Saturday, 23rd November 2024

ಕರಾಚಿಯಲ್ಲಿ ದಿಢೀರ್‌ ಲ್ಯಾಂಡ್‌ ಮಾಡಿದ ಭಾರತದ ವಿಮಾನ ?

ಲಖನೌ: ದಿಢೀರ್​ ಆಗಿ ಪ್ರಯಾಣಿಕರೊಬ್ಬರಿಗೆ ಹೃದಯಾಘಾತದ ಚಿಹ್ನೆಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಭಾರತೀಯ ವಿಮಾನವೊಂದು ಪಾಕಿಸ್ತಾನದ ಕರಾಚಿಯಲ್ಲಿ ತುರ್ತು ಲ್ಯಾಂಡಿಂಗ್ ಮಾಡಿದ ಪ್ರಸಂಗ ನಡೆದಿದೆ.

ಶಾರ್ಜಾದಿಂದ ಲಖನೌಗೆ ಹೊರಟಿದ್ದ ಇಂಡಿಗೋ ವಿಮಾನದಲ್ಲಿ ಪ್ರಯಾಣ ಮಾಡುತ್ತಿದ್ದ ಹಬೀಬ್-ಉರ್-ರೆಹಮಾನ್ ಎಂಬವರಿಗೆ ಎದೆ ನೋವು ಕಾಣಿಸಿಕೊಂಡಿತು. ತುರ್ತು ಚಿಕಿತ್ಸೆ ಒದಗಿಸಲು ಹತ್ತಿರದ ಕರಾಚಿಯ ಜಿನ್ನಾ ವಿಮಾನ ನಿಲ್ದಾಣದಲ್ಲಿ ಎಮರ್ಜೆನ್ಸಿ ಲ್ಯಾಂಡಿಂಗ್ ಮಾಡಲಾಯಿತು. ಆದರೆ ಕರಾಚಿ ವಿಮಾನ ನಿಲ್ದಾಣದ ವೈದ್ಯಕೀಯ ತಂಡ ಪರೀಕ್ಷಿಸಿದಾಗ ಪ್ರಯಾಣಿಕನ ಹೃದಯ ಬಡಿತವು ಅದಾಗಲೇ ನಿಂತಿತ್ತು. ಅವರನ್ನು ರಿವೈವ್​ ಮಾಡಲು ಸಾಧ್ಯವಾಗಲಿಲ್ಲ ಎನ್ನಲಾಗಿದೆ.

ನಂತರ ಭಾರತಕ್ಕೆ ಹಾರಿದ ವಿಮಾನವು ಅಹಮದಾಬಾದ್ ತಲುಪಿದ್ದು, ಅಲ್ಲಿ ವೈದ್ಯಾಧಿಕಾರಿಗಳು, ರೆಹ್​ಮಾನ್​ ಅವರನ್ನು ಮೃತ ರೆಂದು ಘೋಷಿಸಿದ್ದಾರೆ. ಪ್ರಯಾಣಿಕರನ್ನು ಹೊರಗಿಳಿಸಿ ವಿಮಾನವನ್ನು ಸಾನಿಟೈಸ್ ಮಾಡಿದ ನಂತರ ಲಖನೌಗೆ ಪುನಃ ಪ್ರಯಾಣ ನಡೆಸಲಾಯಿತು ಎನ್ನಲಾಗಿದೆ. ಈ ಬಗ್ಗೆ ಇಂಡಿಗೋ ಏರ್​ಲೈನ್ಸ್ ಕಂಪೆನಿ, ಮೃತ ಪ್ರಯಾಣಿಕನ ಕುಟುಂಬಕ್ಕೆ ಸಂತಾಪ ಸೂಚಿಸಿದೆ.

ಕೆಲವು ದಿನಗಳ ಹಿಂದೆ, ಭಾರತೀಯ ಏರ್ ಆಂಬುಲೆನ್ಸ್ ಒಂದು ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್ ವಿಮಾನ ನಿಲ್ದಾಣ ದಲ್ಲಿ ಇಂಧನ ತುಂಬಿಸಿಕೊಳ್ಳುವುದಕ್ಕಾಗಿ ತುರ್ತು ಲ್ಯಾಂಡಿಂಗ್ ಮಾಡಿತ್ತು.