Friday, 29th November 2024

ದಿನೇ ದಿನೇ ನಿಯಮ ಉಲ್ಲಂಘನೆ

ಮನೆಗೆ ನೋಟಿಸ್ ಬಂದರೂ ಎಚ್ಚೆತ್ತುಕೊಳ್ಳದ ಸವಾರರು

ಯುವಕರೇ ಹೆಚ್ಚು 

ವಿಶೇಷ ವರದಿ: ರಂಗನಾಥ ಕೆ ಮರಡಿ

ತುಮಕೂರು: ವಾಹನ ಸಂಚಾರಿ ನಿಯಮ ಉಲ್ಲಂಘಿಸುವವರ ಮೇಲೆ ಹದ್ದಿನ ಕಣ್ಣಿಡಲು ನಗರದ 8 ಕಡೆ ಸಿಸಿ ಕ್ಯಾಮೆರಾ ಅಳವಡಿಸಿದ್ದರೂ ದಿನೇ ದಿನೇ ನಿಯಮ ಉಲ್ಲಂಸುವರ ಸಂಖ್ಯೆ ಹೆಚ್ಚುತ್ತಿದೆ.

ಸ್ಮಾರ್ಟ್‌ಸಿಟಿ ಲಿಮಿಟೆಡ್ ಮತ್ತು ಪೋಲೀಸ್ ಇಲಾಖೆ ಸಹಭಾಗಿತ್ವದಲ್ಲಿ ನಡೆಯುತ್ತಿರುವ ಕಾರ್ಯಾಚರಣೆಯಲ್ಲಿ ಟ್ರಾಫಿಕ್ ರೋಲ್ಸ್ ಉಲ್ಲಂಘಿಸುವವರ ಮನೆಗೆ ನೋಟಿಸ್ ಹೋಗುತ್ತಿದೆ. ಫೆ.11ರಂದು ಸದರಿ ಯೋಜನೆ ಕಾರ್ಯಾರಂಭ ಮಾಡಿದೆ. ಬೆಳಗ್ಗೆ 10ರಿಂದ 6 ಗಂಟೆವರೆಗೆ ಸಮಯ ನಿಗದಿ ಮಾಡಲಾಗಿದ್ದು, ದಿನದ ಇಪ್ಪತ್ತನಾಲ್ಕು ಗಂಟೆವರೆಗೆ ವಿಸ್ತರಿಸಲು ಅಧಿಕಾರಿಗಳು ಮುಂದಾಗಿದ್ದಾರೆ.

ದಂಡ ವಿಧಿಸುವ ಕಾರ್ಯ ಪಾಲಿಕೆ ಆವರಣದಲ್ಲಿರುವ ಸ್ಮಾರ್ಟ್ ಸಿಟಿ ಇಂಟಿಗ್ರೇಟೆಡ್ ಸಿಟಿ ಮ್ಯಾನೇಜ್‌ಮೆಂಟ್ ಕಂಟ್ರೋಲ್ ಸೆಂಟರ್‌ನಲ್ಲಿ ನಡೆಯುತ್ತಿದೆ. ನಿಯಮ ಉಲ್ಲಂಘನೆಯಲ್ಲಿ ವಿದ್ಯಾವಂತರು, ಯುವಕರ ಸಂಖ್ಯೆ ಹೆಚ್ಚುತ್ತಿರುವುದು ಆತಂಕಕಾರಿ ಬೆಳವಣಿಗೆ.

ಚಲನ್ ಮನೆಗೆ ರವಾನೆ: ನಿಯಮ ಉಲ್ಲಂಘನೆ ಕ್ಯಾಮೆರಾದಲ್ಲಿ ಸೆರೆಯಾದ ಕೂಡಲೇ ವಾಹನ ಸಂಖ್ಯೆ ವಿವರವನ್ನು ಪತ್ತೆ
ಹಚ್ಚಿ ಆಟೋಮೆಟಿಕ್ ಚಾಲೆಂಜಿಗ್ ಸಿಸ್ಟಮ್ ಮೂಲಕ ವಿಧಿಸಲಾದ ದಂಡದ ಚಲನ್ ನೇರವಾಗಿ ವಾಹನ ಮಾಲೀಕರ ಸ್ವಂತ ವಿಳಾಸಕ್ಕೆ ರವಾನೆಯಾಗುತ್ತಿದೆ. ನೋಂದಾಯಿತ ಮೊಬೈಲ್ ಸಂಖ್ಯೆಗೂ ಮಾಹಿತಿ ರವಾನೆಯಾಗುತ್ತಿದೆ.

ದಂಡ ವಿಧಿಸುವ ಉಲ್ಲಂಘನೆಗಳು
ಹೆಲ್ಮೆಟ್ ಇಲ್ಲದೆ ಚಲಾಯಿಸುವುದು.
ಬೈಕ್‌ನಲ್ಲಿ ಮೂವರು ಪ್ರಯಾಣಿಸುವುದು.
ಸಿಗ್ನಲ್ ಜಂಪ್.
ಸ್ಟಾಪ್ ಲೈನ್ ಜಂಪ್.

ಮುಖ್ಯಾಂಶಗಳು

ಫೆ.11ರಿಂದ ನಗರದ 8 ಕಡೆ ಕ್ಯಾಮೆರಾ ಅಳವಡಿಕೆ.
ಫೆ.27ರವರೆಗೆ 586 ಮಂದಿಗೆ ನೋಟಿಸ್ ರವಾನೆ.
ದಂಡ ಪಾವತಿಸಲು 7 ದಿನ ಕಾಲಾವಕಾಶ.
ಸ್ಮಾರ್ಟ್‌ಸಿಟಿಯಿಂದ ಪ್ರತಿದಿನ ವರದಿ ನೀಡಲಾಗುತ್ತದೆ.
ಪೂರ್ವ ಮತ್ತು ಪಶ್ಚಿಮ ಠಾಣೆವತಿಯಿಂದ ದಂಡ ವಿಧಿಸಲಾಗುವುದು.
ಪ್ರಸ್ತುತ ಬೆಳಗ್ಗೆ 10ರಿಂದ 6ರವರೆಗೆ ದಂಡ ವಿಧಿಸಲಾಗುತ್ತಿದೆ.
ಹೆಲ್ಮೆಟ್ ಧರಿಸದಿದ್ದರೆ 500 ರು. ದಂಡ.
ಬೈಕ್‌ನಲ್ಲಿ ಮೂವರು ಪ್ರಯಾಣಿಸಿದರೆ 1000 ದಂಡ.
ಫೆ.11ರಂದು 52 ಕೇಸ್ ದಾಖಲು, 48 ನೋ ಹೆಲ್ಮೆಟ್, 4 ಟ್ರಿಪಲ್ ರೈಡಿಂಗ್.
ನಿಯಮ ಉಲ್ಲಂಘಿಸುವಲ್ಲಿ ವಿದ್ಯಾವಂತರು, ಯುವಕರು ಹೆಚ್ಚು.
ಪ್ರತಿದಿನ ದಂಡವಿಧಿಸಿದರೂ ಹೆಚ್ಚುತ್ತಿರುವ ಉಲ್ಲಂಘನೆ ಪ್ರಕರಣಗಳು.

ಕ್ಯಾಮೆರಾ ಕಣ್ಣಿರುವ 8 ವೃತ್ತಗಳು

ಟೌನ್‌ಹಾಲ್ ಸರ್ಕಲ್.
ಶಿವಕುಮಾರಸ್ವಾಮೀಜಿ ವೃತ್ತ.
ಬಟವಾಡಿ ಸರ್ಕಲ್.
ಲಕ್ಕಪ್ಪ(ಕಾಲ್ಟೆಕ್ಸ್‌)ವೃತ್ತ.
ಭದ್ರಮ್ಮ ಚೌಟ್ರಿ(ಶಂಕರಮಠ) ಸರ್ಕಲ್.
ಕೋಡಿ ಬಸವೇಶ್ವರ ಸರ್ಕಲ್.
ಕ್ಯಾತ್ಸಂದ್ರ ವೃತ್ತ.
ಗುಬ್ಬಿಗೇಟ್ ರಿಂಗ್ ರೋಡ್ ಸರ್ಕಲ್.