ನವದೆಹಲಿ: ಸ್ವಿಟ್ಜರ್ಲೆಂಡ್ ಸರ್ಕಾರವು ಭಾರತದ ಜತೆಗಿನ ಡಬಲ್ ಟ್ಯಾಕ್ಸೇಶನ್ ಅವಾಯ್ಡೆನ್ಸ್ ಅಗ್ರಿಮೆಂಟ್ (DTAA) ಅಡಿಯಲ್ಲಿರುವ ಅತ್ಯಂತ ಒಲವುಳ್ಳ ರಾಷ್ಟ್ರಗಳ ಪಟ್ಟಿಯಿಂದ ಭಾರತವನ್ನು ಕೈಬಿಟ್ಟಿದೆ (Most favoured nation). ಆ ಮೂಲಕ ಭಾರತದ ಕಂಪಿನಿಗಳಿಗೆ ಈವರೆಗೆ ಇದ್ದ MFN ತೆರಿಗೆ ನೀತಿಯನ್ನು ಹಿಂಪಡಿದೆ. ಇದು ಭಾರತದಲ್ಲಿನ ಸ್ವಿಸ್ ಹೂಡಿಕೆಗಳ ಮೇಲೆ ಪರಿಣಾಮ ಬೀರಬಹುದು ಮತ್ತು ಯುರೋಪಿಯನ್ ರಾಷ್ಟ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಭಾರತೀಯ ಕಂಪನಿಗಳ ಮೇಲೆ ಹೆಚ್ಚಿನ ತೆರಿಗೆಗಳಿಗೆ ಕಾರಣವಾಗುತ್ತದೆ ಎಂದು ಹೇಳಲಾಗುತ್ತಿದೆ (MFN Of Switzerland)
ಭಾರತದ ಸರ್ವೋಚ್ಚ ನ್ಯಾಯಾಲಯದ 2023 ನೆಸ್ಲೆ ತೀರ್ಪನ್ನು ಉಲ್ಲೇಖಿಸಿ ಸ್ವಿಸ್ ಸರ್ಕಾರವು ಡಬಲ್ ಟ್ಯಾಕ್ಸೇಶನ್ ಅವಾಯ್ಡೆನ್ಸ್ ಅಗ್ರಿಮೆಂಟ್ (DTAA) ನಲ್ಲಿ ಎಂಫ್‌ಎನ್ ಸ್ಥಿತಿಯ ಷರತ್ತುಗಳನ್ನು ಅಮಾನತುಗೊಳಿಸಿದೆ ಎಂದು ಸ್ವಿಸ್ ಹಣಕಾಸು ಇಲಾಖೆ ಡಿಸೆಂಬರ್ 11 ರಂದು ಹೇಳಿದೆ. ಭಾರತವು ಈ ಮೊದಲು ಕೊಲಂಬಿಯಾ ಮತ್ತು ಲಿಥುವೇನಿಯಾದೊಂದಿಗೆ ತೆರಿಗೆ ಒಪ್ಪಂದಗಳಿಗೆ ಸಹಿ ಹಾಕಿತ್ತು. ಇದು OECD ದೇಶಗಳಿಗೆ ಒದಗಿಸಿದ ದರಗಳಿಗಿಂತ ಇದು ಕೆಲವು ತೆರಿಗೆಗಳಲ್ಲಿ ಕಡಿಮೆ ದರದಲ್ಲಿ ತೆರಿಗೆಯನ್ನು ವಿಧಿಸಿತ್ತು.
ಕೊಲಂಬಿಯಾ ಮತ್ತು ಲಿಥುವೇನಿಯಾ ಒಇಸಿಡಿಗೆ ಸೇರುವುದರಿಂದ ಲಾಭಾಂಶಕ್ಕೆ ಶೇಕಡಾ 5 ರಷ್ಟು ದರವು ಭಾರತ-ಸ್ವಿಟ್ಜರ್ಲೆಂಡ್ ತೆರಿಗೆ ಒಪ್ಪಂದಕ್ಕೆ ಎಂಎಫ್‌ಎನ್ ಷರತ್ತು ಅಡಿಯಲ್ಲಿ ಅನ್ವಯಿಸುತ್ತದೆ ಎಂದು 2021 ರಲ್ಲಿ ಸ್ವಿಟ್ಜರ್ಲೆಂಡ್ ಸರ್ಕಾರ ಹೇಳಿದೆ. ಹೇಳಿಕೆಯಲ್ಲಿ, ಸ್ವಿಸ್ ಹಣಕಾಸು ಇಲಾಖೆಯು ಆದಾಯದ ಮೇಲಿನ ತೆರಿಗೆಗಳಿಗೆ ಸಂಬಂಧಿಸಿದಂತೆ ಡಬಲ್ ತೆರಿಗೆಯನ್ನು ತಪ್ಪಿಸಲು ಸ್ವಿಸ್ ಒಕ್ಕೂಟ ಮತ್ತು ರಿಪಬ್ಲಿಕ್ ಆಫ್ ಇಂಡಿಯಾ ನಡುವಿನ ಒಪ್ಪಂದ ಅಮಾನತು ಮಾಡಲಾಗಿದೆ ಎಂದು ತಿಳಿಸಿದೆ.
ಈ ಅಮಾನತು ಸ್ವಿಟ್ಜರ್ಲೆಂಡ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಭಾರತೀಯ ಘಟಕಗಳಿಗೆ ಹೆಚ್ಚಿನ ಪ್ರಮಾಣದ ತೆರಿಗೆಗೆ ಕಾರಣವಾಗಬಹುದು ಎಂದು ಹೇಳಲಾಗಿದೆ. ಈ ಬಗ್ಗೆ ಮಾತನಾಡಿದ ನಂಗಿಯಾ ಆಂಡರ್ಸನ್ M&A ತೆರಿಗೆ ಪಾಲುದಾರ ಸಂದೀಪ್ ಜುಂಜುನ್ವಾಲಾ, ಭಾರತದ ಕಂಪನಿಗಳ ಮೇಲೆ ಇದು ಪರಿಣಾಮ ಬೀರುತ್ತದೆ. ಅಂತರರಾಷ್ಟ್ರೀಯ ತೆರಿಗೆ ಚೌಕಟ್ಟಿನಲ್ಲಿ , ಇಕ್ವಿಟಿ ಮತ್ತು ಸ್ಥಿರತೆಯನ್ನು ಈ ಒಪ್ಪಂದ ಪರಿಣಾಮಕಾರಿಯಾಗಿತ್ತು, ಆದರೆ ಇದೀಗ ಇದು ಮುರಿದು ಬಿದ್ದಿರುವುದರಿಂದ ಭಾರತೀಯ ಉದ್ಯಮಗಳಿಗೆ ಹೊಡೆತ ಬೀರಬಹುದು ಎಂದು ಹೇಳಿದ್ದಾರೆ.
ಸ್ವಿಟ್ಜರ್ಲೆಂಡ್ ಮತ್ತು ಭಾರತದ ನಡುವಿನ ಎಂಫ್‌ಎನ್ ಷರತ್ತಿನ ಆಧಾರದ ಮೇಲೆ, ಅರ್ಹತಾ ಷೇರುದಾರರಿಂದ ಲಾಭಾಂಶದ ಮೇಲಿನ ತೆರಿಗೆ ದರವನ್ನು 10 ಪ್ರತಿಶತದಿಂದ 5 ಪ್ರತಿಶತಕ್ಕೆ ಇಳಿಸಲಾಗುವುದು ಎಂದು ಸ್ವಿಸ್ ಅಧಿಕಾರಿಗಳು ಆಗಸ್ಟ್ 2021 ರಲ್ಲಿ ಘೋಷಿಸಿದ್ದರು. ಆದರೆ ಸುಪ್ರೀಂ ಆದೇಶದ ನಂತರ ಒಪ್ಪಂದ ಮುರಿದು ಬಿದ್ದಿದೆ ಎಂದು ಅವರು ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ : America presidential election: ಕಸದ ಗಾಡಿ ಚಲಾಯಿಸಿ, ಕಸ ಎಂದವರಿಗೆ ತಿರುಗೇಟು ನೀಡಿದ ಟ್ರಂಪ್