ಬರಾಕ್ ಒಬಾಮಾ ಹೇಳಿದ ಲಾಡೆನ್ ಹತ್ಯೆ ಕಥೆ (ಭಾಗ – 6)
ಡಾ.ಶ್ರೀಕಾಂತ್ ಭಟ್, ಜರ್ಮನಿ
ಈಸ್ಟರ್ನ್ ಟೈಮ್ ಸಂಜೆ 6 ಗಂಟೆ (ಪಾಕಿಸ್ತಾನದಲ್ಲಿ ಮೇ 2, 2011ರ ಬೆಳಗಿನ ಜಾವ 4:00 ಗಂಟೆ) ಗೆ, ಹೆಲಿಕಾಪ್ಟರ್‌ಗಳು ಜಲಾ ಲಾಬಾದ್ ವಾಯುನೆಲೆಗೆ ಸುರಕ್ಷಿತವಾಗಿ ಹಿಂತಿರುಗಿದವು. ಅದಾದ ನಂತರ ನನಗೆ ಹಂತ ಹಂತ ವಾಗಿ ಆತಂಕ ತಣ್ಣಗಾಗುತ್ತಾ ಹೋಯಿತು. ಸ್ವಲ್ಪ ಹೊತ್ತಿನಲ್ಲಿಯೇ ವಿಡಿಯೋ ಕಾಲ್ ಮಾಡಿದ್ದ ಮೆಕ್-ರಾವೆನ್, ಕೊಲ್ಲಲ್ಪಟ್ಟವ ಬಿನ್ ಲಾಡೆನ್ ಎಂಬ ವಿಷಯದ ಬಗ್ಗೆ ಯಾವುದೇ ಸಂಶಯವಿಲ್ಲ.
ನಮ್ಮ ಗುಪ್ತಚರ ವಿಭಾಗದ ‘ಫೇಷಿಯಲ್ ರೆಕಗ್ನಿಷನ್’ ತಂತ್ರಾಂಶವೂ ಅದನ್ನೇ ಸೂಚಿಸಿ, ಖಚಿತ ಪಡಿಸಿದೆ ಎಂದರು. ‘‘ಕಾರ್ಯಾ ಚರಣೆಯ ವೇಳೆ ಸತ್ತು-ಬಿದ್ದ ವ್ಯಕ್ತಿಯ ಎತ್ತರ ಅಳೆಯಲು, 6 ಫೂಟು, 2 ಇಂಚು ಎತ್ತರ ವಿರುವ ಒಬ್ಬ ಸೀಲ್ ಕಮಾಂಡರ್‌ನನ್ನು, ಹೆಣದ ಪಕ್ಕದಲ್ಲಿ ಮಲಗಿಸಿ ಹೋಲಿಸಲಾಯಿತು. ಹೆಣವು ಅಜಮಾಸು 2 ಇಂಚು ಎತ್ತರ ಇತ್ತು, ಅಂದರೆ ಶವದ ಪೂರ್ತಿ ಎತ್ತರ 6 ಪೂಟು 4 ಇಂಚು ಇದ್ದಿರಬೇಕು. ಅದು ಬಿನ್ ಲಾಡೆನ್ ನ ಎತ್ತರಕ್ಕೆ ಹೋಲುತ್ತದೆ’’ ಎಂದು ಮೆಕ್ರಾವೆನ್.
ಹೇಳುತ್ತಿದ್ದರು, ನಾನು ಆಶ್ಚರ್ಯ ಚಕಿತನಾಗಿ, “Seriously, Bill?” ಎಂದು ಸ್ವಲ್ಪ ವ್ಯಂಗ್ಯವಾಗಿ ಕೇಳಿದೆ ‘‘ಅಲ್ಲಾ, ಅದೆಷ್ಟೋ ಅಳೆದು ತೂಗಿಸಿ ಈ ಕಾರ್ಯಾಚರಣೆ ಮಾಡಿದಿರಿ, ಆದರೆ ಬಿದ್ದ ಹೆಣದ ಉದ್ದ ಪರಿಶೀಲಿಸಲು ಒಂದು ಅಳತೆಪಟ್ಟಿ ಇರಲಿಲ್ಲವೇ?’’
ಎಂದು ಕಾಲೆಳೆದೆ. ಅದು ನನ್ನ ಆ ದಿನದ ಮೊದಲ ನಗುಭರಿತ ಉಲ್ಲಾಸದ ಮಾತಾಗಿತ್ತು. ಆದರೆ ನಗು ಬಹಳ ಹೊತ್ತು ಉಳಿಯ ಲಿಲ್ಲ.
ಸ್ವಲ್ಪ ಹೊತ್ತಿನಲ್ಲಿಯೇ, ಹೆಣದ ಫೋಟೋ ನಮ್ಮ ಮೇಜಿನ ಮೇಲೆ ಹರಿದಾಡಿತು. ಒಸಾಮಾ ಬಿನ್ ಲಾಡೆನ್‌ನ ಕಳೆ ಬರವೇ
ಆಗಿತ್ತು. ಆದರೂ ಯಾವುದಕ್ಕೂ ಒಮ್ಮೆ ಡಿಎನ್‌ಎ ಟೆಸ್ಟ್ ಮಾಡಿಯೇ ತಪಶೀಲು ಮಾಡಬೇಕು, ಇದಕ್ಕೆ ಒಂದರಿಂದ ಎರಡು ದಿನ ಬೇಕು ಎಂದರು ‘ಲಿಯೋನ್ ಮತ್ತು ಮೆಕ್-ರಾವೆನ್’. ದಾಳಿಯ ಸಮಾಚಾರವನ್ನು ಒಂದೆರಡು ದಿನ ತಡೆಹಿಡಿಯೋಣವೇ? ಎಂದು ಒಮ್ಮೆ ಚರ್ಚಿಸಲಾಯಿತು. ಆದರೆ ಅಷ್ಟೊತ್ತಿಗಾಗಲೇ, ಒಂದು ಹೆಲಿಕಾಪ್ಟರ್ ಪಾಕಿಸ್ತಾನದಲ್ಲಿ ಧ್ವಂಸಗೊಂಡ ವಿಚಾರ ಇಂಟರ್‌ನೆಟ್ ನಲ್ಲಿ ಹರಿದಾಡಲು ಶುರುವಾಗಿತ್ತು.
ನಿರ್ದೋಷಿಗಳೆಂದು ಸಾಬೀತು ಪಡಿಸಲು ಮನವಿ: ಕೆಲವೇ ನಿಮಿಷಗಳಲ್ಲಿ, ವೈಟ್ ಹೌಸಿನ ಜಂಟಿ- ಮುಖ್ಯಸ್ಥ ‘ಮೈಕ್ ಮುಲ್ಲನ್’ ಪಾಕಿಸ್ತಾನದ ಮಿಲಿಟರಿ ಮುಖ್ಯಸ್ಥ ‘ಜನರಲ್ ಅಷ್ಫಾಕ್ ಪರ್ವೇಜ್ ಖಯಾನಿ’ ಗೆ ದೂರವಾಣಿಯ ಮೂಲಕ ಕರೆ ಮಾಡಿ
ದರು. ಮಾತು ನಯ-ನಾಜೂಕಿನಿಂದ ಕೂಡಿತ್ತಾದರೂ ‘ಖಯಾನಿ’ ನಾವು ಕೊಂದಿದ್ದು ಬಿನ್- ಲಾಡೆನ್ ಎಂದು ಪ್ರಮಾಣೀಕರಿಸಿ, ನಮ್ಮನ್ನು ನಿರ್ದೋಷಿಗಳೆಂದು ಆದಷ್ಟು ಬೇಗನೆ ಸಾಬೀತು ಪಡಿಸಲು ಮನವಿ ಮಾಡಿಕೊಂಡರು.
ಪಾಕಿಸ್ತಾನಿ ಜನರ ಭಾವನೆಗಳಿಗೆ ಧಕ್ಕೆೆ ತರದಿರಲು ಅದು ಸಹಾಯವಾಗುತ್ತದೆ ಎಂಬುದು ಅವರ ಅಭಿಪ್ರಾಯವಾಗಿತ್ತು. ಈ ಕಾರ್ಯಾಚರಣೆಯ ಸುದ್ದಿಯನ್ನು ಇನ್ನೂ 24ಗಂಟೆಗಳ ಕಾಲ ತಡೆಹಿಡಿ ಯುವುದು ಸಾಧ್ಯವೇ ಇಲ್ಲವಾಗಿತ್ತು. ತಕ್ಷಣ, ನನ್ನ
ಸಹಾಯಕ ‘ಬೆನ್’ ಅವರನ್ನು ಕರೆದು ಕೆಲವಷ್ಟು ಟಿಪ್ಪಣಿ ಕೊಟ್ಟು ಸಂಜೆ ವೇಳೆ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಲು
ಭಾಷಣವನ್ನು ಸಿದ್ಧಪಡಿಸಲು ಕೋರಿದೆ.
ಬುಷ್, ಬಿಲ್ ಕ್ಲಿಂಟನ್‌ರಿಗೆ ಕರೆಮಾಡಿ ಸುದ್ದಿ ತಿಳಿಸಿದೆ: ಮುಂದಿನ ಹಲವು ಗಂಟೆಗಳು, ವೈಟ್ -ಹೌಸ್‌ನಲ್ಲಿ ಒಂದು ರೀತಿಯ ಕುತ್ತಿಗೆ ಹಿಸುಕಿದ ವಾತಾವರಣವೇ ಇತ್ತು ಎಂದು ಹೇಳಬಹುದು. ರಾಜತಾಂತ್ರಿಕ ಅಧಿಕಾರಿಗಳು, ಬೇರೆ ಬೇರೆ ದೇಶದ ಸರಕಾರ ಗಳನ್ನು ಸಂಪರ್ಕಿಸಿ ವಿಷಯ ತಿಳಿಸುವ ಕಾರ್ಯದಲ್ಲಿ ತೊಡಗಿದರೆ, ಸಂವಹನ ವಿಭಾಗ, ಮಾಧ್ಯಮಗಳಿಗೆ ಸುದ್ದಿ ಸಾರಾಂಶವನ್ನು
ಸಿದ್ಧಪಡಿಸುವುದರಲ್ಲಿ ನಿರತವಾಗಿತ್ತು. ನಾನು ಹಿಂದಿನ ರಾಷ್ಟ್ರಾಧ್ಯಕ್ಷರಾದ ಜಾರ್ಜ್ ಡಬ್ಲ್ಯೂ. ಬುಷ್ ಮತ್ತು ಬಿಲ್ ಕ್ಲಿಂಟನ್‌ರಿಗೆ ಕರೆಮಾಡಿ ಸುದ್ದಿ ತಿಳಿಸಿದೆ.
ಬುಷ್ ಜತೆಗೆ ಮಾತನಾಡುವಾಗ ಅವರು ಆರಂಭಿಸಿದ ಕಾರ್ಯಾಚರಣೆಯ ಫಲ ಇಂದು ದೊರೆತಿದೆ ಎಂದು ತಿಳಿಸಿ ಕೃತಜ್ಞತೆ ಸಲ್ಲಿಸಿದೆ. ಅಂಟ್ಲಾಂಟಿಕ್ ಸಮುದ್ರದ ಆಚೆ ಮಧ್ಯರಾತ್ರಿಯ ಹೊತ್ತಾಗಿದ್ದರೂ, ಡೇವಿಡ್ ಕ್ಯಾಮರೂನ್ (ಆಗಿನ ಗ್ರೇಟ್ ಬ್ರಿಟನ್ ಪ್ರಧಾನಿ) ಅವರಿಗೆ ಕರೆಮಾಡಿ, ವಿಷಯವನ್ನು ಅರುಹಿ, ಅಫ್ಘಾನ್ ಯುದ್ಧಕ್ಕೆ ನಮಗೆ ಪ್ರಬಲವಾಗಿ ಬೆಂಬಲ ಕೊಟ್ಟಿದ್ದನ್ನು ಮತ್ತೊಮ್ಮೆ ಶ್ಲಾಘಿಸಿದೆ.
ನಂತರದ ಸರದಿ ಪಾಕಿಸ್ತಾನದ ಪ್ರಧಾನಿ ‘ಆಸಿಫ್ ಅಲಿ ಜರ್ದಾರಿ’ ಯವರದ್ದಾಗಿತ್ತು. ಆ ಪರಿಸ್ಥಿತಿಯಲ್ಲಿ ಜರ್ದಾರಿಯವರ ಜತೆ ಮಾತು ಕಷ್ಟಕರ ಎಂದು ಭಾವಿಸಿದ್ದೆ. ಆದರೆ ನಾನು ಕರೆ ಮಾಡಿದಾಗ, ತೀರಾ ಆಶ್ಚರ್ಯಕರ ರೀತಿಯಲ್ಲಿ, ಅವರೇ ನನ್ನನ್ನು
ಅಭಿನಂದಿಸಿದ್ದರು ಮತ್ತು ಹೆಚ್ಚಿನ ಸಹಕಾರಕ್ಕೆ ಸಿದ್ಧವಿರುವುದಾಗಿ ಹೇಳಿದರು.
“Whaterver the fallout, it is a very good news,” ಎಂದರು. ಅವರ ಹೆಂಡತಿ ‘ಬೆನಜೀರ್ ಭುಟ್ಟೋ’, ಉಗ್ರರ ಅಟ್ಟಹಾಸ ದಿಂದಲೇ ಬಲಿಯಾಗಿದ್ದನ್ನು ಸ್ಮರಿಸಿದರು. ಮತ್ತು ಅದೇ ಉಗ್ರರಿಗೆ ಅಲ್-ಖೈದಾ ನಂಟು ಇದ್ದದ್ದು ತಿಳಿದ ವಿಷಯವೇ ಆಗಿದ್ದರಿಂದ ಅವರ ಬೇಗುದಿ ಸ್ವಾಭಾವಿಕವೂ ಆಗಿತ್ತು. ಇಷ್ಟೆಲ್ಲದರ ನಡುವೆ ಮಿಶೆಲ್ (ಪತ್ನಿ) ರನ್ನು ಪೂರ್ತಿ ದಿನವೆಲ್ಲ ಭೇಟಿಯಾಗುವ ಅವಕಾಶವೇ ಆಗಿರಲಿಲ್ಲ. ಆ ದಿನ ಅವಳು ವೈಟ್ ಹೌಸಿನಲ್ಲಿ ಇರಲಿಲ್ಲ ಕೂಡ.
ಮಕ್ಕಳನ್ನು ಅಜ್ಜಿಯ ಮನೆಯಲ್ಲಿ ಬಿಟ್ಟು ತನ್ನ ಸ್ನೇಹಿತರೊಡನೆ ರಾತ್ರಿ ಊಟಕ್ಕೆ ತೆರಳಿದ್ದಳು. ಮನೆಯಲ್ಲೇ ಇದ್ದಿದ್ದರೆ, ಅವಳಿಗೆ ಸುದ್ದಿ ಮುಂಚೆಯೇ ನಾನೇ ತಿಳಿಸಿರುತ್ತಿದ್ದೆ ಅನ್ನಿಸುತ್ತದೆ. ನಾನು ಮನೆಗೆ ಹೋಗಿ, ಉಲ್ಲಾಸದಿಂದ ಸ್ನಾನಾದಿ ಕೆಲಸಗಳನ್ನು ಮುಗಿಸಿ, ಸೂಟ್ ತೊಟ್ಟು, ಟೈ ಕಟ್ಟುತಿದ್ದೆ, ಅಷ್ಟರಲ್ಲಿ ಬಾಗಿಲ ಬಳಿಬಂದು ನಿಂತಿದ್ದಳು ನನ್ನಾಕೆ.
ಱ*******?ಱಅಂದಳು. ನಾನು ವಿಜಯೋತ್ಸಾಹದ ಸುದ್ದಿಯನ್ನು ಹಂಚಿಕೊಂಡೆ. ಅವಳು ಮುಗುಳುನಗೆ ಬೀರಿ, ನನ್ನನ್ನು ಭರದಿಂದ ತಬ್ಬಿದಳು. “That’s amazing babe,… Really How do you feel ?”ಎಂದಳು. ನಾವು ಅಮೆರಿಕನ್ನರು, ಅಂದು ಕೊಂಡಿದ್ದನ್ನು ಸಾಧಿಸಲು ಶಕ್ಯರು: “Right now, just relieved,…ಆದರೆ, ಮತ್ತೆ ಇನ್ನು ಎರಡು ತಾಸಿನಲ್ಲಿ ಭೇಟಿಯಾಗೋಣ’’ ಎಂದು ಅಲ್ಲಿಂದ ಹೊರಟೆ.
ಮತ್ತೆ ಆಫೀಸಿಗೆ ಬರುವಷ್ಟರಲ್ಲಿ, ‘ಬೆನ್’ ಭಾಷಣದ ಬರವಣಿಗೆಯ ಕೊನೆಯ ಹಂತದಲ್ಲಿದ್ದರು. ನಾನು ಕೆಲವೇ ವಿಷಯಗಳನ್ನು ಸೂಚ್ಯವಾಗಿ ಹೇಳಿದ್ದೆ. 9/11 ದಾಳಿಯಲ್ಲಿ ಸಂತ್ರಸ್ತರ ದುಃಖ, ತದನಂತರ ತೋರಿದ ಒಕ್ಕಟ್ಟುನ್ನು ಎತ್ತಿ ಹೇಳಬೇಕು. ಕಾರ್ಯಾ ಚರಣೆಯಲ್ಲಿ ಭಾಗಿಯಾವದರಿಂದ ಹಿಡಿದು, ಮಿಲಿಟರಿಯ ಮತ್ತು ಗುಪ್ತಚರ ಅಧಿಕಾರಿಗಳನ್ನು ಅಭಿನಂದಿಸಬೇಕು. ಅವರೆಲ್ಲರೂ ತಮ್ಮನ್ನು ತಾವು ದೇಶ ಸೇವೆಗೆ ಅರ್ಪಿಸಿ, ಉಳಿದವರಿಗೆ ಸುರಕ್ಷಿತ ಎಂಬ ಭಾವನೆಯನ್ನು ಒದಗಿಸುತ್ತಾರೆ ಎಂಬುದನ್ನು ತಿಳಿಸಬೇಕು. ನಮ್ಮ ಹೋರಾಟ ’ಅಲ್ ಖೈದಾ’ ವಿರುದ್ಧವೇ ಹೊರತು, ಇಸ್ಲಾಂ ವಿರುದ್ಧ ಅಲ್ಲ ಎಂಬುದನ್ನು ಮತ್ತೊಮ್ಮೆ ಸ್ಪಷ್ಟಪಡಿಸಬೇಕು.
ನಾವು ಅಮೆರಿಕನ್ನರು, ಅಂದುಕೊಂಡಿದ್ದನ್ನು ಸಾಧಿಸಲು ಶಕ್ಯರು ಎಂಬಂತೆ ಕೊನೆಯ ಶಬ್ದಗಳು, ಜಗತ್ತಿಗೆ ಮತ್ತು ನಮಗೇ ನೆನಪಿಸುವಂತೆ ಇರಬೇಕು ಎಂದು ಹೇಳಿದ್ದೆ. ಯಾಕೋ ಗೊತ್ತಿಲ್ಲ, ಆ ಹೊತ್ತಿನಲ್ಲಿ ನನಗೆ 9/11 ದುರ್ಘಟನೆಯ ನೆನಪುಗಳು ಮತ್ತೆ ಮತ್ತೆ ನನ್ನ ತಲೆಯಲ್ಲಿ ಹಾದು ಹೋಗುತ್ತಿತ್ತು. ನಾನು ಆ ದಿನ ಏನು ಮಾಡುತ್ತಿದ್ದೆ, ಮಿಶೆಲ್ ಆ ದಿನ ಹಿರಿಯ ಮಗಳು ‘ಮಾಲಿಯಾ’ಳನ್ನು ಮೊದಲ ದಿನ ಪ್ರಿಸ್ಕೂಲ್ ಗೆ ಕರೆದೊಯ್ದಿದ್ದು, ದಾಳಿಯ ನಂತರ ದಿಕ್ಕುತೋಚದೆ ಫೋನ್ ಮಾಡಿದ್ದು, ಕಿರಿಯ
ಮೂರು ತಿಂಗಳ ಮಗಳು ‘ಸಾಶಾ’ ನನ್ನ ಎದೆಯ ಮೇಲೆ ಮಲಗಿದ್ದರಿಂದ, ಅವಳನ್ನು ಎತ್ತಿಕೊಂಡು ಸಂಜೆ ಒಬ್ಬನೇ ಕತ್ತಲಲ್ಲಿ ಕುಳಿತು ಟೀವಿ ನೋಡಿದ್ದು, ತಡರಾತ್ರಿ ’ನ್ಯೂ ಯಾರ್ಕ್’ ನಲ್ಲಿರುವ ಹಳೆಯ ಗೆಳೆಯರನ್ನು ಸಂಪರ್ಕಿಸಲು ಪ್ರಯತ್ನ ಪಟ್ಟಿದ್ದು,
ಹೀಗೆ ಒಂದಾದ ನಂತರ ಒಂದು ಘಟನೆಗಳು, ಮನಃಪಟಲದಲ್ಲಿ, ಮರುಕಳುಹಿಸುತ್ತಿದ್ದವು.
ನಮಗಷ್ಟೇ ಅಲ್ಲ, ಎಲ್ಲ ಅಮೆರಿಕನ್ನರಿಗೆ 9/11 ದುರಂತದ ನಂತರ ಮೊದಲಿನ ಬದುಕು ಮರುಕಳಿಸಲೇ ಇಲ್ಲ ಎಂಬುದು ಸತ್ಯವೇ ಆಗಿತ್ತು. ಆ ದಿನದಿಂದ ಹಿಡಿದು ಬಿನ್ ಲಾಡೆನ್ ಅಂತ್ಯದ ವರೆಗಿನ ಘಟನೆಗಳ ಸರಪಣಿಯನ್ನು, ಮನಸ್ಸು ಕೊಂಡಿ ಕೂಡಿಸುತ್ತಾ, ಒಂದಕ್ಕೊಂದು ಕಾರಣವನ್ನು ಕಲ್ಪಿಸಿ, ಊಹಿಸಲೂ ಸಾಧ್ಯವಿಲ್ಲದ ಘಟನೆ ಸಂಭವಿಸಿದ್ದನ್ನು ಮೆಲಕು ಹಾಕುತಿತ್ತು.
ಬಿನ್ ಲಾಡೆನ್‌ನ ಸಾವಿನ ಸುದ್ದಿ ಮಾಧ್ಯಮಗಳಲ್ಲಿ ಬಿತ್ತರ: ಕೊನೆಯ ಬಾರಿ ಒಮ್ಮೆ ಭಾಷಣ ಓದಿ, ಎದ್ದು ನಿಂತು “Good job, brother,” ಎಂದು ‘ಬೆನ್’ ರ ಬೆನ್ನು ತಟ್ಟಿದೆ. ಅವರಿಗೂ ಆ ಕ್ಷಣ ಮುಖದಲ್ಲಿ ಭಾವವನ್ನು ಕಟ್ಟಿ ಹಾಕಲಾಗಲಿಲ್ಲ, ಅವರ ಕಣ್ಣು
ತುಂಬಿ ಬಂದಿತ್ತು. ಅದಾಗಲೇ ಇಲ್ಲಿ ರಾತ್ರಿ 11:30ರ ಸಮಯ. ಎಲ್ಲಾ ಮಾಧ್ಯಮಗಳು ಅಷ್ಟೊತ್ತಿಗೆ ಬಿನ್ ಲಾಡೆನ್‌ನ ಸಾವಿನ ಸುದ್ದಿಯನ್ನು ಬಿತ್ತರಿಸಿದ್ದವು. ನನ್ನ ಭಾಷಣದ ನೇರ ಪ್ರಸಾರಕ್ಕೆ ಕಾದು ಕುಳಿತಿದ್ದವು.
ಅದಾಗಲೇ ಜನಸಮೂಹ ಹಾದಿ ಬೀದಿಗಳಲ್ಲಿ ಕೂಡಿ ವಿಜಯೋತ್ಸವಕ್ಕೆ ತೊಡಗಿದ್ದರು. ವೈಟ್ ಹೌಸ್‌ನ ಹೊರಗೂ ಭಾರಿ ಸಂಖ್ಯೆಯಲ್ಲಿ ಜಮಾವಣೆಗೊಂಡಿದ್ದರು. . USA! USA! USA! ಎಲ್ಲೆಲ್ಲಿಯೂ ಮೊಳಗಿ ಆ ರಾತ್ರಿಯನ್ನು ಆವರಿಸಿತ್ತು. ಸಂತಸ ತಿಳಿಯಾದ ಮೇಲೂ, ದೇಶದ ಮನೋ ಧರ್ಮವೇ ಬದಲಾದಂತೆ ಗೋಚರಿಸುತ್ತಿತ್ತು. ನಾನು ಚುಕ್ಕಾಣಿ ಹಿಡಿದಾಗಿನಿಂದ, ಇದೆ ಮೊಟ್ಟ ಮೊದಲ ಬಾರಿಗೆ ನಾವು ಏನನ್ನು ಸಾಧಿಸಿದ್ದೆವು ಎಂಬುದನ್ನು ಗಿಣಿಪಾಠ ಹೇಳಿದಂತೆ ಮತ್ತೆ ಮತ್ತೆ ಹೇಳಬೇಕಾದ
ಸಂದರ್ಭ ವಿರಲಿಲ್ಲ. ಆದರೆ ತೆಗೆದುಕೊಳ್ಳಬೇಕಾದ ತೀರ್ಮಾನಗಳಿಗೇನೂ, ಕಡಿಮೆ ಇರಲಿಲ್ಲ.
ಲಾಡೆನ್ ನ ಕಳೇಬರದ ಫೋಟೋವನ್ನು ಬಿಡುಗಡೆ ಮಾಡಬೇಕೋ ಎಂಬ ಪ್ರಶ್ನೆ ಮರು ದಿನವೇ ಎದುರಾಯಿತು. ನಾನು ಖಂಡಿತಾ ಬೇಡ! ಯಾವುದೇ ಕಾರಣಕ್ಕೂ ಫೋಟೋವನ್ನು ಹೊರಗಡೆ ಹೋಗದಂತೆ ನೋಡಿ ಕೊಳ್ಳಬೇಕು. ಲಾಡೆನ್‌ನ ಹೆಣದ ಫೋಟೋ ಉಗ್ರರಿಗೆ ಉಮೇದುವಾರಿಕೆಯ ಸಂಕೇತವಾಗುವುದು ಬೇಡ ಎಂದು ಸ್ವಲ್ಪ ಗಟ್ಟಿಯಾಗಿಯೇ ಹೇಳಿದೆ. ಅಂದಹಾಗೆ ಕಾರ್ಯಾಚರಣೆಯ ವೇಳೆ ವಶಪಡಿಸಿಕೊಂಡ ಕಡತ ಮತ್ತು ಕಂಪ್ಯೂಟರ್ ನಲ್ಲಿ ಸಿಕ್ಕ ಮಾಹಿತಿಗಳು ಗುಪ್ತಚರ್ಯೆಗೆ ಅದ್ಭುತ ಖಜಾನೆಯಾಗಿ ಮಾರ್ಪಟ್ಟಿತು.
ನಿರ್ವಿವಾದವಾಗಿ ನಾವು ಈ ದಾಳಿಯಿಂದ ಅಲ್‌ಖೈದಾ ಸಂಘಟನೆಗೆ ದೊಡ್ಡ ಆಘಾತವನ್ನು ನೀಡಿದ್ದೆವು. ಅಮೆರಿಕಾದ ಜನತೆಗೆ ಅಬ್ಬೊಟ್ಟಾಬಾದ್ ಕಾರ್ಯಾಚರಣೆ ಒಂದು ಹಂತದ ಸಮಾಧಾನವನ್ನು ನೀಡಿತು ಎಂಬುದು ನನ್ನ ಭಾವನೆ. ಅಮೆರಿಕಾದ
ಪಡೆಗಳು ದಶಕಗಳಿಂದ ಭಾಗಿಯಾದ ಅಫ್ಘಾನ್ ಮತ್ತು ಇರಾಕ್ ಯುದ್ಧಗಳಿಂದ ಆಗಿರುವ ಉಪಯೋಗದ ಬಗ್ಗೆ ಯಾರಿಗೂ ಸ್ಪಷ್ಟತೆಯ ಕುರುಹೂ ಇರಲಿಲ್ಲ. ಭಯೋತ್ಪಾದನೆ ಒಂದಲ್ಲಾ ಒಂದು ರೀತಿಯಲ್ಲಿ ನಮ್ಮ ನಡುವೆ ಇರಲಿದೆ ಅದಕ್ಕೆ ಶರಣಾಗತಿಯಾಗಲಿ, ಅಂತ್ಯವಾಗಲಿ ಇಲ್ಲ! ಎಂದು ಭಾವಿಸಿದ್ದರೂ ತಪ್ಪಿಲ್ಲ.
ಆ ದೃಷ್ಟಿಯಲ್ಲಿ ನಮ್ಮ ಕಾರ್ಯಾಚರಣೆ ಅವರಿಗೆಲ್ಲ ಒಂದು ಹೊಸ ಆಶಾಭಾವವನ್ನು ಹುಟ್ಟು ಹಾಕಿತು, ಗೆಲುವಿನ ಮಾಧುರ್ಯವನ್ನು ನೀಡಿತು ಎಂಬುದು ನನ್ನ ಅನಿಸಿಕೆ. 9/11 ದಾಳಿಯ ಸಂತ್ರಸ್ತರ ಸಂಸಾರಗಳಿಗೆ, ನಮ್ಮ ಕಾರ್ಯಾಚರಣೆ ವೈಯಕ್ತಿಕವಾಗಿ ಸಮಾಧಾನ ಮತ್ತು ಸಂಬಂಧ ಕಲ್ಪಿಸಿತ್ತು. ಕಾರ್ಯಾಚರಣೆಯ ಮರುದಿನವೇ, 14 ವರ್ಷದ ಬಾಲಕಿಯೊಬ್ಬಳು
ನನಗೆ ಪತ್ರ ಬರೆದಿದ್ದಳು. 2001ರಲ್ಲಿ ನಾಲ್ಕೇ ವರ್ಷದ ಹಾಲು ಗಲ್ಲದ ಪುಟಾಣಿಯಾಗಿದ್ದ ‘ಪೆಟೋನ್ ವಾಲ್’, ಅವಳಿ ಕಟ್ಟಡದ ಅವಘಡದಲ್ಲಿ ಅಪ್ಪನನ್ನು ಕಳೆದುಕೊಂಡಿದ್ದಳು.
‘‘ಜಂಟಿ ವಿಮಾನಗಳು, ಕಟ್ಟಡಕ್ಕೆ ಡಿಕ್ಕಿ-ಹೊಡೆದು ಕುಸಿದು ಬೀಳುವ ಮುನ್ನ ಅಪ್ಪನ ಜತೆ ಫೋನಿನಲ್ಲಿ ಮಾತನಾಡಿದ್ದು ಇನ್ನೂ
ನನ್ನನ್ನು ಕಾಡುತ್ತಿದೆ. ಕೇಳಿಸಿಕೊಂಡ ಅಪ್ಪನ ಕೊನೆಯ ಧ್ವನಿ! ಎದುರಿಗೇ ನೋಡುತ್ತಿದ್ದ ಅಮ್ಮನ ‘ಅರಣ್ಯ’ ರೋದನ, ನರಳಾಟದ ನೋವು ಕ್ಷಣ ಕ್ಷಣವೂ ಇಂದಿಗೂ ಕಾಡುತ್ತಿದೆ. ಆದರೆ ಒಂದಂತೂ ಸತ್ಯ, 9/11 ದಾಳಿಯಲ್ಲಿ ಸತ್ತ ನನ್ನ ಅಪ್ಪನನ್ನು ಅಮೆರಿಕ ಮರೆತಿಲ್ಲ! ಇಂದು ತಮ್ಮ ಕುಟುಂಬದ ಭಾವನೆಯನ್ನು ವ್ಯಕ್ತಪಡಿಸಲು ಶಬ್ದಗಳೇ ಇಲ್ಲ!’’ ಎಂದು ಬರೆದಿದ್ದಳು ಆ ಪುಟ್ಟಮ್ಮ.
ಕ್ಷಣದಲ್ಲಿ ನನ್ನ ಕಣ್ಣು ನೀರಿನಲ್ಲಿ ತೋಯುತಿತ್ತು. ಒಮ್ಮೆ ನನ್ನ ಮಕ್ಕಳಿಗೂ ಅಪ್ಪನೋ ಅಮ್ಮನೋ ಇಲ್ಲದೇ ಹೋದ ಪರಿಸ್ಥಿತಿಯ ನೆನೆದು ದಿಗಿಲಾಯಿತು. ಆಗ ಮತ್ತೊಮ್ಮೆ ನಮ್ಮ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಎಲ್ಲರನ್ನು ನೆನೆದೆ! ಹೆಮ್ಮೆ ಎನಿಸಿತು. ಸೀಲ್ ಕಮಾಂಡೋಗಳಿಂದ ಹಿಡಿದು, ಮೊದಲಿನ ಗುಪ್ತಚರ ಮಾಹಿತಿ ಕಲೆಹಾಕಿದ ಕಾರ್ಕೂನನವರೆಗೆ, ರಾಜತಾಂತ್ರಿಕ ಅಧಿಕಾರಿ ಗಳಿಂದ ಹಿಡಿದು, ಕಾರ್ಯಾಚರಣೆಯ ವೇಳೆ ಹೊರಗಡೆ ನಿಂತು ಸ್ಥಳೀಯರನ್ನು ದೂರ ಕಳುಹಿಸುತ್ತಿದ್ದ ಅನುವಾದಕನ ವರೆಗೆ ಎಲ್ಲರೂ, ಎಲ್ಲೆಮೀರಿ, ನಿಸ್ವಾರ್ಥದಿಂದ, ಒಂದೇ ಗುರಿಯನ್ನು ಸಾಧಿಸಲು ನೆರವಾಗಿದ್ದರು.
‘ಸೀಲ್’ ತಂಡಕ್ಕೆ ಅಮೆರಿಕಾದ ಶ್ರೇಷ್ಠ ಮಿಲಿಟರಿ ಪ್ರಶಸ್ತಿ: ಕಾರ್ಯಾಚರಣೆ ಮುಗಿದು ನಾಲ್ಕು ದಿನದ ನಂತರ ನನ್ನ ಆಪೀಸಿಗೆ ಮೆಕ್-ರಾವೆನ್ ಭೇಟಿಯಿತ್ತಿದ್ದರು. ಕಾರ್ಯಾಚರಣೆಯ ನೇತೃತ್ವ ವಹಿಸಿದ್ದಕ್ಕಾಗಿ ತುಂಬು ಹೃದಯದ ಧನ್ಯವಾದ ತಿಳಿಸಿದೆ. ನೆನಪಿನ ಕಾಣಿಕೆಯಾಗಿ ಒಂದು ಅಳತೆ ಪಟ್ಟಿಯನ್ನು ನೀಡಿದೆ! ಅದರ ಮಾರನೆಯ ದಿನ ಮೆಕ್-ರಾವೆನ್ ಅವರ ತಂಡದ ಎಲ್ಲಾ
ಕಮಾಂಡೋಗಳನ್ನು ಭೇಟಿಮಾಡಿಸಿದರು.
ಪ್ರತಿಯೊಬ್ಬರ ಕೈ ಕುಲುಕಿ, ‘ಸೀಲ್’ ತಂಡಕ್ಕೆ ಅಮೆರಿಕಾದ ಶ್ರೇಷ್ಠ ಮಿಲಿಟರಿ ಪ್ರಶಸ್ತಿ Presidential Unit Citation ನ್ನು ಕೊಟ್ಟು
ಗೌರವಿಸಿದೆ. ಅವರೆಲ್ಲರೂ ಸೇರಿ ದಾಳಿಯ ವೇಳೆ ಹೊತ್ತೊಯ್ದಿದ್ದ ಅಮೇರಿಕಾದ ಧ್ವಜವನ್ನು, ಎಲ್ಲರ ಸಹಿಯ ಜೊತೆ, ನನಗೆ ಪರತ್ ಕಾಣಿಕೆಯಾಗಿ ನೀಡಿದರು.
ಇಂದಿಗೂ ಅದು ನನ್ನ ಬೆನ್ನ ಹಿಂದೆಯೇ ಇದೆ. ಅಂದಹಾಗೆ, ನನ್ನ ಭೇಟಿಯ ವೇಳೆ ಯಾರೂ, ಒಸಾಮಾ ಬಿನ್-ಲಾಡೆನ್ ಗೆ, ತಾನೇ ಗುಂಡಿಕ್ಕಿದ್ದು ಎಂದು ಹೇಳಲಿಲ್ಲ! ನಾನೂ ಕೇಳಲಿಲ್ಲ!
(ಮುಗಿಯಿತು)