ನವದೆಹಲಿ: ಫೋರ್ಬ್ಸ್ ಮೋಸ್ಟ್ ಪವರ್ಫುಲ್ ವುಮೆನ್ (Forbes Most Powerful Women) 2024ರ ಪಟ್ಟಿ ಬಿಡುಗಡೆಯಾಗಿದ್ದು, 100 ಮಂದಿ ಅತ್ಯಂತ ಪ್ರಬಲ ಮಹಿಳೆಯರನ್ನು ಗುರುತಿಸಲಾಗಿದೆ. ಈ ಪಟ್ಟಿಯಲ್ಲಿ ಮೂವರು ಭಾರತೀಯ ಮಹಿಳೆಯರು ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಫೋರ್ಬ್ಸ್ ಪಟ್ಟಿಯಲ್ಲಿ ಕೇಂದ್ರ ಹಣಕಾಸು ಸಚಿವೆ (Minister of Finance and Corporate Affairs) ನಿರ್ಮಲಾ ಸೀತಾರಾಮನ್(Nirmala Sitharaman) ಅವರು ವಿಶ್ವದಲ್ಲೇ 28ನೇ ಸ್ಥಾನದಲ್ಲಿದ್ದು, ಭಾರತದ ಅತ್ಯಂತ ಪ್ರಬಲ ಮಹಿಳೆಯರ ಪೈಕಿ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ. ಇದಲ್ಲದೆ ಎಚ್‌ಸಿಎಲ್ ಕಾರ್ಪೊರೇಷನ್ನ ಸಿಇಒ ರೋಷನಿ ನಾದರ್ ಮಲ್ಹೋತ್ರಾ (Roshni Nadar Malhotra ) ಮತ್ತು ಬಯೋಕಾನ್ ಸಂಸ್ಥಾಪಕಿ ಕಿರಣ್ ಮಜುಮ್ದಾರ್ ಷಾ (Kiran Mazumdar-Shaw) ಅವರು ಈ ಪಟ್ಟಿಯಲ್ಲಿದ್ದಾರೆ.
3 Indians Shine On Forbes’ 2024 World’s Most Powerful Women Listhttps://t.co/tye7D725TF#Forbes #WomenEmpowerment pic.twitter.com/zQc78SCbXb
— DNB India (@DNBIndia_) December 13, 2024
ನಿರ್ಮಲಾ ಸೀತಾರಾಮನ್ (28ನೇ ಶ್ರೇಯಾಂಕ)
ಫೋರ್ಬ್ಸ್ ಮೋಸ್ಟ್ ಪವರ್ಫುಲ್ ವುಮೆನ್ 2024ರ ಪಟ್ಟಿಯಲ್ಲಿ ಭಾರತದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 28ನೇ ಸ್ಥಾನದಲ್ಲಿದ್ದಾರೆ. 2023ರ ಫೋರ್ಬ್ಸ್ ಮೋಸ್ಟ್ ಪವರ್ಫುಲ್ ವುಮೆನ್ ಪಟ್ಟಿಯಲ್ಲಿ ನಿರ್ಮಲಾ ಸೀತಾರಾಮನ್ ಅವರು 32ನೇ ಶ್ರೇಯಾಂಕ ಪಡೆದಿದ್ದರು. 2017ರಿಂದ 2019ರ ವರೆಗೆ ರಕ್ಷಣಾ ಸಚಿವೆಯಾಗಿ ಕರ್ತವ್ಯ ನಿರ್ವಹಿಸಿದ್ದರು. 2024ರ ಜೂನ್‌ನಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯ ನಂತರ ಅವರು ಹಣಕಾಸು ಮತ್ತು ಕಾರ್ಪೋರೇಟ್ ವ್ಯವಹಾರಗಳ ಸಚಿವೆಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಭಾರತದ ಸುಮಾರು 4 ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನು ನಿರ್ವಹಿಸುವ ಕಾರ್ಯವನ್ನು ಇವರಿಗೆ ವಹಿಸಲಾಗಿದೆ.
ರೋಶನಿ ನಾದರ್ ಮಲ್ಹೋತ್ರಾ (81ನೇ ಶ್ರೇಯಾಂಕ)
ಫೋರ್ಬ್ಸ್ ಮೋಸ್ಟ್ ಪವರ್ಫುಲ್ ವುಮೆನ್ 2024ರ ಪಟ್ಟಿಯಲ್ಲಿರುವ ಎರಡನೇ ಭಾರತೀಯ ಮಹಿಳೆ ಎಚ್‌ಸಿಎಲ್ ಕಾರ್ಪೊರೇಷನ್ನ ಸಿಇಒ ರೋಷನಿ ನಾದರ್ ಮಲ್ಹೋತ್ರಾ. ಮಲ್ಹೋತ್ರಾ ಅವರು ಎಚ್‌ಸಿಎಲ್ ಸಂಸ್ಥಾಪಕ ಮತ್ತು ಕೈಗಾರಿಕೋದ್ಯಮಿ ಶಿವ ನಾಡರ್ ಅವರ ಪುತ್ರಿ. 1976ರಲ್ಲಿ ತನ್ನ ತಂದೆ ಶಿವ ನಾಡಾರ್ ಸ್ಥಾಪಿಸಿದ $12 ಬಿಲಿಯನ್ ಉದ್ಯಮದ ವ್ಯವಹಾರಗಳನ್ನು ಅವರು ನೋಡಿಕೊಳ್ಳುತ್ತಿದ್ಧಾರೆ. ಹಲವು ಸಾಧನೆಗಳನ್ನು ಮಾಡಿರುವ ಮಲ್ಹೋತ್ರಾ ಅವರು ಶಿವ ನಾಡಾರ್ ಫೌಂಡೇಶನ್‌ನ ಟ್ರಸ್ಟಿಯಾಗಿದ್ದಾರೆ.
ಕಿರಣ್ ಮಜುಂದಾರ್-ಶಾ (82ನೇ ಶ್ರೇಯಾಂಕ)
ಫೋರ್ಬ್ಸ್‌ನ ಪವರ್ ವುಮೆನ್ ಪಟ್ಟಿಯಲ್ಲಿ 82ನೇ ಸ್ಥಾನ ಮತ್ತು 2024ರಲ್ಲಿ ಭಾರತದ ಶ್ರೀಮಂತ ವ್ಯಕ್ತಿಗಳಲ್ಲಿ 91ನೇ ಸ್ಥಾನವನ್ನು ಪಡೆದಿರುವ ಕಿರಣ್ ಮಜುಂದಾರ್-ಶಾ ಅವರು ಜೈವಿಕ ತಂತ್ರಜ್ಞಾನದಲ್ಲಿ ಟ್ರಯಲ್‌ಬ್ಲೇಜರ್ ಆಗಿ ಜನಪ್ರಿಯರಾಗಿದ್ದಾರೆ. ಕಿರಣ್ ಮಜುಂದಾರ್ ಶಾ ಭಾರತದ ಸೆಲ್ಫ್ ಮೇಡ್ ಶ್ರೀಮಂತ ಮಹಿಳೆಯಾಗಿದ್ದಾರೆ ಎಂದು ಫೋರ್ಬ್ಸ್ ತಿಳಿಸಿದೆ. 1978ರಲ್ಲಿ ಅವರು ಬಯೋಫಾರ್ಮಾಸ್ಯುಟಿಕಲ್ ಸಂಸ್ಥೆಯ ಮೂಲಕ ಬಯೋಕಾನ್ ಸ್ಥಾಪಿಸಿದರು. ಈ ಕಂಪನಿಯು ಮಲೇಷ್ಯಾದ ಜೋಹೋರ್ ಪ್ರದೇಶದಲ್ಲಿ ಏಷ್ಯಾದ ಅತಿದೊಡ್ಡ ಇನ್ಸುಲಿನ್ ಕಾರ್ಖಾನೆಯನ್ನು ಹೊಂದಿದೆ.
ಈ ಸುದ್ದಿಯನ್ನೂ ಓದಿ:Raj Kapoor Birthday: ಕಪೂರ್ ಫ್ಯಾಮಿಲಿ ಮಿಟ್ಸ್ ಪಿಎಂ ಮೋದಿ; ಅದರ ಹಿಂದಿದೆ ಒಂದು ಬಲವಾದ ಕಾರಣ