Saturday, 23rd November 2024

ಭಾಷೆ ಜ್ಞಾನ ಅಕ್ಷರ

ಹೇಮಂತ್‌ ಕುಮಾರ್‌ ಜಿ.

ಭಾಷೆಯು ಅಭಿವ್ಯಕ್ತಿಯ ಮಾಧ್ಯಮ. ನಾವು ಈ ಮಾಧ್ಯಮದಿಂದ ನಮ್ಮ ಮನದ ಮಾತನ್ನು ಆಡುತ್ತೇವೆ ಅಥವಾ ಬರೆದು ಕಳುಹಿಸುತ್ತೇವೆ. ಭಾಷೆ ಸರಿ ಇದ್ದರೆ, ಶಬ್ದಗಳ ಆಯ್ಕೆಯು ಸರಿ ಇದ್ದರೆ, ಆಗ ಮಾತ್ರ ನಮ್ಮ ಮಾತು ಇನ್ನೊಬ್ಬ ರಿಗೆ ಸರಿಯಾಗಿ ಮನದಟ್ಟಾಗುತ್ತದೆ. ಪ್ರತಿಯೊಂದು ಶಬ್ದದೊಂದಿಗೆ ಅದರ ಅರ್ಥವೂ ಬೆಸೆದು ಕೊಂಡಿರುತ್ತದೆ. ಶಬ್ದ ದೋಷವು ಅಪಾರ್ಥಕ್ಕೆ ಎಡೆ ಮಾಡಿಕೊಡುತ್ತದೆ.

ಈಗಿನ ಅಂತರ್ಜಾಲ ಯುಗದಲ್ಲಿ ವಿಶ್ವದೆಲ್ಲೆಡೆ ಆಂಗ್ಲವೇ ಮುಖ್ಯ ಭಾಷೆಯ ರೂಪದಲ್ಲಿ ಬಳಕೆಗೆ ಬರುತ್ತಿದೆ. ಹಣದ ರೂಪದಲ್ಲಿ ಅಮೆರಿಕದ ಡಾಲರ್ ಪ್ರಮುಖ ಎನಿಸಿದೆ. ನಮ್ಮ ಸ್ಥಿತಿ ಏನಾಗುತ್ತಿದೆ ಎಂದರೆ ಅತ್ತ ಮಾತೃಭಾಷೆ ಇತ್ತ ಆಂಗ್ಲಭಾಷೆ, ಎರಡನ್ನೂ ಪೂರ್ತಿಯಾಗಿ ಕಲಿಯಲಾಗುತ್ತಿಲ್ಲ. ಭಾಷೆಯು ನಮ್ಮ ವ್ಯಕ್ತಿತ್ವದ ಕನ್ನಡಿಯಾಗಿರುತ್ತದೆ ಎಂಬುದನ್ನೂ ನಾವು ಒಪ್ಪಲು ತಯಾರಿರುವುದಿಲ್ಲ.

ಆಗಿದೆ ಎಂದರೆ, ಆಗಿರಲಿ ಬಿಡಿ; ನಮಗಂತೂ ಕಲಿಯಬೇಕಿಲ್ಲ. ಆದರೆ ತಪ್ಪು ಭಾಷೆ ಅಥವಾ ತಪ್ಪು ಶಬ್ದಗಳ ಪ್ರಯೋಗ ನಮಗೆ
ಶೋಭೆ ತರುತ್ತದೆಯೇ? ವ್ಯಕ್ತಿತ್ವ ವಿಕಾಸದ ಎಷ್ಟು ವಿಧಾನಗಳು ಇಂದು ಕಲಿಕೆಯಲ್ಲಿವೆಯೋ, ಅವುಗಳಲ್ಲಿ ಮೊದಲ ಸೂತ್ರವೇ
ಭಾಷೆ. ಅದು ಕನ್ನಡವಾಗಲಿ, ಆಂಗ್ಲವಾಗಲಿ, ಇನ್ಯಾವುದೇ ಆಗಿರಲಿ.

ಯಾವಾಗ ನಾವು ಭಾಷೆಯನ್ನು ಸರಿಯಾಗಿ ಪ್ರಯೋಗಿಸುತ್ತೇವೋ, ಸರಿಯಾದ ಶಬ್ದಗಳನ್ನು ಆಯ್ಕೆ ಮಾಡುತ್ತೇವೋ, ಆಗ ಕೇಳಿಸಿಕೊಳ್ಳುವವರ ಮೇಲೆ, ಓದುವವರ ಮೇಲೆ, ವಿಶೇಷ ಪ್ರಭಾವ ಬೀರುತ್ತದೆ. ನೀವು ಎದುರಿರುವವರನ್ನು ಸಮ್ಮಾನಿಸುತ್ತೀರಿ ಎಂಬುದರ ಸೂಚಕವೂ ಇದಾಗಿರುತ್ತದೆ. ಇಂದಿನ ಯುವ ಪೀಳಿಗೆಯಲ್ಲಿ ಪ್ರಚಲಿತ ಭಾಷೆಯ ಒಂದು ಸಾಮಾನ್ಯ ಉದಾಹರಣೆ ನೋಡಿ- ಹುಡುಗ – ನೀನು ಈ ‘ಅಬಕಡ’ ಚಲನಚಿತ್ರ ನೋಡಿದ್ದೀಯಾ? ಸೂಪರ್ಬ್ ಮೂವೀ ಕಣೋ; ಮಸ್ತಿದೆ.

ನಾನಂತೂ ಈ ಮೂವಿಯನ್ನು ಇನ್ನೊಮ್ಮೆ ನೋಡುವ ಪ್ಲಾನ್ ಮಾಡ್ತಿದ್ದೀನಿ. ಹುಡುಗಿ – ಓ ಪ್ಲೀಸ್, ಏನ್ ಡಬ್ಬಾ ಫಿಲ್ಮಪ್ಪಾ. ನಾನಂತೂ ಮದುವೆ ಸೀನ್ ನೋಡೋಕೆ ಇನ್ಟ್ರೆಸ್ಟೆಡ್ ಇದ್ದ. ಆದ್ರೆ ಟಿಕೇಟ್ಸೇ ಸಿಗ್ತಿಲ್ಲ. ನೀನೇ ಏನಾದ್ರೂ ಡೀಲ್ ಮಾಡಿ ತಾ.ಹುಡುಗ – ಓಕೆ, ನೋಡ್ತೀನಿ. ಆದ್ರೆ ಏನೂ ಶ್ಯೂರ್ ಇಲ್ಲ. ಹುಡುಗಿ – ನೀನೆಂತಾ ಫ್ರೆಂಡೋ, ಇಷ್ಟೂ ಹೆಲ್ಪ್ ಮಾಡಕಾಗಲ್ವಾ?
ಹುಡುಗ – ಅರೇ, ಡೋಂಟ್ ವರಿ ಡಾ. ಹೆಲ್ಪ್ ಮಾಡೋಣ ಯಾರ್.

ಭಾಷೆಯು ಅಭಿವ್ಯಕ್ತಿಯ ಮಾಧ್ಯಮ. ನಾವು ಈ ಮಾಧ್ಯಮದಿಂದ ನಮ್ಮ ಮನದ ಮಾತನ್ನು ಆಡುತ್ತೇವೆ ಅಥವಾ ಬರೆದು ಕಳುಹಿಸುತ್ತೇವೆ. ಭಾಷೆ ಸರಿ ಇದ್ದರೆ, ಶಬ್ದಗಳ ಆಯ್ಕೆಯು ಸರಿ ಇದ್ದರೆ, ಆಗ ಮಾತ್ರ ನಮ್ಮ ಮಾತು ಇನ್ನೊಬ್ಬರಿಗೆ ಸರಿಯಾಗಿ ಮನದಟ್ಟಾಗುತ್ತದೆ. ಪ್ರತಿಯೊಂದು ಶಬ್ದದೊಂದಿಗೆ ಅದರ ಅರ್ಥವೂ ಬೆಸೆದುಕೊಂಡಿರುತ್ತದೆ. ಶಬ್ದ ದೋಷವು ಅಪಾರ್ಥಕ್ಕೆ ಎಡೆಮಾಡಿಕೊಡುತ್ತದೆ. ಆಹಾರ, ವಿಹಾರ, ಉಡುಗೆ- ತೊಡುಗೆ, ಇತ್ಯಾದಿಗಳ ಜೊತೆಗೆ ನಾವು ಭಾಷೆಯ ಸ್ವರೂಪವನ್ನೂ ಬದಲಿಸುತ್ತಿರುತ್ತೇವೆ. ಆದರೆ ಅದಕ್ಕೆ ಮುಂದೆ ತಿದ್ದುಪಡಿ ಬೇಕಾಗುತ್ತದೆ. ಹಾಗಾಗಿ ಆರಂಭದಲ್ಲಿಯೇ ಸರಿಯಾದ ಭಾಷೆಯ ಉಪಯೋಗ ಏಕೆ ಮಾಡಬಾರದು? ಉದಾ – ಬಾಯಿಗೆ ನೀರು ಬಿಡು.

ಲೋಕ ಪರಂಪರೆಯಲ್ಲಿ ಈ ನಾಣ್ನುಡಿಯು ಕೇವಲ ಸತ್ತವರಿಗಾಗಿ ಬಳಸಲಾಗುತ್ತದೆಯೇ ಹೊರತು ಬಾಯಾರಿದವರಿಗಲ್ಲ. ಇದೇ ರೀತಿ – ಆಗಲಿ, ನಾನು ಹೋಗ್ತೀನಿ ಎಂಬ ವಾಕ್ಯ. ನಮ್ಮ ಸಂಸ್ಕೃತಿಯಲ್ಲಿ ಹೋಗುವುದು ನಕಾರಾತ್ಮಕ ಶಬ್ದ.ಅದನ್ನು ಹೇಳಿದರೆ ಹಿಂತಿರುಗಿ ಬರುವುದಿಲ್ಲ ಎಂದರ್ಥ. ಇನ್ನು ಮುಂದುವರೆದು ಅಧ್ಯಾತ್ಮ ಕೋನದಲ್ಲಿ ನೋಡಿದರೆ ದೇಹ ಬಿಟ್ಟು ಹೋದರೂ ಕರ್ಮಬಿಡದ ಕಾರಣ ಹಿಂತಿರುಗಿ ಬರಲೇಬೇಕು. ಹಾಗಾಗಿ ಹೋಗಿಬರುವೆ (ಹೋಗ್ಬರ್ತೀನಿ) ಎಂಬ ಸಕಾರಾತ್ಮಕ ಶಬ್ದವನ್ನು ಬಾಲ್ಯದಲ್ಲಿಯೇ ರೂಢಿಗೆ ತರುವುದು ವಾಡಿಕೆ.

ನಮ್ಮ ಸಂಸ್ಕೃತಿಯಲ್ಲಿ ಅಗ್ನಿ, ತೇಜಸ್ಸು, ಬೆಳಕು ಇತ್ಯಾದಿ ಶಬ್ದಗಳು ಜೀವನ ಸೂಚಕವೆಂದು ನಂಬಲ್ಪಟ್ಟಿವೆ. ಇವುಗಳಿಗಾಗಿ ‘ನಂದಿಸುವುದು,ಆರಿಸುವುದು’ ಎಂಬ ಶಬ್ದದಪ್ರಯೋಗವು ಶಿಷ್ಟಾಚಾರದ ಚೌಕಟ್ಟಿನಲ್ಲಿ ಇರುವುದಿಲ್ಲ. ಆದರೆ ಈಗೆಲ್ಲ ಜನರು ‘ಲೈಟ್ ಆಫ್ ಮಾಡು’ ಎನ್ನುವುದು ಸರ್ವೇಸಾಮಾನ್ಯ ಆಗಿಬಿಟ್ಟಿದೆ.

ಶಿಕ್ಷಣ ಎಂಬ ಶಬ್ದದಲ್ಲಿ ‘ಶಿಕ್ಷ್’ ಧಾತುವಿದೆ. ಶಿಕ್ಷಕ ಎಂದರೆ ಶಿಕ್ಷಾಗ್ರಹಣ ಮಾಡುವವರೇ ಹೊರತು ಶಿಕ್ಷಣ ನೀಡುವವರಲ್ಲ. ‘ವಿನಯ’ ಎಂದರೆ ವಿನಮ್ರತೆಯಲ್ಲ, ವಿಶಿಷ್ಟ ‘ನಯ’ ಅಥವಾ ನೀತಿಯ ಸೂಚಕವಾಗಿರುತ್ತದೆ. ‘ವಿವಾಹ’ ಶಬ್ದದಲ್ಲಿ ವ್+ಇ+ವ್+ ಆ+ಹ ಎಂಬುದರ ಅರ್ಥ ಹುಡುಕಿ. ವ್=ವಿಭಿನ್ನತೆ, ಇ= ತರುವವರು, (ವಿ=ವಿಶಿಷ್ಟ, ವಿಭಿನ್ನ), ವ್=ಭಿನ್ನತೆ, ಆ=ಸಂಪೂರ್ಣ ವಾಗಿ, ಹ=ಪ್ರಕಾಶಿತಗೊಳಿಸುವವರು ಎಂಬುದು ಒಂದು ಮಾರ್ಗದ ಚಿಂತನೆ. ಈ ಅರ್ಥದಲ್ಲಿ ನಾವು ಈ ಶಬ್ದವನ್ನು ಬಳಸು ತ್ತಿದ್ದೇವೆಯೇ? ನಮಗೆ ತಿಳಿದ ಸ್ವಲ್ಪವೇ ಇಂತಹಾ ಜ್ಞಾನವನ್ನು ಹಂಚುತ್ತಾ ಸಾಗುತ್ತಿರೋಣ. ಏಕೆಂದರೆ ಹಂಚಿದರೆ ಹೆಚ್ಚುವ ನಿಧಿ ಅದೊಂದೇ! ಈಗೊಂದು ಗುರು-ಶಿಷ್ಯರ ಸಂವಾದ ರೂಪೀ ಕಥೆಯನ್ನು ಓದೋಣ.

ಅಕ್ಷರ ಸೃಷ್ಟಿ
ಅಕ್ಷರ ಬ್ರಹ್ಮದ ಸಾಧಕ ದ್ವೈಪಾಯನ ಎಂಬ ವ್ಯಾಸಾಚಾರ್ಯರು ಕನ್ನಡ-ಸಂಸ್ಕೃತದ ವಿದ್ವಾಂಸರಾಗಿದ್ದಾರೆ. ಹಿಂದಿ-ಆಂಗ್ಲಗಳ
ಮೇಲೂ ಅವರಿಗೆ ತಕ್ಕಮಟ್ಟಿಗೆ ಹಿಡಿತವಿದೆ. 718 ಭಾಷೆಗಳ ಸಾರ ಸೂತ್ರವೂ ಅವರಿಗೆ ಜಿತ. ‘ಭಾಷೆಯು ರೂಢಿಯಲ್ಲಿ ಬಂಧಿಸ ಲ್ಪಟ್ಟು ವಾಸ್ತವಿಕ ಅರ್ಥದಿಂದ ದೂರವಾಗುತ್ತಿದೆ ಎನ್ನುತ್ತಿದ್ದಾರೆ ಆಚಾರ್ಯರು. ಅರ್ಥವು ಅನರ್ಥವಾಗುತ್ತಿದೆ, ಶಬ್ದವು ತನ್ನ ಮೂಲ ಸ್ವರೂಪದಿಂದ ಬೇರ್ಪಟ್ಟಂತೆ ಕಾಣುತ್ತದೆ.

ಏಕೆಂದರೆ ಅದರ ಮೇಲೆ ಯಾವುದೋ ಆವರಣ ಏರಿಕೊಂಡಿದೆ. ವಾಸ್ತವಿಕ ರೂಪವನ್ನು ತಿಳಿಯುವುದಕ್ಕೆ ಶಬ್ದದ ಮೇಲೆ
ಮುಚ್ಚಿರುವ ಮುಸುಕನ್ನು ಸರಿಸಬೇಕು. ಆಗ ಮಾತ್ರ ನಾವು ಅಕ್ಷರವನ್ನು ಸರಿಯಾಗಿ ತಿಳಿಯಬಹುದು. ಕಥಿತ ಅರ್ಥಗಳ ಜಾಲ ಗಳಲ್ಲಿ ಬಂಧಿಸಲ್ಪಟ್ಟ ಶಬ್ದಗಳಂತೂ ಭ್ರಮೆಯನ್ನೇ ಹೆಚ್ಚಿಸುತ್ತವೆ. ಒಮ್ಮೆ ಶಿಷ್ಯರು ಗುರುವಿನಲ್ಲಿ ಅಕ್ಷರವೆಂದರೇನೆಂದು
ಕೇಳಿದರು.

ಆಚಾರ್ಯರು : ನಮ್ಮ ಸೃಷ್ಟಿಯು ಅಕ್ಷರ ಸೃಷ್ಟಿಯಿಂದ ಉತ್ಪನ್ನವಾಗುತ್ತದೆ. ಪ್ರಾಣಗಳನ್ನೇ ಅಕ್ಷರ ಎನ್ನಲಾಗಿದೆ. ಪ್ರಾಣವೇ
ದೇವತೆಗಳು. ಕೊಡುವ ಶಕ್ತಿ ಉಳ್ಳದ್ದು ದೇವತೆ ಎಂದಾಗುತ್ತದೆ. ಇದು ಕ್ಷರವಾಗುವುದಿಲ್ಲ, ಹಾಗಾಗಿ ಅಕ್ಷರವೆನ್ನಿಸಿಕೊಂಡಿದೆ.
ಇದೇ ರೀತಿ ನಮ್ಮ ಭಾಷೆಯೂ ಅಕ್ಷರಗಳ ಮೇಲೆಯೇ ಆಧಾರಿತವಾಗಿದೆ. ಈ ಅಕ್ಷರಗಳಿಗೂ ಕ್ಷರಣವಿಲ್ಲ (ಸವೆತವಿಲ್ಲ). ವಿಜ್ಞಾನಿ ಕೃಷ್ಣನಿಂದ ಹೇಳಲ್ಪಟ್ಟ ಗೀತೆಯನ್ನು ಆಕಾಶದಿಂದ ಧರೆಗಿಳಿಸಿಕೊಳ್ಳುವ ಪ್ರಯತ್ನ ನಡೆಯುತ್ತಿದೆ. ನಮ್ಮ ವರ್ಣ ಮಾಲೆಯ ಪ್ರತಿಯೊಂದು ಅಕ್ಷರವು ಯಾವುದಾದರೂ ದೇವತೆಯೊಂದಿಗೆ ಬೆಸೆದಿರುತ್ತದೆ; ಬೀಜ ಮಂತ್ರದ ರೂಪದಲ್ಲಿ.

ಏಕಾಕ್ಷರ ಬೀಜದ ಸಹಾಯದಿಂದ ತಮ್ಮಯ ದೇವತೆಯನ್ನು ಸಾಕ್ಷಾತ್ಕರಿಸಿಕೊಳ್ಳುವುದೇ ನಮ್ಮ ತಂತ್ರಶಾಸ್ತ್ರದ ಹೆಗ್ಗಳಿಕೆ.
ಅಕ್ಷರವನ್ನು ವರ್ಣವೆಂದೂ ಕರೆಯುತ್ತಾರೆ. ಇದರಲ್ಲಿ ಸ್ವರ ಮತ್ತು ವ್ಯಂಜನಗಳು ಬರುತ್ತವೆ. ಬಿಳಿ, ಹಳದಿ ಇತ್ಯಾದಿ ಬಣ್ಣಗಳಿಗೂ
ವರ್ಣ ಎನ್ನುತ್ತಾರೆ. ಇಷ್ಟೇ ಅಲ್ಲದೆ ಆಶ್ರಮ ವ್ಯವಸ್ಥೆಯಲ್ಲಿಯೂ ನಾಲ್ಕು ವರ್ಣಗಳ ಉಲ್ಲೇಖವಿದೆ – ಬ್ರಾಹ್ಮಣ, ಕ್ಷತ್ರೀಯ,
ವೈಶ್ಯ, ಶೂದ್ರ. ವೇದದಲ್ಲಿ ಅದು ವರ್ಣತಂತುವಿನ ದ್ಯೋತಕವೇ ಹೊರತು ಯಾವುದೇ ಜಾತಿವಾಚಕ ಶಬ್ದವಲ್ಲ.

ಪ್ರತಿಯೊಂದು ಜಡ-ಚೇತನದಲ್ಲಿ ಈ ನಾಲ್ಕು ವರ್ಣತಂತುಗಳ ವ್ಯವಸ್ಥೆಯಿದೆ. ವೇದ ವಿಜ್ಞಾನದ ರೀತ್ಯಾ ಸಂಶೋಧನೆಯಿಂದ ತೆರೆದುಕೊಳ್ಳುವ ವಿಚಾರಗಳಿವು. ತಟ್ಟನೇ ಒಬ್ಬ ಶಿಷ್ಯನು ಕೇಳಿದನು ‘ಆಚಾರ್ಯರೇ ಅಕ್ಷರ ಸೃಷ್ಟಿಯ ವ್ಯವಸ್ಥೆಯನ್ನು ತಿಳಿಸಿ ಕೊಡಿ’. ಆಚಾರ್ಯರು ಹೇಳೀದರು ‘ಈ ಎಲ್ಲಾ ವರ್ಣಗಳು ಧ್ವನಿಯ ಮೇಲೆ ಆಧಾರಿತವಾಗಿವೆ. ಧ್ವನಿಯನ್ನೇ  ನಾದವೆನ್ನುತ್ತಾರೆ.

ನಾದವು ಸಂಪೂರ್ಣ ಆಕಾಶದಲ್ಲಿ ವ್ಯಾಪ್ತವಾಗಿರುತ್ತದೆ – ಸೂಕ್ಷ್ಮ ರೂಪದಲ್ಲಿ. ಆಕಾಶದ ತನ್ಮಾತ್ರೆಯು ಧ್ವನಿಯೇ ಆಗಿದೆ.
ಧ್ವನಿಯು ತರಂಗಗಳ ಮೇಲೆ ಆಧಾರಿತವಾಗಿದ್ದು ಗತಿಯುಳ್ಳದ್ದಾಗಿರುತ್ತದೆ. ಇದೇ ತರಂಗಗಳೊಂದಿಗೆ ಕಿರಣಗಳೂ ಹೊದ್ದು ಕೊಂಡಿವೆ. ಕಿರಣದ ಬಣ್ಣ ಹಾಗೂ ಧ್ವನಿಗಳು ಬೇರೆ-ಬೇರೆಯಾಗಿಯೇ ಕಂಡುಬರುತ್ತವೆ. ಆದರೆ ಮೂಲದಲ್ಲಿ ಒಂದನ್ನೊಂದು ಆಶ್ರಯಿಸಿರುತ್ತವೆ. ಮಿಂಚಿನ ಬೆಳಕಿನೊಂದಿಗೆ ಗುಡುಗಿನ ಶಬ್ದವೂ ಕೇಳಿಸುತ್ತದೆ, ಸಿಡಿಲಿನ ಗತಿಯೂ ಕಾಣಸಿಗುತ್ತದೆ. ಇದೇ ನಾದ ಅಥವಾ ಧ್ವನಿ ಅಥವಾ ಶಬ್ದವು ಸೃಷ್ಟಿಯ ಕಾರಕವೂ ಆಗಿದೆ. ವರ್ಣಮಾಲೆಯ ಕೆಲ ನಿಶ್ಚಿತ ಸಿದ್ಧಾಂತಗಳಿವೆ.

ಅಹಂ ಎಂಬುದು ಸೃಷ್ಟಿಯ ಸೂಚಕ. ವರ್ಣಮಾಲೆಯೂ ‘ಅ’ಕಾರದಿಂದ ‘ಹ’ಕಾರದವರೆಗಿದೆ. ಸಂಪೂರ್ಣ ಸೃಷ್ಟಿಯು ಇದರ ಮಧ್ಯದಲ್ಲಾಗುತ್ತದೆ. ಅದರ ಮಾಹಿತಿಯು ವಿಶ್ವದಲ್ಲೇ ಅತ್ಯಂತ ವಿಶಿಷ್ಟ ಎನಿಸಿದ ಸರ್ವಭಾಷಾಮಯೀಭಾಷಾ ‘ಸಿರಿಭೂವಲಯ’ ಎಂಬ ಮಹಾನ್ ಕನ್ನಡ ಗ್ರಂಥದಲ್ಲಿದೆ. ಹಾಸನದ ಸುಧಾರ್ಥಿಯವರು ಏಕಾಂಗಿಯಾಗಿ ಮೂವತ್ತಕ್ಕೂ ಹೆಚ್ಚು ವರ್ಷಗಳ ಕಾಲ
ಅಧ್ಯಯನ ಮತ್ತು ಪರಿಶ್ರಮದಿಂದ ಹೊರತಂದಿರುವ ಸಿರಿಭೂವಲಯದ ಹಲವು ಪುಸ್ತಕಗಳಲ್ಲಿ ಇದರ ಬಗ್ಗೆ ವಿಸ್ತೃತ ಮಾಹಿತಿ ಇದೆ.’ ಅಷ್ಟರಲ್ಲಿ ಇನ್ನೊಬ್ಬ ಶಿಷ್ಯ ಕೇಳುತ್ತಾನೆ ‘ಗುರುಗಳೇ, ಅ-ಹ ತನಕ ಅಕ್ಷರಗಳ ಕ್ರಮವನ್ನು ತಿಳಿಸಿಕೊಡಿ.’

ಆಚಾರ್ಯರು ಹೇಳೀದರು ‘ಪ್ರತಿಯೊಂದು ವರ್ಣಕ್ಕೆ ಒಂದು ಅರ್ಥವಿರುತ್ತದೆ. ಅದರ ಆಧಾರದಲ್ಲಿಯೇ ಶಬ್ದಗಳ ನಿರ್ಮಾಣ ವಾಗಿದೆ. ಐದೈದು ವರ್ಣಗಳ ಒಂದೊಂದು ಪಂಕ್ತಿಗೂ ನಿಶ್ಚಿತ ಭೂಮಿಕೆ ಇದೆ. ನಿರ್ಧಾರಿತ ಐದೂ ಅಕ್ಷರಗಳ ನಿರ್ಮಾಣಕ್ಕೂ
ಒಂದು ಕ್ರಮವಿದೆ. ಎಲ್ಲಾ ವರ್ಣಗಳಿಗೂ ತಮ್ಮ ಉಚ್ಚಾರಣೆಯ ಸ್ಥಾನವಿದೆ. ಇದೂ ಕೂಡ ಅರ್ಥ ಭೇದಕ್ಕೆ ಒಂದು ಆಧಾರ. ಈ
ರೀತಿ ಉಚ್ಚಾರಣೆಯ ಸ್ಥಾನಗಳು ವರ್ಣದ ಕ್ರಮವನ್ನು ನಿರ್ಧರಿಸುತ್ತದೆ.’

ಇನ್ನೊಬ್ಬ ಶಿಷ್ಯನಿಗೆ ಕುತೂಹಲ ತಡೆಯಲಾಗದೆ, ‘ವರ್ಣಮಾಲೆಯನ್ನು ಹೇಗೆ ತಿಳಿದುಕೊಳ್ಳುವುದು’ ಎಂದು ಕೇಳಿದ. ತರಗತಿಯ ವೇಳೆ ಮುಗಿದುದ್ದರಿಂದ ಆಚಾರ್ಯರು ‘ಹಾಸನದಲ್ಲಿರುವ ಸುಧಾರ್ಥಿಯವರು ಪ್ರಕಟಿಸಿರುವ ಸಿರಿಭೂವಲಯ ಪುಸ್ತಕಗಳನ್ನು ಓದು, ಸರಳವಾಗಿ ಅರ್ಥವಾಗುತ್ತದೆ. ಈ ಸಿರಿಭೂವಲಯವು ಅಂದಾಜು 3500 ವರ್ಷಗಳ ಹಿಂದಿನಿಂದ 1200 ವರ್ಷಗಳ ಹಿಂದಿ ನವರೆಗೆ ದೀರ್ಘಕಾಲಘಟ್ಟದಲ್ಲಿ ಕುಮುದೇಂದು ಮುನಿಗಡಣದಿಂದ ಗಣಿತಾತ್ಮಕವಾಗಿ ಕನ್ನಡದ ಪ್ರಾಚೀನ ಬೆದಂಡೆ ಮತ್ತು ಚತ್ತಾಣ ರೂಪದಲ್ಲಿ ರಚಿಸಲ್ಪಟ್ಟ ಕನ್ನಡದ ವಿಶ್ವಕೋಶ.

ಹೆಚ್ಚಿನ ವಿಷಯ ಮುಂದಿನ ಪಾಠಗಳಲ್ಲಿ ನೋಡೋಣ’ ಎಂದು ಮುನ್ನಡೆದರು. ಮಕ್ಕಳೆಲ್ಲಾ ಶ್ರದ್ಧೆಯಿಂದ  ರಿಭೂವಲಯವನ್ನು ಓದುತ್ತಾ ಅಕ್ಷರ-ಸೃಷ್ಟಿಯನ್ನು ತಿಳಿದು ಅದರ ಮುಖೇನ ಪ್ರಾಪ್ತವಾದ ಜ್ಞಾನವನ್ನು ಹಂಚುತ್ತಾ ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ ಎಂದು ಕನ್ನಡದ ಮಹಿಮೆಯನ್ನು ಕೊಂಡಾಡುತ್ತಾ ಸರಿಯಾದ ಭಾಷೆಯ ಅನಿವಾರ್ಯತೆಯನ್ನು ಲೋಕಕ್ಕೆ ಸಾರುತ್ತಾ ಧ್ರುವತ್ವ ಸಾಧಿಸಿದರು ಎಂಬಲ್ಲಿಗೆ ಈ ಸಂವಾದ ರೂಪೀ ವಿಚಾರ ಚಿಂತನೆಗೆ ವಿರಾಮವಿಡುವೆ.

ಅಸ್ಮಿತಾ ಎಂದರೇನು?
ತಪ್ಪು ಭಾಷೆಯ ಅರ್ಥ ಒಂದೋ ಅಸಡ್ಡೆ ಅಥವಾ ತಿಳಿದೂ ಇಂತಹಾ ಉಪಯೋಗ ಮಾಡಲಾಗುತ್ತದೆ. ಎರಡೂ ಸ್ಥಿತಿಗಳು ಹಿತಕಾರಿಯಲ್ಲ.  ಇದರರ್ಥ – ನಮಗೆ ಶಬ್ದಗಳೊಂದಿಗೆ ಅರ್ಥಗಳ ತಿಳಿವಳಿಕೆಯೂ ಇರಬೇಕು. ಅರ್ಥದ ಕಾರಣದಿಂದಲೇ ಜ್ಞಾನವು ಹಿಡಿತಕ್ಕೆ ಸಿಗುತ್ತದೆ. ಶಬ್ದದ ಅರಿವಿಗೆ ಅಕ್ಷರ ಅಥವಾ ವರ್ಣದ ಅರಿವಿನ ಅಗತ್ಯತೆ ಇದೆ. ಇಂದು ಅನೇಕ ಶಬ್ದಗಳ ತಪ್ಪು ಪ್ರಯೋಗಗಳಾಗುತ್ತಿವೆ.

ಎಷ್ಟರ ಮಟ್ಟಿಗೆ ಎಂದರೆ ತಪ್ಪು ಅರ್ಥಗಳೇ ರೂಢಿ ಎಂದಾಗಿವೆ. ಒಂದು ಶಬ್ದ ನೋಡೋಣ – ಅಸ್ಮಿತಾ. ಇದರರ್ಥ ‘ಅಹಂಭಾವ’ ಅಥವಾ ಹಠ ಮಾಡುವುದು. ನಾವು ಹೇಳುತ್ತೇವೆ – ದೇಶದ ಅಸ್ಮಿತೆಯ ಪ್ರಶ್ನೆ ಬಂದಾಗ ….. ಈ ರೂಪದಲ್ಲಂತೂ ಅಸ್ಮಿತೆಯು
ಪ್ರತಿಷ್ಠೆ ಎಂದಾಯಿತು.

ಉಪಾಸನೆ
ಒಂದೇ ಶಬ್ದಕ್ಕೆ ಹಲವು ಅರ್ಥಗಳೂ ಇರುತ್ತವೆ. ಇದರ ಬಗ್ಗೆ ನಮಗೆ ಸ್ಪಷ್ಟ ಮಾಹಿತಿ ಇದ್ದಾಗ ಮಾತ್ರ ಸರಿಯಾದ ಶಬ್ದ ಚಯನ ಸಾಧ್ಯ. ಉಪಾಸನೆ ಎಂಬ ಶಬ್ದವನ್ನು ನಾವು ಜಪ, ತಪ, ಧ್ಯಾನ, ಸಮಾಧಿ, ಪೂಜೆ ಇತ್ಯಾದಿ ರೂಪಗಳಲ್ಲಿ ಬಳಸುತ್ತೇವೆ. ಉಪಾಸನಾ = ಉಪ+ಆಸನ = ಹತ್ತಿರ ಕುಳಿತುಕೊಳ್ಳುವುದು. ಅಂದರೆ ಪರಮಾತ್ಮನ ಹತ್ತಿರವಿರುವುದು. ಇದರರ್ಥ ಭಕ್ತಿಯಲ್ಲ. ಭಕ್ತಿ ಎಂಬ
ಸ್ಥಿತಿಯಲ್ಲಿ ಈಶ್ವರನ (ಇಷ್ಟದ) ಹೊರತು ಬೇರೇನೂ ಇರುವುದೇ ಇಲ್ಲ. ಅಂದರೆ ಅದರ ಅಂಗವೇ ಆಗುವುದು.