ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮೀ’ (Bhagya Lakshmi) ಧಾರಾವಾಹಿ ಜನರ ಮನ್ನಣೆಗೆ ಪಾತ್ರವಾಗಿದೆ. ಸಾಮಾನ್ಯ ಮಧ್ಯಮ ವರ್ಗದ ಕುಟುಂಬದಲ್ಲಿ ಬೆಳೆದರೂ, ತನಗೊದಗಿದ ಪರಿಸ್ಥಿತಿಯನ್ನು ಎದುರಿಸುತ್ತಾ ಕೆಚ್ಚು, ಮಹತ್ವಾಕಾಂಕ್ಷೆಗಳ ಹಾದಿ ತುಳಿದ ಭಾಗ್ಯಳ ಪಯಣ ವೀಕ್ಷಕರ ಮನಸನ್ನು ಇನ್ನಿಲ್ಲದಂತೆ ತಟ್ಟಿದೆ. ಎದುರಾದ ಸವಾಲುಗಳನ್ನೆಲ್ಲಾ ನಿಭಾಯಿಸುತ್ತಾ, ಎಲ್ಲ ನಿರೀಕ್ಷೆಗಳು ಹುಸಿಯಾಗುವಂತೆ ಬೆಳೆಯುತ್ತಿರುವ ಭಾಗ್ಯಾಳ ಕತೆ ನಾಡಿನ ಹೆಣ್ಣು ಮಕ್ಕಳಿಗೆ ಹೊಸ ಹುರುಪು ತುಂಬುತ್ತಿದೆ.
ಸದ್ಯ ಭಾಗ್ಯಾ-ತಾಂಡವ್ ಡಿವೋರ್ಸ್ ವಿಚಾರ ಸಾಕಷ್ಟು ಕುತೂಹಲ ಕೆರಳಿಸಿದೆ. ಇದರ ನಡುವೆ ಭಾಗ್ಯಾಳ ತಾಯಿ ಸುನಂದ ಜೈಲು ಪಾಲಾಗಿದ್ದಾಳೆ. ಇದಕ್ಕೆ ಕಾರಣವಾಗಿದ್ದು ತಾಂಡವ್. ತನ್ನನ್ನು ರೇಗಿಸಿದ ಕ್ಲಾಸ್‌ಮೆಟ್‌ಗಳಿಗೆ ತನ್ವಿ ಹಾಕಿ ಸ್ಟಿಕ್‌ನಿಂದ ಹೊಡೆದ ಕಾರಣ ಪ್ರಿನ್ಸಿಪಾಲ್ ಅವಳನ್ನು ಸಸ್ಪೆಂಡ್ ಮಾಡುತ್ತಾರೆ. ಈ ವಿಚಾರ ತಾಂಡವ್ ಕಿವಿಗೂ ಬಿದ್ದಿದೆ.
ತಾಂಡವ್ ನೇರವಾಗಿ ಸುನಂದಾ ಮನೆಗೆ ಹೋಗುತ್ತಾನೆ. ನೀವು ನಮ್ಮನ್ನೆಲ್ಲಾ ಮನೆಯಿಂದ ಹೊರ ಹಾಕಿದ ನಂತರ ಹೀಗೆಲ್ಲಾ ನಡೆಯುತ್ತಿದೆ. ದಯವಿಟ್ಟು ನಾವೆಲ್ಲಾ ಒಟ್ಟಿಗೆ ಇರೋಣ ಅಪ್ಪ ಎಂದು ಮಕ್ಕಳು ತಾಂಡವ್ ಬಳಿ ಮನವಿ ಮಾಡುತ್ತಾರೆ. ಆದರೆ, ತಾಂಡವ್ ಮಾತ್ರ ಮಕ್ಕಳ ಕಣ್ಣಿರಿಗೆ ಕರಗುವುದಿಲ್ಲ. ಇದರ ಮಧ್ಯೆ ಶ್ರೇಷ್ಠಾ ಆಂಟಿ ರಾಕ್ಷಸಿ ಎಂದು ತನ್ಮಯ್ ಹೇಳಿದಾಗ ತಾಂಡವ್ ಕೋಪಗೊಂಡು ಮಗನಿಗೆ ಹೊಡೆಯಲು ಮುಂದಾಗುತ್ತಾನೆ.
ಆಗ ಭಾಗ್ಯಾ ತಾಂಡವ್‌ನನ್ನು ತಡೆಯುತ್ತಾಳೆ. ಇನ್ನೊಮ್ಮೆ ನನ್ನ ಗುಂಡಣ್ಣನ ಮೇಲೆ ಕೈ ಮಾಡಿದರೆ ನಾನು ಸುಮ್ಮನಿರುವುದಿಲ್ಲ ಎನ್ನುತ್ತಾಳೆ. ಬಳಿಕ ತಾಂಡವ್ ಅಲ್ಲಿಂದ ಹೊರಡುತ್ತಾನೆ. ಆದರೆ, ಮೊಬೈಲ್ ಅಲ್ಲೇ ಬಿಟ್ಟು ತೆರಳುತ್ತಾನೆ. ಇದೇ ಸಂದರ್ಭ ತಾಂಡವ್ ಮೊಬೈಲ್‌ಗೆ ಶ್ರೇಷ್ಠಾ, ಕರೆ ಬರುತ್ತದೆ. ಸುನಂದಾ ಕಾಲ್ ರಿಸೀವ್ ಮಾಡುತ್ತಾಳೆ. ತಾಂಡವ್ ಭಾಗ್ಯಾ ಮನೆಗೆ ಹೋಗಿದ್ಯಾ ಎಂದು ಕೇಳುತ್ತಾಳೆ. ಆಗ ಸುನಂದಾ ಕೋಪಗೊಂಡು ಶ್ರೇಷ್ಠಾಗೆ ಬೈಯ್ಯುತ್ತಾರೆ. ಇಬ್ಬರ ಮಧ್ಯೆ ಏಕವಚನದಲ್ಲೇ ಜಗಳ ಆಗುತ್ತದೆ.
ಇವಳಿಂದ (ಶ್ರೇಷ್ಠಾ) ನನ್ನ ಮಗಳು ಭಾಗ್ಯಾಳ ಜೀವನ ಹಾಳಾಗುತ್ತದೆ ಎಂದು ಯೋಚಿಸಿ ಸುನಂದಾ ಚಾಕು ಹಿಡಿದು ಶ್ರೇಷ್ಠಾ ಮನೆಗೆ ಹೋಗುತ್ತಾಳೆ. ನೀನು ಸತ್ತರೆ ಎಲ್ಲವೂ ಸರಿ ಆಗುತ್ತದೆ ಎಂದು ಚಾಕುವಿನಿಂದ ಚುಚ್ಚಲು ಪ್ರಯತ್ನಿಸುತ್ತಾಳೆ. ಆಗ ನೆರೆಮನೆಯವರು ಅಲ್ಲಿಗೆ ಬಂದು ಸುನಂದಾಳನ್ನು ತಡೆಯುತ್ತಾರೆ. ಶ್ರೇಷ್ಠಾ ನೇರವಾಗಿ ಪೊಲೀಸರಿಗೆ ಕಾಲ್ ಮಾಡಿದ ಪರಿಣಾಮ ಸುನಂದಾ ಅರೆಸ್ಟ್ ಆಗುತ್ತಾಳೆ.
ಅಮ್ಮ ಅರೆಸ್ಟ್ ಆಗಿರುವುದನ್ನು ಕೇಳಿ ಭಾಗ್ಯಾ ಪೊಲೀಸ್ ಸ್ಟೇಷನ್‌ಗೆ ಬರುತ್ತಾಳೆ. ತಾಯಿಯನ್ನು ಬಿಡುವಂತೆ ಪೊಲೀಸರ ಬಳಿ ಮನವಿ ಮಾಡುತ್ತಾಳೆ. ಆದರೆ, ನನ್ನನ್ನು ಸಾಯಿಸುವಂತೆ ಹೇಳಿದ್ದು ಭಾಗ್ಯಾ, ಅವಳ ಮೇಲೆ ಕೂಡಾ ನಾನು ಕಂಪ್ಲೇಂಟ್ ಕೊಡುತ್ತೇನೆ ಎಂದು ಶ್ರೇಷ್ಠಾ ಹೇಳುತ್ತಾಳಳೆ. ಈಗ ಕುಸುಮಾ ತಾಂಡವ್‌ನನ್ನು ಹೊರಗೆ ಎಳೆದು ಅವನ ಕೆನ್ನೆಗೆ ಬಾರಿಸಿ ಕಂಪ್ಲೇಂಟ್ ವಾಪಸ್ ಪಡೆಯುವಂತೆ ಹೇಳುತ್ತಾಳೆ.
ತಾಂಡವ್‌ಗೆ ಏಕೆ ಹೊಡೆಯುತ್ತೀರೆಂದು ಶ್ರೇಷ್ಠಾ ಪ್ರಶ್ನಿಸಿದಾಗ ಭಾಗ್ಯಾ ಬಂದು ಶ್ರೇಷ್ಠಾಗೆ ಕಪಾಳಮೋಕ್ಷ ಮಾಡುತ್ತಾಳೆ. ಅವರು ನನ್ನ ಅತ್ತೆ, ತಾಂಡವ್ ಅಮ್ಮ, ಅವರನ್ನು ಹೊಡೆಯುವ ಅಧಿಕಾರ ಅವರಿಗೆ ಇದೆ. ಇದನ್ನೆಲ್ಲ ಕೇಳಲು ನೀನು ಯಾರು ಎಂದು ಮರುಪ್ರಶ್ನೆ ಮಾಡುತ್ತಾಳೆ. ಕೊನೆಗೆ ಕಂಡಿಷನ್ ಹಾಕಿ ನಾನು ಕೇಸ್ ವಾಪಸ್ ತೆಗೆದುಕೊಳ್ಳುತ್ತೇನೆ ಎಂದು ಶ್ರೇಷ್ಠ ಹೇಳಿದಾಗ ಭಾಗ್ಯಾಳ ಮೊಬೈಲ್‌ಗೆ ಒಂದು ಮೆಸೇಜ್ ಬರುತ್ತದೆ. ಇದನ್ನು ನೋಡಿ ಖುಷಿಯಾಗುತ್ತಾಳೆ. ನನ್ನ ಅಮ್ಮನನ್ನು ಬಿಡಿಸುವ ದಾರಿ ನನಗೆ ಗೊತ್ತಾಯಿತು. ಯಾರ ಸಹಾಯವೂ ಇಲ್ಲದೆ ನನ್ನ ತಾಯಿಯನ್ನು ನಾನು ಬಿಡಿಸುತ್ತೇನೆ ಎಂದು ಹೇಳುತ್ತಾಳೆ. ಆದರೆ, ಇಲ್ಲಿ ಮೆಸೇಜ್ ಬಂದಿದ್ದು ಯಾರದ್ದು ಎಂಬುದು ಸಸ್ಪೆನ್ಸ್ ಆಗಿದೆ.