ಪಾವಗಡ: ಶನಿವಾರ ಸ್ಥಳೀಯ ಶಾಸಕ ಹೆಚ್ ವಿ ವೆಂಕಟೇಶ್ ಹಾಗು ಮಾಜಿ ಸಚಿವರಾದ ವೆಂಕಟರವಣಪ್ಪ ಅವರ ಮನೆಗೆ ದಲಿತ ಸಂಘ ಸಂಸ್ಥೆಗಳಿಂದ ಮುತ್ತಿಗೆ ಹಾಕಿದ್ದಾರೆ.
ಈ ವೇಳೆ ದಲಿತ ಮುಖಂಡ ಸಿ ಕೆ ತಿಪ್ಪೇಸ್ವಾಮಿ ಮಾತನಾಡಿ ಕಳೆದ ಮೂರು ತಿಂಗಳ ಹಿಂದೆ, ಒಳ ಮೀಸಲಾತಿಯ ಬಗ್ಗೆ ಸುಪ್ರೀಂ ಕೋರ್ಟ್ ರಾಜ್ಯ ಸರ್ಕಾರಕ್ಕೆ ಆದೇಶ ನೀಡಿದೆ.
ಅವರವರ ರಾಜ್ಯ ಸರ್ಕಾರಗಳಿಗೆ ಅನ್ವಯಿಸುವಂತಹ ವಿಷಯ ಹಾಗಾಗಿ ಇದರ ಬಗ್ಗೆ ರಾಜ್ಯ ಸರ್ಕಾರವೇ ಕ್ರಮ ಕೈಗೊಳ್ಳಬೇಕು ಎಂಬುದಾಗಿ ನೇರವಾಗಿ ಸೂಚನೆ ನೀಡಿದೆ.
ಅದೇ ವಿಷಯವಾಗಿ ಎಚ್.ಎಸ್ ಮೋಹನ್ ದಾಸ್ ನಿವೃತ್ತಿ ನ್ಯಾಯಮೂರ್ತಿಗಳ ಅಡಿಯಲ್ಲಿ ಒಂದು ಕಮಿಟಿ ರಾಜ್ಯ ಸರ್ಕಾರ ಮಾಡಿದೆ.
ಈ ವಿಷಯದಲ್ಲಿ ಸುಪ್ರೀಂ ಕೋರ್ಟ್ ಯಾವುದೇ ತಕರಾರು ಇಲ್ಲ ಎಂಬುದಾಗಿಯೂ ಸಹ ಸೂಚನೆ ನೀಡಿದೆ.
ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಸರ್ಕಾರ ಮೂರು ಉಪಚುನಾವಣೆ ಇದ್ದ ಸಮಯದಲ್ಲಿ ಜನಗಳಿಗೆ ಮರಳು ಮಾಡುವ ವಿಷಯವಾಗಿ ಮೀಸಲಾತಿ ಬಗ್ಗೆ ಅಶ್ವಾಸನೆ ನೀಡಿದ್ದರು ಆದರೆ ಪದೇ ಪದೇ ಇತರೆ ಸಬೂಬುಗಳು ನೀಡಿಕೊಂಡು ಬರುತ್ತಿರುವುದು ಎಷ್ಟರಮಟ್ಟಿಗೆ ಸರಿ. ಇದರ ಬಗ್ಗೆ ಈಗಾಗಲೇ ಎ.ಜೆ ಸದಾಶಿವ ಆಯೋಗ ಸಿದ್ಧತೆ ಮಾಡಿದಂತಹ ಮಾದಿಗರಿಗೆ 6%. ಹೊಳೆಯರಿಗೆ 5% ಬೋವಿ. ಲಂಬಾಣಿ ಕೊರಚರಿಗೆ ಸಮುದಾಯ ದವರಿಗೆ 3% ಇತರರಿಗೆ 1% ರಂತೆ ಮೀಸಲಾತಿ ಜಾರಿ ಮಾಡ ಬೇಕೆಂಬದಾಗಿ ತಿಳಿಸಿತ್ತು .ಅದರಂತೆ ರಾಜ್ಯ ಸರ್ಕಾರ ಜಾರಿ ಮಾಡಬೇಕು ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುತ್ತೇವೆ ಎಂಬುದಾಗಿ ಪ್ರತಿಭಟಕಾ ರರು ತಿಳಿಸಿದರು.
ನಂತರ ಮನವಿ ಸ್ವೀಕರಿಸಿ ಮಾತನಾಡಿದ ಮಾಜಿ ಸಚಿವ ವೆಂಕಟರಾಣಪ್ಪ ಈ ವಿಷಯವಾಗಿ ನನ್ನ ಸಂಪೂರ್ಣ ಬೆಂಬಲ ಇರುತ್ತದೆ ಎಂಬುದಾಗಿ ದಲಿತ ಸಂಘದ ಮುಖಂಡರಿಗೆ ತಿಳಿಸಿದರು.
ಈ ವೇಳೆ ಇವೇಳಿ ದಂಡೋರ ನಾಗೇಶ್, ಡಿಎಸ್ಎಸ್ ಪೆದ್ದಣ್ಣ. ಕೆ ಪಿ ಲಿಂಗಣ್ಣ. ಮಂಗಳವಾಡ ಮಂಜುನಾಥ್. ಪ್ರಸಾದ್ ಬಾಬು. ವೈ. ಎನ್. ಹೆಚ್. ಧನಂಜಯ. ಮಲ್ಲಿಕಾರ್ಜುನ. ಇತರೆ ಅನೇಕ ದಲಿತ ಮುಖಂಡ ಇದ್ದರು.
ಇದನ್ನೂ ಓದಿ: #Pavagadabreaking