ನವದೆಹಲಿ/ಮುಂಬೈ: ಭಾರತೀಯ ಷೇರುಪೇಟೆ ಶುಕ್ರವಾರ ಸೆನ್ಸೆಕ್ಸ್ ಸುಮಾರು 317.96 ಪಾಯಿಂಟ್‌ಗಳಷ್ಟು ಕುಸಿದು 50528.12 ಮಟ್ಟದಲ್ಲಿ ತೆರೆಯಿತು. ಎನ್‌ಎಸ್‌ಇ ನಿಫ್ಟಿ 96.00 ಪಾಯಿಂಟ್‌ಗಳ ನಷ್ಟದೊಂದಿಗೆ 14984.80 ಪಾಯಿಂಟ್‌ಗಳೊಂದಿಗೆ ವಹಿವಾಟು ಆರಂಭಿಸಿತು.
ಬಿಎಸ್‌ಇಯಲ್ಲಿ ಒಟ್ಟು 1,040 ಷೇರುಗಳ ವಹಿವಾಟು ಪ್ರಾರಂಭವಾಯಿತು. ಸುಮಾರು 560 ಷೇರುಗಳು ಏರಿಕೆಗೊಂಡರೆ, 393 ಷೇರುಗಳು ಕುಸಿದವು. 87 ಕಂಪನಿಗಳ ಷೇರುಗಳ ಮೌಲ್ಯದಲ್ಲಿ ಯಾವುದೇ ಬದಲಾವಣೆಯಾಗದೆ ಆರಂಭವಾಯಿತು.
ಡಾಲರ್ ಎದುರು ರೂಪಾಯಿ ದುರ್ಬಲಗೊಂಡಿದ್ದು 72.97 ರೂಪಾಯಿಗೆ ಇಳಿಕೆಗೊಂಡಿದೆ. ಗುರುವಾರ ಸೆನ್ಸೆಕ್ಸ್ 598 ಪಾಯಿಂಟ್ಸ್ ಕುಸಿದರೆ, ರಾಷ್ಟ್ರೀಯ ಷೇರುಪೇಟೆ ನಿಫ್ಟಿ 164 ಪಾಯಿಂಟ್ಸ್ ಇಳಿಕೆ ಸಾಧಿಸಿತ್ತು.