾಯುತ್ತಿದ್ದಾರೆ.

ಈ ಸುದ್ದಿಯನ್ನೂ ಓದಿ : Virat Kohli: ಆಸ್ಟ್ರೇಲಿಯಾದಲ್ಲಿ ವಿಶೇಷ ದಾಖಲೆಯ ಮೇಲೆ ವಿರಾಟ್‌ ಕೊಹ್ಲಿ ಕಣ್ಣು!