ಹೈದರಾಬಾದ್: ರಾಮ್ ಗೋಪಾಲ್ ವರ್ಮಾ ರನ್ನು ವೆಸ್ಟರ್ನ್ ಇಂಡಿಯಾ ಸಿನಿ ನೌಕರರ ಒಕ್ಕೂಟದಿಂದಲೇ ಆರ್ಜಿವಿಯನ್ನು ಬ್ಯಾನ್ ಮಾಡಲಾಗಿದೆ!
ಸಿನಿಮಾ ಸಲುವಾಗಿ ದುಡಿದ ಕಾರ್ಮಿಕರಿಗೆ ಸಂಬಳ ನೀಡದ ಹಿನ್ನೆಲೆಯಲ್ಲಿ ನಿಷೇಧ ಹೇರಲಾಗಿದೆ. ಆರ್ಜಿವಿ ಅವರ ಬ್ಯಾನರ್ನಲ್ಲಿ ಕೆಲಸ ಮಾಡಿದ ಕಲಾವಿದರಿಗೆ, ತಂತ್ರಜ್ಞರಿಗೆ ಸೇರಿ ಸಾಕಷ್ಟು ಮಂದಿಗೆ ಆರ್ಜಿವಿ ಇನ್ನೂ ಸಂಬಳವನ್ನೇ ನೀಡಿಲ್ಲ. ಬರೋ ಬ್ಬರಿ 1ಕೋಟಿ 25 ಲಕ್ಷ ಮೀರಿದೆ. ಆ ಒಂದು ಕಾರಣಕ್ಕೆ ವೆಸ್ಟರ್ನ್ ಇಂಡಿಯಾ ಸಿನಿ ನೌಕರರ ಒಕ್ಕೂಟ ಸಾಕಷ್ಟು ಬಾರಿ ಈ ಬಗ್ಗೆ ಮನವಿ ಮಾಡಿದರೂ, ಯಾವುದೇ ಪ್ರತಿಕ್ರಿಯೆ ಅವರಿಂದ ಬಂದಿರಲಿಲ್ಲ.
ಒಟ್ಟಾರೆ 32 ಸಿನಿಮಾ ಯೂನಿಯನ್ಗಳು ಇವರೊಂದಿಗೆ ಮುಂದಿನ ದಿನಗಳಲ್ಲಿ ಕೆಲಸ ಮಾಡುವುದಿಲ್ಲ ಎಂದು ಹೇಳಿ ಕೊಂಡಿದ್ದು, ಒಕ್ಕೂಟದಿಂದ ಆರ್ಜಿವಿಗೆ ಕಳೆದ ವರ್ಷದ ಸೆಪ್ಟಂಬರ್ 17ರಂದೇ ನೋಟಿಸ್ ಸಹ ನೀಡಲಾಗಿತ್ತು. ಆದರೆ, ಯಾವುದಕ್ಕೂ ಪ್ರತಿಕ್ರಿಯಿಸದೇ ಕಣ್ತಪ್ಪಿಸಿಕೊಳ್ಳುತ್ತಿದ್ದಾರೆ ಎಂದು ಒಕ್ಕೂಟದ ಅಧ್ಯಕ್ಷ ಬಿ.ಎನ್ ತಿವಾರಿ ಆರೋಪಿಸಿದ್ದಾರೆ.