ಹ್ಯಾಮಿಲ್ಟನ್: ಇಂಗ್ಲೆಂಡ್(NZ vs ENG) ವಿರುದ್ಧ ಸಾಗುತ್ತಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ತಂಡದ ಅನುಭವಿ ಆಟಗಾರ ಕೇನ್ ವಿಲಿಯಮ್ಸನ್(Kane Williamson) ಅವರು ವಿಚಿತ್ರವಾಗಿ ಔಟ್ ಆದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್(Cricket Viral Video) ಆಗಿದೆ. ಕಾಲಿನಿಂದ ಚೆಂಡನ್ನು ತಡೆಯುವ ಯತ್ನದಲ್ಲಿ ವಿಕೆಟ್ ಕಳೆದುಕೊಂಡು ಅನ್ಲಕ್ಕಿ ಎನಿಸಿಕೊಂಡರು.
44 ರನ್ ಗಳಿಸಿದಿದ್ದ ವೇಳೆ ಮ್ಯಾಥ್ಯೂ ಪಾಟ್ಸ್ ಎಸೆದ ಚೆಂಡನ್ನು ವಿಲಿಯಮ್ಸನ್ ಡಿಫೆನ್ಸ್ ಮಾಡಿದರು. ಆದರೆ ಚೆಂಡು ಒಂದು ಪಿಚ್ ಆಗಿ ವಿಕೆಟ್ ಕಡೆ ಸಾಗಿತು. ಈ ವೇಳೆ ವಿಲಿಯಮ್ಸನ್ ಅವಸರದಲ್ಲಿ ಕಾಲಿನಿಂದ ಚೆಂಡನ್ನು ತಡೆಯಲು ಪ್ರಯತ್ನಿಸಿದರು. ಚೆಂಡಿಗೆ ಕಾಲು ರಭಸವಾಗಿ ಬಡಿದ ಕಾರಣ ಚೆಂಡು ವಿಕೆಟ್ಗೆ ಬಡಿದು ಔಟ್ ಆದರು. ಸದ್ಯ ಈ ವಿಡಿಯೊ ‘ಅನ್ಲಕ್ಕಿ ವಿಲಿಯಮ್ಸನ್’ ಎಂಬ ಹ್ಯಾಶ್ ಟ್ಯಾಗ್ನಿಂದ ವೈರಲ್ ಆಗುತ್ತಿದೆ.
ಕಾಲಿನಿಂದ ಚೆಂಡು ತಡೆಯಬಹುದೇ?
ಬೌಲರ್ ಒಬ್ಬ ಎಸೆದ ಎಸೆತ ಬ್ಯಾಟ್ಗೆ ಬಡಿದು ಚೆಂಡು ವಿಕೆಟ್ಗೆ ಬಡಿಯುವ ಮುನ್ನ ಬ್ಯಾಟ್ನಿಂದ ಅಥವಾ ಕಾಲಿನಿಂದ ಇದನ್ನು ತಡೆದರೆ ಇದನ್ನು ಔಟ್ ಎಂದು ಪರಿಗಣಿಸುವುದಿಲ್ಲ. ಈ ನಿಯಮ ಐಸಿಸಿಯಲ್ಲಿದೆ. ಆದರೆ ಕೈಗಳಿಂದ ಚೆಂಡನ್ನು ತಡೆದರೆ ಇದನ್ನು ಔಟ್ ಎಂದು ಒಂದು ತೀರ್ಪು ನೀಡಲಾಗುತ್ತದೆ. ಒಂದೊಮ್ಮೆ ಬ್ಯಾಟರ್ ಕ್ರೀಸ್ ಬಿಟ್ಟು ಮುಂದೆ ಬಂದ ವೇಳೆ ಫೀಲ್ಡರ್ ಒಬ್ಬ ವಿಕೆಟ್ನತ್ತ ಚೆಂಡನ್ನು ಎಸೆದರೆ ಅದನ್ನು ಬ್ಯಾಟರ್ ತಡೆದರೆ ಇದು ಕೂಡ ಔಟ್ ಎಂದು ನಿರ್ಧರಿಸಲಾಗುತ್ತದೆ.
ಈಗಾಗಲೇ 2 ಪಂದ್ಯಗಳನ್ನು ಸೋತಿರುವ ನ್ಯೂಜಿಲ್ಯಾಂಡ್ ತವರಿನಲ್ಲಿ ಕ್ಲೀನ್ಸ್ವೀಪ್ ಮುಖಭಂಗದಿಂದ ಪಾರಾಗಬೇಕಿದ್ದರೆ ಮೂರನೇ ಪಂದ್ಯವನ್ನು ಗೆಲ್ಲಲ್ಲೇ ಬೇಕಾದ ಒತ್ತಡಕ್ಕೆ ಸಿಲುಕಿದೆ. ಮೂರನೇ ಪಂದ್ಯದಲ್ಲಿ ಬ್ಯಾಟಿಂಗ್ ನಡೆಸುತ್ತಿರುವ ಕಿವೀಸ್ ಮೊದಲ ಇನಿಂಗ್ಸ್ನಲ್ಲಿ ಬೃಹತ್ ಮೊತ್ತ ಪೇರಿಸುವ ಹಂತದಲ್ಲಿ ಬ್ಯಾಟಿಂಗ್ ನಡೆಸುತ್ತಿದೆ.