ಅಭಿವ್ಯಕ್ತಿ
ಡಾ.ದಯಾನಂದ ಲಿಂಗೇಗೌಡ
ಇತ್ತೀಚೆಗೆ ವಿಡಿಯೋ ಒಂದು ವೈರಲ್ ಆಗಿತ್ತು. ‘ಕೋವಿಡ್‌ನ ಲಸಿಕೆ ಸಾಕಷ್ಟು ಅಡ್ಡ ಪರಿಣಾಮಗಳನ್ನು ಹೊಂದಿದೆ. ಅದನ್ನು
ಸಾಮಾನ್ಯರು ಮಾತ್ರವಲ್ಲ ವೈದ್ಯರು ಕೂಡ ತೆಗೆದುಕೊಳ್ಳಲು ನಿರಾಕರಿಸುತ್ತಿದ್ದಾರೆ ’ ಎಂಬ ವಿಚಾರವನ್ನು ಪ್ರಚಾರಗೊಳಿಸಲು ಬಹಳ ಪರಿಣಾಮ ಕಾರಿಯಾಗಿ ಬಳಸಿಕೊಳ್ಳಲಾಗಿತ್ತು.
ಅದರಲ್ಲಿ ವಿಡಿಯೋ ತುಣುಕಿನಲ್ಲಿ ತುಮಕೂರಿನ ಇಬ್ಬರು ಹಿರಿಯ ವೈದ್ಯಾಧಿಕಾರಿಗಳು ಲಸಿಕೆ ತೆಗೆದುಕೊಳ್ಳುತ್ತಿರುವ ನಾಟಕ ಮಾಡುತ್ತಿರುವಂತೆ ಕಾಣುತ್ತಿತ್ತು. ಇದನ್ನು ಕೆಲವು ಖಾಸಗಿ ವಾಹಿನಿಗಳು ಕೂಡ ಪದೇ ಪದೆ ಪ್ರಸಾರ ಮಾಡಿದವು. ಆದರೆ ನಡೆದ ವಿಷಯವೇ ಬೇರೆಯಾಗಿತ್ತು. ಮಾಧ್ಯಮದವರು ಇಲ್ಲದ ಸಮಯದಲ್ಲಿ ಈ ವೈದ್ಯಾಧಿಕಾರಿಗಳು ಲಸಿಕೆ ತೆಗೆದು ಕೊಂಡಿದ್ದರು.
ಲಸಿಕೆ ತೆಗೆದುಕೊಂಡ ನಂತರ ಸಿಗುವ ದೃಢೀಕರಣ ಪತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಡಾ.ರಜನಿ ಯವರು ಹಂಚಿಕೊಂಡಿ ದ್ದರು. ಆದರೆ ಲಸಿಕೆ ತೆಗೆದುಕೊಳ್ಳುವ ಸಮಯದಲ್ಲಿ ಅವರು ಮಾಧ್ಯಮದವರು ಇರಲಿಲ್ಲ. ಮಾಧ್ಯಮದವರು ಆಗಮಿಸಿದ ನಂತರ, ಒತ್ತಾಯದ ಮೇರೆಗೆ ಫೋಟೋ ತೆಗೆದುಕೊಳ್ಳಲು, ಮತ್ತೊಮ್ಮೆ ಲಸಿಕೆಯ ತೆಗೆದು ಕೊಳ್ಳುವ ನಾಟಕ ಮಾಡಲಾಯಿತು. ಆದರೆ ಇದೇ ದೃಶ್ಯವನ್ನು, ಯಾರೋ ಸೆರೆಹಿಡಿದು ಅದನ್ನು ಪ್ರಸಾರ ಮಾಡಿದ್ದರು.
ಈ ಘಟನೆಯ ಹಿನ್ನೆಲೆಯನ್ನು ತಿಳಿಸದೆ ಅದನ್ನು ಎಡೆ ಹರಿಯಬಿಡಲಾಗಿತ್ತು. ಈ ಘಟನೆಯ ನಿಜಾಂಶವನ್ನು ಅರಿತ ನಂತರವೂ
ಕೂಡ ಕೆಲವೊಂದು ವಾಹಿನಿಗಳು ಸ್ಪಷ್ಟೀಕರಣ ನೀಡಲು ತಲೆಕೆಡಿಸಿಕೊಳ್ಳಲಿಲ್ಲ. ಹಲವಾರು ಸುದ್ದಿ ಪ್ರಸಾರಮಾಡುವ ಮಾಧ್ಯಮದಲ್ಲಿ, ವೈರಲ್ ಆಗಿರುವ ವಿಡಿಯೋಗಳ ವಿಮರ್ಶೆ ನಡೆಯುತ್ತದೆ. ಅದರಲ್ಲಿ ವೈರಲ್ ಆಗಿರುವ ವಿಡಿಯೋ ಅಸಲಿಯೋ
ನಕಲಿಯೋ ಎಂದು ತಿಳಿಸುತ್ತಾರೆ. ಆ ವಿಭಾಗದಲ್ಲಿ ಈ ವಿಡಿಯೋ ಕಾಣಿಸಿಕೊಳ್ಳದೇ, ‘ಪ್ರೈಮ್ ಟೈಮ್ ’ ಅವಧಿಯಲ್ಲಿ ಈ ವಿಡಿಯೋವನ್ನು ಪ್ರಸಾರ ಮಾಡಲಾಯಿತು.
‘ಲಸಿಕೆ ತೆಗೆದುಕೊಳ್ಳುವ ನಾಟಕ ವಾಡುತ್ತಿರುವ ವೈದ್ಯಾಧಿಕಾರಿಗಳು’ ಎಂಬ ತಲೆ ಬರಹದಲ್ಲಿ ವಿಡಿಯೋವನ್ನು ಪ್ರಸಾರ ಮಾಡಿದ
ವಾಹಿನಿ, ಕೊನೆ ಅವಧಿಯಲ್ಲಿ ವೈದ್ಯರನ್ನು ಸಂಪರ್ಕಿಸಿ, ಕೂಂಕಿನಿಂದಲೇ ಅಭಿಪ್ರಾಯವನ್ನು ಕೇಳಲಾಯಿತು. ವೈದ್ಯರು ವಿವರಣೆ ನೀಡುವ ಹೊತ್ತಿಗಾಗಲೇ, ಈ ವಿಚಾರ ಎಕಡೆ ಪ್ರಚಾರವಾಗಿ ತನ್ನ ಕೆಲಸ ಮುಗಿಸಿತ್ತು. ಸುಳ್ಳಿಗಿಂತ ವೇಗ ಸತ್ಯಕ್ಕಿಲ್ಲ. ಈ ವಿಡಿಯೋದ ಅಸಲಿ ವಿಚಾರ ಬಹಳ ಜನಕ್ಕೆ ತಲುಪಲೇ ಇಲ್ಲ.
ಎಷ್ಟೋ ಸಮಾರಂಭಗಳಲ್ಲಿ ಫೋಟೋ ಚೆನ್ನಾಗಿ ಬರಲೆಂದು ಮಾಡಿದ್ದನ್ನೇ ಪದೇ ಪದೆ ನಾಟಕ ಮಾಡಿಸುತ್ತಾರೆ. ಕೊಟ್ಟ ಪ್ರಶಸ್ತಿ ಯನ್ನು ಮರಳಿ ಕೊಡಿಸುತ್ತಾರೆ. ಮದುವೆಗಳಂತೂ ಸರಿಯಾದ ಫೋಟೋ ಸಿಗುವರೆಗೂ ನಾಟಕ ನಡೆಯುತ್ತಲೇ ಇರುತ್ತದೆ. ಈಗಾಗಲೇ ಹಾಕಿದ ಹಾರವನ್ನೋ ಅಥವಾ ತಾಳಿಯನ್ನೋ ತೆಗೆಸಿ , ಮತ್ತೆ ಹಾಕುವುದು / ಕಟ್ಟುವುದು ಸಾಮಾನ್ಯವಾಗಿ ನಾವು ನೋಡಿದ್ದೇವೆ.
ಅದೇ ರೀತಿ ಈ ಲಸಿಕೆ ತೆಗೆದುಕೊಳ್ಳುವ ನಾಟಕದ ದೃಶ್ಯ ನೆಡೆದಿರುವುದಕ್ಕೆ ಹೆಚ್ಚಿನ ವಿವರಣೆ ಬೇಕಾಗಿಲ್ಲ. ಆದರೆ ಇದನ್ನು ತಮ್ಮ ಅಜೆಂಡಾ ಪ್ರಚಾರ ಗೊಳಸಿಲು ಬಳಸಿಕೊಂಡ ರೀತಿ ನಿಜವಾಗಲೂ ಮೆಚ್ಚಬೇಕಾದದ್ದು. ಲಸಿಕೆ ಜನರಿಗೆ ಸರಿಯಾಗಿ ತಲುಪಿಬಿಟ್ಟರೆ, ಎಲ್ಲಿ ಅದರ ಗೌರವ ಕೇಂದ್ರಕ್ಕೆ ಸಲ್ಲಿಬಿಡುತ್ತದೋ ಎಂಬ ಆತಂಕದಿಂದ, ಲಸಿಕೆ ಅಷ್ಟು ಸುರಕ್ಷಿತವಲ್ಲ ಎಂಬ ಭಾವನೆ ಜನರಲ್ಲಿ ಬಿತ್ತಲು ವಿರೋಧ ಪಕ್ಷಗಳು, ಯಾವುದೇ ಸರಿಯಾದ ಆಧಾರವಿಲ್ಲದೆ ಅಪಪ್ರಚಾರ ಮಾಡುತ್ತಿದ್ದಾರೆ.
ಇದರ ಪ್ರಭಾವ ಎಷ್ಟಿದೆಯೆಂದರೆ, ಜನಸಾಮಾನ್ಯರು ಮಾತ್ರವಲ್ಲದೆ ವೈದ್ಯರಿಗೂ ಕೂಡ ಲಸಿಕೆಯ ಬಗ್ಗೆ ಅಪನಂಬಿಕೆ ಬಂದಿದೆ. ಇದನ್ನು ಲಸಿಕೆ ಬಂದ ಆರಂಭದ ದಿನಗಳಲ್ಲಿ ಕಾಣಬಹುದಾಗಿತ್ತು. ಲಸಿಕೆ ತೆಗೆದುಕೊಳ್ಳಲು ನೋಂದಾಯಿಸಿಕೊಂಡ ಶೇಕಡಾ 50ಕ್ಕೂ ಹೆಚ್ಚು ಆರೋಗ್ಯ ಕಾರ್ಯಕರ್ತರುಗಳು ಲಸಿಕೆ ತೆಗೆದುಕೊಳ್ಳಲಿಲ್ಲ. ಬಹಳಷ್ಟು ಅರೋಗ್ಯ ಕಾರ್ಯಕರ್ತರುಗಳು,
ಲಸಿಕೆ ತೆಗೆದುಕೊಳ್ಳದೆ ಕಾದು ನೋಡುವ ತಂತ್ರಕ್ಕೆ ಮಾರು ಹೋದರು.
ಕೇಂದ್ರ ಸರಕಾರವು ಲಸಿಕೆ ಹಾಕಲು ಮಾಡಿಕೊಂಡಿರುವ ವ್ಯವಸ್ಥೆ ನಿಜವಾಗಲೂ ಶ್ಲಾಘನೀಯ. ಲಸಿಕೆ ಬಿಡುಗಡೆಯಾದಾಗ ನಮಗೆ ಲಸಿಕೆ ಇಷ್ಟು ಬೇಗ ಸಿಗುತ್ತದೆ, ಅದರಲ್ಲೂ ಉಚಿತವಾಗಿ ಸಿಗುತ್ತದೆ ಎಂಬ ಕಲ್ಪನೆಯೇ ಇರಲಿಲ್ಲ. ಸರಕಾರಿ ಅರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡಿದ ನಂತರ, ಖಾಸಗಿಯಾಗಿ ಲಸಿಕೆ ಮಾರಾಟ ಮಾಡಬಹುದು ಎಂಬ ಊಹೆಯಿತ್ತು. ಆದರೆ ಸರಕಾರದ ನಡವಳಿಕೆ ಇವೆಲ್ಲವನ್ನು ಸುಳ್ಳಾಗಿಸಿತು. ಲಸಿಕೆಯ ಫಲಾನುಭವಗಳನ್ನು ನೋಂದಾಯಿಸಿಕೊಳ್ಳಲು ಸರಕಾರವನ್ನು
ತಂತ್ರಜ್ಞಾನವನ್ನು ಸಮೃದ್ಧವಾಗಿ ಬಳಸಿಕೊಳ್ಳುತ್ತಿದೆ.
ಲಸಿಕೆ ಮೇಲಿನ ಪ್ರಥಮ ಆದ್ಯತೆಯ ಜನರನ್ನು ಯಾವುದೇ ಪೂರ್ವಾಗ್ರಹವಿಲ್ಲದೆ ಗುರುತಿಸಿದೆ. ಲಸಿಕಾ ಕೇಂದ್ರಗಳಲ್ಲಿ ಯಾವುದೇ ಗೊಂದಲಗಳಿಲ್ಲದೆ, ಜನರ ಅಮೂಲ್ಯ ಸಮಯ ವ್ಯರ್ಥವಾಗದಂತೆ ನೋಡಿಕೊಳ್ಳಲಾಗಿದೆ. ದೇಶದ ಪ್ರಧಾನಿಗಳಿಗೂ ಸಿಗದ, ಮಂತ್ರಿ ಮುಖ್ಯಮಂತ್ರಿಗಳಿಗೂ ಎಟುಕದ ಅಮೂಲ್ಯ ಔಷಧವು, ನಿಮಗೆ ಪ್ರಥಮವಾಗಿ ಸಿಗುವ ಭಾವವನ್ನು ಪದಗಳಲ್ಲಿ ಹೇಳುವುದಕ್ಕೆ ಕಷ್ಟ. ಅದನ್ನು ಅನುಭವಿಸಿಯೇ ತೀರಬೇಕು. ಮೊದಲ ದಿನ ಸಿನಿಮಾ ನೋಡಿ, ಏನೋ ಸಾಧಿಸಿದಂತೆ ಖುಷಿ ಪಡುವ ನಾವುಗಳು, ಮೊದಲ ದಿನವೇ ಲಸಿಕೆ ಪಡೆಯುವುದು ನಮ್ಮ ಕನಸು – ಮನಸಿನಲ್ಲಿಯೂ ಊಹೆಗೆ ನಿಲುಕದ ವಿಷಯ. ನಿಜವಾಗಿ ಹೇಳಬೇಕೆಂದರೆ ಖಾಸಗಿ ವೈದ್ಯರುಗಳಿಗೆ, ಇದುವರೆಗೆ ಸರಕಾರಕ್ಕೆ ಲಕ್ಷ ಲಕ್ಷದಷ್ಟು ತೆರಿಗೆ ಕೊಟ್ಟದ್ದು ಅಷ್ಟೇ.
ಮರಳಿ ಯಾವುದೇ ಸರಕಾರಿ ಸೇವೆಗಳು ಉಚಿತವಾಗಿ ಸಿಕ್ಕಿಲ್ಲ. ಯಾವುದೇ ಸರಕಾರಿ ಸೇವೆ ಬೇಕಾದರೂ ಮೇಜಿನ ಮೇಲೆ ಮತ್ತು ಮೇಜಿನ ಕೆಳಗೆ ಹಣವನ್ನು ಕೊಟ್ಟು ಪಡೆದು ಕೊಳ್ಳಬೇಕಾದ ಪರಿಸ್ಥಿತಿ. ಅಂತಹದರಲ್ಲಿ ಇಷ್ಟೊಂದು ಅಮೂಲ್ಯವಾದ ಲಸಿಕೆ ಸರಿಯಾದ ಸಮಯದಲ್ಲಿ, ನಾವು ಕೆಲಸ ಮಾಡುತ್ತಿರುವ ಸ್ಥಳ ದಲ್ಲಿಯೇ ಬಂದು ನಮಗೆ ಸಿಕ್ಕಿರುವುದು ಸಾಮಾನ್ಯ ಸಂಗತಿಯಲ್ಲ.
ಕೇಂದ್ರ ಸರಕಾರ ಲಸಿಕೆ ನೀಡುವ ಅಭಿಯಾನವನ್ನು ಕಾರ್ಯರೂಪಕ್ಕೆ ತರುತ್ತಿರುವ ರೀತಿ ಯಾವುದೇ ಖಾಸಗಿ ಕಂಪನಿಗಳಿಗೆ ಕಡಿಮೆ ಇಲ್ಲ. ಅತ್ಯಂತ ಕಡಿಮೆ ಅವಧಿಯಲ್ಲಿ ಲಸಿಕೆ ತಯಾರು ಮಾಡಿದ್ದು ಅಲ್ಲದೆ, ಅದನ್ನು ವ್ಯವಸ್ಥಿತವಾಗಿ ಜನರ ಬಳಿಗೆ ತಲುಪಿಸಲು ಮೊಬೈಲ್ ತಂತ್ರಜ್ಞಾನವನ್ನು ಅದ್ಭುತವಾಗಿ ಬಳಸಿ ಕೊಂಡಿದೆ. ಅತ್ಯಂತ ಕಡಿಮೆ ಅವಧಿಯಲ್ಲಿ 4 ಲಕ್ಷಕ್ಕೂ
ಹೆಚ್ಚು ಲಸಿಕೆ ನೀಡುವ ತರಬೇತಿಯ ತಂಡವನ್ನು ಕಟ್ಟಲಾಗಿದೆ.
ಮೂವತ್ತು ಸಾವಿರಕ್ಕೂ ಹೆಚ್ಚು ಲಸಿಕೆಯನ್ನು ಸಂಗ್ರಹಿಸಿ ಮತ್ತು ಸಾಗಿಸುವ ಕೋಲ್ಡ್ ಸ್ಟೋರೇಜ್ ವ್ಯವಸ್ಥೆಯನ್ನು ಮಾಡಿಕೊಳ್ಳ ಲಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಭಾರತೀಯರು ಲಸಿಕೆ ತೆಗೆದುಕೊಳ್ಳಲು ಹಿಂಜರಿಯುತ್ತಿರುವಾಗ, ಈಗಾಗಲೇ ತಯಾರಿಸಿರುವ ಲಸಿಕೆಗಳು ಪೋಲಾಗದಂತೆ ಸರಕಾರ ಬಳಸಿಕೊಂಡಿದೆ. ಕಳೆದ ಅಕ್ಟೋಬರ್ ತಿಂಗಳಿನಿಂದಲೇ ಲಸಿಕೆ ತಯಾರಿಕೆ ಪ್ರಾರಂಭ ವಾಗಿದೆ. ಅವುಗಳನ್ನು ಆರು ತಿಂಗಳಿಗಿಂತ ಹೆಚ್ಚು ಸಂಗ್ರಹಿಸಿಡುವ ಹಾಗಿಲ್ಲ. ಲಸಿಕೆಯ ಬಗ್ಗೆ ಆಂತರಿಕ ಅನುಮಾನಗಳನ್ನು, ಕುಸಿದ ಬೇಡಿಕೆಯನ್ನು, ಭಾರತದ ಅಂತಾರಾಷ್ಟ್ರೀಯ ವರ್ಚಸ್ಸು ಹೆಚ್ಚಿಸಿ ಕೊಳ್ಳಲು ಸರಕಾರ ಬಳಸಿಕೊಂಡಿದೆ.
ಭಾರತ ತನ್ನ ದೇಶದ ಜನರಿಗೆ ಅಷ್ಟೇ ಅಲ್ಲದೆ, ನೇಪಾಳ, ಭೂತಾನ್, ಬಾಂಗ್ಲಾದೇಶ, ಮಾಲ್ ಡೇವಿಸ್, ಮಾರಿಷಸ್, ಶ್ರೀಲಂಕಾ, ಬ್ರೆಜಿಲ್ ದೇಶಗಳಿಗೆ ಲಸಿಕೆಯನ್ನು ಉಚಿತವಾಗಿ ನೀಡಲಾಗಿದೆ. ಇದರಿಂದ ಭಾರತದ ಭಾರತದ ಮೇಲಿನ ಸದ್ಭಾವನೆ ವಿಶ್ವಮಟ್ಟ ದಲ್ಲಿ ಮತ್ತಷ್ಟು ಎತ್ತರಕ್ಕೆ ಹೋಗಿದೆ. ಭಾರತದ ಬಗ್ಗೆ ಧನಾತ್ಮಕ ಭಾವನೆಗಳು ಮೂಡುವಂತೆ ಮಾಡಿದೆ. ದೊಡ್ಡ ದೊಡ್ಡ ಮುಂದು ವರಿದ ದೇಶಗಳು ಲಸಿಕೆಯನ್ನು ತಮಗೆ ಮಾತ್ರ ಮೀಸಲಿಟ್ಟು ಕೊಂಡಿರುವ ಸಮಯದಲ್ಲಿ, ಇತರ ದೇಶಗಳಿಗೂ ಲಸಿಕೆಯನ್ನು ನೀಡುವುದು ಭಾರತದ ರಾಜತಾಂತ್ರಿಕ ನೈಪುಣ್ಯ ಪುಣ್ಯಕ್ಕೆ ಸಾಕ್ಷಿ.
ಲಸಿಕೆ ಪಡೆದುಕೊಂಡ ದೇಶದ ಪ್ರಧಾನ ಮಂತ್ರಿಗಳು ಸಂಜೀವಿನಿ ಹೊತ್ತ ಹನುಮಂತ ಚಿತ್ರವನ್ನು ಸಾಮಾಜಿಕ ತಾಣದಲ್ಲಿ ಹಂಚಿ ಧನ್ಯವಾದಗಳನ್ನು ಅರ್ಪಿಸುತ್ತಿದ್ದಾರೆ. ಅಂತಾರಾಷ್ಟ್ರೀಯವಾಗಿ ಭಾರತದ ನಾಯಕತ್ವವನ್ನು ಒಪ್ಪುತ್ತಿರುವುದಕ್ಕೆ , ಈ ಘಟನೆಗಳು ಸಾಕ್ಷಿಯಾಗುತ್ತಿವೆ. ಇದೆಲ್ಲ ಸಾಧ್ಯವಾಗಿರುವುದು ಲಸಿಕ ವಿರೋಧಿ ಅಭಿಯಾನಗಳಿಂದ ಎಂದರೆ ನೀವು ನಂಬಲೇಬೇಕು. ನಿನಗೆ ನಿಮಗೆ ನೆನಪಿರಬಹುದು. ಹೈಡ್ರಾಕ್ಸಿ ಕ್ಲೋರೊಕ್ವಿನ್ ಎಂಬ ಔಷಧ ಕರೋನಾಗೆ ಉತ್ತರ ವಾಗಬಲ್ಲದು ಎಂಬ ಅನುಮಾನವಿದ್ದ ಕಾಲದಲ್ಲಿ, ಹೈಡ್ರಾಕ್ಸಿ ಕ್ಲೋರೊಕ್ವಿನ್ ಔಷಧಕ್ಕೆ ಬೇಡಿಕೆ ಹೆಚ್ಚಾಯಿತು.
ಈ ಔಷಧವನ್ನು ತಮಗೆ ಕೊಡಬೇಕೆಂದು ಅಮೆರಿಕ ಅಧ್ಯಕ್ಷ ಧಮಕಿ ಹಾಕಿದ್ದರು. ತನ್ನಲ್ಲಿ ಸಾಕಷ್ಟು ದಾಸ್ತಾನು ಇದ್ದರೂ
ಭಾರತವು ಅದನ್ನು ತಮ್ಮ ಮಿತ್ರ ರಾಷ್ಟ್ರಗಳಿಗೆ ರಫ್ತು ಮಾಡುವುದಕ್ಕೆ ಸಾಕಷ್ಟು ವಿರೋಧ ವ್ಯಕ್ತವಾಯಿತು. ಔಷಧ ನಮಗೆ ಸಾಲುತ್ತಿಲ್ಲ ಅಂತದರಲ್ಲಿ ಮೋದಿ ತಮ್ಮ ವರ್ಚಸ್ಸು ಹೆಚ್ಚಿಸಿಕೊಳ್ಳಲು ದೇಶದ ಜನರ ಪ್ರಾಣವನ್ನು ಒತ್ತೆಯಿಟ್ಟು ಔಷಧವನ್ನು ರಫ್ತು ಮಾಡುತ್ತಿದ್ದಾರೆ ಎಂಬ ಸುದ್ದಿಯನ್ನು ಹರಡಲಾಯಿತು.ಈಗ ಅದೇ ಪರಿಸ್ಥಿತಿ ಉಂಟಾಗಿದ್ದರೆ ಏನಾಗ ಬಹುದಾಗಿತ್ತು ಎಂದು ಊಹಿಸಿಕೊಳ್ಳಿ.
ದೇಶದ ಪ್ರತಿಯೊಬ್ಬ ನಾಗರಿಕರಿಗೂ ಕೋವಿಡ್ ಲಸಿಕೆ ಸುರಕ್ಷಿತ ಎಂಬ ಭಾವನೆ ಬಂದಿದ್ದರೆ ದೇಶದಲ್ಲಿ ಲಸಿಕೆಗಾಗಿ ಆಹಾಕಾರ ವೇಳುತ್ತಿತು. ಮಂತ್ರಿಗಳು,ಪುಡಾರಿ ಗಳಿಂದ ಹಿಡಿದು ಪಂಚಾಯತ್ ಅಧ್ಯಕ್ಷರವರೆಗೂ ಲಸಿಕೆಯನ್ನು ಪಡೆಯಲು ಹೋರಾಟ ನಡೆಸುತ್ತಿದ್ದರು. ರಾಜಕೀಯ ಪುಡಾರಿಗಳ ಮತ್ತು ಅವರ ನೆಂಟರಿಷ್ಟರ ಗೋಸ್ಕರ ಲಸಿಕೆಗಾಗಿ ಸಾಕಷ್ಟು ಲಾಬಿಗಳು ನಡೆಯು ತ್ತಿದ್ದವು. ನಂತರ ಜಾತಿವಾರು ರಾಜಕೀಯ, ಹಿಂದುಳಿದ ಮತ್ತು ಮುಂದುವರಿದ ವರ್ಗಗಳ ರಾಜಕೀಯ ಇವೆಲ್ಲವೂ ನಡೆದು ದೇಶದಲ್ಲಿ ವೋಟ್ ಬ್ಯಾಂಕ್ ಹೋರಾಟ ನಡೆಯುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.
ಇನ್ನು ಲಸಿಕೆಗಳು ನಮಗೆ ಸಾಲದೇ ಇರುವಾಗ ಇತರರಿಗೆ ಕೊಡುವ ಮಾತಲ್ಲಿ. ಈ ಲಸಿಕೆಗಳನ್ನು ಹಲವಾರು ವರ್ಷಗಳವರೆಗೂ
ನಮ್ಮ ಉಪಯೋಗಿಸುವಂತಹ ಪರಿಸ್ಥಿತಿ ಬರುತ್ತಿತ್ತು. ಅಷ್ಟೊಂದು ಬೇಡಿಕೆ ಇದ್ದಾಗ ಖಾಸಗಿಯಾಗಿ ಹಲವಾರು ಸಾವಿರ ರು. ಗಳಿಗೆ ಔಷಧ ಬಿಕರಿಯಾಗುತ್ತಿದೆ. ಅದೃಷ್ಟವಶಾತ್ ಲಸಿಕಾ ವಿರೋಧಿ ಅಭಿಯಾನ, ದುರುದ್ದೇಶದಿಂದ ಕೂಡಿದ್ದರೂ, ಒಳ್ಳೆಯದೇ ನಡೆಯಿತು. ಇದಕ್ಕೆ ಲಸಿಕಾ ವಿರೋಧಿಗಳಿಗೆ ಅಭಿನಂದನೆ ಸಲ್ಲಿಸಲೇಬೇಕು.
ಸಂಜೀವಿನಿಗೆ ಸಮಾನ ವಾದ ಲಸಿಕೆಯನ್ನು ತಾವು ಮಾತ್ರ ತ್ಯಾಗ ಮಾಡಿದ್ದಲ್ಲದೆ, ತಮ್ಮ ಬೆಂಬಲಿಗರು ಮತ್ತು ಲಕ್ಷಾಂತರ ಜನರು ಈ ಲಸಿಕೆಯಿಂದ ದೂರವಿರುವಂತೆ ನೋಡಿಕೊಂಡರು. ಆದ್ದರಿಂದ ಲಸಿಕಾ ಆಂತರಿಕ ರಾಜಕೀಯ ಕಡಿಮೆಯಾಗಿ ಲಸಿಕೆಯು ಅತ್ಯಂತ ಅವಶ್ಯ ಉಳ್ಳವರಿಗೆ ಆದ್ಯತೆಯಿಂದ ವ್ಯವಸ್ಥಿತವಾಗಿ ತಲುಪುವಂತೆ ಆಗಿದೆ.