Friday, 29th November 2024

ಗೋವುಗಳ ಬಾಲ ಕತ್ತರಿಸಿದ ದುರುಳರು

ಮೂರು ಗೋವುಗಳ ಬಾಲ ತುಂಡರಿಸಿ, ಮಾರಕಾಸ್ತ್ರಗಳಿಂದ ಕೆಚ್ಚಲಿಗೆ ಗಾಯ

ಗದಗ: ಸನಾತನ ಸಂಸ್ಕೃತಿಯಲ್ಲಿ ಗೋವುಗಳನ್ನು ದೇವರೆಂದು ಪೂಜಿಸಲಾಗುತ್ತದೆ.  ರಾಜ್ಯದಲ್ಲಿ ಗೋಹತ್ಯೆೆ ನಿಷೇಧ ಕಾಯಿದೆ
ಜಾರಿಯಲ್ಲಿದೆ. ಹೀಗಿದ್ದರೂ, ಕೆಲ ದುರುಳರು ಗೋವುಗಳ ಬಾಲ ಕತ್ತರಿಸಿ, ಕೆಚ್ಚಲಿಗೆ ಮಾರಕಾಸ್ತ್ರಗಳಿಂದ ಗಾಯಗೊಳಿಸಿ ವಿಕೃತಿ
ಮೆರೆದಿರುವ ಅಮಾನವೀಯ ಘಟನೆ ಸ್ಥಳೀಯ ರಾಧಾಕೃಷ್ಣ ನಗರದಲ್ಲಿ ನಡೆದಿದೆ.

ಗೋಹತ್ಯೆೆ ನಿಷೇಧದ ಬಳಿಕವೂ ಇಂತಹ ಪೈಶಾಚಿಕ ಕೃತ್ಯ ನಡೆದಿದೆ. ಮೂಕ ಪ್ರಾಣಿಗಳ ರೋಧನೆ ಮುಗಿಲು ಮುಟ್ಟಿದೆ. ಬಾಲ
ಕತ್ತರಿಸಿಕೊಂಡ ನೋವಿನಲ್ಲಿ ಎರಡು ಆಕಳು ಸಂಕಷ್ಟ ಅನುಭವಿಸುತ್ತಿದ್ದರೆ, ಇನ್ನೊಂದು ಆಕಳು ಬಾಲದ ಜತೆಗೆ ಕೆಚ್ಚಲಿಗೆ ಗಾಯ ಮಾಡಿಕೊಂಡು ಕರುವಿಗೆ ಹೇಗೆ ಹಾಲುಣಿಸಲಿ ಎಂದು ಚಿಂತಿಸುತ್ತಿದ್ದರೆ, ಕರು ಕುಡಿಯಲು ಹಾಲಿಲ್ಲದೆ ನರಳಾಡುತ್ತಿದೆ.

ಗದಗ ರಾಧಾಕೃಷ್ಣ ನಗರದಲ್ಲಿ ಗೋ ಪಾಲಕಿ ಅನಸಮ್ಮಾ ಹಿರೇಮಠ ಎನ್ನುವವರು ಕಳೆದ 30 ವರ್ಷಗಳಿಂದ ಹಸುಗಳನ್ನು ಸಾಕಿಕೊಂಡು ಜೀವನ ನಡೆಸುತ್ತಿದ್ದಾರೆ. ಆದರೆ, ಭಾನುವಾರ ಕೆಲ ದುಷ್ಕರ್ಮಿಗಳು ಮೂರು ಗೋವುಗಳ ಬಾಲವನ್ನು ತುಂಡರಿಸಿದ್ದಾರೆ. ಜತೆಗೆ ಕಳೆದ  ಮೂರು ದಿನಗಳ ಹಿಂದೆ ಕರುವಿಗೆ ಜನ್ಮ ನೀಡಿದ ತಾಯಿ ಹಸುವಿನ ಬಾಲವನ್ನು ಸಂಪೂ
ರ್ಣವಾಗಿ ಕತ್ತರಿಸಿ ಹಾಕಿದ್ದು, ಅದರ ಕೆಚ್ಚಲಿಗೆ ಮಾರಕಾಸ್ತ್ರದಿಂದ ಹಲ್ಲೆ ಮಾಡಿದ್ದಾರೆ.

ಹೀಗಾಗಿ, ಮೂರು ದಿನಗಳ ಹಿಂದೆ ಜನಿಸಿದ ಹಸುವಿನ ಮರಿಗೆ ಹಾಲು ಸಹ ಕುಡಿಯಲು ಆಗದಂತ ಸ್ಥಿತಿ ನಿರ್ಮಾಣವಾಗಿದೆ. ಅನಸಮ್ಮಾ ಅವರು ಹಸುವಿಗೆ ಮರಿಗೆ ನಿಪ್ಪಲ್ ಮೂಲಕ ಹಾಲುಣಿಸುತ್ತಿದ್ದಾರೆ. ಇನ್ನೂ ತಾಯಿ ಹಸು ಹಾಗೂ ಮರಿಯನ್ನು
ನೋಡಿದರೇ ಎಂಥವರಿಗೂ ಕರುಣೆ ಉಕ್ಕಿ ಬರುತ್ತದೆ. ಆದರೆ, ದುರುಳರು ರಾತ್ರೋರಾತ್ರಿ ಬಂದು, ಗೋವುಗಳ ಮೇಲೆ ದಾಳಿ
ಮಾಡಿದ್ದಾರೆ. ಬಿಳಿ ಬಣ್ಣದ ಹಸು ಹಾಗೂ ಹಸುವಿನ ಕರು ಇರುವುದರಿಂದ ಮಾಟ ಮಂತ್ರ ಮಾಡುವವರು ಈ ಕೃತ್ಯವನ್ನು
ಎಸೆಗಿದ್ದಾರೆ ಎನ್ನುವ ಅನುಮಾನ ಕೂಡಾ ಕಾಡುತ್ತಾಯಿದೆ.

ಈಗಾಗಲೇ ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ದುಷ್ಕರ್ಮಿಗಳ ಪತ್ತೆ ಕಾರ್ಯ ದಲ್ಲಿ
ತೊಡಗಿದ್ದಾರೆ. ಇನ್ನು, ಗೋವುಗಳ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆೆ ನಡೆಸಿ ಅಮಾನವೀಯವಾಗಿ ನಡೆದುಕೊಂಡ ಕ್ರೂರಿಗಳನ್ನು ಆದಷ್ಟು ಬೇಗ ಬಂಧಿಸಬೇಕು ಎಂದು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.